Congress ಸರಕಾರದಿಂದ ತುಘಲಕ್‌ ದರ್ಬಾರ್‌: ಬಿಎಸ್‌ವೈ

ಶಾಂತಿಯ ತೋಟವಾಗಿದ್ದ ರಾಜ್ಯ ಈಗ ಮತಾಂಧರ ಯುದ್ಧ ಭೂಮಿ ಎಂದ ಮಾಜಿ ಸಿಎಂ

Team Udayavani, Apr 21, 2024, 11:22 PM IST

Congress ಸರಕಾರದಿಂದ ತುಘಲಕ್‌ ದರ್ಬಾರ್‌: ಬಿಎಸ್‌ವೈ

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಕಾಂಗ್ರೆಸ್‌ ಸರಕಾರದಿಂದ ತುಘಲಕ್‌ ದರ್ಬಾರ್‌ ನಡೆಯುತ್ತಿದೆ ಎಂದು ಮಾಜಿಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿಸಿದ್ದಾರೆ.

ಜನರು ಬದುಕಿನ ಬಗ್ಗೆ ಗ್ಯಾರಂಟಿ ಕಳೆದುಕೊಂಡಿದ್ದಾರೆ. ಈ ಸರಕಾರದಲ್ಲಿ ಶಾಂತಿ, ನೀರು, ಮಹಿಳೆಯರ ಮಾನಪ್ರಾಣ, ರೈತರ ಬದುಕು, ಭಾವನೆ ಯಾವುದಕ್ಕೂ ಗ್ಯಾರಂಟಿ ಇಲ್ಲದಂತಾಗಿದೆ. ಗಲಭೆಕೋರರು, ಭಯೋತ್ಪಾದಕರಿಗೆ ರಕ್ಷಣೆಯ ಗ್ಯಾರಂಟಿ ಸಿಗುತ್ತಿದೆ. ವಿದ್ಯುತ್‌ ದರ ಏರಿಕೆಯ ಗ್ಯಾರಂಟಿ, ವಿವಿಧ ತೆರಿಗೆ ಹೆಚ್ಚಳದ ಗ್ಯಾರಂಟಿ ನೀಡುತ್ತಿದೆ ಎಂದು ದೂರಿದರು.

ರವಿವಾರ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮತಾಂಧ ಶಕ್ತಿ ಬೆಳೆಸುವುದನ್ನೇ ಆಡಳಿತದ ಭಾಗವಾಗಿ ಸಿದ್ದರಾಮಯ್ಯ ಸರಕಾರ ಮಾಡಿಕೊಂಡಂ ತಿದೆ. ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವನ್ನು ಒಂದೇ ವರ್ಷದಲ್ಲಿ ಮತಾಂಧರ ಯುದ್ಧಭೂಮಿಯಾಗಿ ಪರಿವರ್ತಿಸಿದೆ ಎಂದರು.

ಸಿದ್ದರಾಮಯ್ಯ ಸರಕಾರದಲ್ಲಿ ಕನ್ನಡಿಗರು ಬದುಕಿನ ಗ್ಯಾರಂಟಿಗಳನ್ನು ಕಳೆದುಕೊಂಡಿದ್ದಾರೆ. ಹುಬ್ಬಳ್ಳಿಯ ನೇಹಾ ಹಿರೇಮಠ ಅಮಾನುಷ ಹತ್ಯೆ ಆಗಿದೆ. ತನ್ನದೇ ಪಕ್ಷದ ಚುನಾಯಿತ ಪ್ರತಿನಿಧಿಯ ಮಗಳ ಹತ್ಯೆಗೆ ನ್ಯಾಯ ಒದಗಿಸುವುದು ಬಿಟ್ಟು ಆರೋಪಿಗೆ ರಕ್ಷಣೆ ಭಾಗ್ಯ ಒದಗಿಸಿದ ಸರಕಾರ ಎಂದು ಕಿಡಿ ಕಾರಿದರು.

