French Open ಗ್ರ್ಯಾನ್‌ ಸ್ಲಾಮ್‌: ಸ್ವಿಯಾಟೆಕ್‌ಗೆ ಸ್ಮರಣೀಯ ಗೆಲುವು

Team Udayavani, May 30, 2024, 10:41 PM IST

French Open ಗ್ರ್ಯಾನ್‌ ಸ್ಲಾಮ್‌: ಸ್ವಿಯಾಟೆಕ್‌ಗೆ ಸ್ಮರಣೀಯ ಗೆಲುವು

ಪ್ಯಾರಿಸ್‌: ಹಾಲಿ ನಂಬರ್‌ ವನ್‌ ಮತ್ತು ಎರಡು ಬಾರಿಯ ಹಾಲಿ ಚಾಂಪಿಯನ್‌ ಆಗಿರುವ ಇಗಾ ಸ್ವಿಯಾಟೆಕ್‌ ಪಂದ್ಯ ಅಂಕವೊಂದನ್ನು ರಕ್ಷಿಸಿಕೊಂಡು ಜಪಾನಿನ ಮಾಜಿ ನಂಬರ್‌ ವನ್‌ ನವೋಮಿ ಒಸಾಕಾ ಅವರನ್ನು ಮೂರು ಸೆಟ್‌ಗಳ ಹೋರಾಟದಲ್ಲಿ ಸೋಲಿಸಿ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌ ಕೂಟದಲ್ಲಿ ಮೂರನೇ ಸುತ್ತಿಗೇರಿದರು.

ನಿಜವಾಗಿಯೂ ಈ  ಪಂದ್ಯ ತೀವ್ರ ಪೈಪೋಟಿಯಿಂದ ಸಾಗಿತ್ತು. ಪಂದ್ಯ ಅಂಕವೊಂದನ್ನು ರಕ್ಷಿಸಿದ ಅವರು ಸತತ ಐದು ಗೇಮ್‌ ಗೆಲ್ಲುವ ಮೂಲಕ ಪಂದ್ಯವನ್ನು 7-6 (1), 1-6, 7-5 ಸೆಟ್‌ಗಳಿಂದ ಒಸಾಕಾ ಅವರನ್ನು ಕೆಡಹಿ ಮುನ್ನಡೆದರು. ನವೋಮಿ ಅದ್ಭುತ ರೀತಿಯಲ್ಲಿ ಆಡಿದರು. ಅವರು ಚೆನ್ನಾಗಿ ಆಡುತ್ತಿರುವುದಕ್ಕೆ ನನಗೆ ಖುಷಿಯಾಗಿದೆ ಎಂದು ಸ್ವಿಯಾಟೆಕ್‌ ಹೇಳಿದ್ದಾರೆ.

ಈ ಗೆಲುವಿನಿಂದ ಸ್ವಿಯಾಟೆಕ್‌ ವರು ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ತನ್ನ ಸತತ ಗೆಲುವಿನ ದಾಖಲೆಯನ್ನು 16 ಪಂದ್ಯಗಳಿಗೆ ವಿಸ್ತರಿಸಿದ್ದಾರಲ್ಲದೇ ಆವೇ ಅಂಗಣದ ಈ ಕೂಟದಲ್ಲಿ ಮೂರನೇ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ನಿರ್ಣಾಯಕ ಸೆಟ್‌ನ ಒಂದು ಹಂತದಲ್ಲಿ ಒಸಾಕಾ 5-2 ಮುನ್ನಡೆಯಲ್ಲಿದ್ದರು. ಆದರೆ ಆಬಳಿಕ ಪಂದ್ಯದಲ್ಲಿ ಹಿಡಿತ ಸಾಧಿಸಲು ವಿಫ‌ಲವಾಗಿ ಸೋಲನ್ನು ಕಂಡಿದ್ದರಿಂದ ಅಂಗಣ ಬಿಟ್ಟು ಹೊರನಡೆಯುವಾಗ ಅತ್ತುಬಿಟ್ಟರು.

ಸಬಲೆಂಕಾ ಮೂರನೇ ಸುತ್ತಿಗೆ

ದ್ವಿತೀಯ ಶ್ರೇಯಾಂಕದ ಅರಿನಾ ಸಬಲೆಂಕಾ ಅವರು ಜಪಾನಿನ ಅರ್ಹತಾ ಆಟಗಾರ್ತಿ ಮೊಯುಕಾ ಯುಚಿಜಿಮಾ ಅವರನ್ನು 6-2, 6-2 ನೇರ ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತಿಗೇರಿದರು. ಯುಚಿಜಿಮಾ ಗ್ರ್ಯಾನ್‌ ಸ್ಲಾಮ್‌ ಕೂಟದ ದ್ವಿತೀಯ ಸುತ್ತಿನಲ್ಲಿ ಆಡುತ್ತಿರುವುದು ಇದೇ ಮೊದಲ ಸಲವಾಗಿದೆ.

