ವಿವಿಧ ರೈಲುಗಳ ವಿಳಂಬ ಸಂಚಾರ
Team Udayavani, May 7, 2019, 3:00 AM IST
ಹುಬ್ಬಳ್ಳಿ: ಲೈನ್ ಬ್ಲಾಕ್ ಕಾರಣದಿಂದ ಕೆಲವು ರೈಲುಗಳು ವಿಳಂಬವಾಗಿ ಸಂಚರಿಸಲಿವೆ. ಜೂನ್ 8ರಿಂದ 25ರವರೆಗೆ ಕಣ್ಣೂರ-ಬೆಂಗಳೂರು ನಗರ ಎಕ್ಸ್‌ಪ್ರೆಸ್ (16518) ರೈಲು ಮಂಡಗೆರೆ ಹಾಗೂ ಹೊಳೆನರಸಿಪುರ ನಿಲ್ದಾಣಗಳ ಮಧ್ಯೆ 15 ನಿಮಿಷ ನಿಲುಗಡೆಗೊಳ್ಳುವುದು.
ಜೂನ್ 26ರಿಂದ ಜುಲೈ 4ರವರೆಗೆ ಮೈಸೂರು-ತಾಳಗುಪ್ಪ (56276) ಪ್ಯಾಸೆಂಜರ್ ರೈಲು ಹೊಳೆನರಸಿಪುರ ಹಾಗೂ ಮಾವಿನಕೆರೆ ಮಧ್ಯೆ 70 ನಿಮಿಷ ನಿಲುಗಡೆಯಾಗಲಿದೆ.
ಜೂನ್ 26ರಿಂದ ಜುಲೈ 4ರವರೆಗೆ ಯಶವಂತಪುರ-ಮೈಸೂರು ಪ್ಯಾಸೆಂಜರ್ (56215) ರೈಲು ಹೊಳೆನರಸಿಪುರ ಹಾಗೂ ಮಾವಿನಕೆರೆ ಮಧ್ಯೆ 30 ನಿಮಿಷ ನಿಲುಗಡೆಗೊಳ್ಳುವುದು.
ಜುಲೈ 5ರಿಂದ ಜುಲೈ23ರವರೆಗೆ ಮೈಸೂರು-ತಾಳಗುಪ್ಪ (56276) ಪ್ಯಾಸೆಂಜರ್ ರೈಲು ಮಾವಿನಕೆರೆ-ಹಾಸನ ಮಧ್ಯೆ 45 ನಿಮಿಷ ನಿಲುಗಡೆಗೊಳ್ಳುವುದು. ಅದೇ ರೀತಿ ಜುಲೈ 5ರಿಂದ ಜುಲೈ 23ರವರೆಗೆ ಯಶವಂತಪುರ-ಮೈಸೂರು (56215) ಪ್ಯಾಸೆಂಜರ್ ರೈಲು ಮಾವಿನಕೆರೆ-ಹಾಸನ ಮಧ್ಯೆ 45 ನಿಮಿಷ ನಿಲುಗಡೆಗೊಳ್ಳಲಿದೆ.
ಎಲ್‌ಎಚ್‌ಬಿ ಅಳವಡಿಕೆ: ಬೆಂಗಳೂರು ನಗರ-ಹಜೂರ್ ಸಾಹಿಬ್ ನಾಂದೇಡ ಎಕ್ಸ್‌ಪ್ರೆಸ್ (16593/16594) ಎಕ್ಸ್‌ಪ್ರೆಸ್ ರೈಲಿನ ಮೂರು ರೇಕ್‌ಗಳಲ್ಲಿ 1ರೇಕ್‌ಗೆ ಸಾಂಪ್ರದಾಯಿಕ ಕೋಚ್‌ಗಳ ಬದಲಾಗಿ ಲಿಂಕ್ ಹಾಫ್‌ಮನ್ ಬುಷ್ (ಎಲ್‌ಎಚ್‌ಬಿ) ರೇಕ್ ಅಳವಡಿಸಲಾಗುವುದು.
ಬೆಂಗಳೂರಿನಿಂದ ಮೇ 7, 10, 13, 16, 19, 22, 25, 28, 31, ಜೂನ್3, 6, 9, 12, 15, 18, 21,24 ಹಾಗೂ ಜೂನ್ 27ರಂದು; ಹಜೂರ್ ಸಾಹಿಬ್ ನಾಂದೇಡದಿಂದ ಮೇ 9, 12, 15, 18, 21, 24, 27, 30, ಜುಲೈ 2, 5, 8, 11, 14, 17, 20, 23, 26 ಹಾಗೂ ಜುಲೈ 29ರಂದು ರೇಕ್ ಅಳವಡಿಸಲಾಗುವುದು.
ದರ್ಭಾಂಗ-ಮೈಸೂರು (12577/12578) ಬಾಗ¾ತಿ ವೀಕ್ಲಿ ಎಕ್ಸ್‌ಪ್ರೆಸ್ ರೈಲಿಗೆ ದರ್ಭಾಂಗದಿಂದ ಸೆಪ್ಟೆಂಬರ್ 3ರಿಂದ ಹಾಗೂ ಮೈಸೂರಿನಿಂದ ಸೆಪ್ಟೆಂಬರ್ 7ರಿಂದ ಎಲ್‌ಎಚ್‌ಬಿ ರೇಕ್ ಜೋಡಿಸಲಾಗುವುದು.
ರೈಲು ಸೇವೆ ರದ್ದು: ರೇಕ್ ಕಾರಣದಿಂದ ಮೇ 7ರಂದು ಹೌರಾದಿಂದ ಹೊರಡುವ ಹೌರಾ-ಯಶವಂತಪುರ (22887) ಹಮ್‌ಸಫರ್ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದುಪಡಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ
ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ
ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ
ಕಪ್ಪತ್ತಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರು ಎಚ್ಚರವಹಿಸಲು ಅರಣ್ಯ ಅಧಿಕಾರಿಗಳ ಸೂಚನೆ
ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಗಳಿಂದ ದಾಳಿ ಯತ್ನ: ಓರ್ವನ ಸೆರೆ, ಇನ್ನೋರ್ವ ಪರಾರಿ