CM Siddaramaiah: ಗದ್ದಲದ ನಡುವೆಯೇ ಮೇಲ್ಮನೆಯಲ್ಲಿ ಬಜೆಟ್‌ ಅಂಗೀಕಾರ

Team Udayavani, Feb 29, 2024, 9:53 PM IST

CM Siddaramaiah: ಗದ್ದಲದ ನಡುವೆಯೇ ಮೇಲ್ಮನೆಯಲ್ಲಿ ಬಜೆಟ್‌ ಅಂಗೀಕಾರ

ಬೆಂಗಳೂರು: ವಿಧಾನಸೌಧದಲ್ಲಿ  ಪಾಕ್‌ ಪರ ಘೋಷಣೆ ಕೂಗಿದ್ದಕ್ಕೆ ಮುಖ್ಯಮಂತ್ರಿಯವರು ಉತ್ತರ ಕೊಡಬೇಕೆಂದು ಪಟ್ಟುಹಿಡಿದು ಬಿಜೆಪಿ ಪ್ರತಿಭಟನೆ ನಡೆಸಿ, “ಭಾರತ್‌ ಮಾತಾ ಕಿ ಜೈ, ಮೋದಿ ಜಿಂದಾಬಾದ್‌, ಜೈ ಶ್ರೀರಾಮ್‌’ ಘೋಷಣೆ ಕೂಗಿತು. ಗದ್ದಲದ ನಡುವೆಯೇ 2024-25ನೇ ಸಾಲಿನ ಬಜೆಟ್‌ ಮೇಲಿನ ಚರ್ಚೆಗೆ ಮೇಲ್ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದರು.

ಗಲಾಟೆಯ ಮಧ್ಯೆಯೇ ಬಜೆಟ್‌ಗೆ ಒಪ್ಪಿಗೆ ನೀಡುವಂತೆ ಕೋರಿ ಸಿಎಂ ಮಂಡಿಸಿದ ಕರ್ನಾಟಕ ಧನ ವಿನಿಯೋಗ ಮಸೂದೆ -2024ರ ಪ್ರಸ್ತಾವನೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಜತೆಗೆ ಪೂರಕ ಅಂದಾಜುಗಳಿಗೆ ಸಂಬಂಧಿಸಿದ ಕರ್ನಾಟಕ ಧನವಿನಿಯೋಗ ಮಸೂದೆ ಸಂಖ್ಯೆ 2 ಹಾಗೂ 3ಕ್ಕೂ  ಸದನದ ಒಪ್ಪಿಗೆ ಪಡೆದುಕೊಳ್ಳಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ ಮೇಲಿನ ಚರ್ಚೆಗೆ ಮುಂದಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಪಾಕ್‌ ಪರ ಘೋಷಣೆ ಕೂಗಿ 48 ಗಂಟೆ ಕಳೆದರೂ ಯಾರನ್ನೂ ಬಂಧಿಸಲಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರು ಮೊದಲು ಪ್ರತಿಕ್ರಿಯೆ ಕೊಟ್ಟು ಬಳಿಕ ಬಜೆಟ್‌ಗೆ ಉತ್ತರಿಸಲಿ ಎಂದರು.

ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡುವಂತೆ ಈಗಾಗಲೇ ಮುಖ್ಯಮಂತ್ರಿಗೆ ಸೂಚಿಸಿದ್ದೇನೆ. ಅದು ಮುಗಿದ ಮೇಲೆ ನೀವು ಪ್ರಸ್ತಾವಿಸಿದ ವಿಷಯದ ಬಗ್ಗೆ ಗೃಹ ಸಚಿವರಿಂದ ಉತ್ತರ ಕೊಡಿಸುತ್ತೇನೆಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಗಲಾಟೆ ಆರಂಭಿಸಿದರು. ಗದ್ದಲದ ನಡುವೆಯೇ ಉತ್ತರ ಕೊಟ್ಟ ಸಿಎಂ ಕೇಂದ್ರ ಸರಕಾರದ ವಿರುದ್ಧ ಅಬ್ಬರಿಸುತ್ತ, ತಮ್ಮ ಬಜೆಟ್‌ ಅನ್ನು ಸಮರ್ಥಿಸಿಕೊಂಡರು. ಇದು ಏಳು ಕೋಟಿ ಕನ್ನಡಿಗರ ಬಜೆಟ್‌, ಇದರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿ ಗದ್ದಲ ಮಾಡುತ್ತಿದೆ. ಬಿಜೆಪಿಯವರು ಕನ್ನಡ ದ್ರೋಹಿಗಳು ಎಂದು ವಾಗ್ಧಾಳಿ ನಡೆಸಿದರು.

ಈ ವೇಳೆ ಬಿಜೆಪಿ ಸದಸ್ಯರು “ಮೋದಿ ಜಿಂದಾಬಾದ್‌, ಭಾರತ್‌ ಮಾತಾ ಕಿ ಜೈ, ಜೈ ಶ್ರೀರಾಮ್‌, ನಿಲ್ಲಿಸಿ-ನಿಲ್ಲಿಸಿ ಬುರಡೆ ಭಾಷಣ ನಿಲ್ಲಿಸಿ’ ಎಂದು ಘೋಷಣೆ ಕೂಗಿದರು. ಬಿಜೆಪಿಯವರು ದೇಶದ್ರೋಹಿಗಳು ಎಂದು ಕಾಂಗ್ರೆಸ್‌ ಸದಸ್ಯರು ಜರೆದರು.

ಟಾಪ್ ನ್ಯೂಸ್

ಕಾರಿನಲ್ಲಿ ಬಂದು ದನ ಕಳವು; ಕೃತ್ಯ ಸಿಸಿ ಕೆಮರಾದಲ್ಲಿ ದಾಖಲು

ಕಾರಿನಲ್ಲಿ ಬಂದು ದನ ಕಳವು; ಕೃತ್ಯ ಸಿಸಿ ಕೆಮರಾದಲ್ಲಿ ದಾಖಲು

Kundapura ಸಮುದ್ರ ಪಾಲಾಗಿ ಕಳೆಯಿತು 5 ದಿನ; ಹುಡುಕಾಟವೇ ಸವಾಲು

Kundapura ಸಮುದ್ರ ಪಾಲಾಗಿ ಕಳೆಯಿತು 5 ದಿನ; ಹುಡುಕಾಟವೇ ಸವಾಲು

Gangolli ಜಾಮೀನಿನಲ್ಲಿ ಬಂದು ವಾರದಲ್ಲಿ ಕದ್ದು ಸಿಕ್ಕಿಬಿದ್ದ

Gangolli ಜಾಮೀನಿನಲ್ಲಿ ಬಂದು ವಾರದಲ್ಲಿ ಕದ್ದು ಸಿಕ್ಕಿಬಿದ್ದ

1-sadsdsad

T20 World Cup; ರೋಹಿತ್‌ ಅಬ್ಬರ: ಆಸೀಸ್ ಗೆ ಸೋಲುಣಿಸಿ ಸೆಮಿ ಪ್ರವೇಶಿಸಿದ ಟೀಮ್ ಇಂಡಿಯಾ

ಬೆಳಗಾವಿ, ಕೋಲಾರ: ಕಲುಷಿತ ನೀರು ಸೇವಿಸಿ ಇಬ್ಬರ ಸಾವು

ಬೆಳಗಾವಿ, ಕೋಲಾರ: ಕಲುಷಿತ ನೀರು ಸೇವಿಸಿ ಇಬ್ಬರ ಸಾವು

ಮೌಲ್ಯವರ್ಧಿತ ಕೃಷಿ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಇಳಿಕೆಗೆ ಪ್ರಸ್ತಾವನೆ

