ಜಿಪಿಎಲ್ ಟ್ರೋಫಿ ಕ್ರಿಕೆಟ್ ಜಿಎಸ್ಬಿ ಫ್ರೆಂಡ್ಸ್ ಕೋಟ ಚಾಂಪಿಯನ್
Team Udayavani, Apr 12, 2017, 3:30 PM IST
ಮಂಗಳೂರು: ಜಿಎಸ್ಬಿ ಪ್ರೀಮಿಯರ್ ಲೀಗ್-2017 ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ವರ್ಣರಂಜಿತವಾಗಿ ನಡೆಯಿತು.
ಹೊನಲು ಬೆಳಕಿನ ಲ್ಲಿ ನಡೆದ ಈ ಬಾರಿಯ ಜಿಪಿಎಲ್ ಟ್ರೋಫಿ ಮತ್ತು 1,55,555 ರೂ. ಬಹುಮಾನವನ್ನು ವಿಜೇತ ಜಿಎಸ್ಬಿ ಫ್ರೆಂಡ್ಸ್ ಕೋಟ ತಂಡಕ್ಕೆ ಹಾಗೂ ಸರಣಿಶ್ರೇಷ್ಠರಿಗಾಗಿ ನೀಡುವ ಸುಜುಕಿ ಗಾಡಿಯನ್ನು ಅದೇ ತಂಡದ ಸ್ಟಾರ್ ಆಟಗಾರ ಸುರೇಂದ್ರ ಅವರಿಗೆ ನೀಡಿ ಗೌರವಿಸಲಾಯಿತು.
ಪ್ರಥಮ ರನ್ನರ್ ಅಪ್ ಟ್ರೋಫಿ ಹಾಗೂ 88,888 ರೂಪಾಯಿಯನ್ನು ಕೊಡಿಯಾಲ್ ಸೂಪರ್ ಕಿಂಗ್ ತಂಡಕ್ಕೆ ನೀಡಲಾಯಿತು. ದ್ವೀತಿಯ ರನ್ನರ್ ಅಪ್ ಟ್ರೋಫಿ ಹಾಗೂ 33,333 ರೂ. ಬಹುಮಾನವನ್ನು ಆರ್ ಕೆ ನೈಟ್ ರೈಡರ್ಸ್ ತಂಡಕ್ಕೆ ಹಸ್ತಾಂತರಿಸಲಾಯಿತು.
ಇದರೊಂದಿಗೆ ವಿವಿಧ ಪಂದ್ಯಶ್ರೇಷ್ಠ ಪ್ರಶಸ್ತಿ, ಉತ್ತಮ ಬ್ಯಾಟ್ಸ್ಮನ್, ಉತ್ತಮ ಎಸೆತಗಾರ, ಉದಯೋನ್ಮುಖ ಆಟಗಾರ ಪ್ರಶಸ್ತಿಗಳನ್ನು ನೀಡಿ ಆಟಗಾರರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಮಂಜುನಾಥ ಭಂಡಾರಿ, ಗಣಪತಿ ಪೈ, ವಾಮನ ಕಾಮತ್, ಪದ್ಮನಾಭ ಪೈ, ಡಾ| ನರಸಿಂಹ ಪೈ, ಜಗನ್ನಾಥ್ ಕಾಮತ್, ಬದ್ರಿನಾಥ ಕಾಮತ್, ನಿತಿನ್ ಕಾಮತ್, ನರೇಂದ್ರ ನಾಯಕ್, ದಿನೇಶ್ ಕಾಮತ್ ಕೋಟೇಶ್ವರ, ನಿರಂಜನ ಕಾಮತ್, ಹನುಮಂತ ಕಾಮತ್ ಉಪಸ್ಥಿತರಿದ್ದರು.
ಡಿ. ವೇದವ್ಯಾಸ ಕಾಮತ್ ಸ್ವಾಗತಿಸಿ, ಚೇತನ್ ಕಾಮತ್ ವಂದಿಸಿದರು. ಆರ್.ಜೆ. ಕಿರಣ್ ಕಾರ್ಯಕ್ರಮ ನಿರ್ವಹಿಸಿದರು. ನರೇಶ್ ಪ್ರಭು ಧನ್ಯವಾದ ಅರ್ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