ಪುಸ್ತಕ ನೋಡಿ ಉತ್ತರ ಬರಿ!​​​​​​​


Team Udayavani, Jul 9, 2018, 6:00 AM IST

school-book-s.jpg

ಬೆಂಗಳೂರು: ಪರೀಕ್ಷೆಯಲ್ಲಿ ಪುಸ್ತಕ ನೋಡಿ ಉತ್ತರ ಬರೆಯುವ ವ್ಯವಸ್ಥೆ ಬೇಕೋ, ಬೇಡವೋ? ಇಂಥದ್ದೊಂದು ಚರ್ಚೆ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ನಿರಂತರ ಸಮಗ್ರ ಮೌಲ್ಯಮಾಪನ (ಸಿಸಿಇ) ವ್ಯವಸ್ಥೆ ಜಾರಿಯಲ್ಲಿ ಇರುವಾಗಲೇ ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕ ನೋಡಿ ಪರೀಕ್ಷೆ ಬರೆಯುವ ವ್ಯವಸ್ಥೆ ಅನುಷ್ಠಾನಕ್ಕೆ ತರುವ ಬಗ್ಗೆ ಸ್ವತಃ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್‌. ಮಹೇಶ್‌ ಅವರೇ ಪ್ರಸ್ತಾಪಿಸಿ ಚರ್ಚೆಗೆ ದಾರಿಮಾಡಿಕೊಟ್ಟಿದ್ದಾರೆ.

ದೇಶದಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ಅನುಷ್ಠಾನದ ನಂತರ ಪರೀಕ್ಷೆಗೆ ಬದಲು ನಿರಂತರ ಸಮಗ್ರ ಮೌಲ್ಯಮಾಪನ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಈ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ನಿತ್ಯವೂ ಶೈಕ್ಷಣಿಕ ಹಾಗೂ ಶೈಕ್ಷಣೇತರ ಮೌಲ್ಯಮಾಪನಕ್ಕೆ ಒಳಪಡುತ್ತಾರೆ. 1ರಿಂದ 9ನೇ ತರಗತಿಯ ಪ್ರತಿ ವಿದ್ಯಾರ್ಥಿಯೂ ಶಿಕ್ಷಕರ ಕಣ್ಗಾವಲಿನಲ್ಲಿ ಇರುತ್ತಾರೆ ಮತ್ತು ಪ್ರತಿ ವಿದ್ಯಾರ್ಥಿಗಳನ್ನೂ ಪರೀಕ್ಷೆಗೆ ಒಳಪಡಿಸುವುದೂ ಇರುತ್ತದೆ. ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಇಲಾಖೆಯಿಂದಲೇ ಆಂತರಿಕ ಮೌಲ್ಯಮಾಪನ ಸಮೀಕ್ಷೆ ನಡೆಸಲಾಗುತ್ತದೆ. 3, 5 ಮತ್ತು 8ನೇ ತರಗತಿಯ ಮಕ್ಕಳಿಗೆ ಈ ರೀತಿಯ ಸಮೀಕ್ಷೆ ನಡೆಸಿ, ಅದರ ಫ‌ಲಿತಾಂಶದ ಆಧಾರದಲ್ಲಿ ಶೈಕ್ಷಣಿಕ ಗುಣಮಟ್ಟ ಅಳೆಯಲಾಗುತ್ತದೆ.

2017-18ನೇ ಸಾಲಿನಲ್ಲಿ ನಡೆದ 3,5 ಮತ್ತು 8ನೇ ತರಗತಿಯ ಆಂತರಿಕ ಮೌಲ್ಯ ಮಾಪನ ಸಮೀಕ್ಷೆಯಲ್ಲಿ ಕರ್ನಾಟಕ ಉತ್ತಮ ಸಾಧನೆಯನ್ನೂ ತೋರಿದೆ.

ಸಚಿವರು ತೆರೆದ ಪುಸ್ತಕ ಪರೀಕ್ಷೆಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಯಾವ ಮಾನದಂಡದಲ್ಲಿ ಪರೀಕ್ಷೆ ನಡೆಯಲಿದೆ ಮತ್ತು ಅದರಿಂದಾಗುವ ಅನುಕೂಲ,ಅನನೂಕುಲದ ಬಗ್ಗೆ ಎಲ್ಲಿಯೂ ಸ್ಪಷ್ಟಪಡಿಸಿಲ್ಲ. ತೆರೆದ ಪುಸ್ತಕ ಪರೀಕ್ಷೆ ಮಾಡುವಷ್ಟು ತಾಂತ್ರಿಕ ಮತ್ತು ವೈಜ್ಞಾನಿಕವಾಗಿ ಸರ್ಕಾರಿ ಶಾಲಾ ಶಿಕ್ಷಕರು ಸದೃಢರಾಗಿರುವ ಬಗ್ಗೆಯೂ ಸಚಿವರು ಮಾಹಿತಿ ಪಡೆದಿರುವ ಸಾಧ್ಯತೆ ಇಲ್ಲ. ತೆರೆದ ಪುಸ್ತಕ ಪರೀಕ್ಷೆ
ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ ಮಾಡಲು ಕಾರಣ ಏನು ಎಂಬುದನ್ನೂ ಸಚಿವರು ಸ್ಪಷ್ಟಪಡಿಸಿಲ್ಲ.

