Udayavni Special

ಕೆಪಿಎಲ್‌ ಸೆಣಸಾಟಕ್ಕೆ ಹುಬ್ಬಳ್ಳಿ ಮೈದಾನ ಸಿದ್ಧ


Team Udayavani, Aug 17, 2018, 6:35 AM IST

ban17081816medn.jpg

ಹುಬ್ಬಳ್ಳಿ: ವರುಣನ ಕಣ್ಣಾಮುಚ್ಚಾಲೆ ನಡುವೆಯೇ ಏಳನೇ ಆವೃತ್ತಿ ಕರ್ನಾಟಕ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಸೆಣೆಸಾಟಕ್ಕೆ ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನ ಸಜ್ಜುಗೊಂಡಿದೆ. ಕೆಪಿಎಲ್‌ನ ಹುಬ್ಬಳ್ಳಿ ಚರಣ ಆ.19ರಿಂದ 26ರವರೆಗೆ ನಡೆಯಲಿದೆ. ಈ ಬಾರಿ ಇಲ್ಲಿ ನಡೆಯಲಿರುವ 11 ಪಂದ್ಯಗಳಿಗಾಗಿ ಮೈದಾನವನ್ನು ವಿಶೇಷವಾಗಿ ಸಿದ್ಧಪಡಿಸಲಾಗುತ್ತಿದೆ.

22.75 ಕೋಟಿ ರೂ. ವೆಚ್ಚದಲ್ಲಿ ಪೆವಿಲಿಯನ್‌ ನಿರ್ಮಾಣ ನಡೆಯುತ್ತಿದೆ. ಆಟಗಾರರ ಡ್ರೆಸ್ಸಿಂಗ್‌ ಕೊಠಡಿ ಸಂಪೂರ್ಣ ಸಿದ್ಧಗೊಂಡಿದೆ. ಇನ್ನು ಆಟಗಾರರ ಗ್ಯಾಲರಿ, ವೀಕ್ಷಕ ವಿವರಣೆ ಕೇಂದ್ರ, ಮಾಧ್ಯಮ ಕೇಂದ್ರ, ಅಧಿಕಾರಿಗಳ ಕೊಠಡಿ ಸಿದ್ಧಗೊಳ್ಳುತ್ತಿದೆ. ಇನ್ನು 3 ತಿಂಗಳಲ್ಲಿ ನೇರಪ್ರಸಾರ ಕೇಂದ್ರ ಸಿದ್ಧಗೊಳ್ಳಲಿದೆ.

ಇಲ್ಲಿ ಒಟ್ಟು 11 ಪಂದ್ಯಗಳು ನಡೆಯಲಿವೆ. ಅವು 8 ದಿನದಲ್ಲಿ ಹಂಚಿ ಹೋಗಿವೆ. ಮೂರು ದಿನಗಳ ಕಾಲ ದಿನಕ್ಕೆ ಎರಡು ಪಂದ್ಯಗಳು ನಡೆಯಲಿವೆ. ಬಾಕಿ 5 ದಿನಗಳಲ್ಲಿ ದಿನಕ್ಕೆ ಒಂದು ಪಂದ್ಯ ಮಾತ್ರ ನಡೆಯಲಿದೆ. ಎರಡು ಪಂದ್ಯಗಳು ಇದ್ದ ದಿನ ಮಧ್ಯಾಹ್ನ 2:30 ಗಂಟೆಗೆ ಒಂದು ಪಂದ್ಯ, ಸಂಜೆ 6:30 ಗಂಟೆಗೆ ಇನ್ನೊಂದು ಪಂದ್ಯ ನಡೆಯಲಿದೆ.

ತಪ್ಪಿದ ಫೈನಲ್‌: ಕೆಪಿಎಲ್‌ ಪಂದ್ಯಾವಳಿಯ ಹುಬ್ಬಳ್ಳಿ ಆವೃತ್ತಿಯ ನಾಲ್ಕು ಆವೃತ್ತಿಗಳಲ್ಲಿ ಮೂರು ಬಾರಿ ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನ ಅಂತಿಮ ಹಣಾಹಣಿಗೆ ಆತಿಥ್ಯ ನೀಡಿತ್ತು. ಕಳೆದ ಬಾರಿ ಮೈಸೂರು ಭಾಗದಲ್ಲಿ ಕಾವೇರಿ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಫೈನಲ್‌ ಪಂದ್ಯ ಹುಬ್ಬಳ್ಳಿಗೆ ಸ್ಥಳಾಂತಗೊಂಡಿತ್ತು. ಆದರೆ ಈ ಬಾರಿ ಫೈನಲ್‌ ಪಂದ್ಯ ಸೇರಿದಂತೆ ಅಂತಿಮ ಚರಣ ಮೈಸೂರಿಗೆ ನೀಡಲಾಗಿದೆ.