ಗಾಫ್ ಮುನ್ನಡೆ

ಅಮೆರಿಕದ ಕೊಕೊ ಗಾಫ್ ಸ್ಲೋವಾನಿಯದ ತಮರ ಝಿದನ್ಸೆಕ್‌ ಅವರನ್ನು 6-3, 6-4 ಸೆಟ್‌ಗಳಿಂದ ಕೆಡಹಿ ಮುನ್ನಡೆದರು.  ದಿನದ ಇನ್ನುಳಿದ ಪಂದ್ಯಗಳಲ್ಲಿ ನಾಲ್ಕನೇ ಶ್ರೇಯಾಂಕದ ಎಲೆನಾ ರಿಬಕಿನಾ, ಎಲಿನಾ ಸ್ವಿಟೋಲಿಯಾ ತಮ್ಮ ಎದುರಾಳಿಯೆದುರು ಜಯ ಸಾಧಿಸಿ ಮುನ್ನಡೆದಿದ್ದಾರೆ. ರಿಬಕಿನಾ ಅವರು ಅರಂತಾ ರಸ್‌ ಅವರನ್ನು 6-3, 6-4 ಸೆಟ್‌ಗಳಿಂದ ಕೆಡಹಿದರೆ ಸ್ವಿಟೋಲಿನಾ ಅವರು 6-4, 7-6 (7-3) ಸೆಟ್‌ಗಳಿಂದ ಪ್ಯಾರಿ ಅವರನ್ನು ಉರುಳಿಸಿದರು.

ಮೆಡ್ವೆಡೇವ್‌ಗೆ ಜಯ

ಸರ್ಬಿಯದ ಮಿಯೊಮಿರ್‌ ಕೆಮನೋವಿಕ್‌ ಅವರ ವಿರುದ್ಧ ನಡೆದ ದ್ವಿತೀಯ ಸೆಟ್‌ನ ಹೋರಾಟದ ವೇಳೆ ಕೆಮನೋವಿಕ್‌ ಗಾಯಗೊಂಡು  ಪಂದ್ಯ ತ್ಯಜಿಸಿದ್ದರಿಂದ ಡ್ಯಾನಿಲ್‌ ಮೆಡ್ವೆಡೇವ್‌ ಸುಲಭವಾಗಿ ಮೂರನೇ ಸುತ್ತು ತಲುಪಿದರು. ಪಂದ್ಯ ತ್ಯಜಿಸಿದಾಗ ಮೆಡ್ವೆಡೇವ್‌ 6-1, 5-0 ಮುನ್ನಡೆಯಲ್ಲಿದ್ದರು.

ಇನ್ನೊಂದು ಪಂದ್ಯದಲ್ಲಿ ಇಟಲಿಯ ತಾರೆ ಮತ್ತು ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಜಾನ್ನಿಕ್‌ ಸಿನ್ನರ್‌ ಅವರು ಸ್ಥಳೀಯ ಫೇವರಿಟ್‌ ರಿಚರ್ಡ್‌ ಗಾಸ್ಕೆಟ್‌ ಅವರನ್ನು 6-4, 6-2, 6-4 ಸೆಟ್‌ಗಳಿಂದ ಸೋಲಿಸಿದರು. ಯಾವುದೇ ಸೆಟ್‌ ಕಳೆದುಕೊಳ್ಳದೇ ಮೂರನೇ ಸುತ್ತು ಪ್ರವೇಶಿಸಿದ ಸಿನ್ನರ್‌ ಅಲ್ಲಿ ಪಾವೆಲ್‌ ಕೊಟೋವ್‌ ಅವರ ಸವಾಲನ್ನು ಎದುರಿಸಲಿದ್ದಾರೆ. ಕೊಟೋವ್‌ ತನ್ನ ಪಂದ್ಯದಲ್ಲಿ ಸ್ಟಾನ್‌ ವಾವ್ರಿಂಕ ಅವರನ್ನು 7-6 (5), 6-4, 1-6, 7-6 (5) ಸೆಟ್‌ಗಳಿಂದ ಉರುಳಿಸಿದ್ದರು.

ಟಾಪ್ ನ್ಯೂಸ್

Belthangady; ದ.ಕನ್ನಡ ಜಿಲ್ಲೆಯ ದಲಿತ ಚಳವಳಿಯ ಮುಂಚೂಣಿ ನಾಯಕ ಚಂದು ಎಲ್ ನಿಧನ

Belthangady; ದ.ಕನ್ನಡ ಜಿಲ್ಲೆಯ ದಲಿತ ಚಳವಳಿಯ ಮುಂಚೂಣಿ ನಾಯಕ ಚಂದು ಎಲ್ ನಿಧನ

Kudremukh,ನೇತ್ರಾವತಿ ಪೀಕ್‌ ಚಾರಣ: ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಜಾರಿ

Kudremukh,ನೇತ್ರಾವತಿ ಪೀಕ್‌ ಚಾರಣ: ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಜಾರಿ

Congress ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆ: ಡಿಕೆಶಿ ನಿಗೂಢ ನಡೆ

