ಯುಪಿಎಲ್‌ ಟ್ರೋಫಿ ಅನಾವರಣ


Team Udayavani, Apr 12, 2017, 3:26 PM IST

anavarana.jpg

ಉಡುಪಿ: ಉಡುಪಿ ಕ್ರಿಕೆಟ್‌ ಕ್ಲಬ್‌ನ ಆಶ್ರಯದಲ್ಲಿ ಸಾಬ್‌ ಉಡುಪಿ ಪ್ರೀಮಿಯರ್‌ ಲೀಗ್‌ ಟಿ10 ಹಾರ್ಡ್‌ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಮೆಂಟ್‌ ಸೀಸನ್‌-2 ಮಂಗಳೂರು ಪಣಂಬೂರಿನ ಎನ್‌ಎಂಪಿಟಿ ಮೈದಾನದಲ್ಲಿ ಎ. 17ರಿಂದ 23ರ ವರೆಗೆ ನಡೆಯಲಿದ್ದು, ಅದರ ಟ್ರೋಫಿಯನ್ನು ಮಂಗಳೂರು ವಿವಿ ಸೆನೆಟ್‌ ಸದಸ್ಯ ಪಿ. ಅಮೃತ್‌ ಶೆಣೈ ಅವರು ಉಡುಪಿಯ ಓಶಿಯನ್‌ ಪರ್ಲ್ ಹೊಟೇಲ್‌ ಸಭಾಂಗಣದಲ್ಲಿ ಅನಾವರಣ ಮಾಡಿದರು. 

ಯುಪಿಎಲ್‌ ಕ್ರಿಕೆಟ್‌ ಸಂಸ್ಥೆಯವರು ಕಳೆದ ವರ್ಷ ಉಡುಪಿಯಲ್ಲಿ ಯಶಸ್ವಿಯಾಗಿ ಲೀಗ್‌ ಪಂದ್ಯ ಆಯೋಜಿಸಿದ್ದು, ಈ ಬಾರಿ ಪಣಂಬೂರಿನಲ್ಲಿ ಇಟ್ಟಿದ್ದಾರೆ. ಈ ಪಂದ್ಯಕೂಟದಿಂದ ಸ್ಥಳೀಯ ಕ್ರೀಡಾಪಟುಗಳಿಗೆ ಅವಕಾಶಗಳು ಸಿಗುತ್ತದೆ. ಅದು ಅವರ ಕ್ರೀಡಾ ಬೆಳವಣಿಗೆಗೆ ಅಡಿಪಾಯ ಹಾಕಿದಂತೆ. ಗಲ್ಫ್ ದೇಶಗಳ ತಂಡಗಳೂ ಭಾಗವಹಿಸುತ್ತಿರುವುದು ಉತ್ತಮ ಬೆಳವಣಿಗೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಹಾರ್ಡ್‌ ಬಾಲ್‌ ಕ್ರಿಕೆಟ್‌ ಟೂರ್ನಿಯನ್ನೂ ಸಹ ಆಯೋಜಿಸಬಹುದಾಗಿದೆ ಎಂದು ಅಮೃತ್‌ ಶೆಣೈ ಹೇಳಿದರು. 

ಉಡುಪಿ ಪ್ರೀಮಿಯರ್‌ ಲೀಗ್‌ನ ಕಮಿಟಿ ಚಯರ್‌ಮನ್‌ ಸಲ್ಲಾಹುದ್ದೀನ್‌ ಸಲ್ಮಾನ್‌, ವೈಸ್‌ ಚಯರ್‌ಮನ್‌ ಮಹಮ್ಮದ್‌ ಮುಬೀನ್‌, ಯುಪಿಎಲ್‌ ವೈಸ್‌ ಚಯರ್‌ಮನ್‌ ಮಹಮ್ಮದ್‌ ಆರಿಫ್, ಸಾದಿಕ್‌ ಕಾಪು, ಅಬ್ದುಲ್‌ ಖಾದರ್‌, ಮಹಮ್ಮದ್‌ ಸಾದಿಕ್‌, ವಾಹಿದ್‌ ಹೈದರ್‌, ನಾಸಿರ್‌ ಮಂಜೇಶ್ವರ, ಹುರೈಶ್‌, ಇಕ್ಬಾಲ್‌ ಕಾವೂರು, ಮಹಮ್ಮದ್‌ ಇಕ್ಬಾಲ್‌, ಆರೂರು ಸುಕೇಶ್‌ ಶೆಟ್ಟಿ, ಇಮ್ರಾನ್‌ ಜಹೂರ್‌, ಮಹಮ್ಮದ್‌ ನಿಯಾಜ್‌, ಇರಾ#ನ್‌, ಫಿರೋಜ್‌, ಎಂ. ಸಮೀಯುದ್ದೀನ್‌, ಅನ್ಸಫ್ ಆಲಿ ಮತ್ತಿತರರು ಉಪಸ್ಥಿತರಿದ್ದರು. 

