ವಿಶ್ವ ಬಂಟ ಸಮ್ಮಿಲನ -2018: ಪುಣೆ ಬಂಟರ ಸಂಘದಲ್ಲಿ  ಪೂರ್ವಭಾವಿ ಸಭೆ


Team Udayavani, Aug 17, 2018, 3:11 PM IST

1408mum04.jpg

ಪುಣೆ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಸೆ. 9 ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಗೃಹದ ಶ್ರೀಮತಿ ಶಶಿರೇಖಾ ಆನಂದ ಶೆಟ್ಟಿ ವೇದಿಕೆಯಲ್ಲಿ ನಡೆಯಲಿರುವ ಒಂದು ದಿನದ ವಿಶ್ವ ಬಂಟರ ಸಮ್ಮಿಲನದ ಪೂರ್ವಭಾವಿ ಸಭೆಯು  ಆ.13ರಂದು ಪುಣೆ ನಗರದ ಕೊರೊನೆಟ್‌ ಹೊಟೇಲ್‌ ಸಭಾಂಗಣದಲ್ಲಿ ಪುಣೆ ಬಂಟರ ಸಂಘದ ಆಶ್ರಯದಲ್ಲಿ  ನಡೆಯಿತು.

ಸಭೆಯಲ್ಲಿ  ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ  ಮಾತನಾಡಿ, ನಮ್ಮ ಬಂಟ ಸಮಾಜವು ವಿಶ್ವದೆÇÉೆಡೆ ಪಸರಿಸಿದ್ದು ಪ್ರತಿಯೊಂದು ಕ್ಷೇತ್ರದಲ್ಲೂ ವಿಶೇಷ ಸಾಧನೆಗಳೊಂದಿಗೆ ಗುರುತಿಸಿಕೊಂಡ ಹೆಗ್ಗಳಿಕೆ ನಮ್ಮದಾಗಿದೆ  ನಮ್ಮಲ್ಲಿ ಪ್ರತಿಭಾವಂತರು, ಉದ್ಯಮಿಗಳು, ಸಂಪತ½ರಿತರು, ಉತ್ತಮ ನಾಯಕತ್ವದ ಗುಣವುಳ್ಳವರು. ಅದರಲ್ಲೂ ಕೊಡುಗೈ ದಾನಿಗಳಿಗೆ ಕೊರತೆಯಿಲ್ಲ. ಆದರೆ ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿರುವುದು ಮಾತ್ರ ಸತ್ಯ. ಇದರಿಂದಾಗಿಯೇ ನಾವು ನಮ್ಮ ಸಮಾಜಕ್ಕೆ ವ್ಯವಸ್ಥಿತ ರೀತಿಯಲ್ಲಿ ಅನ್ಯಾಯ ನಡೆದರೊ ಅದನ್ನು ಸೆಟೆದು  ನಿಲ್ಲಲು ನಮ್ಮಿಂದ ಸಾಧ್ಯವಾಗುತ್ತಿಲ್ಲ.  ಇಂದು ದೇಶದೆÇÉೆಡೆ ವಿವಿಧ ಸಮುದಾಯದ ಜನರು ತಮ್ಮ ತಮ್ಮ ಸಮಾಜವನ್ನು ಶಕ್ತಿಯುತವಾಗಿ ಮಾಡುವುದರೊಂದಿಗೆ ಸಮಾಜದ ಅಭಿವೃದ್ಧಿಯನ್ನು ಮಾಡುತ್ತಾ ತಮಗೆ ಅನ್ಯಾಯವಾದಾಗ ಸರಕಾರಕ್ಕೂ ಬಿಸಿ ಮುಟ್ಟಿಸುವ ಕಾರ್ಯ ಮಾಡುತ್ತಿ¨ªಾರೆ. ಅದಕ್ಕಾಗಿಯೇ ವಿಶ್ವದೆÇÉೆಡೆ ಇರುವ ನಮ್ಮ ಬಂಟ ಸಮಾಜ ಒಗ್ಗಟ್ಟಾಗಬೇಕಾಗಿದೆ. ಒಗ್ಗಟ್ಟಿನಿಂದ ಮಾತ್ರವೇ ಸಮಾಜದ ಅಭ್ಯುದಯದ ಚಿಂತನೆ ಸಾಕಾರವಾಗಲು ಸಾಧ್ಯ. ಸಮಾಜದಲ್ಲಿ ಗ್ರಾಮೀಣ ಪ್ರದೇಶದಲ್ಲಿ  ಅದೆಷ್ಟೋ ಜನರು ಆರ್ಥಿಕವಾಗಿ ತೀರಾ ಸಂಕಷ್ಟದ ಸ್ಥಿತಿಯಲ್ಲಿ ಬದುಕುತ್ತಿ¨ªಾರೆ. ಅವರ ಕಷ್ಟಗಳಿಗೆ ಸ್ಪಂದಿಸುವ ಉದ್ದೇಶ ನಮ್ಮದಾಗಿದ್ದು ನಮ್ಮ ಸಮಾಜ ಶಕ್ತಿಯುತವಾಗಿ ಒಗ್ಗಟ್ಟಾದರೆ ಸರಕಾರದೊಂದಿಗೆ ನಮ್ಮ ಹಕ್ಕನ್ನು ಮಂಡಿಸಲು, ಅನ್ಯಾಯಗಳಿಗೆ  ಸಶಕ್ತವಾಗಿ ಹೋರಾಡಲು, ಕಷ್ಟದಲ್ಲಿರುವ ಸಮಾಜ ಬಾಂಧವರ ನೆರವಾಗಲು ಸಾಧ್ಯ. ನಮ್ಮ ಸಾಂಘಿಕ ಶಕ್ತಿಯ ಪ್ರದರ್ಶನವಾಗುವ ಅಗತ್ಯತೆಯಿದ್ದು  ಇದೇ ಉದ್ದೇಶದ ನಿಲುವಿನೊಂದಿಗೆ ಸೆ. 