Congress ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆ: ಡಿಕೆಶಿ ನಿಗೂಢ ನಡೆ

horocospe

Daily Horoscope; ಈ ರಾಶಿಯ ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ

kKasaragod ರಾತ್ರಿ ರೇಡಿಯಂನಂತೆ ಹೊಳೆಯುವ ಅಣಬೆ ಪತ್ತೆKasaragod ರಾತ್ರಿ ರೇಡಿಯಂನಂತೆ ಹೊಳೆಯುವ ಅಣಬೆ ಪತ್ತೆ

Kasaragod ರಾತ್ರಿ ರೇಡಿಯಂನಂತೆ ಹೊಳೆಯುವ ಅಣಬೆ ಪತ್ತೆ

RTC Aadhaar ಜೋಡಣೆ ಗೊಂದಲ: ಕಚೇರಿಗಳಿಂದ ಕಚೇರಿಗಳಿಗೆ ರೈತರ ಅಲೆದಾಟ

RTC Aadhaar ಜೋಡಣೆ ಗೊಂದಲ: ಕಚೇರಿಗಳಿಂದ ಕಚೇರಿಗಳಿಗೆ ರೈತರ ಅಲೆದಾಟ

ಆರೋಪಿಗಳ ಡಿಎನ್‌ಎ ಪರೀಕ್ಷೆ: ದರ್ಶನ್‌, ಪವಿತ್ರಾಗೌಡ ಸೇರಿ 14 ಮಂದಿಗೆ ಪರೀಕ್ಷೆ

ಆರೋಪಿಗಳ ಡಿಎನ್‌ಎ ಪರೀಕ್ಷೆ: ದರ್ಶನ್‌, ಪವಿತ್ರಾಗೌಡ ಸೇರಿ 14 ಮಂದಿಗೆ ಪರೀಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup,ಭಾರತ-ಅಫ್ಘಾನಿಸ್ಥಾನ ಕ್ರಿಕೆಟ್‌ ಕದನ

T20 World Cup,ಭಾರತ-ಅಫ್ಘಾನಿಸ್ಥಾನ ಕ್ರಿಕೆಟ್‌ ಕದನ

India team ನೂತನ ಕೋಚ್‌: ಇಂದು ಘೋಷಣೆ?

India team ನೂತನ ಕೋಚ್‌: ಇಂದು ಘೋಷಣೆ?

T20 World Cup ವೆಸ್ಟ್‌ ಇಂಡೀಸ್‌-ಇಂಗ್ಲೆಂಡ್‌ ಮುಖಾಮುಖಿ

T20 World Cup ವೆಸ್ಟ್‌ ಇಂಡೀಸ್‌-ಇಂಗ್ಲೆಂಡ್‌ ಮುಖಾಮುಖಿ

ಭಾರತದ ಕ್ರಿಕೆಟಿಗರಿಗೆ ವೆಸ್ಲಿ ಹಾಲ್‌ ಗಿಫ್ಟ್

ಭಾರತದ ಕ್ರಿಕೆಟಿಗರಿಗೆ ವೆಸ್ಲಿ ಹಾಲ್‌ ಗಿಫ್ಟ್

ಮಂಧನಾ, ಕೌರ್‌, ಕಾಪ್‌, ವೋಲ್ವಾರ್ಟ್‌ ಶತಕ: ವನಿತೆಯರಿಗೆ ಏಕದಿನ ಸರಣಿ

ಮಂಧನಾ, ಕೌರ್‌, ಕಾಪ್‌, ವೋಲ್ವಾರ್ಟ್‌ ಶತಕ: ವನಿತೆಯರಿಗೆ ಏಕದಿನ ಸರಣಿ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Belthangady; ದ.ಕನ್ನಡ ಜಿಲ್ಲೆಯ ದಲಿತ ಚಳವಳಿಯ ಮುಂಚೂಣಿ ನಾಯಕ ಚಂದು ಎಲ್ ನಿಧನ

Belthangady; ದ.ಕನ್ನಡ ಜಿಲ್ಲೆಯ ದಲಿತ ಚಳವಳಿಯ ಮುಂಚೂಣಿ ನಾಯಕ ಚಂದು ಎಲ್ ನಿಧನ

Kudremukh,ನೇತ್ರಾವತಿ ಪೀಕ್‌ ಚಾರಣ: ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಜಾರಿ

Kudremukh,ನೇತ್ರಾವತಿ ಪೀಕ್‌ ಚಾರಣ: ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಜಾರಿ

Congress ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆ: ಡಿಕೆಶಿ ನಿಗೂಢ ನಡೆ

Congress ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆ: ಡಿಕೆಶಿ ನಿಗೂಢ ನಡೆ

horocospe

Daily Horoscope; ಈ ರಾಶಿಯ ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ

kKasaragod ರಾತ್ರಿ ರೇಡಿಯಂನಂತೆ ಹೊಳೆಯುವ ಅಣಬೆ ಪತ್ತೆKasaragod ರಾತ್ರಿ ರೇಡಿಯಂನಂತೆ ಹೊಳೆಯುವ ಅಣಬೆ ಪತ್ತೆ

Kasaragod ರಾತ್ರಿ ರೇಡಿಯಂನಂತೆ ಹೊಳೆಯುವ ಅಣಬೆ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.