Covid-19 Report: ರಾಜ್ಯದಲ್ಲಿ 2627 ಸೋಂಕು ಪ್ರಕರಣ ದಾಖಲು ; 71 ಸಾವು ಹಾಗೂ 693 ಚೇತರಿಕೆ

ಬೆಂಗಳೂರು ನಗರ 1525, ದಕ್ಷಿಣ ಕನ್ನಡ 196, ಧಾರವಾಡ 129, ಯಾದಗಿರಿ 120 ಮತ್ತು ಉಡುಪಿ 43 ಪ್ರಕರಣ ಪತ್ತೆ

Team Udayavani, Jul 12, 2020, 8:17 PM IST

Covid-19 Report: ರಾಜ್ಯದಲ್ಲಿ 2627 ಸೋಂಕು ಪ್ರಕರಣ ದಾಖಲು ; 71 ಸಾವು ಹಾಗೂ  693 ಚೇತರಿಕೆ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನೇ ದಿನೇ ಏರುಗತಿಯನ್ನು ಕಾಣುತ್ತಿದೆ.

ಶನಿವಾರ ಸಾಯಂಕಾಲದಿಂದ ಭಾನುವಾರ ಸಾಯಂಕಾಲದವರೆಗಿನ ಕೋವಿಡ್ 19 ಪ್ರಕರಣಗಳ ವರದಿ ಇದೀಗ ಲಭ್ಯವಾಗಿದ್ದು ಈ ಅವಧಿಯಲ್ಲಿ 2627 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಹಾಗೂ ಇದೇ ಅವಧಿಯಲ್ಲಿ ರಾಜ್ಯಾದ್ಯಂತ ಈ ಸೋಂಕಿಗೆ ಒಟ್ಟು 71 ಜನರು ಮೃತಪಟ್ಟಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಕೋವಿಡ್ 19 ಕಾಟ ಮಿತಿ ಮೀರಿದೆ. ಇಂದೂ ಸಹ ಇಲ್ಲೇ ಅತೀ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದು, ಈ ಸಂಖ್ಯೆ 1525 ಆಗಿರುವುದು ಕಳವಳಕಾರಿಯಾಗಿದೆ. ಆ ಬಳಿಕದ ಸ್ಥಾನದಲ್ಲಿ ದಕ್ಷಿಣ ಕನ್ನಡ (196), ಧಾರವಾಡ (129), ಯಾದಗಿರಿ (120) ಜಿಲ್ಲೆಗಳಿವೆ.

ಇಂದು ರಾಜ್ಯದಲ್ಲಿ ಕೋವಿಡ್ 19 ಸೋಂಕಿಗೆ ಒಟ್ಟು 71 ಜನ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಈ ಮಹಾಮಾರಿಗೆ ಬಲಿಯಾದವರ ಸಂಖ್ಯೆ 684ಕ್ಕೆ ಏರಿಕೆ ಆಗಿದೆ.

ಇಂದು ರಾಜ್ಯಾದ್ಯಂತ ಒಟ್ಟು 693 ಕೋವಿಡ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ರಾಜ್ಯದಲ್ಲಿ ಇಂದಿನವರೆಗೆ ಒಟ್ಟು 38843 ಕೋವಿಡ್ 19 ಸೋಂಕು ಪ್ರಕರಣಗಳು ದಾಖಲುಗೊಂಡಿದೆ. ಮತ್ತು ಇವರಲ್ಲಿ 15409 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೂ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 22746 ಇದೆ.

