ದಾವೂದ್ ಇಬ್ರಾಹಿಂ ಪಾಕ್ನಲ್ಲೇ ಇದ್ದಾನೆ
Team Udayavani, Jul 4, 2019, 5:08 AM IST
ಲಂಡನ್: ಭಾರತದಲ್ಲಿ ಹಲವು ಘಾತಕ ಕೃತ್ಯಗಳಲ್ಲಿ ಭಾಗಿಯಾಗಿರುವ ಭೂತಕ ಪಾತಕಿ ದಾವೂದ್ ಇಬ್ರಾಹಿಂ ತನ್ನ ನೆಲದಲ್ಲಿ ಇಲ್ಲವೆಂದು ಹಲವು ಬಾರಿ ಪಾಕಿಸ್ತಾನ ಸುಳ್ಳು ಹೇಳಿದೆ. ಆತ ಅಲ್ಲಿಯೇ ಇದ್ದಾನೆ ಎನ್ನುವುದನ್ನು ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐ ಪುಷ್ಟೀಕರಿಸಿದೆ. ಅಂತಾರಾಷ್ಟ್ರೀಯವಾಗಿ ಆತ ನಡೆಸುವ ಸರಣಿ ಅಪರಾಧ ಕೃತ್ಯಗಳು ಈಗ ಕರಾಚಿಯಿಂದಲೇ ನಿಯಂತ್ರಿಸಲ್ಪಡುತ್ತಿವೆ ಎಂದು ಲಂಡನ್ನ ವೆಸ್ಟ್ಮಿನಿಸ್ಟರ್ ಕೋರ್ಟ್ಗೆ ಅಮೆರಿಕದ ತನಿಖಾ ಸಂಸ್ಥೆ ವಿವರಿಸಿದೆ.
ಭೂಗತ ಪಾತಕಿಯ ನೇರ ಆಜ್ಞಾನುವರ್ತಿ ಜಬೀರ್ ಮೋತಿವಾಲನ ಗಡಿಪಾರು ವಿಚಾರಣೆ ಪ್ರಕ್ರಿಯೆ ವೇಳೆ ಈ ಅಂಶ ಪ್ರಸ್ತಾಪವಾಗಿದೆ. 1993ರಿಂದ ದಾವೂದ್ ಇಬ್ರಾಹಿಂ ಮತ್ತು ಆತನ ಸಹೋದರ ಭಾರತದಿಂದ ಪರಾರಿಯಾಗಿ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದಾರೆ ಎಂದು ಎಫ್ಬಿಐ ಪರ ವಕೀಲ ಜಾನ್ ಹಾರ್ಡಿ ಹೇಳಿದ್ದಾರೆ. ಯುಎಇ ಮತ್ತು ಇತರ ಅಂತಾರಾಷ್ಟ್ರೀಯ ವಲಯಗಳಲ್ಲಿ ದಾವೂದ್ ಪರ ವಹಿವಾಟನ್ನು ಮೋತಿವಾಲನೇ ನಡೆಸುತ್ತಿದ್ದಾನೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
China ಹೊಸ ಸಾಹಸ; ಭೂಮಿಗೆ ಕಾಣದ ಚಂದ್ರನ ಭಾಗದ ಮಾದರಿ ಸಂಗ್ರಹ
ಪಾಕ್ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ
ಲೇಸರ್ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ
Boeing aircraft: ಬೋಯಿಂಗ್ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್ ಸಾವು
MUST WATCH
ಹೊಸ ಸೇರ್ಪಡೆ
Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ
Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು
Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ
Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ
Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