ಮೌಲ್ಯವರ್ಧಿತ ಕೃಷಿ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಇಳಿಕೆಗೆ ಪ್ರಸ್ತಾವನೆ

police

Davanagere; ಅಲ್ಯೂಮಿನಿಯಂ ವೈರ್ ಕಳ್ಳ 23 ವರ್ಷಗಳ ನಂತರ ಮತ್ತೆ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿ, ಕೋಲಾರ: ಕಲುಷಿತ ನೀರು ಸೇವಿಸಿ ಇಬ್ಬರ ಸಾವು

ಬೆಳಗಾವಿ, ಕೋಲಾರ: ಕಲುಷಿತ ನೀರು ಸೇವಿಸಿ ಇಬ್ಬರ ಸಾವು

ಮೌಲ್ಯವರ್ಧಿತ ಕೃಷಿ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಇಳಿಕೆಗೆ ಪ್ರಸ್ತಾವನೆ

ಮೌಲ್ಯವರ್ಧಿತ ಕೃಷಿ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಇಳಿಕೆಗೆ ಪ್ರಸ್ತಾವನೆ

ಪರಿಷತ್‌: 17 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

Karnataka ಪರಿಷತ್‌: 17 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

1-BP

BJP vs BJP; ವಿಜಯೇಂದ್ರ ವಿರುದ್ಧ ಕಿಡಿ ಕಾರಿದ ಹರಿಹರ ಶಾಸಕ ಬಿ.ಪಿ.ಹರೀಶ್

1-sadsadsad

Revanna; ಪ್ರಜ್ವಲ್ ಗೆ 14 ದಿನ ನ್ಯಾಯಾಂಗ ಬಂಧನ: ಸೂರಜ್ ಜುಲೈ 1ರವರೆಗೆ ಸಿಐಡಿ ವಶಕ್ಕೆ

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

ಕಾರಿನಲ್ಲಿ ಬಂದು ದನ ಕಳವು; ಕೃತ್ಯ ಸಿಸಿ ಕೆಮರಾದಲ್ಲಿ ದಾಖಲು

ಕಾರಿನಲ್ಲಿ ಬಂದು ದನ ಕಳವು; ಕೃತ್ಯ ಸಿಸಿ ಕೆಮರಾದಲ್ಲಿ ದಾಖಲು

Kundapura ಸಮುದ್ರ ಪಾಲಾಗಿ ಕಳೆಯಿತು 5 ದಿನ; ಹುಡುಕಾಟವೇ ಸವಾಲು

Kundapura ಸಮುದ್ರ ಪಾಲಾಗಿ ಕಳೆಯಿತು 5 ದಿನ; ಹುಡುಕಾಟವೇ ಸವಾಲು

Gangolli ಜಾಮೀನಿನಲ್ಲಿ ಬಂದು ವಾರದಲ್ಲಿ ಕದ್ದು ಸಿಕ್ಕಿಬಿದ್ದ

Gangolli ಜಾಮೀನಿನಲ್ಲಿ ಬಂದು ವಾರದಲ್ಲಿ ಕದ್ದು ಸಿಕ್ಕಿಬಿದ್ದ

1-sadsdsad

T20 World Cup; ರೋಹಿತ್‌ ಅಬ್ಬರ: ಆಸೀಸ್ ಗೆ ಸೋಲುಣಿಸಿ ಸೆಮಿ ಪ್ರವೇಶಿಸಿದ ಟೀಮ್ ಇಂಡಿಯಾ

ಬೆಳಗಾವಿ, ಕೋಲಾರ: ಕಲುಷಿತ ನೀರು ಸೇವಿಸಿ ಇಬ್ಬರ ಸಾವು

ಬೆಳಗಾವಿ, ಕೋಲಾರ: ಕಲುಷಿತ ನೀರು ಸೇವಿಸಿ ಇಬ್ಬರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.