ಭಾರತದ ಭವಿಷ್ಯಕ್ಕಾಗಿ ಮತ ಕೇಳುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಕಾರು ಹರಿಸಿದ ಮತಾಂಧರನ್ನು ಹಿಡಿಯದೆ ಹಾಗೆ ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ರಾಮನವಮಿ ದಿನ ಭಕ್ತರ ಮೇಲೆ ಹಲ್ಲೆ ಆಗಿದೆ. ಕಲಾವಿದೆ ಹರ್ಷಿಕಾ ಪೂಣಚ್ಚ ಕುಟುಂಬದ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಲಾ ಗಿದೆ. ಹಾವೇರಿ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ, ಬೆಳಗಾವಿಯಲ್ಲಿ ಮಹಿಳೆಯ ವಿವಸ್ತ್ರ ಗೊಳಿಸಿ ಅಪಮಾನಗೊಳಿಸಿದ್ದು, ಉಡುಪಿಯ ಹಾಸ್ಟೆಲ್‌ನಲ್ಲಿ ಹೆಣ್ಣುಮಕ್ಕಳ ಶೌಚಾಲಯದಲ್ಲಿ ವೀಡಿಯೋ ಮಾಡಿದ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕಾಣಿಸದೆ ಆರೋಪಿಗಳ ರಕ್ಷಿಸುವ ಪ್ರಯತ್ನಗಳಾಗಿವೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಭಯದ ವಾತಾವರಣ ಸೃಷ್ಟಿಯಾಗಿದೆ.

ಶಿವಮೊಗ್ಗದಲ್ಲಿ ಔರಂಗಜೇಬ್‌ ದ್ವಾರ ನಿರ್ಮಾಣ, ಕೋಲಾರದಲ್ಲಿ ತಲವಾರ್‌ ಪ್ರದರ್ಶನ, ಹನುಮಾನ್‌ ಚಾಲೀಸಾ ಬಿತ್ತರಿಸಿದ ಯುವಕನಿಗೆ ಥಳಿಸಿದವರನ್ನು ಬಿಟ್ಟು ರಾಮಮಂದಿರ ಕರಸೇವಕರ ಮೇಲೆ ಪ್ರಕರಣ ದಾಖಲಿಸಿದ್ದನ್ನು ಗಮನಸಿದರೆ ರಾಜ್ಯ ಸರಕಾರದ ಆಡಳಿತ ವೈಖರಿ ತಿಳಿಯುತ್ತದೆ. ಮಂಡ್ಯದಲ್ಲಿ ಕೇಸರಿ ಧ್ವಜವನ್ನು ಪೊಲೀಸ್‌ ಬಲ ಪ್ರಯೋಗಿಸಿ ಕೆಳಗಿಳಿಸಿ ದರು. ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಿದವರ ಮೇಲೆ ಕ್ರಮ ಕೈಗೊಳ್ಳÛದೆ ಇರುವುದನ್ನು ನೋಡಿದರೆ ಸಿಎಂ ಸಿದ್ದರಾಮಯ್ಯರ ಆದ್ಯತೆಗಳು ಯಾವುವು ಎಂಬುದು ಗೊತ್ತಾಗುತ್ತಿದೆ.

ಜಾಹೀರಾತಿನಿಂದ ಮನವೊಲಿಸುವ ಭ್ರಮೆ
ಸಿದ್ದರಾಮಯ್ಯ ಸರಕಾರ ದಿವಾಳಿ ಆಗಿದೆ. ಜನಹಿತ ಮರೆತು ತುಘಲಕ್‌ ದರ್ಬಾರ್‌ ನಡೆಸುತ್ತಿರುವ ಸರಕಾರಕ್ಕೆ ಜನರೇ ಛೀಮಾರಿ ಹಾಕುತ್ತಿದ್ದಾರೆ. ಕಾಂಗ್ರೆಸ್‌ ಜಾಹೀರಾತು ಮೂಲಕ ಜನರ ಮನವೊಲಿಸುವ ಭ್ರಮೆಯಲ್ಲಿದೆ. ಆದರೆ ಅದರಿಂದ ಏನೂ ಪ್ರಯೋಜನವಿಲ್ಲ ಎಂದರು.

