Pakistan ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ 14 ದಿನ ನ್ಯಾಯಾಂಗ ಬಂಧನ
Team Udayavani, Nov 27, 2023, 6:34 PM IST
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಮತ್ತೆ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಅಲ್-ಖಾದಿರ್ ಟ್ರಸ್ಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋದ ನ್ಯಾಯಮೂರ್ತಿ ಮುಹಮ್ಮದ್ ಬಶೀರ್ ಅವರು ಖಾನ್ ಅವರ ವಿಚಾರಣೆ ನಡೆಸಿದರು.
ಈ ಸಂದರ್ಭದಲ್ಲಿ ಇಮ್ರಾನ್ ಖಾನ್ ಅವರಿಗೆ ನೀಡಲಾಗಿದ್ದ ರಿಮಾಂಡ್ ಅನ್ನು ವಿಸ್ತರಿಸಲು ನಿರಾಕರಿಸಿದರು. ಸೆ.26ರಂದು ಮಾಜಿ ಪ್ರಧಾನಿಯನ್ನು ಬಂಧಿಸಲಾಗಿತ್ತು. ಅವರು ಈಗ ಬಿಗಿ ಭದ್ರತೆಯ ರಾವಲ್ಪಿಂಡಿಯ ಕಾರಾಗೃಹದಲ್ಲಿದ್ದಾರೆ.