ವಾಯ್ಸ್‌ ಆಫ್‌ ಬಿಲ್ಲವ ಗಾಯನ ಸ್ಪರ್ಧೆ ಫಲಿತಾಂಶ ಪ್ರಕಟ

Team Udayavani, Jul 5, 2018, 11:34 AM IST

3.jpg

ಮುಂಬಯಿ: ಬಿಲ್ಲವರ  ಅಸೋಸಿಯೇಶನ್‌ ಮುಂಬಯಿ ಇದರ ಯುವಾಭ್ಯುದಯ ಉಪ ಸಮಿತಿಯ ವತಿಯಿಂದ “ವ್ಹಾಯ್ಸ ಆಫ್‌ ಬಿಲ್ಲವ’ ಕಾರ್ಯಕ್ರಮದ ಅಂತಿಮ ಸುತ್ತಿನ ಸ್ಪರ್ಧೆಯ ಬಹುಮಾನ ವಿತರಣ ಸಮಾರಂಭವು  ಜು. 1ರಂದು ಅಪರಾಹ್ನ ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

ಅಂತಿಮ ಸುತ್ತಿನಲ್ಲಿ 16 ವರ್ಷದಿಂದ 30 ವರ್ಷದೊಳಗಿನ 26 ಸ್ಪರ್ಧಿಗಳು ಕಣದಲ್ಲಿದ್ದರು. 15 ವರ್ಷದೊಳಗಿನವರ ವಿಭಾಗದಲ್ಲಿ ಮುಲುಂಡ್‌ ಸ್ಥಳೀಯ ಸಮಿತಿಯ ಅನನ್ಯಾ ಅಂಚನ್‌ ಪ್ರಥಮ, ಕಾಂದಿವಲಿ ಸ್ಥಳೀಯ ಸಮಿತಿಯ ಭೂಮಿ ಸುವರ್ಣ ದ್ವಿತೀಯ, ಡೊಂಬಿವಲಿ ಸ್ಥಳೀಯ ಸಮಿತಿಯ ಮಾನಸ್‌ ಬಂಗೇರ ತೃತೀಯ ಬಹುಮಾನವನ್ನು ಪಡೆದರು.

16 ರಿಂದ 30 ವರ್ಷದೊಳಗಿನವರ ವಿಭಾಗದಲ್ಲಿ ಡೊಂಬಿವಲಿ ಸ್ಥಳೀಯ ಕಚೇರಿಯ ಶ್ರದ್ಧಾ ಬಂಗೇರ ಪ್ರಥಮ, ಬೊರಿವಲಿ ಸ್ಥಳೀಯ ಕಚೇರಿಯ ವಿಭೂತಿ ಕಲ್ಯಾಣು³ರ ದ್ವಿತೀಯ, ಡೊಂಬಿವಲಿ ಸ್ಥಳೀಯ ಕಚೇರಿಯ ಸಾಯಿಶ್ರುತಿ ಕೋಟ್ಯಾನ್‌ ತೃತೀಯ ಬಹುಮಾನಕ್ಕೆ ಭಾಜನರಾದರು. 31 ರಿಂದ ಅಧಿಕ ವಯೋಮಿತಿಯ ವಿಭಾಗದಲ್ಲಿ ಬೊರಿವಲಿ ಸ್ಥಳೀಯ ಸಮಿತಿಯ ಚಿತ್ರಾ ಕೋಟ್ಯಾನ್‌ ಪ್ರಥಮ, ಬೊರಿವಲಿ ಸ್ಥಳೀಯ ಸಮಿತಿಯ ಭೋಜ ಪೂಜಾರಿ ದ್ವಿತೀಯ ಹಾಗೂ ನಲಸೋಪರ ಸಮಿತಿಯ ಶೀತಲ್‌ ಸುವರ್ಣ ತೃತೀಯ ಬಹುಮಾನ ಪಡೆದರು.

