
ರೈತರಿಗೆ ಸರಿಯಾಗಿ ಸಿಗುತ್ತಿಲ್ಲ “ಸಮ್ಮಾನ’; ಡಿಬಿಟಿ ವ್ಯವಸ್ಥೆಯಲ್ಲೂ ಲೋಪ
ಕಿಸಾನ್ ಸಮ್ಮಾನ್ ಯೋಜನೆಯ 91.99 ಕೋಟಿ ರೂ. ಪಾವತಿ ವರ್ಷದಿಂದ ಬಾಕಿ
Team Udayavani, Sep 15, 2022, 6:50 AM IST

ವಿಧಾನಸಭೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಆರ್ಥಿಕ ನೆರವು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳಿಗೆ ತಲುಪಿಸಲು ರೂಪಿಸಿರುವ ಡಿಬಿಟಿ ವ್ಯವಸ್ಥೆಯಲ್ಲೂ ಲೋಪ ಇರುವುದು ಪತ್ತೆಯಾಗಿದೆ.
ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ 91.99 ಕೋಟಿ ರೂ. ಡಿಬಿಟಿ ಪಾವತಿ ಪ್ರಕ್ರಿಯೆ 2019-20ರಿಂದಲೂ ಬಾಕಿ ಇರುವುದು ಭಾರತ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಅದೇ ರೀತಿ ಕ್ಷೀರಸಿರಿ ಯೋಜನೆಯಲ್ಲಿ ಕಡತಗಳ ರಚನೆ ಮತ್ತು ಅನುಮೋದನೆಯಲ್ಲಿ ವಿಳಂಬವಾಗಿದ್ದರಿಂದ 8464 ಹಾಲು ಉತ್ಪಾದಕರಿಗೆ 56.08 ಲಕ್ಷ ರೂ. ಪಾವತಿಯು 2020ರ ಜನವರಿಯಿಂದ ಬಾಕಿ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಡಿಬಿಟಿ ಮೂಲಕ ನಡೆಸಿದ ಒಟ್ಟಾರೆ ವಹಿವಾಟುಗಳಲ್ಲಿ ಕೇವಲ ಶೇ.83ರಷ್ಟು ಮಾತ್ರ ಯಶಸ್ವಿಯಾಗಿದ್ದು, ಶೇ.14ರಷ್ಟು ವಹಿವಾಟುಗಳು ತಿರಸ್ಕೃತವಾಗಿರುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಮತ್ತು ರೈತಸಿರಿ ಯೋಜನೆಗಳನ್ನು ಡಿಬಿಟಿ ಪೋರ್ಟಲ್‌ಗೆ ಅಳವಡಿಸಿದ್ದರೂ ಎರಡು ಯೋಜನೆಗಳ 5.94 ಕೋಟಿ ರು. ಡಿಬಿಟಿ ಪಾವತಿಯನ್ನು ಪೋರ್ಟಲ್ ಮೂಲಕ ಮಾಡಿಲ್ಲ ಎಂಬುದು ಸೇರಿದಂತೆ, ನೇರ ನಗದು ವರ್ಗಾವಣೆ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ನಡೆಸಿದ ಸಿಎಜಿ, ಕ್ಷೀರಸಿರಿ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಮಿಷನ್, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ರೈತ ಸಿರಿ ಯೋಜನೆಗಳ ನ್ಯೂನತೆಗಳನ್ನು ಪತ್ತೆ ಮಾಡಿದೆ.
