ಸರ್ಕಾರದ ನಡೆಗೆ ಶಾಸಕ ಅಜಯ್ ಸಿಂಗ್ ಆಕ್ರೋಶ
Team Udayavani, Jan 20, 2022, 12:05 PM IST
ಬೆಂಗಳೂರು: ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಿದ್ದಾಗ ಪಾದಯಾತ್ರೆ ತಡೆಯೋಕೆ ಆಗ ವೀಕೆಂಡ್ ಕರ್ಪ್ಯೂ ತಂದ್ರು. ಆಗ ಇದ್ದಿದ್ದು ನಾಲ್ಕು ಸಾವಿರ ಕೇಸ್ ಮಾತ್ರ. ಈಗ 40 ಸಾವಿರವಾಗಿದೆ. ಇನ್ನು ಲಾಕ್ ಡೌನ್ ಮಾಡುತ್ತೇವೆ ಎನ್ನುವುದು ಸರಿಯಲ್ಲ ಎಂದು ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಹೇಳಿದರು.
ಸಿದ್ದು ಬೆಂಬಲಿಗರ ಮೇಲೆ ನಲಪಾಡ್ ಹಲ್ಲೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯೂತ್ ಕಾಂಗ್ರೆಸ್ ಅಧ್ಯಕ್ಷರು, ಉಪಾಧ್ಯಕ್ಷರು ಎಲ್ಲರೂ ಒಗ್ಗಟ್ಟಾಗಿದ್ದಾರೆ. ಅದು ಪಕ್ಷದ ಆಂತರಿಕ ವಿಚಾರ. ಅಧ್ಯಕ್ಷರು, ಕಾರ್ಯಾಧ್ಯಕ್ಷರು ಸಮಸ್ಯೆಯನ್ನು ಬಗೆ ಹರಿಸುತ್ತಾರೆ ಎಂದರು.
ಇದನ್ನೂ ಓದಿ:ಲಾಕ್ ಡೌನ್, ವೀಕೆಂಡ್ ಕರ್ಫ್ಯೂ ಸಿಎಂ ತೀರ್ಮಾನವಲ್ಲ: ಸಚಿವ ಸೋಮಶೇಖರ್
ಬಿಜೆಪಿಯಲ್ಲಿ ಏನೆಲ್ಲಾ ಗಲಾಟೆಯಾಗಿದೆ ಅಂತ ಗೊತ್ತು. ಇದೊಂದನ್ನು ದೊಡ್ಡದು ಮಾಡುವ ಅವಶ್ಯಕತೆಯಿಲ್ಲ. ನಾವು ಹೊಡೆದಾಡುತ್ತಿಲ್ಲ. ನಮ್ಮಲ್ಲಿ ಏನಾದರೂ ಸಮಸ್ಯೆಯಿದ್ದರೆ ಬಗೆಹರಿಸಿಕೊಳ್ಳುತ್ತೇವೆ. ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ಸಣ್ಣಪುಟ್ಟ ಸಮಸ್ಯೆಗಳು ಇರುತ್ತವೆ ಎಂದರು.