ಕಾಂಗ್ರೆಸ್ ನಲ್ಲಿ ಭಿನ್ನಮತ: ರಮೇಶ್ ಕುಮಾರ್ ಶಕುನಿ ಎಂದ ಮುನಿಯಪ್ಪ

ದೇವೇಗೌಡರ ಮೇಲೆ ಪೂಜ್ಯ ಭಾವನೆ ಇದೆ, ನಾನು ಕಾಂಗ್ರೆಸ್ ‌ಪಕ್ಷದಲ್ಲೇ ಉಳಿಯುತ್ತೇನೆ

Team Udayavani, Jul 6, 2022, 2:58 PM IST

1-afssa

ಕೋಲಾರ: ನನ್ನ ಕಡಗಣನೆ ಬಗ್ಗೆ ಹೈಕಮಾಂಡ್ ನಾಯಕರು ಹೇಳಬೇಕು, ಅಲ್ಲಿವರೆಗೆ ಅಭಿಪ್ರಾಯ ಸಂಗ್ರಹ ಮಾಡುತ್ತೇನೆ. ಕಾರ್ಯಕರ್ತರು ಹೇಳಿದ‌ ಹಾಗೆ ಮುಂದೆ ಕೇಳುತ್ತೇನೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ನಾನು‌ ಒಂದು‌ ನಿಲುವು ತೆಗೆದುಕೊಂಡಿದ್ದು, ನಾನು‌ ಕಾಂಗ್ರೆಸ್ ನಲ್ಲಿ‌ 28 ವರ್ಷ ಸಂಸದನಾಗಿದ್ದೇನೆ.ಐವತ್ತು ವರ್ಷಗಳ ‌ಕಾಲ‌ ಕಾಂಗ್ರೆಸ್ ನಲ್ಲಿ‌ ಇದ್ದೇನೆ. ಬಹಳಷ್ಟು ಜನ ಮುಖಂಡರು‌ ನನ್ನ ಭೇಟಿ‌ ಮಾಡಿದರು.ನಾನು ಕಾಂಗ್ರೆಸ್ ನಿಷ್ಠಾವಂತ, ಕೆಲವರು ಪಕ್ಷ ಬಿಟ್ಟು ಹೋಗಿ‌ ವಾಪಸ್ಸು ಬಂದಿದ್ದಾರೆ, ನಾರಾಯಣಸ್ವಾಮಿ, ನಂಜೆಗೌಡ, ಬೇರೆ ಕಡೆಯಿಂದ ಪಕ್ಷಕ್ಕೆ ಬಂದಿದ್ದಾರೆ, ರಮೇಶ್ ಕುಮಾರ್ ‌ಕೂಡ ಬೇರೆ ಕಡೆಯಿಂದ ಬಂದಿದ್ದಾರೆ
ಅವರನ್ನು ಸೇರಿಸಿಕೊಳ್ಳುವ ಸಂದರ್ಭದಲ್ಲಿ ‌ನನ್ನನ್ನು ಕೇಳಿ‌ ಸೇರಿಸಿಕೊಂಡರು.ನಾನು ಆಗ ಸಂಸದನಾಗಿದ್ದೆ, ಕೊತ್ತನೂರು ಮಂಜುನಾಥ ಸೇರಿಸಿಕೊಳ್ಳುವ ಸಂಬಂಧ ನನ್ನ ಕೇಳಿ ಅಂದಿದ್ದೆ,ಆದರೆ ನನಗೆ ಹೇಳದೆ ಕೇಳದೆ ಈಗ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಸೌಜನ್ಯಕ್ಕಾದರು ನನ್ನನ್ನು ಕೆಳಬೇಕಿತ್ತು. ಇವರೆಲ್ಲ ಪಕ್ಷ ಬಿಟ್ಟು ಹೋಗಿ ಮತ್ತೆ‌ ಬಂದಿದ್ದಾರೆ. ಇವರಿಂದ ಕಾಂಗ್ರೆಸ್ ಕೋಲಾರದಲ್ಲಿ ಗೆಲ್ಲುತ್ತದೋ? ಬರುತ್ತದೆ ಅನ್ನೋದಾದರೆ ನನ್ನ ಅಭ್ಯಂತರ ಏನೂ ಇಲ್ಲ ಎಂದರು.

