IPL 2024; ಫಿಟ್ ಆಗಿದ್ದೇ ನಿನ್ನೆ: ಸಂದೀಪ್ ಶರ್ಮ
Team Udayavani, Apr 23, 2024, 10:58 PM IST
ಜೈಪುರ: “ಇದು ಫಿಟ್ನೆಸ್ಗೆ ಮರಳಿದ ಬಳಿಕ ನನ್ನ ಮೊದಲ ಪಂದ್ಯವಾಗಿತ್ತು. ನಾನು ಫಿಟ್ ಆಗಿದ್ದೇ ನಿನ್ನೆ. ಪಿಚ್ ಸ್ಲೋ ಆ್ಯಂಡ್ ಲೋ ಆಗಿತ್ತು. ಹೀಗಾಗಿ ನನ್ನ ಬೌಲಿಂಗ್ ಯೋಜನೆ ಯಶಸ್ವಿಯಾಯಿತು’ ಎಂದು ರಾಜ್ಸ್ಥಾನ್ ತಂಡದ ಯಶಸ್ವಿ ಬೌಲರ್ ಸಂದೀಪ್ ಶರ್ಮ ಹೇಳಿದ್ದಾರೆ.
ಮುಂಬೈ ಎದುರಿನ ಪಂದ್ಯದಲ್ಲಿ ಅವರ ಸಾಧನೆ 18ಕ್ಕೆ 5 ವಿಕೆಟ್. ಸಂದೀಪ್ ಐಪಿಎಲ್ನಲ್ಲಿ 5 ವಿಕೆಟ್ ಉರುಳಿಸಿದ ಮೊದಲ ನಿದರ್ಶನ ಇದಾಗಿತ್ತು.
“ಎರಡು ವರ್ಷಗಳ ಹಿಂದೆ ನಾನು ಅನ್ಸೋಲ್ಡ್ ಆಗಿದ್ದೆ. ಇದೀಗ ಬದಲಿ ಆಟಗಾರನಾಗಿ ಬಂದಿದ್ದೇನೆ. ಪ್ರತಿಯೊಂದು ಪಂದ್ಯವನ್ನೂ ನಾನು ಆನಂದಿಸುತ್ತಿದ್ದೇನೆ’ ಎಂದು ಸಂದೀಪ್ ಶರ್ಮ ಹೇಳಿದರು.
“ಈ ಬಾರಿ ಬೌಲರ್ ಬಹಳ ದುಬಾರಿ ಆಗುತ್ತಿದ್ದಾರೆ. ನಾವು ಹೆಚ್ಚು ರನ್ ಬಿಟ್ಟುಕೊಡಲು, ದಂಡಿಸಿಕೊಳ್ಳಲು ಸಿದ್ಧರಾಗಿರಬೇಕು. ಹಾಗೆಯೇ ಇದನ್ನು ತಪ್ಪಿಸಿಕೊಳ್ಳಲು ಪದೇಪದೆ ಯೋಜನೆಗಳನ್ನು ಬದಲಾಯಿಸುತ್ತ ಇರಬೇಕು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.