9 ರಂದು ಉಡುಪಿಯಲ್ಲಿ ವಿಶ್ವ ಬಂಟ ಸಮ್ಮಿಲನವನ್ನು ಆಯೋಜಿಸಿದ್ದು ಇದಕ್ಕಾಗಿ ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಿಕೊಂಡು ತಯಾರಿಯನ್ನು ಆರಂಭಿಸಲಾಗಿದೆ. ವಿಶ್ವದಾದ್ಯಂತ ಸುಮಾರು 25 ಸಾವಿರ ಜನರು ಸೇರುವ ನಿರೀಕ್ಷೆಯಿದ್ದು ಈ ಕಾರ್ಯಕ್ರಮದಲ್ಲಿ ಪುಣೆಯ ಬಂಟ ಬಾಂಧವರೆಲ್ಲರೂ ಸಮಾಜದ ಒಳಿತಿಗಾಗಿ ಒಂದು ದಿನವನ್ನು ಮೀಸಲಿಟ್ಟು ಆಗಮಿಸಿ ಜಾಗತಿಕ ಬಂಟರ ಒಕ್ಕೂಟದ ಕಾರ್ಯಕ್ಕೆ ಬೆಂಬಲಿಸಬೇಂದು ಮನವಿ ಮಾಡಿ,  ಕಾರ್ಯಕ್ರಮಗಳ ವಿವರಗಳನ್ನು ನೀಡುತ್ತಾ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ  ಆಗಮಿಸಲಿ¨ªಾರೆ. ನಮ್ಮ ಸಮಾಜವನ್ನು  ಒಬಿಸಿ ಮೀಸಲಾತಿಯಡಿಯಲ್ಲಿ ಸೇರಿಸುವಂತೆ  ಮನವಿ ಸಲ್ಲಿಸಲಾಗುವುದು. ಅಲ್ಲದೆ ದೇಶ ವಿದೇಶದ ವಿವಿಧ ಕ್ಷೇತ್ರಗಳ ಗಣ್ಯ ಸಮಾಜಬಾಂಧವರು ಭಾಗವಹಿಸಲಿದ್ದು ಈ ಸಮ್ಮಿಲನದಲ್ಲಿ ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಜಗನ್ನಾಥ ಶೆಟ್ಟಿಯವರು ಸೇರಿದಂತೆ ಸುಮಾರು 20 ಮಂದಿ ಅತಿ ಹಿರಿಯಬಂಟ ಸಾಧಕರನ್ನು ಸಮ್ಮಾನಿಸಲಾಗುವುದು. ಅದೇ ರೀತಿ ನಮ್ಮ ಸಮಾಜದಲ್ಲಿ ಗುತ್ತಿನ ಗುರ್ಕಾರ (ಗಡಿಪತ್ತಿನ ಗುರ್ಕಾರ) ರಿಗೆ ಹಿಂದಿನಿಂದಲೂ ವಿಶೇಷ ಗೌರವಗಳನ್ನು ನೀಡಲಾಗುತ್ತಿದ್ದು ಅಂತಹ ಸುಮಾರು 40 ಪ್ರತಿಷ್ಠಿತ ಸಮಾಜ ಬಾಂಧವರ ಗೌರವ ಕಾರ್ಯಕ್ರಮವೂ  ನಡೆಯಲಿದೆ. ಅಲ್ಲದೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಈ ಸಮ್ಮೇಳನವು ನಡೆಯಲಿದ್ದು ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯವಾಗಲಿ  ಎಂಬ ಆಶಯವೂ  ನಮ್ಮದಾಗಿದೆ. ನಾವು ಇದುವರೆಗೆ ಕೈಗೊಂಡ ಸಾಮಾಜಿಕ ಕಾರ್ಯಗಳಿಗೆ ಸಮಾಜದ ಹಿರಿಕಿರಿಯರೆಲ್ಲರೂ ಪೋ›ತ್ಸಾಹ ನೀಡಿ ಬೆಂಬಲಿಸಿ¨ªಾರೆ ಅದೇ ರೀತಿ ಈ ಕಾರ್ಯಕ್ಕೂ ಮಹಾದಾನಿಗಳು, ಮಹಾಪೋಷಕರು, ಸಮಾಜ ಬಾಂಧವರು ಸಹಕಾರ ನೀಡುತ್ತಾರೆ ಎಂಬ ಭರವಸೆ ನನ್ನದಾಗಿದೆ ಎಂದರು.

ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಓಣಿಮಜಲು ಜಗನ್ನಾಥ ಶೆಟ್ಟಿ ಮಾತನಾಡಿ ಬಂಟ ಸಮಾಜದ ಐಕ್ಯತೆಗಾಗಿ, ಸಮಾಜ ಬಾಂಧವರ ಏಳಿಗೆಗಾಗಿ ಐಕಳ ಹರೀಶ್‌ ಶೆಟ್ಟಿಯವರ ನೇತೃತ್ವದಲ್ಲಿ ನಡೆಯುವ ವಿಶ್ವ ಬಂಟರ ಸಮ್ಮಿಲನ ಯಶಸ್ವಿಯಾಗಿ ನಡೆಯಲೆಂದು ದೇವರಲ್ಲಿ ಪ್ರಾರ್ಥಿಸಿ ಶುಭ ಹಾರೈಸುತ್ತೇನೆ ಎಂದರು.
ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಅಧ್ಯಕ್ಷ ಮಹೇಶ್‌ ಹೆಗ್ಡೆ ಕಟ್ಟಿಂಗೇರಿಮನೆ ಮಾತನಾಡಿ ಉಡುಪಿಯಲ್ಲಿ ವಿಶ್ವ ಬಂಟರ ಸಮ್ಮೇಳನವು ಯಶಸ್ವಿಯಾಗಿ ನಡೆಯಲಿ. ನಮ್ಮದೇ ಊರಿನಲ್ಲಿ ನಡೆಯುವ ಈ ಕಾರ್ಯಕ್ಕೆ ಸಹಕಾರ ನೀಡುವುದು ನಮ್ಮ  ಕರ್ತವ್ಯವಾಗಿದೆ. ಐಕಳರ ಸಮಾಜಮುಖೀ ಕಾರ್ಯಕ್ಕೆ ಸಹಕಾರ ನೀಡೋಣ ಎಂದರು.