ಹೈಕಮಾಂಡ್ ನಾಯಕರು ಕೂಡ ನನಗೆ ನೋವು ಮರೆಯುವಂತೆ ಹೇಳಿದರು. ನನ್ನ ಬಿಟ್ಟು ಕಾಂಗ್ರೆಸ್ ಗೆ ಮಂಜುನಾಥ ಮತ್ತುಎಂ.ಸಿ ಸುಧಾಕರ್ ಸೇರಿಸಿಕೊಂಡಿದ್ದಾರೆ. ನಾನು ಯಾವ ಪಕ್ಷಕ್ಕೆ ಹೋಗುವುದಿಲ್ಲ. ಕಾಂಗ್ರೆಸ್ ನಲ್ಲೆ ಉಳಿಯುತ್ತೇನೆ. ಹೈಕಮಾಂಡ್ ಏನು ಹೇಳುತ್ತದೆ ಎಂದು ಕೇಳುತ್ತೇನೆ. ಐದು ‌ಲಕ್ಷ ಮತತಾದರ ಬಳಿಗೆ ನಾನು‌ ಹೋಗುತ್ತೇನೆ. ಇವತ್ತಿನ ಪರಿಸ್ಥಿತಿ ಬಗ್ಗೆ ಹೇಳುತ್ತೇನೆ. ಸಮಯಕ್ಕಾಗಿ‌ ನಾನು ಕಾಯುತ್ತೇನೆ. ತಾಲೂಕು ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹ ಮಾಡುತ್ತೇನೆ ಎಂದರು.

ರಮೇಶ್ ಕುಮಾರ್ ಒಬ್ಬ ಶಕುನಿ. ಜನರು ಇದ್ದಾರೆ, ಧರ್ಮವೂ ಇದೆ. ಇದೆಲ್ಲದಕ್ಕೂ ಕಾಲ ಬರಲಿದೆ. ಅವರು ಏಕಪಾತ್ರ ಅಭಿನಯ ಮಾಡುತ್ತಾರೆ.ಎಲ್ಲಾ ಪಾತ್ರಗಳನ್ನೂ ಅವರೇ ಮಾಡುತ್ತಾರೆ. ಸಿದ್ದರಾಮಯ್ಯಗೆ ಅವರ ಮೇಲೆ ಯಾಕೆ ವಿಶ್ವಾಸ ಇದೆಯೋ ಗೊತ್ತಿಲ್ಲ. ಇದನ್ನ ಅವರನ್ನೇ ಕೇಳಬೇಕು. ಬಿಜೆಪಿಗೆ ಹೋಗಿ ಕಾಂಗ್ರೆಸ್ ಗೆ ಬರುತ್ತಾರೆ. ಇವರಿಗೆ ಮಾನ ಮರ್ಯಾದೆ ಇಲ್ಲ. ಯಾಕೆ ಕಾಂಗ್ರೆಸ್ ಗೆ ಬಂದಿದ್ದಾರೆ. ರಾಹುಲ್ ಗಾಂಧಿಯವರಿಗೆ ಸತ್ಯವನ್ನ ಮುಚ್ಚಿಟ್ಟು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ದೇವೇಗೌಡ ಮೇಲೆ ಪೂಜ್ಯ ಭಾವನೆ ಇದೆ. ಆದರೆ ನಾನು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ. ಕಾಂಗ್ರೆಸ್ ‌ಪಕ್ಷದಲ್ಲಿ ಉಳಿಯುತ್ತೇನೆ ಎಂದರು.

ಮುನಿಸ್ವಾಮಿ ಸಂಸದರಾಗಿ ಆಯ್ಕೆಯಾದ ಬಳಿಕ ರಮೇಶ್ ಕುಮಾರ್ ಮತ್ತು ಗಡ್ಕರಿ ಭೇಟಿ ಮಾಡಿದ್ದರು. ಮುನಿಸ್ವಾಮಿ ಜೊತೆ ಸೇರಿ ರಮೇಶ್ ಕುಮಾರ್, ನಿತಿನ್ ಗಡ್ಕರಿ ಭೇಟಿಯಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿದ್ದಕ್ಕೆ ಭೇಟಿ‌ ಮಾಡಿದರು. ಆಗ ಬಿಜೆಪಿ ಗೆಲ್ಲಿಸಿ, ಈಗ ಕಾಂಗ್ರೆಸ್ ಗೆಲ್ಲಿಸಬೇಕು ಅಂತಿದ್ದಾರೆ. ಇದರ ಬಗ್ಗೆ ಹೈಕಮಾಂಡ್ ನಾಯಕರು ಮಾತನಾಡಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಪೋಟೋ ತೋರಿಸಿ ಮುನಿಯಪ್ಪ ತೀವ್ರ ವಾಗ್ದಾಳಿ ನಡೆಸಿದರು.