ಫ್ಲೆಕ್ಸ್‌ಗೆ ಗುಡ್‌ ಬೈ: ಈ ಬಾರಿ ಮೈದಾನದಲ್ಲಿ ಫ್ಲೆಕ್ಸ್‌ಗಳ ಅಳವಡಿಕೆಗೆ ಅವಕಾಶ ನೀಡಿಲ್ಲ. ಬದಲಾಗಿ ಸಂಪೂರ್ಣ ಮೈದಾನದಲ್ಲಿ ಎಲ್‌ಇಡಿ ಸ್ಕ್ರಿನ್‌ ಅಳವಡಿಕೆ ಮಾಡಲಾಗುತ್ತಿದೆ. ಸ್ಕೋರ್‌ ಬೋರ್ಡ್‌ಗೆ ಸುಮಾರು 75 ಎಲ್‌ಇಡಿಯ ದೊಡ್ಡ ಬೋರ್ಡ್‌, 24 ಎಲ್‌ಇಡಿಯ 2 ಬೋರ್ಡ್‌ ಹಾಗೂ ಸುತ್ತಲೂ ಸುಮಾರು 410 ಎಲ್‌ಇಡಿ ಬೋರ್ಡ್‌ ನಿರ್ಮಿಸಲಾಗುತ್ತಿದೆ. ಬೌಂಡರಿ ಲೈನ್‌ ಬಳಿ ಫ್ಲೆಕ್ಸ್‌ ಮೂಲಕ ಹಾಕಲಾಗುತ್ತಿದ್ದ ಜಾಹೀರಾತುಗಳನ್ನು ರದ್ದು ಮಾಡಲಾಗಿದೆ. ಅವೆಲ್ಲವನ್ನು ಇನ್ನು ಎಲ್‌ಇಡಿ ಮೂಲಕ ತೋರಿಸಲಾಗುತ್ತದೆ.

10 ಸಾವಿರ ಆಸನ ವ್ಯವಸ್ಥೆ: ಕೆಪಿಎಲ್‌ ಪಂದ್ಯವನ್ನು 10 ಸಾವಿರ ಜನ ವೀಕ್ಷಿಸುವಂತೆ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ದೀರ್ಘ‌ಕಾಲದಿಂದ ಕಾಮಗಾರಿ ನಡೆದಿದೆ. ಎಲ್ಲ ಲೆಕ್ಕಾಚಾರದ ಪ್ರಕಾರ ನಡೆದ ಹುಬ್ಬಳ್ಳಿಯಲ್ಲೂ ಅಂತಾರಾಷ್ಟ್ರೀಯ ಪಂದ್ಯ ನಡೆಸಲು ಸಾಧ್ಯವಿದೆ.

ಈ ವರ್ಷವೂ ಕೂಡಾ ಆ.24ರಂದು ಮಹಿಳಾ ತಂಡಗಳ ಮಧ್ಯೆ ಸೆಣಸಾಟ ನಡೆಯಲಿದೆ. ಇದಲ್ಲದೇ ರಾಜನಗರದ ಮೈದಾನ ಈಗಾಗಲೇ ಎಲ್ಲ ಪಂದ್ಯಾವಳಿಗೂ ಸಿದ್ದಗೊಂಡಿದ್ದು ಪಂದ್ಯದ ಆರಂಭಕ್ಕೆ ಕಾತುರರಾಗಿದ್ದೇವೆ.
– ಬಾಬಾ ಭೂಸದ, ಕೆಎಸ್‌ಸಿಎ ಧಾರವಾಡ ವಲಯ ಸಂಚಾಲಕ.

– ಬಸವರಾಜ ಹೂಗಾರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಖುಷಿ ಖುಷಿಯ ಸಂಬಂಧಗಳ ಬದುಕು

ಖುಷಿ ಖುಷಿಯ ಸಂಬಂಧಗಳ ಬದುಕು

Camel-Double-Hump

LACಯಲ್ಲಿ ಅವಳಿ ಡುಬ್ಬಗಳ ಒಂಟೆ ಗಸ್ತು

ಅಡಿಕೆ ಮಾತ್ರವೇ ಉಪಯೋಗಿಸಿದರೆ ಅಪಾಯವಿಲ್ಲ 

ಅಡಿಕೆ ಮಾತ್ರವೇ ಉಪಯೋಗಿಸಿದರೆ ಅಪಾಯವಿಲ್ಲ 

ಆತಂಕದ ನಡುವೆ ಇಂದಿನಿಂದ ಅಧಿವೇಶನ : 70 ಮಂದಿ ಶಾಸಕರಿಗೆ ಕೋವಿಡ್ ಸೋಂಕು?

