Karnataka Election ಅಂಜನಾದ್ರಿ ನೆಲದಲ್ಲಿ ರಾಮ-ಹನುಮನ ಜಪ ಮಾಡಿದ ಯುಪಿ ಸಿಎಂ

ಸ್ವಾತಂತ್ರ್ಯವಾದ 75 ವರ್ಷದಲ್ಲಿ ಕಾಂಗ್ರೆಸ್ ರಾಮ ಮಂದಿರ ನಿರ್ಮಾಣ ಮಾಡಲಿಲ್ಲವೇಕೆ?

Team Udayavani, Apr 30, 2023, 3:43 PM IST

1-aaa

ಕೊಪ್ಪಳ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾನುವಾರ ಗಂಗಾವತಿಯಲ್ಲಿ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರ ಭರ್ಜರಿ ಪ್ರಚಾರ ನಡೆಸಿದರು.

‘ರಾಮನ ಭಕ್ತ ಹನುಮಾನ್ ಹುಟ್ಟಿದ ನಾಡು, ಅಂಜನಾದ್ರಿ ನೆಲೆಬೀಡು, ಗಂಗಾವತಿ ಜನತೆಗೆ ನನ್ನ ನಮಸ್ಕಾರ ಎಂದು ಯೋಗಿ ಭಾಷಣ ಆರಂಭಿಸಿದರು. ರಾಮ ಭಕ್ತ ಹನುಮನ ಈ ಪುಣ್ಯ ನೆಲದ ಜನತೆಗೆ ಕೋಟಿ ಕೋಟಿ ನಮನಗಳು. ಸಹೋದರರೇ ನಾನು ಅಯೋಧ್ಯಾದ ರಾಮನ ಪುಣ್ಯ ಕ್ತೇತ್ರದಿಂದ ಹನುಮಾನ್ ಪುಣ್ಯ ಕ್ಷೇತ್ರಕ್ಕೆ ಬಂದಿರುವೆ. ಈ ಪುಣ್ಯ ಭೂಮಿಯಲ್ಲಿ ರಾಮನಿಗೆ ಹನುಮಾನನ ಸಂಬಂಧ ಬೆಳೆಯಿತು. ಅಂತಹ ನೆಲದಲ್ಲಿ ನಾವಿದ್ದೇವೆ. ಈ ಪುಣ್ಯ ಭೂಮಿಯಲ್ಲಿ ಮೋದಿ ಅವರು ಏಕ್ ಭಾರತ್, ಶ್ರೇಷ್ಠ ಭಾರತ ಎಂದಿದ್ದಾರೆ. 140 ಕೋಟಿ ಜನರ ಮನಸಿನಲ್ಲಿ ಅವರು ಉಳಿದಿದ್ದಾರೆ. ಭಾರತ ಇಂದು ಬದಲಾಗುತ್ತದೆ. ಜಗತ್ತಿನಲ್ಲಿ ಭಾರತಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದರು.

2024 ರಲ್ಲಿ ರಾಮ ಮಂದಿರ ಪೂರ್ಣ ಮಾಡುತ್ತೇವೆ. ನಾನು ನಿಮ್ಮನ್ನು ಆಮಂತ್ರಿಸಲು ಬಂದಿರುವೆ. ಅಯೋಧ್ಯಾ ರಾಮ ಮಂದಿರ ಉದ್ಘಾಟನೆ ನಡೆಯಲಿದೆ. ಗಂಗಾವತಿಯಿಂದ ಅಯೋಧ್ಯೆಗೆ ರೈಲು ಬಿಡಲಿದ್ದೇವೆ ನೀವು ಅದರಲ್ಲಿ ಬನ್ನಿ. ಐದು ವರ್ಷದಲ್ಲಿ ನಾವು ಇದನ್ನು ಮಾಡಿದ್ದೇವೆ. ಸ್ವಾತಂತ್ರ್ಯವಾದ 75 ವರ್ಷದಲ್ಲಿ ಕಾಂಗ್ರೆಸ್ ರಾಮ ಮಂದಿರ ನಿರ್ಮಾಣ ಮಾಡಲಿಲ್ಲ. ಈ ಭೂಮಿ ಸಮತಾ ಭೂಮಿ, ರಾಷ್ಟ್ರ ಜೋಡಿಸುವ ಭಾರತ, ರಾಮನಿಗಾಗಿ ಉಪವಾಸ ಮಾಡಿದ ಶಬರಿ ಜನಿಸಿದ ಭಾರತ. ಕರ್ನಾಟಕ ಬಿಜೆಪಿ ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ 120 ಕೋಟಿ ಅನುದಾ‌ನ ನೀಡಿದೆ, ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಿದೆ ಎಂದರು.

