![court](https://www.udayavani.com/wp-content/uploads/2024/07/court-7-415x231.jpg)
ಎಚ್.ಡಿ.ದೇವೇಗೌಡರ ಜತೆ ಸೋನಿಯಾ ಗಾಂಧಿ ಸಂವಾದ
Team Udayavani, May 23, 2020, 6:48 AM IST
![samvada](https://www.udayavani.com/wp-content/uploads/2020/05/samvada-620x348.jpg)
ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ದೇಶದ ಜನತೆಯ ಹಿತಾಸಕ್ತಿಗಾಗಿ ಪ್ರತಿಪಕ್ಷಗಳು ಒಗ್ಗೂಡಿ ಹೋರಾಟ ನಡೆಸಬೇಕು. ಕೋವಿಡ್ 19 ಸಂಕಷ್ಟದಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಲಹೆ ನೀಡಿದ್ದಾರೆ.
ಕೋವಿಡ್ 19 ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಕೈಗೊಳ್ಳಬೇಕಿರುವ ತೀರ್ಮಾನ ಹಾಗೂ ರೂಪಿಸಬೇಕಾಗಿರುವ ಕಾರ್ಯಕ್ರಮಗಳ ಕುರಿತು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಗಾಂಧಿ ನಡೆಸಿದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ನಿಮ್ಮ ನೇತೃತ್ವದಲ್ಲಿ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ನಮ್ಮ ಪಕ್ಷದ ಸಹಮತ ಇದೆ ಎಂದು ಹೇಳಿದರು. ಗುಜರಾತ್, ತಮಿಳುನಾಡು, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಲ್ಲಿನ ಪರಿಸ್ಥಿತಿ ನೋಡಿದರೆ ಆತಂಕ ಮೂಡಿಸುವಂತಿದೆ.
ಇದು ತಕ್ಷಣಕ್ಕೆ ನಿಲ್ಲುವಂತೆಯೂ ಇಲ್ಲ. ದೇಶದ ಜನತೆ ಹಾಗೂ ಎಲ್ಲ ವಲಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ, ಎಲ್ಲವನ್ನೂ ಕೂಲಂಕಶವಾಗಿ ಚರ್ಚಿಸಿ ಪರಿಹಾರೋಪಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ನಾವು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ ಅವರು ದೇವೇಗೌಡರ ಜತೆ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
![court](https://www.udayavani.com/wp-content/uploads/2024/07/court-7-415x231.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
![robbers](https://www.udayavani.com/wp-content/uploads/2024/07/robbers-1-150x89.jpg)
Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
![Kohli IPL 2024](https://www.udayavani.com/wp-content/uploads/2024/07/Kohli-IPL-2024-150x103.jpg)
Champions Trophy; ಕೊಹ್ಲಿ ಪಾಕ್ನಲ್ಲಿ ಆಡಲಿ: ಯೂನಿಸ್ ಖಾನ್
![1-tatoo](https://www.udayavani.com/wp-content/uploads/2024/07/1-tatoo-150x84.jpg)
Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!
![1-wewqewq](https://www.udayavani.com/wp-content/uploads/2024/07/1-wewqewq-2-150x98.jpg)
Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.