ಹಿಂದೂಗಳನ್ನು ಬೆದರಿಸಿ ಚುನಾವಣೆ: ಡಿವಿಎಸ್‌
ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಚುನಾವಣೆಯು ಒಂದು ರೀತಿಯಲ್ಲಿ ಭಯೋತ್ಪಾದಕರ ವಿರುದ್ಧ ಮತ್ತು ಹಿಂದೂ ಧಾರ್ಮಿಕ ವಿಚಾರಗಳನ್ನು ಅನುಷ್ಠಾನ ಮಾಡುವ ಪ್ರಾಮಾಣಿಕ ಮತ್ತು ಸಾಮಾನ್ಯ ಕಾರ್ಯಕರ್ತರ ವಿರುದ್ಧದ ಹೋರಾಟದಂತೆ ಕಾಣುತ್ತಿದೆ. ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದೂಗಳನ್ನು ತೃತೀಯ ದರ್ಜೆ ನಾಗರಿಕರಂತೆ ನೋಡುವ ಅತ್ಯಂತ ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಮುಸ್ಲಿಂ ಭಯೋತ್ಪಾದಕರು, ಗೂಂಡಾಗಳೇ ಕಾಂಗ್ರೆಸ್‌ ಪರವಾಗಿ ನಿಂತರೆ, ಅವರ ಪರವಾಗಿ ಸಿಎಂ, ಡಿಸಿಎಂ ನಿಲ್ಲುತ್ತಿದ್ದಾರೆ. ವಿಶ್ವಮಾನವ ಸಂದೇಶ ಸಾರಿದ ಕುವೆಂಪು ನಾಡಿನಲ್ಲಿ ಚುನಾವಣೆ ನಡೆಸುವುದೇ ಗೂಂಡಾಗಳ ಮೂಲಕ, ಬೆದರಿಕೆ ತಂತ್ರದ ಮೂಲಕ ಎನ್ನುವಂತೆ ಮಾಡಿದ್ದಾರೆ. ಹಿಂದೂಗಳು ಮತ ಹಾಕಲು ಮನೆಯಿಂದ ಹೊರ ಬಾರದಂತೆ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಜನ ತಕ್ಕ ಉತ್ತರ ಕೊಡುತ್ತಾರೆ. ಮತಾಂಧತೆಯ ಪರಾಕಾಷ್ಠೆ ತಲುಪಿದವರು, ಗೂಂಡಾಗಳಿಗೆ ಗ್ಯಾರಂಟಿ ಸಿಗುತ್ತಿದೆ. ಈ ಪರಿಸ್ಥಿತಿಗಳನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ. ಈ ದೇಶದಲ್ಲಿ ಎಲ್ಲರಿಗೂ ಭವಿಷ್ಯದ ಭರವಸೆಯ ಜೀವನ ಕೊಡುವುದೇ ನನ್ನ ಉದ್ದೇಶ ಎಂದು ನಿನ್ನೆ ಮೋದಿ ಹೇಳಿದ್ದಾರೆ. ಸಿದ್ದರಾಮಯ್ಯ ಸರಕಾರ ಮುಂದುವರಿದರೆ ಹಿಂದೂಗಳಿಗೆ ರಕ್ಷಣೆ ಸಿಗದ ದಯನೀಯ ಸ್ಥಿತಿ ನಿರ್ಮಾಣ ಆಗಲಿದೆ. ಎಲ್ಲರಿಗೂ ರಕ್ಷಣೆ ಕೊಡುವ ಮೋದಿ ಸರಕಾರ ಬರಬೇಕು ಎಂದು ಹೇಳಿದರು.