100ನೇ ಮನ್ ಕೀ ಬಾತ್ ನಲ್ಲಿ ಯೂನೆಸ್ಕೋ ಪ್ರತಿನಿಧಿ ಭಾರತದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಯೂನೆಸ್ಕೋ ಭಾರತಕ್ಕೆ ಅಭಿನಂದಿಸುತ್ತಿದೆ.ಭಾರತಕ್ಕೆ ಅಂತ ಶಕ್ತಿ ಇದೆ. ಭಾರತದ ತಾಕತ್ತು ಜಗತ್ತಿಗೆ ಗೊತ್ತಾಗಿದೆ. ಜಗತ್ತು ಭಾರತದತ್ತ ನೋಡುತ್ತಿದೆ. ಜಿ-20 ಸಭೆ ಮೋದಿ ನೇತೃತ್ವ ವಹಿಸಿದೆ. ಕೊರೊನಾ ಸಮಯದಲ್ಲಿ ಉಚಿತ ಚಿಕಿತ್ಸೆ, ಉಚಿತ ಔಷಧಿ, ಉಚಿತ ಪಡಿತರ ನೀಡಿ ಭಾರತ ಕಾಪಾಡಿದರು. ಪ್ರಧಾನಿ ಮೋದಿ ಕಾರ್ಯ ಶ್ಲಾಘನೀಯ ಎಂದರು.

ಕರ್ನಾಟಕ ವಿಕಾಸವಾದರೆ ಭಾರತ ವಿಕಾಸ ಆಗುತ್ತದೆ. ತಕ್ಷಶಿಲಾ, ನಳಂದಾದಾಂತೆ ಬೆಂಗಳೂರು ಐಟಿ ಕೌಶಲ್ಯ ಬೆಳಗುತ್ತಿದೆ. ಅಲ್ಲಿನ ಯುವ ಸಮೂಹಕ್ಕೆ ಅಭಿನಂದನೆ ಸಲ್ಲಿಸುವೆ. ಭಾರತದ ಪ್ರಗತಿ ಯೋಜನೆ ರೂಪುಸುತ್ತಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ತುಷ್ಟೀಕರಣ ಮಾಡುತ್ತಿದೆ. ಕರ್ನಾಟಕವನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಅವರ ತುಷ್ಟೀಕರಣ ನಡೆಯಲ್ಲ,ಕಾಂಗ್ರೆಸ್ ಪಿಎಫ್ಐ ಅವರ ಮೇಲಿನ ಕೇಸ್ ರದ್ದು ಮಾಡಿ ಅವರನ್ನ ಬಚಾವ್ ಮಾಡಿತು. ನಾವು ಆ ಸಂಘಟನೆ ಬ್ಯಾನ್ ಮಾಡಿ ಕ್ರಮ ಕೈಗೊಂಡಿದ್ದೇವೆ. ದೇಶದಲ್ಲಿ ಯಾವುದೇ ಸಂಘಟನೆ ದೇಶದ್ರೋಹಿ ಚಟುವಟಿಕೆ ನಡೆಸಿದರೆ ಅದನ್ನು ಬ್ಯಾನ್ ಮಾಡುವುದು ಖಚಿತ. ಇದು ಡಬಲ್‌ ಇಂಜಿನ್ ಸರ್ಕಾರದಿಂದ ಸಾಧ್ಯ ಎಂದರು.

ಸಶಕ್ತೀಕರಣಕ್ಕೆ ನಮ್ಮ ಅಭಿಯಾನ ನಡೆದಿದೆ. ಯುವ ಕಲ್ಯಾಣ, ಕೃಷಿ ಕಲ್ಯಾಣ, ಗ್ರಾಮೀಣ ಕಲ್ಯಾಣ, ನಗರ ಕಲ್ಯಾಣ ನಡೆದಿದೆ. ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ತನ್ನಿ. ನಾವು ಡಬಲ್ ಡೋಸ್ ಕೊಡುತ್ತೇವೆ ಎಂದರು.

ಒಂದು ಯೋಜನೆ ಮಾಡಲು ಕಾಂಗ್ರೆಸ್ ಗೆ ಐದು ವರ್ಷ ಬೇಕು. ಅವರ ಪಂಚ ವಾರ್ಷಿಕ ಯೋಜ‌ನೆ ಐದು ವರ್ಷಕ್ಕೆ ನಿಂತ ಹೋಗುತ್ತದೆ. ನಾವು ಯೋಜನೆ ಮಾಡುತ್ತೇವೆ, ನಾವೇ ಜಾರಿ ಮಾಡುತ್ತೇವೆ, ನಾವೇ ಉದ್ಘಾಟನೆ ಮಾಡುತ್ತೇವೆ ಎಂದರು.

ಟಾಪ್ ನ್ಯೂಸ್

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.