ಕುಡಿಯುವ ನೀರು ಪೂರೈಕೆಯಲ್ಲಿ ನ್ಯೂನತೆ

ಸಂಪುಟ ಸಭೆಯಲ್ಲಿ ಸಚಿವರಿಂದ ಪ್ರಸ್ತಾಪ

Team Udayavani, May 10, 2019, 6:05 AM IST

Tanker-water-supply,

ಸಾಂದರ್ಭಿಕ ಚಿತ್ರ.

ಬೆಂಗಳೂರು: ತೀವ್ರ ಬರದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿರುವ ಗ್ರಾಮಗಳಿಗೆ ಟ್ಯಾಂಕರ್‌ ಹಾಗೂ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಕೆಗೆ ಸರ್ಕಾರ ಕ್ರಮ ಕೈಗೊಂಡಿದ್ದರೂ ಕೆಲವೆಡೆ ನ್ಯೂನತೆಗಳಾಗಿರುವ ಬಗ್ಗೆ ಹಲವು ಸಚಿವರು ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದ್ದು, ತೀವ್ರ ಚರ್ಚೆ ನಡೆದಿದೆ.


ಮುಖ್ಯವಾಗಿ ನೀರಿನ ತೀವ್ರ ಅಭಾವ ಸೃಷ್ಟಿಯಾದರೂ ಟ್ಯಾಂಕರ್‌ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸುವಲ್ಲಿ ವಿಳಂಬ. ಗ್ರಾಮಗಳಿಗೆ ಅಗತ್ಯ ಪ್ರಮಾಣದಲ್ಲಿ ಟ್ಯಾಂಕರ್‌ ನೀರು ಹರಿಸದಿರುವುದು. ಟ್ಯಾಂಕರ್‌ ಸೇವೆ ಕಲ್ಪಿಸಲು ವಿಳಂಬವಾಗುತ್ತಿರುವ ಬಗ್ಗೆ ಹಲವು ಸಚಿವರು ಪ್ರಸ್ತಾಪಿಸಿದರು. ವಿಸ್ತೃತ ಚರ್ಚೆ ಬಳಿಕ ರಾಜ್ಯದ ಯಾವುದೇ ಪ್ರದೇಶದಲ್ಲೂ ಕುಡಿಯುವ ನೀರಿನ ಅಭಾವ ತಲೆದೋರದಂತೆ ಹಾಗೂ ಅಗತ್ಯ ಪ್ರಮಾಣದಲ್ಲಿ ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು. ಮುಖ್ಯವಾಗಿ ನಾಲ್ಕು ಅಂಶಗಳ ಕುರಿತು ನಿರ್ದೇಶನ ನೀಡಲು ತೀರ್ಮಾನಿಸಲಾಯಿತು.