ಏನಿದು ತೆರೆದ ಪುಸ್ತಕ ಪರೀಕ್ಷೆ?
ಮೂರ್‍ನಾಲ್ಕು ವರ್ಷಗಳ ಹಿಂದೆ ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್‌ಇ) ಸಿಬಿಎಸ್‌ಇ ಪಠ್ಯಕ್ರಮದ ಎಲ್ಲ ಶಾಲೆಯ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ ಪರೀಕ್ಷೆ ಜಾರಿಗೆ ತಂದಿತ್ತು. ಪರಿಣಾಮಕಾರಿ ಫ‌ಲಿತಾಂಶ ನೀಡದ ಹಿನ್ನೆಲೆಯಲ್ಲಿ ರದ್ದು ಗೊಳಿಸಿ, ಹಳೇ ಪದ್ಧತಿಯನ್ನೇ ಈಗ ಅನುಸರಿಸುತ್ತಿದೆ. ನಿರ್ದಿಷ್ಟ ಕಾಲಮಿತಿಯಲ್ಲಿ ಪುಸ್ತಕ ನೋಡಿ ಉತ್ತರ ಬರೆಯುವುದು ಅಷ್ಟು ಸುಲಭವಲ್ಲ. ಇಂತಹ ವೈಜ್ಞಾನಿಕ ಪದ್ಧತಿಯನ್ನು ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಾಗಿ
ಅಳವಡಿಸಿಕೊಳ್ಳುತ್ತಾರೆ. ಪುಸ್ತಕ ಪೂರ್ತಿಯಾಗಿ ಓದಿ, ನೆನಪಿಟ್ಟುಕೊಳ್ಳಬಲ್ಲವರು ಮಾತ್ರ ಇದರಲ್ಲಿ ಸಫ‌ಲತೆ ಕಾಣಲು ಸಾಧ್ಯ ಎನ್ನುತ್ತಾರೆ ಶಿಕ್ಷಣ ತಜ್ಞರು.

ಬರವಣಿಗೆ ಪ್ರಗತಿ ಕಾಣುವುದು
2 ರಿಂದ 5ನೇ ತರಗತಿವರೆಗೆ ಮಕ್ಕಳನ್ನು ಭಯಮುಕ್ತರನ್ನಾಗಿ ಮಾಡಬಹುದಾಗಿದೆ. ನೆನಪು, ತರ್ಕಕ್ಕೂ ಮಹತ್ವ ವಿದೆ. 6ನೇ ತರಗತಿ ಬಳಿಕ ಕಂಠಪಾಠದ ಮೂಲಕ ಪರೀಕ್ಷೆ ಬರೆದರೆ ನೆನಪಿನ ಶಕ್ತಿ ಕುಂಠಿತವಾಗುವ ಸಾಧ್ಯತೆಯಿದೆ.
– ಡಿ.ಎಂ. ದಾನೋಜಿ, ಕಾರ್ಯದರ್ಶಿ, ಪ್ರೌಢ ಶಿಕ್ಷಣ
ಪರೀಕ್ಷಾ ಮಂಡಳಿ ಬೆಂಗಳೂರು.

ಸೃಜನಶೀಲತೆ ನಾಶ
ಪುಸ್ತಕ ನೋಡಿ ಪರೀಕ್ಷೆ ಬರೆಯುವುದರಿಂದ 1ರಿಂದ 5ನೇ ತರಗತಿಯ ಮಗುವಿನ ಸೃಜನಶೀಲತೆ ನಾಶವಾಗಲಿದೆ. ಮಗು ಓದು,ಬರೆಯುವುದರಿಂದ ವಂಚಿತವಾಗಲಿದೆ. ಕ್ರಿಯಾಶೀಲ ಮನಸ್ಸು ಬತ್ತಿ ಹೋಗುತ್ತದೆ.
– ಮಹಾಂತೇಶ ಮಲ್ಲನಗೌಡರ,
ಶಿಕ್ಷಣ ಚಿಂತಕರು, ಕೊಪ್ಪಳ