ಟಾಪ್ ನ್ಯೂಸ್

Protest: ಕಂಪನಿಯ ಕಿರುಕುಳಕ್ಕೆ ಬೇಸತ್ತು ಪ್ರತಿಭಟನೆಗೆ ಮುಂದಾದ ಎಸಿಸಿ ಕಾರ್ಮಿಕರು

Protest: ಕಂಪನಿಯ ಕಿರುಕುಳಕ್ಕೆ ಬೇಸತ್ತು ಪ್ರತಿಭಟನೆಗೆ ಮುಂದಾದ ಎಸಿಸಿ ಕಾರ್ಮಿಕರು

Arrested: ಹಳೇ ವೈಷಮ್ಯ ಮಚ್ಚಿನಿಂದ ಹಲ್ಲೆ, ಆರೋಪಿಗಳ ಬಂಧನ

Arrested: ಹಳೇ ವೈಷಮ್ಯ ಮಚ್ಚಿನಿಂದ ಹಲ್ಲೆ, ಆರೋಪಿಗಳ ಬಂಧನ

Unemployment: ಪ್ರಧಾನಿ ದುರಾಡಳಿತದಿಂದ ಭಾರತದಲ್ಲಿ ಪಾಕ್‌ಗಿಂತ 2 ಪಟ್ಟು ನಿರುದ್ಯೋಗ: ರಾಗಾ

Unemployment: ಮೋದಿ ದುರಾಡಳಿತದಿಂದ ಭಾರತದಲ್ಲಿ ಪಾಕ್‌ಗಿಂತ 2 ಪಟ್ಟು ನಿರುದ್ಯೋಗ: ರಾಗಾ

Resignation: ಶಿಕ್ಷಕ ಹಗರಣ… ತನಿಖೆಗೆ ಆದೇಶಿಸಿದ್ದ ಜಡ್ಜ್ ನಾಳೆ ರಾಜೀನಾಮೆ?

Resignation: ಶಿಕ್ಷಕ ಹಗರಣ… ತನಿಖೆಗೆ ಆದೇಶಿಸಿದ್ದ ಜಡ್ಜ್ ನಾಳೆ ರಾಜೀನಾಮೆ?

IPL ಆರಂಭಕ್ಕೂ ಮುನ್ನ ಚೆನ್ನೈ ತಂಡಕ್ಕೆ ಶಾಕ್:‌ ಈ ಸ್ಟಾರ್‌ ಬ್ಯಾಟರ್‌ ಆಡೋದು ಡೌಟ್

IPL ಆರಂಭಕ್ಕೂ ಮುನ್ನ ಚೆನ್ನೈ ತಂಡಕ್ಕೆ ಶಾಕ್:‌ ಈ ಸ್ಟಾರ್‌ ಬ್ಯಾಟರ್‌ ಆಡೋದು ಡೌಟ್

Leopard: ದೇಶದಲ್ಲಿ ಚಿರತೆಗಳ ಸಂತತಿ ವಾರ್ಷಿಕ ಶೇ.1.08ರಷ್ಟು ಏರಿಕೆ

Leopard: ದೇಶದಲ್ಲಿ ಚಿರತೆಗಳ ಸಂತತಿ ವಾರ್ಷಿಕ ಶೇ.1.08ರಷ್ಟು ಏರಿಕೆ

Video: ಆಹಾರ ಅರಸಿ ಬಂದು ಮಡಕೆಯೊಳಗೆ ತಲೆ ಹಾಕಿ ಐದು ಗಂಟೆಗಳ ಕಾಲ ಒದ್ದಾಡಿದ ಚಿರತೆ…

Video: ಆಹಾರ ಅರಸಿ ಬಂದು ಮಡಕೆಯೊಳಗೆ ತಲೆ ಹಾಕಿ ಐದು ಗಂಟೆಗಳ ಕಾಲ ಒದ್ದಾಡಿದ ಚಿರತೆ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Protest: ಕಂಪನಿಯ ಕಿರುಕುಳಕ್ಕೆ ಬೇಸತ್ತು ಪ್ರತಿಭಟನೆಗೆ ಮುಂದಾದ ಎಸಿಸಿ ಕಾರ್ಮಿಕರು

