ಪ್ರವಾಹ ಹಾನಿ ತುಂಬಲು 2,400 ಕೋ. ರೂ. ಅಗತ್ಯ


Team Udayavani, Aug 11, 2021, 7:15 AM IST

ಪ್ರವಾಹ ಹಾನಿ ತುಂಬಲು 2,400 ಕೋ. ರೂ. ಅಗತ್ಯ

ಬೆಂಗಳೂರು:  ಪ್ರಸಕ್ತ ವರ್ಷ ರಾಜ್ಯದಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ  ರಸ್ತೆ, ಸೇತುವೆ ಹಾಗೂ ಕಟ್ಟಡಗಳ ದುರಸ್ತಿ ಮತ್ತು ಪುನರ್‌ ನಿರ್ಮಾಣಕ್ಕೆ  2,400 ಕೋ. ರೂ.  ಎಂದು ಲೋಕೋಪಯೋಗಿ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿದೆ.

ಲೋಕೋಪಯೋಗಿ ಇಲಾಖೆ ಯಲ್ಲಿ ತುರ್ತು ಕಾರ್ಯಕ್ಕೆ ಅಗತ್ಯ ವಾದಷ್ಟು ಅನುದಾನ ಇಲ್ಲ.  ದುರಸ್ತಿ ಹಾಗೂ ಪುನರ್‌ ನಿರ್ಮಾಣಕ್ಕೆ ಹಣಕಾಸು ಹೊಂದಿಸುವ ಸವಾಲು ಎದುರಾಗಿದೆ. ಹೀಗಾಗಿ, ಹೆಚ್ಚುವರಿ ಅನುದಾನಕ್ಕೆ ಕೇಂದ್ರಕ್ಕೆ ಮೊರೆ ಹೋಗುವುದು ಅನಿವಾರ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಸೇರಿ ತತ್‌ಕ್ಷಣಕ್ಕೆ 3022.52 ಕಿ.ಮೀ. ರಸ್ತೆ, 671 ಸೇತುವೆ ಹಾಗೂ 97 ಕಟ್ಟಡಗಳಿಗೆ ಹಾನಿಯಾಗಿದೆ. ಲೋಕೋಪ ಯೋಗಿ ಇಲಾಖೆಗೆ ಬಜೆಟ್‌ನಲ್ಲಿ ನಿಗದಿಪಡಿಸಿದ್ದ ಅನುದಾನದ ಪೈಕಿ ಕೊರೊನಾ ಹಿನ್ನೆಲೆಯಲ್ಲಿ ಸ್ವಲ್ಪ ಕಡಿತ ಉಂಟಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ನಡುವೆ, ಇರುವ ಅನುದಾನ ದಲ್ಲಿ ರಸ್ತೆ, ಸೇತುವೆ ಹಾಗೂ ಕಟ್ಟಡಗಳ ದುರಸ್ತಿ ಹಾಗೂ ಪುನರ್‌ ನಿರ್ಮಾಣ ಕಾರ್ಯ ನಡೆಸಲು ಅಧಿಕಾರಿಗಳಿಗೆ ನಿರ್ದೇಶಿಸ‌ಲಾಗಿದೆ.

ಎಲ್ಲೆಲ್ಲಿ ಹಾನಿ :

ಪ್ರವಾಹದಿಂದ ಅತಿ ಹೆಚ್ಚು ಹಾನಿ ಗೊಳಗಾಗಿರುವ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ 699.79 ಕಿ.ಮೀ. ರಾಜ್ಯ ಹೆದ್ದಾರಿ, 1780.57 ಕಿ.ಮೀ. ಜಿಲ್ಲಾ ಸಂಪರ್ಕ ರಸ್ತೆ,  ಎರಡನೇ ಕಲಬುರಗಿ, ಯಾದಗಿರಿ, ಬೀದರ್‌, ವಿಜಯ ನಗರ, ರಾಯಚೂರು  ಜಿಲ್ಲೆಗಳಲ್ಲಿ 323 ಕಿ.ಮೀ. ರಾಜ್ಯ ಹೆದ್ದಾಗಿ, 449.03 ಕಿ.ಮೀ. ಜಿಲ್ಲಾ ಸಂಪರ್ಕ ರಸ್ತೆ,  ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ ಹಾಗೂ ಮಂಗಳೂರಿನಲ್ಲಿ 278.76 ಕಿ.ಮೀ. ರಾಜ್ಯ ಹೆದ್ದಾಗಿ, 422.47 ಕಿ.ಮೀ. ಜಿಲ್ಲಾ ಸಂಪರ್ಕ ರಸ್ತೆ, ಹಾಸನ ಮತ್ತು ಕೊಡಗಿನಲ್ಲಿ 101.38 ಕಿ.ಮೀ. ರಾಜ್ಯ ಹೆದ್ದಾರಿ, 162.35 ಕಿ.ಮೀ. ಜಿಲ್ಲಾ ಸಂಪರ್ಕ ರಸ್ತೆಗಳಿಗೆ ಹಾನಿಯಾಗಿದೆ.

