Tennis news; ಚೆನ್ನೈ ಓಪನ್‌: ಸುಮಿತ್‌ ಚಾಂಪಿಯನ್‌

Team Udayavani, Feb 11, 2024, 11:59 PM IST

1-sdsdsads

ಚೆನ್ನೈ: ಭಾರತದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ ಸುಮಿತ್‌ ನಾಗಲ್‌ “ಚೆನ್ನೈ ಓಪನ್‌’ ಟೆನಿಸ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಮೂಡಿಬಂದರು. ಇದರೊಂದಿಗೆ ಮೊದಲ ಸಲ ಟಾಪ್‌-100 ರ್‍ಯಾಂಕಿಂಗ್‌ ಯಾದಿಯನ್ನು ಅಲಂಕರಿಸಿದರು.

ರವಿವಾರದ ಸಿಂಗಲ್ಸ್‌ ಫೈನಲ್‌ನಲ್ಲಿ ಸುಮಿತ್‌ ಇಟಲಿಯ ಲುಕಾ ನಾರ್ಡಿ ಅವರನ್ನು 6-1, 6-4 ಅಂತರದಿಂದ ಸುಲಭದಲ್ಲಿ ಮಣಿಸಿದರು. ಅವರು ಒಂದೂ ಸೆಟ್‌ ಕಳೆದುಕೊಳ್ಳದೆ ಜಯಿಸಿದ್ದು ವಿಶೇಷವಾಗಿತ್ತು. ಈ ಗೆಲುವಿನೊಂದಿಗೆ ಸುಮಿತ್‌ ರ್‍ಯಾಂಕಿಂಗ್‌ ಯಾದಿಯಲ್ಲಿ 98ನೇ ಸ್ಥಾನಕ್ಕೆ ಏರಿದರು.

ಬೆಂಗಳೂರು ಓಪನ್‌ : ಟೆನಿಸ್‌ ಡ್ರಾ ಪ್ರಕಟ
ಬೆಂಗಳೂರು: ಸೋಮವಾರ ಆರಂಭವಾಗಲಿರುವ “ಬೆಂಗಳೂರು ಓಪನ್‌’ ಟೆನಿಸ್‌ ಪಂದ್ಯಾವಳಿಯ ಡ್ರಾ ಪ್ರಕಟಗೊಂಡಿದೆ. ಇದರಂತೆ ಭಾರತದ ಸ್ಟಾರ್‌ ಸಿಂಗಲ್‌ ಆಟಗಾರ ಸುಮಿತ್‌ ನಾಗಲ್‌ ಫ್ರಾನ್ಸ್‌ನ ಜೆಫ್ರಿ ಬ್ಲಾಂಕೆನಾಕ್ಸ್‌ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.

ವೈಲ್ಡ್‌ಕಾರ್ಡ್‌ ಮೂಲಕ ಪ್ರವೇಶ ಪಡೆದ ರಾಮ್‌ಕುಮಾರ್‌ ರಾಮನಾಥನ್‌ ಫ್ರಾನ್ಸ್‌ನ ಮತ್ತೋರ್ವ ಆಟಗಾರ ಮ್ಯಾಕ್ಸಿಮ್‌ ಜಾನ್ವೀರ್‌ ವಿರುದ್ಧ ಆಡಲಿದ್ದಾರೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ 121ನೇ ಸ್ಥಾನದಲ್ಲಿರುವ ಸುಮಿತ್‌ ನಾಗಲ್‌ ಈಗಾಗಲೇ ಬ್ಲಾಂಕೆನಾಕ್ಸ್‌ ವಿರುದ್ಧ 3 ಗೆಲುವು ಕಂಡಿದ್ದಾರೆ. ಇದರಲ್ಲೊಂದು ಜಯ ಕಳೆದ ಆಸ್ಟ್ರೇಲಿಯನ್‌ ಓಪನ್‌ ಅರ್ಹತಾ ಸುತ್ತಿನಲ್ಲಿ ಒಲಿದಿತ್ತು.

1-1 ಸಮಬಲ ಸಾಧನೆ
ಭಾರತದ ನಂ.1 ಆಟಗಾರನಾಗಿರುವ ರಾಮ್‌ಕುಮಾರ್‌ ರಾಮನಾಥನ್‌ ಮತ್ತು ಮ್ಯಾಕ್ಸಿಮ್‌ ಜಾನ್ವೀರ್‌ 2 ಸಲ ಮುಖಾಮುಖೀ ಆಗಿದ್ದು, 1-1 ಸಮಬಲದ ಸಾಧನೆ ದಾಖಲಿಸಿದ್ದಾರೆ. ರಾಮ್‌ಕುಮಾರ್‌ ಮೊದಲ ಸುತ್ತು ದಾಟಿದರೆ ಅಗ್ರ ಶ್ರೇಯಾಂಕದ ಇಟಲಿ ಟೆನಿಸಿಗ ಲುಕಾ ನಾರ್ಡಿ ಅವರನ್ನು ಎದುರಿಸುವ ಸಾಧ್ಯತೆ ಇದೆ.