Protest: ಕಂಪನಿಯ ಕಿರುಕುಳಕ್ಕೆ ಬೇಸತ್ತು ಪ್ರತಿಭಟನೆಗೆ ಮುಂದಾದ ಎಸಿಸಿ ಕಾರ್ಮಿಕರು

Lok Sabha Elections; ಕಾಂಗ್ರೆಸ್‌, ಬಿಜೆಪಿ ಪ್ರಾಬಲ್ಯ: ಜೆಡಿಎಸ್‌ ನಿರ್ಣಾಯಕ! 

BJP ವಿಕಸಿತ ಭಾರತ ಸಂಕಲ್ಪ ಪತ್ರ ಅಭಿಯಾನ: ರಾಜ್ಯದಲ್ಲಿ 3 ಲಕ್ಷ ಮಂದಿಯನ್ನು ತಲುಪುವ ಗುರಿ

BJP ವಿಕಸಿತ ಭಾರತ ಸಂಕಲ್ಪ ಪತ್ರ ಅಭಿಯಾನ: ರಾಜ್ಯದಲ್ಲಿ 3 ಲಕ್ಷ ಮಂದಿಯನ್ನು ತಲುಪುವ ಗುರಿ

Bengaluru Rameshwaram Cafe ಸ್ಫೋಟದ ಆರೋಪಿ ಶೀಘ್ರ ಬಂಧನ: ಪರಂ

Bengaluru Rameshwaram Cafe ಸ್ಫೋಟದ ಆರೋಪಿ ಶೀಘ್ರ ಬಂಧನ: ಪರಂ

ಬಾಂಬ್‌ಗೆ ಬೆಂಗಳೂರಲ್ಲೇ ಕಚ್ಚಾ ವಸ್ತು ಖರೀದಿ

ಬಾಂಬ್‌ಗೆ ಬೆಂಗಳೂರಲ್ಲೇ ಕಚ್ಚಾ ವಸ್ತು ಖರೀದಿ

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

Bangalore: 3 ವರ್ಷದ ಮಗುವಿಗೆ ಸ್ವಂತ ತಾಯಿಯಿಂದಲೇ ಚಿತ್ರಹಿಂಸೆ

Bangalore: 3 ವರ್ಷದ ಮಗುವಿಗೆ ಸ್ವಂತ ತಾಯಿಯಿಂದಲೇ ಚಿತ್ರಹಿಂಸೆ

E-cigarettes: ನಗರದಲ್ಲಿ ಇ-ಸಿಗರೆಟ್‌ ಅಕ್ರಮ ಮಾರಾಟ ಹೆಚ್ಚಳ

E-cigarettes: ನಗರದಲ್ಲಿ ಇ-ಸಿಗರೆಟ್‌ ಅಕ್ರಮ ಮಾರಾಟ ಹೆಚ್ಚಳ

5

Kanakpur: ಬ್ಯಾಂಕಿನಲ್ಲಿ ಡ್ರಾ ಮಾಡಿದ 2 ಲಕ್ಷ ರೂ. ಹಾಡಹಗಲೇ ಎಗರಿಸಿ ನಾಲ್ವರು ಪರಾರಿ

Rameshwaram Cafe: ಬಾಂಬ್‌ಗೆ ಬೆಂಗಳೂರಲ್ಲೇ ಐಟಂ ಖರೀದಿ

Rameshwaram Cafe: ಬಾಂಬ್‌ಗೆ ಬೆಂಗಳೂರಲ್ಲೇ ಐಟಂ ಖರೀದಿ

Rameshwaram Cafe: ಬಾಂಬರ್‌ಗಾಗಿ ನೆರೆ ರಾಜ್ಯಗಳಿಗೆ ಪೊಲೀಸ್‌

Rameshwaram Cafe: ಬಾಂಬರ್‌ಗಾಗಿ ನೆರೆ ರಾಜ್ಯಗಳಿಗೆ ಪೊಲೀಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.