ಆತಂಕದ ನಡುವೆ ಇಂದಿನಿಂದ ಅಧಿವೇಶನ : 70 ಮಂದಿ ಶಾಸಕರಿಗೆ ಕೋವಿಡ್ ಸೋಂಕು?

ಬಾಲ್ಯ ವಿವಾಹ ಪಿಡುಗು; ಕೋವಿಡ್ ಕಾಲದಲ್ಲೇ ಹೆಚ್ಚು!

ಬಾಲ್ಯ ವಿವಾಹ ಪಿಡುಗು; ಕೋವಿಡ್ ಕಾಲದಲ್ಲೇ ಹೆಚ್ಚು!

ಇಂದು RCB ಅಖಾಡಕ್ಕೆ; ಹೈದರಾಬಾದ್‌ ಎದುರಾಳಿ

ಇಂದು RCB ಅಖಾಡಕ್ಕೆ; ಹೈದರಾಬಾದ್‌ ಎದುರಾಳಿ

‘ಡ್ಯಾಡ್ಸ್‌ ಆರ್ಮಿ’ಯ ಸಾಹಸಕ್ಕೆ ಧೋನಿ ಖುಷ್‌

‘ಡ್ಯಾಡ್ಸ್‌ ಆರ್ಮಿ’ಯ ಸಾಹಸಕ್ಕೆ ಧೋನಿ ಖುಷ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು RCB ಅಖಾಡಕ್ಕೆ; ಹೈದರಾಬಾದ್‌ ಎದುರಾಳಿ

ಇಂದು RCB ಅಖಾಡಕ್ಕೆ; ಹೈದರಾಬಾದ್‌ ಎದುರಾಳಿ

‘ಡ್ಯಾಡ್ಸ್‌ ಆರ್ಮಿ’ಯ ಸಾಹಸಕ್ಕೆ ಧೋನಿ ಖುಷ್‌

‘ಡ್ಯಾಡ್ಸ್‌ ಆರ್ಮಿ’ಯ ಸಾಹಸಕ್ಕೆ ಧೋನಿ ಖುಷ್‌

Stoins1

ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

NEWS-TDY-01

ಚೆನ್ನೈ ವಿರುದ್ಧದ ಮೊದಲ ಪಂದ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಬಟ್ಲರ್ ಅಲಭ್ಯ

punjab-delhin

ಐಪಿಎಲ್ 2020: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

ಖುಷಿ ಖುಷಿಯ ಸಂಬಂಧಗಳ ಬದುಕು

ಖುಷಿ ಖುಷಿಯ ಸಂಬಂಧಗಳ ಬದುಕು

Camel-Double-Hump

LACಯಲ್ಲಿ ಅವಳಿ ಡುಬ್ಬಗಳ ಒಂಟೆ ಗಸ್ತು

ಅಡಿಕೆ ಮಾತ್ರವೇ ಉಪಯೋಗಿಸಿದರೆ ಅಪಾಯವಿಲ್ಲ 

ಅಡಿಕೆ ಮಾತ್ರವೇ ಉಪಯೋಗಿಸಿದರೆ ಅಪಾಯವಿಲ್ಲ 

ಒತ್ತಡಗಳ ನಡುವೆ… ಮಾನಸಿಕ ಆರೋಗ್ಯ ಬಹಳ ಮುಖ್ಯ

ಒತ್ತಡಗಳ ನಡುವೆ… ಮಾನಸಿಕ ಆರೋಗ್ಯ ಬಹಳ ಮುಖ್ಯ

ಆತಂಕದ ನಡುವೆ ಇಂದಿನಿಂದ ಅಧಿವೇಶನ : 70 ಮಂದಿ ಶಾಸಕರಿಗೆ ಕೋವಿಡ್ ಸೋಂಕು?

ಆತಂಕದ ನಡುವೆ ಇಂದಿನಿಂದ ಅಧಿವೇಶನ : 70 ಮಂದಿ ಶಾಸಕರಿಗೆ ಕೋವಿಡ್ ಸೋಂಕು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.