![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-415x218.jpg)
ಬಾಕ್ಸಿಂಗ್ ಫೆಡರೇಶನ್ನಿಂದಲೂ ಆನ್ಲೈನ್ ಕೋಚಿಂಗ್ ಆರಂಭ
Team Udayavani, Mar 30, 2020, 5:17 AM IST
![ಬಾಕ್ಸಿಂಗ್ ಫೆಡರೇಶನ್ನಿಂದಲೂ ಆನ್ಲೈನ್ ಕೋಚಿಂಗ್ ಆರಂಭ](https://www.udayavani.com/wp-content/uploads/2020/03/Boxing-Federation-620x371.jpg)
ಹೊಸದಿಲ್ಲಿ: ಕೋವಿಡ್-19 ವೈರಸ್ನಿಂದಾಗಿ ದೇಶಾದ್ಯಂತ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಬಾಕ್ಸರ್ಗಳ ತರಬೇತಿಗೆ ಹೊಡೆತ ಬಿದ್ದಿದೆ. ಇದಕ್ಕಾಗಿ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದ ಭಾರತದ ಬಾಕ್ಸರ್ಗಳಿಗೆ ಬಾಕ್ಸಿಂಗ್ ಫೆಡರೇಶನ್ ಇದೀಗ ಆನ್ಲೈನ್ ತರಬೇತಿ ನೀಡಲು ಮುಂದಾಗಿದೆ.
ಒಲಿಂಪಿಕ್ಸ್ಗೆ ಆಯ್ಕೆಯಾದ 9 ಮಂದಿ ಬಾಕ್ಸರ್ಗಳು ತರಬೇತಿ ಕಾರ್ಯ ಕ್ರಮದಲ್ಲಿ ಪಾಲ್ಗೊಂಡರು. ಬಾಕ್ಸರ್ಗಳ ಜತೆ ಟೆಲಿಕಾನ್ಫರೆನ್ಸ್ ನಡೆಸಿದ ಭಾರತೀಯ ಬಾಕ್ಸಿಂಗ್ ಫೆಡರೇಶನ್ನ ಅಧ್ಯಕ್ಷ ಅಜಯ್ ಸಿಂಗ್ ಅವರು ಇದು ನಮಗೆಲ್ಲ ಸವಾಲಿನ ಸಮಯವಾಗಿದೆ. ನಮ್ಮ ಬಗ್ಗೆ ಜಾಗೃತೆ ವಹಿಸಬೇಕಾಗಿದೆ. ಯಾವಾಗಲೂ ದೈಹಿಕ ಕ್ಷಮತೆ ಕಾಪಾಡಿಕೊಳ್ಳಿ ಮತ್ತು ತರಬೇತುದಾರರು ಸೂಚಿಸಿದ ವ್ಯಾಯಾಮ, ಅಭ್ಯಾಸವನ್ನು ಮುಂದುವರಿಸಿಕೊಂಡು ಹೋಗಿ, ಸಾಧ್ಯವಾದಷ್ಟು ನಿಮ್ಮ ತೂಕವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ಎಂದು ಅಜಯ್ ಸಿಂಗ್ ಬಾಕ್ಸರ್ಗಳಿಗೆ ಸೂಚನೆ ನೀಡಿದರು.
ಟಾಪ್ ನ್ಯೂಸ್
![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-415x218.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.