ಟಾಪ್ ನ್ಯೂಸ್

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

T20 World Cup 2024: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯಕ್ಕಿಲ್ಲ ವಿರಾಟ್-ಹಾರ್ದಿಕ್

T20 World Cup 2024: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯಕ್ಕಿಲ್ಲ ವಿರಾಟ್-ಹಾರ್ದಿಕ್

6-vitla

Vitla: ಬೀಗ ಹಾಕಿದ್ದ ಮನೆಯಲ್ಲಿ ಕಳ್ಳರ ಕರಾಮತ್ತು; ಡಿ.ವಿ.ಆರ್ ಕೂಡಾ ಕದ್ದೊಯ್ದರು

rajnath singh

Indian Constitution ಪೀಠಿಕೆಯನ್ನು ಬದಲಾವಣೆ ಮಾಡಿದ್ದು ಕಾಂಗ್ರೆಸ್: ರಾಜನಾಥ್ ಸಿಂಗ್

5-health

Female health: ಸ್ತ್ರೀ ದೇಹ ಮತ್ತು ಆರೋಗ್ಯ

3

Snakes: ಹುಷಾರ್‌! ಮನೆಗೂ ಬರಬಹುದು ಹಾವುಗಳು

I will do the continuation of the film A: Actress Chandini

ಎ ಚಿತ್ರದ ಮುಂದುವರೆದ ಭಾಗ ಮಾಡುತ್ತೇನೆ: ನಾಯಕಿ ಚಾಂದಿನಿ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi Gang war; Did the failure of the beat system lead to the incident?

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

bjp-jdsವಿಧಾನಪರಿಷತ್‌ ಚುನಾವಣೆ; ಇಂದು ಬಿಜೆಪಿ-ಜೆಡಿಎಸ್‌ ಮೈತ್ರಿ ಸಭೆ

ವಿಧಾನಪರಿಷತ್‌ ಚುನಾವಣೆ; ಇಂದು ಬಿಜೆಪಿ-ಜೆಡಿಎಸ್‌ ಮೈತ್ರಿ ಸಭೆ

ಸಿನೆಮಾ ತಾರೆಯರಿಗೆ ಒತ್ತಡ ಹೇರಬೇಡಿ: ರವಿಚಂದ್ರನ್‌

ಸಿನೆಮಾ ತಾರೆಯರಿಗೆ ಒತ್ತಡ ಹೇರಬೇಡಿ: ರವಿಚಂದ್ರನ್‌

41

MLC Election: ಮೇಲ್ಮನೆಯಲ್ಲಿ ಏಳು ಸ್ಥಾನಗಳು ಕಾಂಗ್ರೆಸ್‌ನಲ್ಲಿ 70 ಆಕಾಂಕ್ಷಿಗಳು

Ultrasound room: ಅಲ್ಟ್ರಾಸೌಂಡ್‌ ಕೊಠಡಿಗೆ ಗರ್ಭಿಣಿ ಹೊರತು ಅನ್ಯರಿಗೆ ಪ್ರವೇಶವಿಲ್ಲ

Ultrasound room: ಅಲ್ಟ್ರಾಸೌಂಡ್‌ ಕೊಠಡಿಗೆ ಗರ್ಭಿಣಿ ಹೊರತು ಅನ್ಯರಿಗೆ ಪ್ರವೇಶವಿಲ್ಲ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Vijayapura ಆಕಸ್ಮಿಕ ಬೆಂಕಿ: ನೂರಾರು ಲಿಂಬೆ ಗಿಡ ಹಾನಿ

Vijayapura; ಆಕಸ್ಮಿಕ ಬೆಂಕಿ: ನೂರಾರು ಲಿಂಬೆ ಗಿಡ ಹಾನಿ

janata city song of Kotee

Kannada Cinema; ‘ಕೋಟಿ’ಯಿಂದ ಬಂತು ಜನತಾ ಸಿಟಿ; ಧನಂಜಯ್‌ ನಟನೆಯ ಸಿನಿಮಾ

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

T20 World Cup 2024: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯಕ್ಕಿಲ್ಲ ವಿರಾಟ್-ಹಾರ್ದಿಕ್

T20 World Cup 2024: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯಕ್ಕಿಲ್ಲ ವಿರಾಟ್-ಹಾರ್ದಿಕ್

6-vitla

Vitla: ಬೀಗ ಹಾಕಿದ್ದ ಮನೆಯಲ್ಲಿ ಕಳ್ಳರ ಕರಾಮತ್ತು; ಡಿ.ವಿ.ಆರ್ ಕೂಡಾ ಕದ್ದೊಯ್ದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.