ರಾಗಂಗೆ ಸಂಗಮ ಸಿರಿ ಸಾಹಿತ್ಯ ಶ್ರೇಷ್ಠ ಪ್ರಶಸ್ತಿ

Team Udayavani, Jul 4, 2018, 11:49 AM IST

ಅಮೀನಗಡ: ಪಟ್ಟಣದ ಪ್ರತಿಷ್ಠಿತ ಸಿರಿಗನ್ನಡ ಕಲೆ, ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ ಸಂಗಮಸಿರಿ ಸಾಹಿತ್ಯ ಶ್ರೇಷ್ಠ ಹಾಗೂ ವಸಂತಸಿರಿ ಸಂಗೀತ ಶ್ರೇಷ್ಠ ಪ್ರಶಸ್ತಿ-2018 ಪ್ರಕಟಿಸಲಾಗಿದೆ.

ಬೆಂಗಳೂರಿನ ವಿಜಯ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್‌ ಪ್ರಾಧ್ಯಾಪಕ, ಸಾಹಿತಿ ಡಾ. ರಾಜಶೇಖರ ಮಠಪತಿ(ರಾಗಂ) ಇವರಿಗೆ ಸಂಗಮ ಸಿರಿ ಸಾಹಿತ್ಯ ಶ್ರೇಷ್ಠ ಪ್ರಶಸ್ತಿ, ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಶ್ರೇಷ್ಠ ಹಿಂದೂಸ್ತಾನಿ ಸಂಗೀತಗಾರ ಅಂಬಯ್ಯ ನುಲಿ ಅವರಿಗೆ ವಸಂತಸಿರಿ ಸಂಗೀತ ಶ್ರೇಷ್ಠ ಪ್ರಶಸ್ತಿ ನೀಡಲು ಪ್ರತಿಷ್ಠಾನ ನಿರ್ಧರಿಸಿದೆ.

ಜುಲೈ ತಿಂಗಳಲ್ಲಿ ನಡೆಯುವ ಪ್ರತಿಷ್ಠಾನದ 6ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದೆಂದು ಪ್ರತಿಷ್ಠಾನ ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ಪ್ರಧಾನ ಕಾರ್ಯದರ್ಶಿ ಮಹಾದೇವ ಬಸರಕೋಡ ತಿಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