ರಾಜ್ಯದಲ್ಲಿ ಒಟ್ಟಾರೆಯಾಗಿ ಇದುವರೆಗೆ 684 ಜನ ಕೋವಿಡ್ 19 ಸೋಂಕಿನ ಕಾರಣದಿಂದ ಮೃತಪಟ್ಟಿದ್ದಾರೆ. ಹಾಗೂ 4 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 532 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 1525 ಪಾಸಿಟಿವ್ ಪ್ರಕರಣ ಸೇರಿದಂತೆ ದಕ್ಷಿಣ ಕನ್ನಡ – 196, ಧಾರವಾಡ – 129, ಯಾದಗಿರಿ – 120, ಕಲಬುರಗಿ – 79, ಬಳ್ಳಾರಿ – 63, ಬೀದರ್ – 62, ರಾಯಚೂರು – 48, ಉಡುಪಿ – 43, ಮೈಸೂರು – 42, ಶಿವಮೊಗ್ಗ – 42, ಚಿಕ್ಕಬಳ್ಳಾಪುರ – 39, ಹಾಸನ – 31, ಕೊಪ್ಪಳ – 27, ತುಮಕೂರು – 26, ಕೋಲಾರ – 24, ದಾವಣಗೆರೆ – 20, ಬೆಂಗಳೂರು ಗ್ರಾಮಾಂತರ – 19, ಕೊಡಗು – 15, ಗದಗ – 14, ಚಾಮರಾಜನಗರ – 13, ಉತ್ತರ ಕನ್ನಡ – 12, ಹಾವೇರಿ – 12, ಚಿಕ್ಕಮಗಳೂರು – 10 ಸೇರಿದಂತೆ ರಾಜ್ಯದ ಒಟ್ಟು 24 ಜಿಲ್ಲೆಗಳಲ್ಲಿ ಇಂದು ಎರಡಂಕೆಯ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಇಂದು ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 45 ಸೋಂಕಿತರು ಮೃತಪಟ್ಟಿದ್ದಾರೆ. ಇನ್ನುಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5, ಮೈಸೂರು, ಹಾಸನ, ದಾವಣಗೆರೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ತಲಾ 3, ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ 2 ಮತ್ತು ಧಾರವಾಡ, ಕೊಪ್ಪಳ, ತುಮಕೂರು, ಚಾಮರಾಜನಗರ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ 1 ಸಾವು ಸಂಭವಿಸಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು ಕೋವಿಡ್ 19 ಸೋಂಕಿತ ಪ್ರಕರಣಗಳ ಸಂಖ್ಯೆ 18387ಕ್ಕೆ ಏರಿಕೆಯಾಗಿದ್ದು, 4045 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 14067ಕ್ಕೆ ಏರಿಕೆಯಾಗಿದೆ. ಇಲ್ಲಿ ಕೋವಿಡ್ ಸಂಬಂಧಿತ 274 ಸಾವು ಸಂಭವಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 2222ಕ್ಕೆ ಏರಿಕೆಯಾಗಿದ್ದು ಇವರಲ್ಲಿ 760 ಸೋಂಕಿತರು ಗುಣಮುಖರಾಗಿದ್ದಾರೆ. 1419 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಹಾಗೂ ಇಲ್ಲಿ ಕೋವಿಡ್ ಸಂಬಂಧಿತ 41 ಸಾವು ಸಂಭವಿಸಿದೆ.

ಕಲಬುರಗಿಯಲ್ಲಿ ಒಟ್ಟು 2103 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 1477 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 590 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಹಾಗೂ ಇಲ್ಲಿ 36 ಜನರು ಈ ಸೋಂಕಿಗೆ ಮೃತಪಟ್ಟಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 1682 ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು 992 ಜನ ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು 648 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಇಲ್ಲಿ ಕೋವಿಡ್ 19 ಸಂಬಂಧಿತ 42 ಸಾವು ಸಂಭವಿಸಿದೆ.

ಯಾದಗಿರಿ ಜಿಲ್ಲೆಯಲ್ಲಿ 1288 ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು 894 ಜನ ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು 393 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಇಲ್ಲಿ ಕೋವಿಡ್ 19 ಸಂಬಂಧಿತ 1 ಸಾವು ಸಂಭವಿಸಿದೆ.

ಬೀದರ್ ಜಿಲ್ಲೆಯಲ್ಲಿ 1038 ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು 612 ಜನ ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು 373 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿದರೆ ರಾಜ್ಯದಲ್ಲೇ ಇಲ್ಲಿ ಕೋವಿಡ್ 19 ಸಂಬಂಧಿತ ಎರಡನೇ ಅತೀ ಹೆಚ್ಚು ಅಂದರೆ 53 ಸಾವು ಸಂಭವಿಸಿದೆ.

ಧಾರವಾಡ ಜಿಲ್ಲೆಯಲ್ಲಿ 1088 ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು 382 ಜನ ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು 673 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಇಲ್ಲಿ ಕೋವಿಡ್ 19 ಸಂಬಂಧಿತ 33 ಸಾವು ಸಂಭವಿಸಿದೆ.

