![ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!](https://www.udayavani.com/wp-content/uploads/2024/07/Dubai1-415x234.jpg)
ಉದ್ದೀಪನ ಸೇವನೆ ಸುಳಿಯಲ್ಲಿ ಆಫ್ಘಾನಿಸ್ತಾನ ಕ್ರಿಕೆಟಿಗ ಶೆಹಜಾದ್
Team Udayavani, Apr 15, 2017, 11:41 AM IST
![mohammad-shah-za.jpg](https://www.udayavani.com/wp-content/uploads/2017/04/15/mohammad-shah-za.jpg)
ನವದೆಹಲಿ: ಆಫ್ಘಾನಿಸ್ತಾನ ಕ್ರಿಕೆಟಿಗ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಮೊಹಮ್ಮದ್ ಶೆಹಜಾದ್ ಉದ್ದೀಪನ ಸೇವನೆ ಆರೋಪಕ್ಕೆ ಸಿಲುಕಿದ್ದಾರೆ.
ಗುರುವಾರ ಈ ಸುದ್ದಿಯನ್ನು ಐಸಿಸಿ ಖಚಿತಪಡಿಸಿದೆ. ಜ.17ರಂದು ದುಬೈನಲ್ಲಿನ ವಾಡಾ ಮಾನ್ಯತೆ ಹೊಂದಿರುವ ಐಸಿಸಿ ಅಕಾಡೆಮಿಯಲ್ಲಿ ಶೆಹಜಾದ್ ಪರೀಕ್ಷೆಗೆ ಒಳಗಾಗಿದ್ದರು. ಈ ಪರೀಕ್ಷೆಯ ಫಲಿತಾಂಶ ಇದೀಗ ಹೊರಬಂದಿದೆ.
ಇದರಲ್ಲಿ ಉದ್ದೀಪನ ಸೇವಿಸಿದ್ದಾರೆ ಎನ್ನುವ ಅಂಶ ಕಂಡು ಬಂದಿದೆ ಎನ್ನಲಾಗಿದೆ. ಆರೋಪ ಸಾಬೀತಾದರೆ ಶೆಹಜಾದ್ ಕಠಿಣ ಶಿಸ್ತು ಕ್ರಮ ಎದುರಿಸುವ ಸಾಧ್ಯತೆ ಇದೆ. ಅದು ನಿಷೇಧ ಅಥವಾ ಕೆಲ ಪಂದ್ಯಗಳಿಂದ ಅಮಾನತು ಇರಬಹುದು. ಆದರೆ ಅದಿನ್ನೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ.ಸದ್ಯ ಶೆಹಜಾದ್ಗೆ ನೋಟಿಸ್ ಜಾರಿಯಾಗಲಿದೆ. ಈ ನಡುವೆ ಅವರು “ಬಿ’ ಸ್ಯಾಂಪಲ್ ಪರೀಕ್ಷೆಗೆ ಅನುಮತಿ ಕೋರಲು 5 ದಿನಗಳ ಕಾಲಾವಕಾಶ ಇದೆ.
ಒಟ್ಟಾರೆ 12 ದಿನಗಳ ಒಳಗಾಗಿ ಉದ್ದೀಪನ ಸೇವನೆ ವಿಚಾರಣೆ ನಡೆಯಲಿದೆ. ಒಂದು ವೇಳೆ ಮೇಲ್ಮನವಿ ಸಲ್ಲಿಸದಿದ್ದರೆ ಶೆಹಜಾದ್ ವಿರುದ್ಧ ನೇರವಾಗಿ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ. ಏ.26ರಂದು ಶೆಹಜಾದ್ ವಿರುದ್ಧ ಶಿಸ್ತು ಕ್ರಮ ಅಧಿಕೃತವಾಗಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ
ಟಾಪ್ ನ್ಯೂಸ್
![ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!](https://www.udayavani.com/wp-content/uploads/2024/07/Dubai1-415x234.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.