ಸಚಿವರು ತಿಳಿದಿರಬೇಕು
ಶಿಕ್ಷಣ ಸಚಿವರು ಈ ವಿಚಾರದಲ್ಲಿ ತಮ್ಮ ಸ್ಪಷ್ಟತೆ ಹೊಂದ ಬೇಕು. ಅವರ ಕಲ್ಪನೆ,ಅದು ಜಾರಿಯಾದರೆ ಆಗುವ ಬದಲಾವಣೆ, ಶಿಕ್ಷಣದಲ್ಲಿ ಸುಧಾರಣೆ ತರಲು ಸಹಾಯಕ ವಾಗುತ್ತದೆಯೇ ಎಂಬ ಚರ್ಚೆ ಆಗಲಿ.
– ಶಂಕರ ಹಲಗತ್ತಿ, ಶಿಕ್ಷಣ ತಜ್ಞ. ಧಾರವಾಡ

ಪುಸ್ತಕ ಓದಿ ಪರೀಕ್ಷೆ ಎದುರಿಸಲಿ
ಮಕ್ಕಳಿಗೆ ಜ್ಞಾನ, ವಿವೇಕ, ವಿವೇಚನೆ,ಜ್ಞಾಪಕ ಶಕ್ತಿ ಕಲಿಸುವುದು ಪರೀಕ್ಷೆಗಳ ಗುರಿ. ಪುಸ್ತಕ ನೋಡಿ ಪರೀಕ್ಷೆ ಬರೆದರೆ ಇದೆಲ್ಲ ಮಕ್ಕಳಲ್ಲಿ ಬರಲು ಸಾಧ್ಯವಿಲ್ಲ. ಪುಸ್ತಕ ನೋಡಿ ಪರೀಕ್ಷೆ ಬರೆ ಯುವುದಾದರೆ, ಶಾಲೆ- ಕಾಲೇಜು ಏಕೆ ಬೇಕು.
– ಡಾ.ವಿಜಯಕುಮಾರ ಕಟಗಿಹಳ್ಳಿಮಠ,
ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್‌

ಈಗಿನ ಸಿಸಿಎ ಪದ್ಧತಿಯನ್ನೇ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದರೆ ಸಾಕು. ಯಾವ ಪರೀಕ್ಷೆಯೂ ಬೇಕಾಗಿಲ್ಲ. ಶಿಕ್ಷಣ ಶಾಸOಉವೂ ಒಂದು ಶಿಸ್ತು. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ
ಸದೃಢರನ್ನಾಗಿಸಲು ಶಿಕ್ಷಕರಿಗೆ ತರಬೇತಿ ನೀಡಬೇಕು.
– ಡಾ.ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ

ಪುಸ್ತಕ ನೋಡಿ ಪರೀಕ್ಷೆ ಬರೆಯುವ ವ್ಯವಸ್ಥೆ ಜಾರಿಗೆ ಬರುವುದು ಸಾಧ್ಯವೇ ಇಲ್ಲ. ರಾಜಕೀಯ ವ್ಯಕ್ತಿಗಳು ಮಾತನಾಡುವ ಮೊದಲು ಸಾಧಕ-ಬಾಧಕ ನೋಡಿದರೆ ಉತ್ತಮ. ಇದರಿಂದ ಬಹಳ ದೊಡ್ಡ ಗೊಂದಲ, ಚರ್ಚೆಗಳು ಹುಟ್ಟಿಕೊಳ್ಳುತ್ತವೆ.
– ಡಾ| ಎಂ. ಮೋಹನ್‌ ಆಳ್ವ, ಶಿಕ್ಷಣ ತಜ್ಞರು, ಅಧ್ಯಕ್ಷ,
ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ, ಮೂಡಬಿದಿರೆ

ವಿನೂತನ ಪ್ರಯತ್ನ
ಶೈಕ್ಷಣಿಕ ಕ್ಷೇತ್ರದ ಸುಧಾರಣೆ ಪ್ರಯತ್ನ ಸ್ವಾಗತಾರ್ಹ. ಇಲಾಖೆಗಳಲ್ಲಿ ಉನ್ನತ ಹುದ್ದೆಗಳಿಗಾಗಿ ಪುಸ್ತಕ ನೋಡಿಯೇ ಪರೀಕ್ಷೆ ಬರೆಯುವ ಪದಟಛಿತಿ ಇದೆ. ಮಕ್ಕಳಿಗೆ ಅದು ಅನ್ವಯವಾದರೆ ತಪ್ಪಿಲ್ಲ. ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿ ಅಲ್ಲಿನ ಫಲಿತಾಂಶ ನೋಡಿಯೇ ಅದನ್ನು ಮುಂದುವರಿಸಬೇಕೆ ಬೇಡವೇ ಎಂದು ನಿರ್ಧರಿಸಲಾಗುತ್ತದೆ.
– ಹಫಿಜುಲ್ಲಾ, ಶಿಕ್ಷಣ ಪ್ರೇಮಿ, ರಾಯಚೂರು