ಮುಂಬಯಿ ಬಂಟರ ಸಂಘದ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ ಮಾತನಾಡಿ, ಐಕಳ ಹರೀಶ್‌ ಶೆಟ್ಟಿಯವರು ಜನವರಿ ತಿಂಗಳಲ್ಲಿ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿ ಕೇವಲ ಒಂದು ತಿಂಗಳಿನÇÉೇ ಮುಂಬಯಿಯಲ್ಲಿ ಬೃಹತ್‌ ಬಂಟರ ಸಮಾವೇಶ ಯಶಸ್ವಿಯಾಗಿ ನಡೆಸಿದ ಕೀರ್ತಿಗೆ ಭಾಜನರಾಗಿ¨ªಾರೆ. ಬಂಟ ಸಮಾಜದ ಅಶಕ್ತರ ನೆರವಿನ ಉದ್ದೇಶದಿಂದ ಹಾಗೂ ಬಂಟ ಸಮಾಜವನ್ನು ಬಲಿಷ್ಠಗೊಳಿಸುವ ಅವರ ಕನಸಿಗೆ ನಾವೆಲ್ಲರೂ ಕೈಜೋಡಿಸೋಣ. ಪುಣೆಯ ಎÇÉಾ ಬಂಟರೂ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಎಂದರು.

ದೀಪಪ್ರಜ್ವಲಿಸಿ ಸಭೆಗೆ ಚಾಲನೆ ನೀಡಲಾಯಿತು. ಅತಿಥಿಗಳನ್ನು, ಗಣ್ಯರನ್ನು ಪುಷ್ಪಗುತ್ಛ ನೀಡಿ ಸತ್ಕರಿಸಲಾಯಿತು. ವೇದಿಕೆಯಲ್ಲಿ ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ ಉಪಸ್ಥಿತರಿದ್ದರು. ಸಭೆಯಲ್ಲಿ ಪುಣೆ ಬಂಟರ ಸಂಘದ ಉಪಾಧ್ಯಕ್ಷ ಮಾಧವ ಆರ್‌. ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಕೋಶಾಧಿಕಾರಿ ವೈ. ಚಂದ್ರಹಾಸ ಶೆಟ್ಟಿ ಮತ್ತು ಪದಾಧಿಕಾರಿಗಳು, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ  ವಸಂತ್‌ ಶೆಟ್ಟಿ ಮತ್ತು ಪದಾಧಿಕಾರಿಗಳು, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್‌ ಶೆಟ್ಟಿ ಕಳತ್ತೂರು ಮತ್ತು ಪದಾಧಿಕಾರಿಗಳು, ಯುವ ವಿಭಾಗದ ಕಾರ್ಯಾಧ್ಯಕ್ಷ  ರೋನಕ್‌  ಮತ್ತು ಸದಸ್ಯರು, ಮಹಿಳಾ ವಿಭಾಗದ ಪದಾಧಿಕಾರಿಗಳು, ಪಿಂಪ್ರಿ-ಚಿಂಚಾÌಡ್‌ ಹೋಟೆಲ್‌ ಅಸೋಸಿಯೇಶನ್‌ ಅಧ್ಯಕ್ಷ  ಕೆ. ಪದ್ಮನಾಭ ಶೆಟ್ಟಿ, ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ. ಶೆಟ್ಟಿ, ಎರ್ಮಾಳ್‌ ವಿಶ್ವನಾಥ ಶೆಟ್ಟಿ, ಬಂಟ್ಸ್‌  ಅಸೋಸಿಯೇಶನ್‌ ಪ್ರಧಾನ ಕಾರ್ಯದರ್ಶಿ ರೋಹಿತ್‌ ಶೆಟ್ಟಿ  ಪದಾಧಿಕಾರಿಗಳು, ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಂತೋಷ್‌ ಶೆಟ್ಟಿ ಸ್ವಾಗತಿಸಿ ವಂದಿಸಿದರು. 