ಗದಗ, ವಿಜಯಪುರ, ಕಲಬುರಗಿ, ಬೆಳಗಾವಿ, ರಾಯಚೂರು, ಬಾಗಲ ಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಹಾಸನ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಭಾಗದ 138.46 ಕಿ.ಮೀ. ರಾ.ಹೆ. ಹಾಗೂ ಆ ವ್ಯಾಪ್ತಿಗೆ ಬರುವ 11 ಸೇತುವೆಗಳ 9.94 ಕಿ.ಮೀ. ವ್ಯಾಪ್ತಿಯಲ್ಲಿ ಹಾನಿಯಾಗಿದೆ ಎನ್ನಲಾಗಿದೆ.

ಎಲ್ಲೆಲ್ಲಿ ಹೆಚ್ಚು ಹಾನಿ? :  ಉತ್ತರ ಕರ್ನಾಟಕ, ಕರಾವಳಿ, ಮಲೆನಾಡಲ್ಲಿ ಹೆಚ್ಚು ಹಾನಿ

ರಾಜ್ಯದಲ್ಲಿ ಮಳೆಯಿಂದಾಗಿ ಹಾನಿಗೊಳಗಾಗಿರುವ  ರಸ್ತೆ ಹಾಗೂ ಸೇತುವೆಗಳ  ದುರಸ್ತಿ ಹಾಗೂ ಪುನರ್‌ ನಿರ್ಮಾಣ ಕಾರ್ಯ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ.  ತತ್‌ಕ್ಷಣಕ್ಕೆ ಲಭ್ಯವಿರುವ ಅನುದಾನದಲ್ಲಿ  ಕೆಲಸ ಪ್ರಾರಂಭಿಸಲು ತಿಳಿಸಲಾಗಿದೆ. ಸಿ.ಸಿ.ಪಾಟೀಲ್‌, ಲೋಕೋಪಯೋಗಿ ಸಚಿವ

 

ಎಸ್‌.ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

PMFME

ಪಿಎಂಎಫ್ಎಂಇ ಯೋಜನೆಗೆ ರಾಜ್ಯ ಸರ್ಕಾರದ ಬೂಸ್ಟ್: ಶೇ.15 ಹೆಚ್ಚುವರಿ ಸಹಾಯಧನ

ಬೆಂಗಳೂರಿನಲ್ಲಿ ಅದ್ದೂರಿ ವಿದಾಯ ಪಂದ್ಯಕ್ಕೆ ಯೋಚಿಸಿದ್ದ ಬಿಸಿಸಿಐ: ತಿರಸ್ಕರಿಸಿದ ವಿರಾಟ್!

ಬೆಂಗಳೂರಿನಲ್ಲಿ ಅದ್ದೂರಿ ವಿದಾಯ ಪಂದ್ಯಕ್ಕೆ ಯೋಚಿಸಿದ್ದ ಬಿಸಿಸಿಐ: ತಿರಸ್ಕರಿಸಿದ ವಿರಾಟ್!

16kerala

ನಟಿ ಮೇಲಿನ ಲೈಂಗಿಕ ದೌರ್ಜನ್ಯ: ಸಾಕ್ಷಿಗಳ ಮರು ವಿಚಾರಣೆಗೆ ಕೇರಳ ಹೈಕೋರ್ಟ್ ಅಸ್ತು

voter

ಪಂಜಾಬ್ ಚುನಾವಣೆ: ಮತದಾನ ದಿನಾಂಕ ಒಂದು ವಾರಗಳ ಕಾಲ ಮುಂದೂಡಿಕೆ

dinesh gundu rao

ಮೋದಿಯವರೆ ದ್ವೇಷದ ರಾಯಭಾರಿಯಾಗಬೇಡಿ,ಪ್ರೀತಿಸಂದೇಶ ಸಾರುವ‌ ಪಾರಿವಾಳವಾಗಿ: ದಿನೇಶ್ ಗುಂಡೂರಾವ್

ಜ.26ರಂದು ಅಲ್ಲು ಅರ್ಜುನ್ ರ ‘ಅಲಾ ವೈಕುಂಠಪುರಮುಲೂ’ ಹಿಂದಿ ಆವೃತ್ತಿ ಬಿಡುಗಡೆ

ಜ.26ರಂದು ಅಲ್ಲು ಅರ್ಜುನ್ ರ ‘ಅಲಾ ವೈಕುಂಠಪುರಮುಲೂ’ ಹಿಂದಿ ಆವೃತ್ತಿ ಬಿಡುಗಡೆ

ಆ್ಯಶಸ್ ಗೆಲುವಿನ ಸಂತಸದಲ್ಲೂ ಒಂದು ನಡೆಯಿಂದ ಹೃದಯ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್

