ಟಿ-20: ಆಸೀಸ್‌ಗೆ ಲಂಕಾಘಾತ

Team Udayavani, Feb 18, 2017, 3:45 AM IST

Australia-v-Sri-Lanka,.jpg

ಮೆಲ್ಬರ್ನ್: “ನ್ಯೂ ಲುಕ್‌’ ಪಡೆದು ಕಣಕ್ಕಿಳಿದ ಆಸ್ಟ್ರೇಲಿಯಕ್ಕೆ ಮೊದಲ ಟಿ-20 ಪಂದ್ಯದಲ್ಲಿ ಶ್ರೀಲಂಕಾ 5 ವಿಕೆಟ್‌ಗಳಿಂದ ಆಘಾತವಿಕ್ಕಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಶುಕ್ರವಾರ ಮೆಲ್ಬರ್ನ್ನಲ್ಲಿ ನಡೆದ ಈ ರೋಮಾಂಚಕಾರಿ ಸೆಣಸಾಟದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 6 ವಿಕೆಟಿಗೆ 168 ರನ್‌ ಗಳಿಸಿ ಸವಾಲೊಡ್ಡಿತು. ಇದನ್ನು ದಿಟ್ಟ ರೀತಿಯಲ್ಲಿ ಸ್ವೀಕರಿಸಿದ ಶ್ರೀಲಂಕಾ ಸರಿಯಾಗಿ 20 ಓವರ್‌ಗಳಲ್ಲಿ 5 ವಿಕೆಟಿಗೆ 172 ರನ್‌ ಬಾರಿಸಿತು; ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸಿ ಜಯಭೇರಿ ಮೊಳಗಿಸಿತು.

ಆ್ಯಂಡ್ರೂé ಟೈ ಪಾಲಾದ ಅಂತಿಮ ಓವರಿನಲ್ಲಿ ಲಂಕಾ ಜಯಕ್ಕೆ ಕೇವಲ 6 ರನ್ನುಗಳ ಅಗತ್ಯವಿತ್ತು. ಕೈಯಲ್ಲಿನ್ನೂ 5 ವಿಕೆಟ್‌ ಉಳಿದಿತ್ತು. ಇದನ್ನು ಲಂಕಾ ಸುಲಭದಲ್ಲೇ ಸಾಧಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ ಟೈ ಅತ್ಯಂತ ಬಿಗು ದಾಳಿ ಸಂಘಟಿಸಿದರು. ಅಂತಿಮ ಓವರಿನ 5ನೇ ಎಸೆತಕ್ಕೆ ಇತ್ತಂಡಗಳ ಮೊತ್ತ ಸಮನಾಯಿತು. ಕೊನೆಯ ಎಸೆತದಲ್ಲಿ ಚಾಮರ ಕಪುಗೆಡರ ಬೌಂಡರಿ ಬಾರಿಸಿ ಲಂಕೆಯ ಗೆಲುವನ್ನು ಸಾರಿದರು.

ನಾಯಕ ಉಪುಲ್‌ ತರಂಗ ಅವರನ್ನು ಲಂಕಾ ಶೂನ್ಯಕ್ಕೆ ಕಳೆದುಕೊಂಡಿತಾದರೂ ಡಿಕ್ವೆಲ್ಲ (30), ಮುನವೀರ (44), ಗುಣರತ್ನೆ (52) ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ ಲಂಕಾ ಹೋರಾಟವನ್ನು ಜಾರಿಯಲ್ಲಿರಿಸಿದರು.

ಆಸೀಸ್‌ ಉತ್ತಮ ಆರಂಭ
ನಾಯಕ ಆರನ್‌ ಫಿಂಚ್‌ ಮತ್ತು ಮೊದಲ ಟಿ-20 ಪಂದ್ಯ ಆಡಲಿಳಿದ ಮೈಕಲ್‌ ಕ್ಲಿಂಜರ್‌ ಆಸ್ಟ್ರೇಲಿಯಕ್ಕೆ ಉತ್ತಮ ಆರಂಭ ಒದಗಿಸಿದರು. ಇವರಿಂದ 10.3 ಓವರ್‌ಗಳಲ್ಲಿ 76 ರನ್‌ ಒಟ್ಟುಗೂಡಿತು. ವನ್‌ಡೌನ್‌ನಲ್ಲಿ ಬಂದ ಟ್ರ್ಯಾವಿಸ್‌ ಹೆಡ್‌ ಕೂಡ ಇದೇ ಲಯದಲ್ಲಿ ಸಾಗಿದರು.

34 ಎಸೆತಗಳಿಂದ 43 ರನ್‌ ಹೊಡೆದ ಫಿಂಚ್‌ ಅವರದೇ ಆಸೀಸ್‌ ಸರದಿಯ ಸರ್ವಾಧಿಕ ಸ್ಕೋರ್‌ (34 ಎಸೆತ, 2 ಬೌಂಡರಿ, 2 ಸಿಕ್ಸರ್‌). 36ರ ಹರೆಯದಲ್ಲಿ ಟಿ-20 ಪಾದಾರ್ಪಣೆ ಮಾಡಿದ ವಿಕ್ಟೋರಿಯಾದ ಕ್ಲಿಂಜರ್‌ 32 ಎಸೆತ ಎದುರಿಸಿ 38 ರನ್‌ ಮಾಡಿದರು (4 ಬೌಂಡರಿ). ಹೆಡ್‌ ಗಳಿಕೆ 25 ಎಸೆತಗಳಿಂದ 31 ರನ್‌. ಇದರಲ್ಲಿ ಒಂದು ಸಿಕ್ಸರ್‌ ಮಾತ್ರ ಒಳಗೊಂಡಿತ್ತು.

