ಭಾರತೀಯ ಒಲಿಂಪಿಕ್ ಅಸೋಸಿಯೇಶನ್ಗೆ ಪ್ರಧಾನ ಕಾರ್ಯದರ್ಶಿ ಬದಲು ಸಿಇಒ!
Team Udayavani, Oct 10, 2022, 7:40 AM IST
ಹೊಸದಿಲ್ಲಿ: ಭಾರತೀಯ ಕ್ರೀಡಾಸಂಸ್ಥೆಗಳಲ್ಲಿ ನಿಧಾನಕ್ಕೆ ಧನಾತ್ಮಕ ಬದಲಾವಣೆಗಳು ಗೋಚರಿಸುತ್ತಿವೆ. ಇತ್ತೀಚೆಗಷ್ಟೇ ಫುಟ್ಬಾಲ್ ಮತ್ತು ಹಾಕಿ ಸಂಸ್ಥೆಗಳಿಗೆ ಮಾಜಿ ಆಟಗಾರರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೀಗ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ)ನ ಸರದಿ.
ಡಿಸೆಂಬರ್ 5ರಿಂದ 7ರ ನಡುವೆ ಈ ಅಸೋಸಿಯೇಶನ್ನ ಚುನಾವಣೆ ನಿಗದಿಯಾಗಿದೆ. ಅದರ ಅನಂತರ ಅಸೋಸಿಯೇಶನ್ಗೆ ಪ್ರಧಾನ ಕಾರ್ಯದರ್ಶಿ ಬದಲು ಸಿಇಒವನ್ನು ನೇಮಿಸುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸೂಚಿಸಿದೆ.
ಅರ್ಥಾತ್ ಮುಂದಿನ ದಿನಗಳಲ್ಲಿ ಐಒಎಗೆ ಪ್ರಧಾನ ಕಾರ್ಯದರ್ಶಿ ಇರುವುದಿಲ್ಲ.ಒಂದು ವೇಳೆ ಐಒಎನಲ್ಲೇ ಇಂತಹ ಬದಲಾವಣೆಯಾದರೆ, ಅದು ದೇಶದ ಎಲ್ಲ ಅಸೋಸಿಯೇಶನ್ಗಳ ಮೇಲೆ ಧನಾತ್ಮಕ ಪರಿಣಾಮ ಬೀರಲಿದ್ದು, ಅಲ್ಲೂ ಇಂತಹ ಬದಲಾವಣೆಗಳು ಸಂಭವಿಸಲಿವೆ.
ಇಂತಹದ್ದೊಂದು ಬೆಳವಣಿಗೆ ಸಂಭವಿಸಿದ್ದು ಐಒಸಿ, ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ, ಐಒಎ ಮತ್ತು ಕ್ರೀಡಾ ಸಚಿವಾಲಯದ ಪ್ರತಿನಿಧಿಗಳೊಂದಿಗೆ ಸೆ. 27ರಂದು ಲಾಸನ್ನೆಯಲ್ಲಿ ನಡೆದ ಸಭೆಯಲ್ಲಿ. ಡಿ. 5ರಿಂದ 7ರ ವರೆಗೆ ನಡೆಯುವ ಮುಂದಿನ ಐಒಸಿ ಕಾರ್ಯಕಾರಿ ಮಂಡಳಿ ಸಭೆಯ ಮೊದಲು ಚುನಾವಣೆಯನ್ನು ಘೋಷಿಸದಿದ್ದರೆ ಐಒಎ ಅನ್ನು ನಿಷೇಧಿಸುವುದಾಗಿ ಐಒಸಿ ಅಂತಿಮ ಎಚ್ಚರಿಕೆ ನೀಡಿದ್ದರಿಂದ ಈ ಮಹತ್ವದ ಸಭೆ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ವಾಂಖೇಡೆಯಲ್ಲಿ ಬೌಲರ್ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ
Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್
ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ
Thomas Cup: ಬ್ಯಾಡ್ಮಿಂಟನ್; ಭಾರತದ ಆಟಕ್ಕೆ ತೆರೆ
Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