ವಿಜೇತ ಸ್ಪರ್ಧಿಗಳನ್ನು ಗಣ್ಯರು ಪುಷ್ಪಗುತ್ಛ, ಸ್ಮರಣಿಕೆ, ಪ್ರಮಾಣ ಪತ್ರವನ್ನಿತ್ತು ಅಭಿನಂದಿಸಿ ಗೌರವಿಸಿದರು. ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮವನ್ನು ಮನೋಜ್‌ ಪೂಜಾರಿ ಮತ್ತು ಸಮಾಜ ಸೇವಕಿ ಶಾರದಾ ಸೂರು ಕರ್ಕೇರ ದೀಪ ಬೆಳಗಿಸಿ ಉದ್ಘಾಟಿಸಿದರು. ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಸಹಕರಿಸಿದ ಅವಿನಾಶ್‌ ಕಾಮತ್‌, ರಾಜ್‌ಶೇಖರ್‌ ಕರ್ಮಕೊಂಡ, ಮನೋಜ್‌ ಆನಂದ್‌, ಶ್ರುತಿ ನಾಯಕ್‌ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಶಾಲು ಹೊದೆಸಿ, ಪುಷ್ಪಗುಚ್ಚ ಮತ್ತು ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಗುಜರಾತ್‌ ಬಿಲ್ಲವ ಸಂಘದ ಅಧ್ಯಕ್ಷ ಮನೋಜ್‌ ಸಿ. ಪೂಜಾರಿ, ಗೌರವ ಅತಿಥಿಗಳಾಗಿ ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್‌. ಟಿ. ಪೂಜಾರಿ, ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್‌ಕುಮಾರ್‌ ಕಾರ್ನಾಡ್‌, ಸೂರತ್‌ ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ವಿಶ್ವನಾಥ್‌ ಪೂಜಾರಿ ಕುರಿಯಾಳ, ಭಾರತ್‌ ಬ್ಯಾಂಕಿನ ನಿರ್ದೇಶಕ ಗಂಗಾಧರ್‌ ಜೆ. ಪೂಜಾರಿ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಉಪಾಧ್ಯಕ್ಷರುಗಳಾದ ರಾಜ ವಿ. ಸಾಲ್ಯಾನ್‌, ಶಂಕರ ಡಿ. ಪೂಜಾರಿ, ಡಾ| ಯು. ಧನಂಜಯ ಕುಮಾರ್‌, ಪುರುಷೋತ್ತಮ ಎಸ್‌. ಕೋಟ್ಯಾನ್‌, ಗೌರವ  ಪ್ರಧಾನ  ಕೋಶಾಧಿಕಾರಿ ಮಹೇಶ್‌ ಸಿ. ಕಾರ್ಕಳ, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌, ಸಂಗೀತಕಾರ ರಂಜನ್‌ ಎನ್‌. ಸುವರ್ಣ,  ಯುವಾಭ್ಯುದಯ ಸಮಿತಿಯ ಮುಖ್ಯಸ್ಥ ನಿಲೇಶ್‌ ಪೂಜಾರಿ ಪಲಿಮಾರ್‌ ಮೊದಲಾದವರು ಉಪಸ್ಥಿತರಿದ್ದರು.

ಬಿಲ್ಲವರ ಅಸೋಸಿಯೇಶನ್‌ ಕಾರ್ಯದರ್ಶಿ ಧರ್ಮಪಾಲ ಅಂಚನ್‌ ಇವರು ಕಾರ್ಯಕ್ರಮ ನಿರ್ವಹಿಸಿದರು.  ಲತೇಶ್‌ ಎಂ. ಪೂಜಾರಿ ಮತ್ತು ರವಿ ಸನಿಲ್‌ ಅವರು ಸಹಕರಿಸಿದರು. ಯುವಾಭ್ಯುದಯ ಸಮಿತಿಯ ಕಾರ್ಯದರ್ಶಿ ಉಮೇಶ್‌ ಎನ್‌. ಕೋಟ್ಯಾನ್‌ ವಂದಿಸಿದರು. 

ಚಿತ್ರ-ವರದಿ : ರೋನ್ಸ್‌  ಬಂಟ್ವಾಳ್‌

ಟಾಪ್ ನ್ಯೂಸ್

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

1-24-saturday

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ, ಅಧ್ಯಯನಾಸಕ್ತಿ ವೃದ್ಧಿ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ಎಚ್ಚರಿಕೆ ಕೊಟ್ಟಿದ್ದೆ ಅಷ್ಟೇ, ಕೊಲೆ ಮಾಡಿಲ್ಲ: ದರ್ಶನ್‌

ಎಚ್ಚರಿಕೆ ಕೊಟ್ಟಿದ್ದೆ ಅಷ್ಟೇ, ಕೊಲೆ ಮಾಡಿಲ್ಲ: ದರ್ಶನ್‌

ಖಾಸಗಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲು?

ಖಾಸಗಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

Mango fair; ಕೊಲ್ಲಿ ರಾಷ್ಟ್ರದಲ್ಲಿ ಹಣ್ಣಿನ ರಾಜನ ಹಿರಿಮೆ

ಮುಂಡಗೋಡ- ಶಾಸಕರ ಮಾದರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ಆತಂಕ

ಮುಂಡಗೋಡ- ಶಾಸಕರ ಮಾದರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ಆತಂಕ

Hawaiian Islands; ಅಸಾಧಾರಣ ಹವಾ “ಹವಾಯಿ’ ಐಲ್ಯಾಂಡ್‌

Hawaiian Islands; ಅಸಾಧಾರಣ ಹವಾ “ಹವಾಯಿ’ ಐಲ್ಯಾಂಡ್‌

Desi Swara: ಕರ್ನಾಟಕ ಸಂಘ ದುಬೈ-ಜನಮನ ಸೆಳೆದ ಆಕರ್ಷಕ ಡ್ಯಾನ್ಸ್‌ ಕಪ್‌ ಸ್ಪರ್ಧೆ

Desi Swara: ಕರ್ನಾಟಕ ಸಂಘ ದುಬೈ-ಜನಮನ ಸೆಳೆದ ಆಕರ್ಷಕ ಡ್ಯಾನ್ಸ್‌ ಕಪ್‌ ಸ್ಪರ್ಧೆ

Desi Swara: ಸ್ಥಾನಿಕ ಸಮಾಜ ನಾರ್ಥ್ ಅಮೆರಿಕ- ಶ್ರೀ ಶಂಕರಾಚಾರ್ಯರ ಜಯಂತಿ

Desi Swara: ಸ್ಥಾನಿಕ ಸಮಾಜ ನಾರ್ಥ್ ಅಮೆರಿಕ- ಶ್ರೀ ಶಂಕರಾಚಾರ್ಯರ ಜಯಂತಿ

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

1-24-saturday

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ, ಅಧ್ಯಯನಾಸಕ್ತಿ ವೃದ್ಧಿ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.