ಡಲ್ಲಾಸ್‌ ಓಪನ್‌ : ಅಮೆರಿಕನ್ನರ ಫೈನಲ್‌
ಡಲ್ಲಾಸ್‌, ಫೆ. 11: “ಡಲ್ಲಾಸ್‌ ಓಪನ್‌’ ಟೆನಿಸ್‌ ಪಂದ್ಯಾವಳಿಯಲ್ಲಿ ಅಮೆರಿಕದ ಟೆನಿಸಿಗರೇ ಪ್ರಶಸ್ತಿ ಕಾಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಂದರೆ ಟಾಮಿ ಪೌಲ್‌ ಮತ್ತು ಮಾರ್ಕಸ್‌ ಗಿರೋನ್‌.
ದ್ವಿತೀಯ ಸೆಮಿಫೈನಲ್‌ನಲ್ಲಿ ಟಾಮಿ ಪೌಲ್‌ ಅಮೆರಿಕದವರೇ ಆದ ಬೆನ್‌ ಶೆಲ್ಟನ್‌ ಅವರನ್ನು 6-2, 6-4 ಅಂತರದಿಂದ ಪರಾಭವಗೊಳಿಸಿದರು. ಇದಕ್ಕೂ ಮೊದಲು ಮಾರ್ಕಸ್‌ ಗಿರೋನ್‌ ಫ್ರಾನ್ಸ್‌ನ ಅಡ್ರಿಯನ್‌ ಮನ್ನಾರಿನೊ ವಿರುದ್ಧ 6-1, 6-3ರಿಂದ ಗೆಲುವು ಸಾಧಿಸಿದ್ದರು.

ಟಾಪ್ ನ್ಯೂಸ್

Exam 2

CBSE ; 9 ರಿಂದ 12 ನೇ ತರಗತಿಗಳಿಗೆ ತೆರೆದ ಪುಸ್ತಕ ಪರೀಕ್ಷೆಗಳ ಸಾಧ್ಯತೆ

4

ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲೆಂದು ನಕಲಿ ಪೊಲೀಸ್‌ ಆಗಿ ಪರೀಕ್ಷಾ ಕೇಂದ್ರಕ್ಕೆ ಹೋದ ಅಣ್ಣ

1-sadasdsad

Congress ಸೇರ್ಪಡೆಯಾದ ಮಾಜಿ ಸಂಸದ ಮುದ್ದಹನುಮೇಗೌಡ

taliban

Afghanistan; ತಾಲಿಬಾನ್ ನಿಂದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಇಬ್ಬರಿಗೆ ಮರಣದಂಡನೆ

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

lion

Big cats; ಸೀತಾ, ಅಕ್ಬರ್ ಜೋಡಿ ಸಿಂಹಗಳ ಹೆಸರು ಬದಲಾಯಿಸಲು ಹೈಕೋರ್ಟ್ ಸೂಚನೆ

Lok sabha Election 2024: ಮಾರ್ಚ್‌ 9ರ ನಂತರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ?

Lok sabha Election 2024: ಮಾರ್ಚ್‌ 9ರ ನಂತರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

Ankle Injury: ಐಪಿಎಲ್ ಗಿಲ್ಲ ಮೊಹಮ್ಮದ್ ಶಮಿ; ಗುಜರಾತ್ ಗೆ ಭಾರಿ ಹಿನ್ನಡೆ

Ankle Injury: ಐಪಿಎಲ್ ಗಿಲ್ಲ ಮೊಹಮ್ಮದ್ ಶಮಿ; ಗುಜರಾತ್ ಗೆ ಭಾರಿ ಹಿನ್ನಡೆ

virat

INDvsENG; ಐದನೇ ಟೆಸ್ಟ್ ಆಡುತ್ತಾರಾ ವಿರಾಟ್ ಕೊಹ್ಲಿ? ಇಲ್ಲಿದೆ ಪೂರ್ಣ ಮಾಹಿತಿ

Pakistan Cricket; ಬಾಬರ್ ಅಜಂ- ಮಿಕ್ಕಿ ಆರ್ಥರ್ ವಿರುದ್ಧ ಆರೋಪಗಳ ಸುರಿಮಳೆಗೈದ ಹಫೀಜ್

Pakistan Cricket; ಬಾಬರ್ ಅಜಂ- ಮಿಕ್ಕಿ ಆರ್ಥರ್ ವಿರುದ್ಧ ಆರೋಪಗಳ ಸುರಿಮಳೆಗೈದ ಹಫೀಜ್

1-asaasa

KKR ಪಾಲಾಗುವರೇ ಸರ್ಫರಾಜ್‌ ಖಾನ್‌?

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

Exam 2

CBSE ; 9 ರಿಂದ 12 ನೇ ತರಗತಿಗಳಿಗೆ ತೆರೆದ ಪುಸ್ತಕ ಪರೀಕ್ಷೆಗಳ ಸಾಧ್ಯತೆ

4

ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲೆಂದು ನಕಲಿ ಪೊಲೀಸ್‌ ಆಗಿ ಪರೀಕ್ಷಾ ಕೇಂದ್ರಕ್ಕೆ ಹೋದ ಅಣ್ಣ

1-sadasdsad

Congress ಸೇರ್ಪಡೆಯಾದ ಮಾಜಿ ಸಂಸದ ಮುದ್ದಹನುಮೇಗೌಡ

taliban

Afghanistan; ತಾಲಿಬಾನ್ ನಿಂದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಇಬ್ಬರಿಗೆ ಮರಣದಂಡನೆ

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.