ವಿಂಡೀಸ್ ತಂಡಕ್ಕೆ ಟ್ರೆವರ್ ಸಹಾಯಕ ಕೋಚ್
Team Udayavani, Jan 1, 2020, 4:44 PM IST
ಜಮೈಕಾ: ಭಾರತ ತಂಡದ ಮಾಜಿ ಫೀಲ್ಡಿಂಗ್ ಕೋಚ್ ಟ್ರೆವರ್ ಪೆನ್ನೆ ವೆಸ್ಟ್ ಇಂಡೀಸ್ ಸೀಮಿತ ಓವರ್ಗಳ ತಂಡಕ್ಕೆ ಸಹಾಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. 51 ವರ್ಷದ ವಾರ್ವಿಕ್ಶೈರ್ ಆಟಗಾರ ಸ್ಟಾಲ್ವರ್ಟ್ ಪೆನ್ನೆ ಒಟ್ಟು 2 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಜಿಂಬಾಬ್ವೆ ಮೂಲದ ಆಟಗಾರ ಜ.2ರಿಂದ ವಿಂಡೀಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. 158 ಪ್ರಥಮ ದರ್ಜೆ ಪಂದ್ಯಗಳಲ್ಲಿ ಪೆನ್ನೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಐಪಿಎಲ್ನ ಪ್ರಮುಖತಂಡವಾಗಳಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹಾಗೂ ಕೋಲ್ಕತ ನೈಟ್ರೈಡರ್ ತಂಡಕ್ಕೆ ಕ್ರಮವಾಗಿ ಸಹಾಯಕ ಕೋಚ್ ಆಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.