ಮೊದಲ ಟಿ-20 ಆಡಿದ ಮತ್ತೂಬ್ಬ ಬ್ಯಾಟ್ಸ್‌ಮನ್‌ ಆ್ಯಶrನ್‌ ಟರ್ನರ್‌ 18, ಮೊಸಸ್‌ ಹೆನ್ರಿಕ್ಸ್‌ 17 ರನ್‌ ಮಾಡಿದರು.

ಶ್ರೀಲಂಕಾ ಬೌಲಿಂಗ್‌ ಸರದಿಯಲ್ಲಿ ಮಿಂಚಿದವರು ವೇಗಿ ಲಸಿತ ಮಾಲಿಂಗ (29ಕ್ಕೆ 2). ಮಾಲಿಂಗ ಸರಿಯಾಗಿ ಒಂದು ವರ್ಷದ ಬಳಿಕ ಟಿ-20 ಆಡಲಿಳಿದಿದ್ದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-6 ವಿಕೆಟಿಗೆ 168 (ಫಿಂಚ್‌ 43, ಕ್ಲಿಂಜರ್‌ 38, ಹೆಡ್‌ 31, ಮಾಲಿಂಗ 29ಕ್ಕೆ 2). ಶ್ರೀಲಂಕಾ-20 ಓವರ್‌ಗಳಲ್ಲಿ 5 ವಿಕೆಟಿಗೆ 172 (ಗುಣರತ್ನೆ 52, ಮುನವೀರ 44, ಡಿಕ್ವೆಲ್ಲ 30, ಟರ್ನರ್‌ 12ಕ್ಕೆ 2, ಝಂಪ 26ಕ್ಕೆ 2). ಪಂದ್ಯಶ್ರೇಷ್ಠ: ಅಸೇಲ ಗುಣರತ್ನೆ.

ಸರಣಿಯ 2ನೇ ಪಂದ್ಯ ರವಿವಾರ ಗೀಲಾಂಗ್‌ನಲ್ಲಿ ನಡೆಯಲಿದೆ.
 
ಟಾಪ್ ನ್ಯೂಸ್

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

bjpತೈಲ ದರ ಇಳಿಸದಿದ್ದರೆ ನಾಡಿದ್ದು ಸಂಚಾರ ತಡೆ: ಬಿಜೆಪಿ

ತೈಲ ದರ ಇಳಿಸದಿದ್ದರೆ ನಾಡಿದ್ದು ಸಂಚಾರ ತಡೆ: ಬಿಜೆಪಿ

RenukaSwamy ತಂದೆ ಹೇಳಿಕೆ ಬೆನ್ನಲ್ಲೇ ಮತ್ತೊಮ್ಮೆ ಮಹಜರು

RenukaSwamy ತಂದೆ ಹೇಳಿಕೆ ಬೆನ್ನಲ್ಲೇ ಮತ್ತೊಮ್ಮೆ ಮಹಜರು

ರಾಜಕಾಲುವೆಯಲ್ಲಿ ಹುಡುಕಿದರೂ ಸಿಗದ ರೇಣುಕಾಸ್ವಾಮಿ ಮೊಬೈಲ್‌!

ರಾಜಕಾಲುವೆಯಲ್ಲಿ ಹುಡುಕಿದರೂ ಸಿಗದ ರೇಣುಕಾಸ್ವಾಮಿ ಮೊಬೈಲ್‌!

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sasaasd

Finland Games: ನೀರಜ್‌ ಚೋಪ್ರಾ ಮರಳಿ ಕಣಕ್ಕೆ

chess

AICF ವಿರುದ್ಧ ಕರುಣ್‌ ದುಗ್ಗಲ್‌ ಲೀಗಲ್‌ ನೊಟೀಸ್‌

1-sad-sddasd

Archery: ಅಂಕಿತಾ, ಭಜನ್‌ಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌

BCCI

ಕಿರಿಯರ ಕ್ರಿಕೆಟ್‌ನಲ್ಲೂ ಪಂದ್ಯಶ್ರೇಷ್ಠ: ಬಿಸಿಸಿಐ

1-asddsadasd

ATP Singles Ranking: ಸುಮಿತ್‌ ಜೀವನಶ್ರೇಷ್ಠ 71ನೇ ರ್‍ಯಾಂಕಿಂಗ್‌

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

bjpತೈಲ ದರ ಇಳಿಸದಿದ್ದರೆ ನಾಡಿದ್ದು ಸಂಚಾರ ತಡೆ: ಬಿಜೆಪಿ

ತೈಲ ದರ ಇಳಿಸದಿದ್ದರೆ ನಾಡಿದ್ದು ಸಂಚಾರ ತಡೆ: ಬಿಜೆಪಿ

RenukaSwamy ತಂದೆ ಹೇಳಿಕೆ ಬೆನ್ನಲ್ಲೇ ಮತ್ತೊಮ್ಮೆ ಮಹಜರು

RenukaSwamy ತಂದೆ ಹೇಳಿಕೆ ಬೆನ್ನಲ್ಲೇ ಮತ್ತೊಮ್ಮೆ ಮಹಜರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.