ಬುಧವಾರ ಸದನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರದಿ ಮಂಡಿಸಿದ್ದು, ಸರ್ಕಾರದ ಫಲಾನುಭವಿಗಳಿಗೆ ನಗದು, ಪ್ರೋತ್ಸಾಹಧನ ವಿತರಣೆಯನ್ನು ಒಳಗೊಂಡಿರುವ ಎಲ್ಲಾ ಯೋಜನೆಗಳನ್ನು ಗುರುತಿಸಲು ಮತ್ತು ಸೇರ್ಪಡೆ ಮಾಡಲು ಹೊಸದಾಗಿ ಕಾಲಮಿತಿಯನ್ನು ನಿಗದಿಗೊಳಿಸಬೇಕು ಎಂದು ಸಿಎಜಿ ಶಿಫಾರಸ್ಸು ಮಾಡಿದೆ.
ಯೋಜನೆಗಳ ಫಲಾನುಭವಿಗಳಿಗೆ ಸೂಕ್ತರೀತಿಯಲ್ಲಿ ತಲುಪಬೇಕಾದರೆ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು. ಇಲಾಖೆಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡಬೇಕು. ತಪ್ಪಾದ ಖಾತೆಗಳಿಗೆ ಹಣ ಜಮೆ ಮತ್ತು ಬಾಕಿ ಇರುವ, ತಿರಸ್ಕೃತಗೊಂಡಿರುವ ವಹಿವಾಟುಗಳ ಬಗ್ಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಮಯಮಿತಿಯನ್ನು ನಿಗದಿ ಪಡಿಸಲು ಇಲಾಖೆಗಳಿಗೆ ನಿರ್ದೇಶನ ನೀಡಬೇಕು. ಪಶುಸಂಗೋಪನಾ ಇಲಾಖೆಯ ಕ್ಷೀರಸಿರಿ ಯೋಜನೆಯ ದತ್ತಾಂಶಗಳು ಡಿಜಿಟಲೀಕರಣದ ದೃಢಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಮುಖ್ಯಾಂಶಗಳು
1. ವಿಫಲವಾದ ವಹಿವಾಟು ಸರಿಪಡಿಸುವಲ್ಲಿ ಹಾಗೂ ಪುನರಾರಂಭಿಸುವಲ್ಲಿ ಎಡವಿರುವುದು
2. 30 ದಿನ ಕಳೆದರೂ 91,283 ವಹಿವಾಟು ಪುನರಾರಂಭ ಆಗದಿರುವುದು.
3. ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಫಲತೆ
4. 2018-19 ಹಾಗೂ 2019-20 ಅವಧಿಯಲ್ಲಿ 6.66 ಲಕ್ಷ ಫಲಾನುಭವಿಗಳಿಗೆ ಸಿಗದ ಯೋಜನೆ
5. 153.30 ಕೋಟಿ ರೂ.ಗಳಷ್ಟು ಆರ್ಥಿಕ ಪ್ರಯೋಜನದಿಂದ ವಂಚಿತರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ; ಅಧಿಕಾರಕ್ಕೆ ಬಂದ ಕೂಡಲೇ ವಿಶೇಷ ಅನುದಾನ: ಸಿದ್ದರಾಮಯ್ಯ

360 ಡಿಗ್ರಿ ಬ್ರ್ಯಾಂಡಿಂಗ್ ಪ್ರಚಾರ ನಡೆಸಲು ಕಾಂಗ್ರೆಸ್ ಮುಖಂಡರಿಗೆ ಟಾಸ್ಕ್

ಪ್ರತಿಪಕ್ಷದ ನಾಯಕರನ್ನು ಹೀಗಳೆದಾಗ ಭಾರತದ ಗೌರವಕ್ಕೆ ಧಕ್ಕೆ ಉಂಟಾಗುವುದಿಲ್ಲವೇ : ಸಿದ್ದರಾಮಯ್ಯ

ಬೆಂಗಳೂರು ಏರೋ ಇಂಡಿಯಾ ಶೋ ; ಮಾಂಸ ಮಾರಾಟ ಬಂದ್

ದಾಖಲೆ ಸಮೇತ ದೂರು ನೀಡಿದರೆ ದೂರುದಾರಿಗೂ ರಕ್ಷಣೆ : ಲೋಕಾಯುಕ್ತ ಪಾಟೀಲ್
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