ಐಕಳ ಹರೀಶ್‌ ಶೆಟ್ಟಿಯವರ ನೇತೃತ್ವದಲ್ಲಿ ವಿಶ್ವ ಬಂಟರ ಸಮ್ಮಿಲನ ಯಶಸ್ವಿಯಾಗಲಿ. ನಮ್ಮೆಲ್ಲರ ಪೂರ್ಣ ರೀತಿಯ ಸಹಕಾರ ಅವರಿಗಿದೆ. ಪುಣೆಯ ಸಮಾಜ ಬಾಂಧವರೆಲ್ಲರೂ ಅವರ ಕೆಲಸಕ್ಕೆ ಬೆಂಬಲವಾಗಿ ನಿಂತು ಸಹಕಾರ ನೀಡಬೇಕಾಗಿದೆ. ನಾವೆಲ್ಲರೂ ಅಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳೋಣ.
ಸಂತೋಷ್‌ ಶೆಟ್ಟಿ ಇನ್ನಕುರ್ಕಿಲ್‌ಬೆಟ್ಟು, ಅಧ್ಯಕ್ಷರು, ಪುಣೆ ಬಂಟರ ಸಂಘ

ಐಕಳ ಹರೀಶ್‌ ಶೆಟ್ಟಿಯವರು ನಡೆಸುವ ಯಾವುದೇ ಕಾರ್ಯಕ್ರಮವಿರಲಿ ಅದು ಶಿಸ್ತುಬದ್ಧತೆಯಿಂದ ಕೂಡಿರುತ್ತದೆ. ಇಂತಹ ನಾಯಕರು ನಮ್ಮ ಸಮಾಜದ ರತ್ನಗಳಾಗಿದ್ದು ಸೆ. 9 ರಂದು ಅವರ ನೇತೃತ್ವದಲ್ಲಿ ನಡೆಯುವ ವಿಶ್ವ ಬಂಟರ ಸಮ್ಮಿಲನಕ್ಕೆ ಪುಣೆಯ ಬಂಟರೆಲ್ಲರ ಸಹಕಾರವಿದೆ.
ನಾರಾಯಣ ಕೆ. ಶೆಟ್ಟಿ , ಅಧ್ಯಕ್ಷರು, ಬಂಟ್ಸ್‌ ಅಸೋಸಿಯೇಶನ್‌ ಪುಣೆ

ಬಂಟರ ಐಕ್ಯತೆಯ ದೃಷ್ಟಿಯಿಂದ, ಬಡ ಸಮಾಜ ಬಾಂಧವರ ಆಸರೆಯಾಗಿ ಕೆಲಸಮಾಡುವ ಸಂಕಲ್ಪದೊಂದಿಗೆ ಸುಮಾರು 50 ಲಕ್ಷ ವೆಚ್ಚದಲ್ಲಿ ದೊಡ್ಡ ಮಟ್ಟದ ಸಮ್ಮಿಲನವು ಉಡುಪಿಯಲ್ಲಿ ನಡೆಯಲಿದ್ದು, ಪುಣೆಯ ಸಮಾಜ ಬಾಂಧವರೆಲ್ಲರೂ ತನು-ಮನ-ಧನದ ಸಹಕಾರ ನೀಡಬೇಕು.
ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಕೋಶಾಧಿಕಾರಿ, ಸಮ್ಮಿಲನ ಸಮಿತಿ 

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಬಾಲ್ಯದ ನೆನಪು ತಂದ ನೃತ್ಯ

Desi Swara: ಬಾಲ್ಯದ ನೆನಪು ತಂದ ನೃತ್ಯ

Desi Swara: ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…..

Desi Swara: ಇಮೋಜಿ… ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…

Desi Swara: ಕತಾರ್‌- ಅನಿವಾಸಿ ಕನ್ನಡತಿ ಸುಮಾ ಮಹೇಶ್‌ ಗೌಡ ಅವರಿಗೆ ಸಮ್ಮಾನ

Desi Swara: ಕತಾರ್‌- ಅನಿವಾಸಿ ಕನ್ನಡತಿ ಸುಮಾ ಮಹೇಶ್‌ ಗೌಡ ಅವರಿಗೆ ಸಮ್ಮಾನ

Desi Swara: ಮೊಗವೀರ್ಸ್‌ ಬಹ್ರೈನ್‌- ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ

Desi Swara: ಮೊಗವೀರ್ಸ್‌ ಬಹ್ರೈನ್‌- ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.