ಆ್ಯಶಸ್ ಗೆಲುವಿನ ಸಂತಸದಲ್ಲೂ ಒಂದು ನಡೆಯಿಂದ ಹೃದಯ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PMFME

ಪಿಎಂಎಫ್ಎಂಇ ಯೋಜನೆಗೆ ರಾಜ್ಯ ಸರ್ಕಾರದ ಬೂಸ್ಟ್: ಶೇ.15 ಹೆಚ್ಚುವರಿ ಸಹಾಯಧನ

dinesh gundu rao

ಮೋದಿಯವರೆ ದ್ವೇಷದ ರಾಯಭಾರಿಯಾಗಬೇಡಿ,ಪ್ರೀತಿಸಂದೇಶ ಸಾರುವ‌ ಪಾರಿವಾಳವಾಗಿ: ದಿನೇಶ್ ಗುಂಡೂರಾವ್

congress

ನಾಯಕರ ವಿರುದ್ಧ ಕೇಸ್: ಕಾನೂನು ಹೋರಾಟಕ್ಕೆ ಸಿದ್ಧವಾದ ಕೆಪಿಸಿಸಿ

1-sadsad

ಜನರ ಕಲ್ಯಾಣವಾಗಬೇಕು; ಉಪದ್ರವವಾಗಬಾರದು: ಪರ್ಯಾಯ ಕೃಷ್ಣಾಪುರ ಶ್ರೀ ಸಂದೇಶ

ಅರಣ್ಯ ರಕ್ಷಕ ಸಿಬ್ಬಂದಿ ಸಂಬಳ ಕೇವಲ 11 ಸಾವಿರ! ಜೀವನ ನಡೆಸುವುದೇ ದುಸ್ತರ

ಅರಣ್ಯ ರಕ್ಷಕ ಸಿಬ್ಬಂದಿ ಸಂಬಳ ಕೇವಲ 11 ಸಾವಿರ! ಜೀವನ ನಡೆಸುವುದೇ ದುಸ್ತರ

MUST WATCH

udayavani youtube

ಜನರ ಕಲ್ಯಾಣವಾಗಬೇಕು, ಉಪದ್ರವವಾಗಬಾರದು :ಕೃಷ್ಣಾಪುರ ಮಠದ ಶ್ರೀಪಾದರ ಸಂದೇಶ

udayavani youtube

ವಿಜಯಪುರ : ತಾವು ಬೆಳೆದ ತರಕಾರಿಯನ್ನು ರಸ್ತೆಗೆ ಚೆಲ್ಲಿ ರೈತರ ಆಕ್ರೋಶ

udayavani youtube

ಸಹ್ಯಾದ್ರಿ ಸೌರವನ ಕುರಿತ ಸಂಕ್ಷಿಪ್ತ ಮಾಹಿತಿ!

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

ಹೊಸ ಸೇರ್ಪಡೆ

PMFME

ಪಿಎಂಎಫ್ಎಂಇ ಯೋಜನೆಗೆ ರಾಜ್ಯ ಸರ್ಕಾರದ ಬೂಸ್ಟ್: ಶೇ.15 ಹೆಚ್ಚುವರಿ ಸಹಾಯಧನ

BJP FLAG

ಮಣಿಪುರದಲ್ಲಿ ಬಿಜೆಪಿಗೆ ತಲೆನೋವು ಸೃಷ್ಟಿಸಿದ ಅಫಸ್ಪಾ

ra Ga

ರೋಹಿತ್ ವೇಮುಲ “ಮೈ ಹೀರೋ” ಎಂದು ರಾಹುಲ್ ಗಾಂಧಿ ಟ್ವೀಟ್

ಬೆಂಗಳೂರಿನಲ್ಲಿ ಅದ್ದೂರಿ ವಿದಾಯ ಪಂದ್ಯಕ್ಕೆ ಯೋಚಿಸಿದ್ದ ಬಿಸಿಸಿಐ: ತಿರಸ್ಕರಿಸಿದ ವಿರಾಟ್!

ಬೆಂಗಳೂರಿನಲ್ಲಿ ಅದ್ದೂರಿ ವಿದಾಯ ಪಂದ್ಯಕ್ಕೆ ಯೋಚಿಸಿದ್ದ ಬಿಸಿಸಿಐ: ತಿರಸ್ಕರಿಸಿದ ವಿರಾಟ್!

17cow

ಅಪಘಾತ ತಡೆಗೆ ಬೀಡಾಡಿ ದನಗಳಿಗೆ, ವಿದ್ಯುತ್ ಕಂಬಕ್ಕೆ ರೇಡಿಯಂ ಸ್ಟಿಕ್ಕರ್ ಬಳಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.