

Team Udayavani, Nov 3, 2018, 6:00 AM IST
ಬೆಂಗಳೂರು: ಸುಪ್ರೀಂಕೋರ್ಟ್ ಆದೇಶದಂತೆ ಸುರಕ್ಷತೆಯ ದೃಷ್ಟಿಯಿಂದ ಪಟಾಕಿ ಸಿಡಿಸಲು ಸೂಕ್ತ ಮಾರ್ಗಸೂಚಿಗಳನ್ನು ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ನೇತೃತ್ವದಲ್ಲಿ ಶುಕ್ರವಾರ ಗೃಹ ಹಾಗೂ ಒಳಾಡಳಿತ ಇಲಾಖೆಯ ಅಧಿಕಾರಿಗಳು ವಿಧಾನಸೌಧದಲ್ಲಿ ಸಭೆ ನಡೆಸಿ, ಪಟಾಕಿ ಸಿಡಿಸುವ ಕುರಿತಂತೆ ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಲು ನಿರ್ಧರಿಸಿದ್ದಾರೆ. ಸುಪ್ರೀಂ ಕೋರ್ಟ್ ಪಟಾಕಿ ಸಿಡಿಸುವ ಕುರಿತು ದಕ್ಷಿಣದ ರಾಜ್ಯಗಳೇ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡಿದ್ದರಿಂದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಅಧಿಕಾರಿಗಳು ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ್ ಭಾಸ್ಕರ್, ನ್ಯಾಯಾಲಯದ ಆದೇಶದಂತೆ ಗೃಹ ಹಾಗೂ ಒಳಾಡಳಿತ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಯಾವ ವೇಳೆ ಪಟಾಕಿ ಹಾರಿಸಬೇಕು ಎನ್ನುವ ಕುರಿತಂತೆ ಒಳಾಡಳಿತ ಇಲಾಖೆ ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಲಿದೆ ಎಂದು ಹೇಳಿದರು.
Ad
ದೇವನಹಳ್ಳಿ ಭೂಸ್ವಾಧೀನ ರದ್ದು ಬೆನ್ನಲ್ಲೇ ಉದ್ಯಮಿಗಳಿಗೆ ಆಂಧ್ರ ಪ್ರದೇಶ ಗಾಳ
ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ವಿವಾದ ತಾತ್ಕಾಲಿಕ ಅಂತ್ಯ
ಮಲ್ಟಿಪ್ಲೆಕ್ಸ್ ದುಬಾರಿ ಟಿಕೆಟ್‌ಗೆ ತಡೆ? ಕಾಯ್ದೆಗೆ ತಿದ್ದುಪಡಿ, ಆಕ್ಷೇಪಕ್ಕೆ ಆಹ್ವಾನ
ಮಂತ್ರಾಲಯದಲ್ಲಿ ಇನ್ನೊಂದು ವಸತಿ ಗೃಹ ನಿರ್ಮಾಣ: ಸಚಿವ ರಾಮಲಿಂಗಾ ರೆಡ್ಡಿ
ವರ್ಷಕ್ಕೊಮ್ಮೆ ಹೃದಯ ತಪಾಸಣೆ ಮಾಡಿ, ಸಾಕು; ಹೃದಯಾಘಾತದ ಆತಂಕ ಬೇಡ ಎಂದ ಸರಕಾರ
Hemant Malviya: ಮೋದಿ, ಆರ್‌ಎಸ್‌ಎಸ್ ಟೀಕೆ: ವ್ಯಂಗ್ಯಚಿತ್ರಕಾರನಿಗೆ ಮಧ್ಯಂತರ ಜಾಮೀನು
ದೇವನಹಳ್ಳಿ ಭೂಸ್ವಾಧೀನ ರದ್ದು ಬೆನ್ನಲ್ಲೇ ಉದ್ಯಮಿಗಳಿಗೆ ಆಂಧ್ರ ಪ್ರದೇಶ ಗಾಳ
ಕಂ ಬ್ಯಾಕ್ ಟೈಗರ್! ವಿವಿಧ ರಾಜ್ಯಗಳಲ್ಲಿನ ಕರಾವಳಿಯ ಐಟಿ ವೃತ್ತಿಪರರಿಗೆ ಆಹ್ವಾನ
Daily Horoscope ;ತಾವಾಗಿ ಒಲಿದು ಬಂದ ಅವಕಾಶಗಳ ಸದುಪ ಯೋಗ
ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ವಿವಾದ ತಾತ್ಕಾಲಿಕ ಅಂತ್ಯ
You seem to have an Ad Blocker on.
To continue reading, please turn it off or whitelist Udayavani.