250 ಟೆಸ್ಟ್ ವಿಕೆಟ್ ಅಶ್ವಿನ್ ನೂತನ ದಾಖಲೆ
Team Udayavani, Feb 13, 2017, 3:45 AM IST
ಹೈದರಾಬಾದ್: ಭಾರತದ ಸ್ಟಾರ್ ಸ್ಪಿನ್ನರ್ ಆರ್. ಅಶ್ವಿನ್ ಹೈದರಾಬಾದ್ ಟೆಸ್ಟ್ ಪಂದ್ಯದ ರವಿವಾರದ ಆಟದಲ್ಲಿ ಹೊಸತೊಂದು ದಾಖಲೆ ನಿರ್ಮಿಸಿದರು. ಅತ್ಯಂತ ಕಡಿಮೆ ಟೆಸ್ಟ್ ಪಂದ್ಯಗಳಲ್ಲಿ 250 ವಿಕೆಟ್ ಹಾರಿಸಿದ ಸಾಧಕನಾಗಿ ಮೂಡಿಬಂದರು.
ಅಮೋಘ ಶತಕದ ಮೂಲಕ ಬಾಂಗ್ಲಾದೇಶದ ಬ್ಯಾಟಿಂಗ್ ಹೋರಾಟವನ್ನು ಜಾರಿಯಲ್ಲಿರಿಸಿದ ನಾಯಕ ಮುಶ್ಫಿಕರ್ ರಹೀಂ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ ತಮ್ಮ 250ನೇ ವಿಕೆಟ್ ಪೂರ್ತಿಗೊಳಿಸಿದರು. ಅಶ್ವಿನ್ ಕೇರಂ ಬಾಲ್ ಒಂದನ್ನು ರಿವರ್ಸ್ ಸ್ವೀಪ್ ಮಾಡುವ ಯತ್ನದಲ್ಲಿ ರಹೀಂ ಕೀಪರ್ ಸಾಹಾಗೆ ಕ್ಯಾಚ್ ನೀಡಿದ್ದರು. ಇದು ಅಶ್ವಿನ್ ಅವರ 45ನೇ ಟೆಸ್ಟ್ ಪಂದ್ಯ. ಇದಕ್ಕೂ ಮುನ್ನ ಆಸ್ಟ್ರೇಲಿಯದ ಡೆನ್ನಿಸ್ ಲಿಲ್ಲಿ 48 ಟೆಸ್ಟ್ಗಳಲ್ಲಿ ಈ ಸಾಧನೆ ಮಾಡಿದ್ದು ದಾಖಲೆಯಾಗಿತ್ತು. ಡೇಲ್ ಸ್ಟೇನ್ (49 ಟೆಸ್ಟ್), ಅಲನ್ ಡೊನಾಲ್ಡ್ (50), ವಕಾರ್ ಯೂನಿಸ್ (51), ಮುತ್ತಯ್ಯ ಮುರಳೀಧರನ್ (51), ರಿಚರ್ಡ್ ಹ್ಯಾಡ್ಲಿ (53) ಅನಂತರದ ಸ್ಥಾನದಲ್ಲಿದ್ದಾರೆ.
ಕಳೆದ ಸೆಪ್ಟಂಬರ್ನಲ್ಲಿ ಅಶ್ವಿನ್ ಅತೀ ಕಡಿಮೆ ಟೆಸ್ಟ್ಗಳಲ್ಲಿ 200 ವಿಕೆಟ್ ಉರುಳಿಸಿದ ವಿಶ್ವದ 2ನೇ ಬೌಲರ್ ಎನಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.