ಟಾಪ್ ನ್ಯೂಸ್

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

cm-bommai

ಮೊಟ್ಟೆ ಪ್ರಕರಣ: ಸಿದ್ದರಾಮಯ್ಯ ಜತೆ ಮಾತಾಡಿದ ಸಿಎಂ ಬೊಮ್ಮಾಯಿ

DKShi

ನಮ್ಮ ಕಾರ್ಯಕರ್ತರಿಗೂ ಕರೆ ನೀಡಬೇಕಾಗುತ್ತದೆ: ಡಿ.ಕೆ. ಶಿವಕುಮಾರ್ ಎಚ್ಚರಿಕೆ

sunil kumar

ಸಿದ್ದರಾಮಯ್ಯ ಅವರು ಸೆಲ್ಯೂಲರ್ ಜೈಲಿಗೆ ಒಮ್ಮೆ ಹೋಗಿ ಬರಬೇಕು: ಸಚಿವ ಸುನಿಲ್ ಕುಮಾರ್

14resign

ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ರಾಜಿನಾಮೆ

1-sds-adad

ಧರ್ಮ ಒಡೆಯುವ ಉದ್ದೇಶವಿರಲಿಲ್ಲ: ರಂಭಾಪುರಿ ಶ್ರೀಗಳ ಬಳಿ ಸಿದ್ದರಾಮಯ್ಯ ಪಶ್ಚಾತ್ತಾಪ

1-adsdad

ಸಕಲೇಶಪುರ: ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ ಹಿಡಿದ ಉರಗ ತಜ್ಞ ಸ್ನೇಕ್ ಫರ್ಹಾನ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cm-bommai

ಮೊಟ್ಟೆ ಪ್ರಕರಣ: ಸಿದ್ದರಾಮಯ್ಯ ಜತೆ ಮಾತಾಡಿದ ಸಿಎಂ ಬೊಮ್ಮಾಯಿ

DKShi

ನಮ್ಮ ಕಾರ್ಯಕರ್ತರಿಗೂ ಕರೆ ನೀಡಬೇಕಾಗುತ್ತದೆ: ಡಿ.ಕೆ. ಶಿವಕುಮಾರ್ ಎಚ್ಚರಿಕೆ

sunil kumar

ಸಿದ್ದರಾಮಯ್ಯ ಅವರು ಸೆಲ್ಯೂಲರ್ ಜೈಲಿಗೆ ಒಮ್ಮೆ ಹೋಗಿ ಬರಬೇಕು: ಸಚಿವ ಸುನಿಲ್ ಕುಮಾರ್

1-sds-adad

ಧರ್ಮ ಒಡೆಯುವ ಉದ್ದೇಶವಿರಲಿಲ್ಲ: ರಂಭಾಪುರಿ ಶ್ರೀಗಳ ಬಳಿ ಸಿದ್ದರಾಮಯ್ಯ ಪಶ್ಚಾತ್ತಾಪ

10-karge

ಆರ್ ಎಸ್ ಎಸ್ ಪಕ್ಕಾ ದೇಶದ್ರೋಹಿ ಸಂಘಟನೆ : ಪ್ರಿಯಾಂಕ್ ಖರ್ಗೆ

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

cm-bommai

ಮೊಟ್ಟೆ ಪ್ರಕರಣ: ಸಿದ್ದರಾಮಯ್ಯ ಜತೆ ಮಾತಾಡಿದ ಸಿಎಂ ಬೊಮ್ಮಾಯಿ

DKShi

ನಮ್ಮ ಕಾರ್ಯಕರ್ತರಿಗೂ ಕರೆ ನೀಡಬೇಕಾಗುತ್ತದೆ: ಡಿ.ಕೆ. ಶಿವಕುಮಾರ್ ಎಚ್ಚರಿಕೆ

sunil kumar

ಸಿದ್ದರಾಮಯ್ಯ ಅವರು ಸೆಲ್ಯೂಲರ್ ಜೈಲಿಗೆ ಒಮ್ಮೆ ಹೋಗಿ ಬರಬೇಕು: ಸಚಿವ ಸುನಿಲ್ ಕುಮಾರ್

14resign

ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ರಾಜಿನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.