ಎರಡು ದಿನದಲ್ಲಿ ಟ್ಯಾಂಕರ್‌ ವ್ಯವಸ್ಥೆ
ಕುಡಿಯುವ ನೀರಿಗೆ ತೀವ್ರ ಅಭಾವ ತಲೆದೋರಿರುವ ಕಡೆ ನಿರೀಕ್ಷಿತ ಮಟ್ಟದಲ್ಲಿ ತುರ್ತಾಗಿ ನೀರಿನ ವ್ಯವಸ್ಥೆ ಕಲ್ಪಿಸುವ ಕೆಲಸ ನಡೆಯುತ್ತಿಲ್ಲ ಎಂದು ಸಚಿವರು ದೂರಿದರು. ಹಾಗಾಗಿ, ಸಮಸ್ಯೆ ಕಾಣಿಸಿಕೊಂಡ ಎರಡು ದಿನದಲ್ಲಿ ಟ್ಯಾಂಕರ್‌ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂಬುದಾಗಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮತ್ತೂಮ್ಮೆ ಸೂಚನೆ ನೀಡಲು ನಿರ್ಧಾರ.
– ಕೆಲ ಗ್ರಾಮಗಳಿಗೆ ನೀರು ಪೂರೈಕೆ ವ್ಯವಸ್ಥೆಯಿದ್ದರೂ ಅಗತ್ಯವಿರುವಷ್ಟು ಟ್ಯಾಕರ್‌ ನೀರು ಪೂರೈಸುತ್ತಿಲ್ಲವೆಂದು ಕೆಲ ಸಚಿವರು ಪ್ರಸ್ತಾಪಿಸಿದರು. ಅಗತ್ಯಬಿದ್ದರೆ ಮಾನದಂಡಗಳನ್ನು ಸಡಿಲಿಸಿ ಜನರಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ನೀರು ಪೂರೈಸಲು ಹೆಚ್ಚುವರಿ ಟ್ಯಾಂಕರ್‌ ಬಳಕೆಗೆ ಅವಕಾಶ ನೀಡುವ ಸಂಬಂಧ ಮತ್ತೂಮ್ಮೆ ಸೂಕ್ತ ಸೂಚನೆ ನೀಡಲು ತೀರ್ಮಾನ.
– ಟ್ಯಾಂಕರ್‌ ನೀರು ಪೂರೈಕೆಗೆ ಜಿಲ್ಲಾಧಿಕಾರಿಗಳಿಂದ ಮಂಜೂರಾತಿ ಪಡೆದು ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆಯೂ ಚರ್ಚೆ ನಡೆಯಿತು. ಹಾಗಾಗಿ, ಜಿಲ್ಲಾಧಿಕಾರಿ ಹಂತದಿಂದ ತಹಶೀಲ್ದಾರ್‌ ಹಂತದಲ್ಲೇ ಟ್ಯಾಂಕರ್‌ ನೀರು ಹಂಚಿಕೆಗೆ ತೀರ್ಮಾನ ಕೈಗೊಳ್ಳಲು ಅನುಮತಿ ನೀಡಿ ಸೂಚನೆ ನೀಡಲು ತೀರ್ಮಾನವಾಗಿದೆ.
– ಗ್ರಾಮಗಳಿಗೆ ನೀರು ಪೂರೈಸುತ್ತಿರುವ ಟ್ಯಾಂಕರ್‌ಗಳಿಗೆ ಹಣ ಪಾವತಿ ವಿಳಂಬವಾಗುತ್ತಿರುವ ಬಗ್ಗೆಯೂ ಸಚಿವರು ಗಮನ ಸೆಳೆದರು. ತಕ್ಷಣವೇ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ತ್ವರಿತವಾಗಿ ಹಣ ಪಾವತಿಗೆ ಸೂಚಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು.

ಟಾಪ್ ನ್ಯೂಸ್

shivamogga

Shimoga; ವಾಲ್ಮೀಕಿನಿಗಮದ ಚಂದ್ರಶೇಖರ್ ಆತ್ಮಹತ್ಯೆ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Chirathe

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಪೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

protest

BJP protest: ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

15-subrahmanya

ರಾಜ್ಯ ಸರಕಾರ ಜನಹಿತ ಮರೆತಿದೆ- ಕುಕ್ಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ವೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಪೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

ಹೆಣ್ಣು ಮಗುವಿಗೆ ಜನ್ಮ ನೀಡಿ ಮಹಿಳೆ ಮೃತ್ಯು… ಆಸ್ಪತ್ರೆ ಮುಂದೆ ಕುಟುಂಬಸ್ಥರ ಪ್ರತಿಭಟನೆ

ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಮಹಿಳೆ ಮೃತ್ಯು.. ಆಸ್ಪತ್ರೆ ಮುಂದೆ ಕುಟುಂಬಸ್ಥರ ಪ್ರತಿಭಟನೆ

Shobha

Lokasabha Poll: ಎಸ್‌ಟಿಎಸ್‌ ಕ್ಷೇತ್ರದಲ್ಲಿ ಲೀಡ್‌ ಕೊಟ್ಟು ಪಾಠ ಕಲಿಸಿದ್ದೀರಿ- ಶೋಭಾ

Parappana ಅಗ್ರಹಾರದಲ್ಲಿ ಸಪ್ಪೆ ಮುಖದಲ್ಲಿ ಎರಡು ದಿನ ಕಳೆದ “ದಾಸ’!

Parappana ಅಗ್ರಹಾರದಲ್ಲಿ ಸಪ್ಪೆ ಮುಖದಲ್ಲಿ ಎರಡು ದಿನ ಕಳೆದ “ದಾಸ’!

MUST WATCH

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

ಹೊಸ ಸೇರ್ಪಡೆ

shivamogga

Shimoga; ವಾಲ್ಮೀಕಿನಿಗಮದ ಚಂದ್ರಶೇಖರ್ ಆತ್ಮಹತ್ಯೆ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

20-uv-fusion

UV Fusion: ಪ್ರಕೃತಿ ಶಾಶ್ವತ ಮನುಷ್ಯನ ಕೊಡುಗೆ ನಿಮಿತ್ತ…

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

19-fusion

Father: ನಮಗಾಗಿ ದುಡಿದ ನಾಯಕ ನಮ್ಮ ಜನಕ

18-koratagere

Koratagere ಬಂದ್‌ಗೆ ಕರೆ ನೀಡಿದ ನೀರಾವರಿ ಸಂಘಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.