ಟ್ರೋಫಿಯೊಂದಿಗೆ ಒಟ್ಟು 50 ಲ.ರೂ. ನಗದು ಬಹುಮಾನವಿದ್ದು, ಫೈನಲ್‌ನಲ್ಲಿ ಪ್ರಥಮ-25 ಲ.ರೂ., ದ್ವಿತೀಯ-12 ಲ.ರೂ., ಸೆಮಿಫೈನಲ್‌ನವರಿಗೆ 3 ಲ.ರೂ. ಸಹಿತ ವೈಯಕ್ತಿಕವಾಗಿ ಸರ್ವೋತ್ತಮ ಕ್ರೀಟಾಪಟುವಿಗೆ ಕಾರು, ಫೈನಲ್‌ ಮ್ಯಾನ್‌ ಆಫ್ ದ ಮ್ಯಾಚ್‌ ಹಾಗೂ ಬೆಸ್ಟ್‌ ಬೌಲರ್‌ ಮತ್ತು ಬೆಸ್ಟ್‌ ಬ್ಯಾಟ್ಸ್‌ಮನ್‌ಗೆ ಬೈಕ್‌ನೀಡಲಾಗುತ್ತದೆ. ಹೆಚ್ಚು ಸಿಕ್ಸರ್‌ ಬಾರಿಸಿದವರಿಗೆ ಮತ್ತು ಪ್ರತಿ ಮ್ಯಾಚ್‌ನಲ್ಲಿ ಮ್ಯಾನ್‌ ಆಫ್ ದ ಮ್ಯಾಚ್‌ ಆಟಗಾರನಿಗೆ 2 ಸಾವಿರ ನಗದು ಸಹಿತ ಟ್ರೋಫಿ, ಮೆಡಲ್‌ ಕೊಡಮಾಡಲಾಗುತ್ತದೆ. 

ಗಲ್ಫ್ ರಾಷ್ಟ್ರದ ತಂಡಗಳು
ಹಾರ್ಡ್‌ ಟೆನಿಸ್‌ ಬಾಲ್‌ನ ಈ ಪಂದ್ಯದಲ್ಲಿ 20ಕ್ಕೂ ಅಧಿಕ ತಂಡಗಳು ಭಾಗವಹಿಸಲಿದ್ದು, ಎಲ್ಲ ಪಂದ್ಯಗಳು 10 ಓವರ್‌ನದ್ದಾಗಿರುತ್ತದೆ. ದೇಶದ ವಿವಿಧ ರಾಜ್ಯಗಳ ತಂಡ ಸೇರಿದಂತೆ ಗಲ್ಫ್ ರಾಷ್ಟ್ರದ ಸೌದಿ ಅರೇಬಿಯಾ, ಕತಾರ್‌, ದುಬೈ, ಒಮನ್‌ ಮತ್ತು ಮಸ್ಕತ್‌ನ ತಂಡವೂ ಪಾಲ್ಗೊಳ್ಳಲಿದೆ.

ಟಾಪ್ ನ್ಯೂಸ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bajarang

Wrestler ಬಜರಂಗ್‌ ಪೂನಿಯ ಮತ್ತೆ ಅಮಾನತು

1-jordan

Super-8; ಜೋರ್ಡನ್‌ ಹ್ಯಾಟ್ರಿಕ್‌: ಸೆಮಿಫೈನಲ್‌ಗೆ ಇಂಗ್ಲೆಂಡ್‌

1-wewqewqe

ODI; ಸ್ಮೃತಿ ಅಮೋಘ ಆಟ: ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್

T20 WC: Kohli recalls gully cricket; What happened in the Antigua match? Videos

T20 WC: ಗಲ್ಲಿ ಕ್ರಿಕೆಟ್ ನೆನಪಿಸಿದ ಕೊಹ್ಲಿ; ಆ್ಯಂಟಿಗುವಾ ಪಂದ್ಯದಲ್ಲಿ ಆಗಿದ್ದೇನು? Video

T20 World Cup; A new form of semi race; How to travel to India, Aussie, Afghanistan? Here is the information

T20 WC; ಹೊಸ ರೂಪ ಪಡೆದ ಸೆಮಿ ರೇಸ್; ಭಾರತ, ಆಸೀಸ್, ಅಫ್ಘಾನ್ ಪಯಣ ಹೇಗೆ? ಇಲ್ಲಿದೆ ಮಾಹಿತಿ

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.