ಶಿಕ್ಷಣದ ಮೇಲೆ ಪರಿಣಾಮ
ಮಕ್ಕಳ ಮನಸ್ಥಿತಿ ಹಾಗೂ ಪ್ರಾಥಮಿಕ ಹಂತದ ಶಿಕ್ಷಣದ ಜ್ಞಾನ ಇಲ್ಲದ ಹೆಚ್ಚಿನ ಓದಿನವರು ಶಿಕ್ಷಣ ಸಚಿವರಾದರೆ ಶೈಕ್ಷಣಿಕವಾಗಿ ಇಂಥ ಅವೈಜ್ಞಾನಿಕ ನಿರ್ಧಾರಗಳನ್ನೇ ಕೈಗೊಳ್ಳಲು ಸಾಧ್ಯ. ಪುಸ್ತಕ ನೋಡಿ ಬರೆಯುವುದು ಅಕ್ಷರಶಃ ಶುದ್ಧೀಕರಣಕ್ಕೆ ಯೋಗ್ಯವೇ ಹೊರತು, ಅದೇ ಇಡೀ ಶಿಕ್ಷಣ
ಅಲ್ಲ. ಯಾವುದೇ ಮಗು ಓದದೇ ಬರೆಯಲಾರದು.
– ಈಶ್ವರಚಂದ್ರ ಚಿಂತಾಮಣಿ, ವಿಜಯಪುರ, ಮಾಜಿ
ಸದಸ್ಯರು, ಪಠ್ಯ ಪುಸ್ತಕ ರಚನಾ ಸಮಿತಿ

ಸರಿಯಾಗಲಾರದು
ಪುಸ್ತಕ ನೋಡಿ ಪರೀಕ್ಷೆ ಬರೆಸುವ ಪದ್ಧತಿಯ ಸಾಧಕ-ಬಾಧಕ ಚರ್ಚೆ ಆಗ ಬೇಕು. ಪುಸ್ತಕ ನೋಡಿ ಪರೀಕ್ಷೆ ಬರೆಸುವ ಪದ್ಧತಿ ಸರಿಯಾಗಲಾರದು ಎನ್ನುವುದು ನನ್ನ ಅಭಿಪ್ರಾಯ. 
– ಬಸವರಾಜ ಹೊರಟ್ಟಿ,
ಹಂಗಾಮಿ ಸಭಾಪತಿ

ನಕಲಿಗೆ ಅವಕಾಶ
ಪ್ರಾಥಮಿಕ ಹಂತದಲ್ಲಿ ಮಕ್ಕಳು ಈ ಪದ್ಧತಿಗೆ ಒಗ್ಗಿಕೊಳ್ಳಬಹುದು. ಆದರೆ, ಈ ಹಂತದಲ್ಲಿ ಕಷ್ಟ. ಹೊಸ ವ್ಯವಸ್ಥೆ ಜಾರಿಗೆ ತಂದರೆ ನಕಲು ಮಾಡಲು ಅವಕಾಶ ಮಾಡಿ ಕೊಟ್ಟಂತೆ ಆಗುತ್ತದೆ.
– ಡಾ.ಎಂ.ಜಿ. ಈಶ್ವರಪ್ಪ,
ವಿಶ್ರಾಂತ ಪ್ರಾಂಶುಪಾಲ, ಶಿಕ್ಷಣ ತಜ್ಞ

ಚಿಂತನೆ ಸಂತೋಷದಾಯಕ
ಪುಸ್ತಕ ನೋಡಿ ಪರೀಕ್ಷೆ ಬರೆಯುವ ಚಿಂತನೆ ಸಂತೋಷದಾಯಕ. ಆದರೆ ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳ ಜ್ಞಾಪಕಶಕ್ತಿ ಬೆಳೆಯಬೇಕಿದ್ದು, ನಂತರದಲ್ಲಿ ಅವರ ವಿಶ್ಲೇಷಣಾತ್ಮಕ ಪರೀಕ್ಷೆ ಆಗಬೇಕಿದೆ.
–  ಪ್ರೊ.ಎಂ.ಕೃಷ್ಣೇಗೌಡ, ನಿವೃತ್ತ
ಪ್ರಾಂಶುಪಾಲರು, ಮೈಸೂರು

ಟಾಪ್ ನ್ಯೂಸ್

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

6-uv-fusion

UV Fusion: ಮಿತಿಯೊಳಗಿನ ಬದುಕು ನೆನಪಾದಾಗ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.