ಸಿನಿಮಾದಲ್ಲಿ 5 ಸೆಕೆಂಡ್‌ಗಳ ಅಭಿನಯದ ಅವಕಾಶ.. ರಾತ್ರೋರಾತ್ರಿ ಬದಲಾಯಿತು ಈ ಭಿಕ್ಷುಕನ ಬದುಕು


ಸುಹಾನ್ ಶೇಕ್, Mar 30, 2024, 3:44 PM IST

ಸಿನಿಮಾದಲ್ಲಿ 5 ಸೆಕೆಂಡ್‌ಗಳ ಅಭಿನಯದ ಅವಕಾಶ.. ರಾತ್ರೋರಾತ್ರಿ ಬದಲಾಯಿತು ಈ ಭಿಕ್ಷುಕನ ಬದುಕು

ಸಿನಿಮಾ ಕ್ಷೇತ್ರವೆಂದರೆ ಹಾಗೆಯೇ ಅಲ್ಲಿ ಒಮ್ಮೆ ಮಿಂಚಿದರೆ ಆತ/ ಆಕೆ ಸ್ಟಾರ್‌ ಆಗುತ್ತಾರೆ. ಆದರೆ ಈ ಸ್ಟಾರ್‌ ಗಿರಿ ಕೆಲವರಿಗ ದೀರ್ಘಾಕಾಲದವರೆಗೂ ಇರುತ್ತದೆ ಇನ್ನು ಕೆಲವರಿಗೆ ಅಲ್ಪಕಾಲ ಮಾತ್ರ ಇರುತ್ತದೆ. ಒಮ್ಮೆ ಯೋಚಿಸಿ ನೀವು ತುಂಬಾ ಬಡತನದಲ್ಲಿದ್ದರೆ ಅಥವಾ ನಿಮ್ಮಲ್ಲಿ ಒಂದು ಹೊತ್ತು ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದರೆ. ಒಂದೇ ಅವಕಾಶ ಬಂದು ನಿಮ್ಮ ಜೀವನ ಸಂಪೂರ್ಣ ಬದಲಾದರೆ ಹೇಗೆ?

ಕೇಳಿದಾಗ ನಮ್ಮ ಜೀವನದಲ್ಲೂ ಈ ರೀತಿಯ ಅವಕಾಶ ನಮಗೆ ಬರಬೇಕೆನ್ನುವ ಯೋಚನೆಯೊಂದು ಒಂದು ಕ್ಷಣ ಬಂದು ಹೋಗುತ್ತದೆ. 2014 ರಲ್ಲಿ ಬಾಲಿವುಡ್‌ ನಲ್ಲಿ ರಾಜ್‌ ಕುಮಾರ್‌ ಹಿರಾನಿ ಅವರ ʼಪಿಕೆʼ ಎನ್ನುವ ಸಿನಿಮಾವೊಂದು ಬಂದಿತ್ತು. ಈ ಸಿನಿಮಾದಲ್ಲಿ ಆಮಿರ್‌ ಖಾನ್‌, ಅನುಷ್ಕಾ ಶರ್ಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ʼಪಿಕೆʼ ಎನ್ನುವ ಪಾತ್ರವನ್ನು ಆಮಿರ್‌ ಖಾನ್ ಮಾಡಿದ್ದರು. ನೀವು ಪಿಕೆ ಸಿನಿಮಾವನ್ನು ನೋಡಿದ್ದರೆ ಅದರಲ್ಲಿ ಹತ್ತಾರು ಹಾಸ್ಯ ಸನ್ನಿವೇಶವುಳ್ಳ ದೃಶ್ಯಗಳು ಬರುತ್ತದೆ. ಈ ಹತ್ತಾರು ದೃಶ್ಯದಲ್ಲಿ ಬ್ರಿಡ್ಜ್‌ ನಲ್ಲಿ ನಿಂತು ಭಿಕ್ಷೆ ಬೇಡುವ ವ್ಯಕ್ತಿಯೊಬ್ಬನ ದೃಶ್ಯವೂ ಬರುತ್ತದೆ.

ಈ ದೃಶ್ಯದಲ್ಲಿದ್ದಾತನ ಹೆಸರು ಹೆಸರು ಮನೋಜ್‌ ರಾಯ್.‌ ಇವರು ಜೀವನಕ್ಕಾಗಿ ನಿಜವಾಗಿಯೂ ಭಿಕ್ಷೆಯನ್ನೇ ಬೇಡುತ್ತಿದ್ದರು.

ಉತ್ತರ ಅಸ್ಸಾಂನ ಸೋನಿತ್‌ಪುರದಲ್ಲಿ ದಿನಗೂಲಿ ಮಾಡುವವರ ಮಗನಾಗಿರುವ ಮನೋಜ್‌ ರಾಯ್. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಜನ್ಮ ನೀಡಿದ ನಾಲ್ಕೇ ದಿನದಲ್ಲಿ ತಾಯಿ ತೀರಿಕೊಳ್ಳುತ್ತಾರೆ. ಆರಂಭದಲ್ಲಿ ಶಾಲೆಗೆ ಹೋಗುತ್ತಿದ್ದ ಮನೋಜ್‌ ಆ ಬಳಿಕ ಶಾಲೆಗೆ ಹೋಗುವುದನ್ನು ಅರ್ಧದಲ್ಲೇ ನಿಲ್ಲಿಸುತ್ತಾರೆ. ಜೀವನೋಪಾಯಕ್ಕಾಗಿ ಭಿಕ್ಷಾಟನೆಯನ್ನು ಆರಂಭಿಸುತ್ತಾರೆ.

ಭಿಕ್ಷೆಗಾಗಿ ಮನೋಜ್‌ ದೆಹಲಿಗೆ ತೆರಳಿ, ಜಂತರ್ ಮಂತರ್ ಸ್ಥಳದಲ್ಲಿ ಭಿಕ್ಷೆ ಬೇಡಲು ಆರಂಭಿಸುತ್ತಾರೆ. ಕಣ್ಣು ಕಾಣದ ಕುರುಡರಂತೆ ನಿಂತುಕೊಂಡು ಭಿಕ್ಷೆ ಬೇಡಲು ಶುರು ಮಾಡುತ್ತಾರೆ. ಆದರೆ ಒಂದು ದಿನ ಇಬ್ಬರು ವ್ಯಕ್ತಿಗಳು ಬಂದು, ನಿನಗೆ ನಟನೆ ಬರುತ್ತದೆಯೇ? ಒಂದು ವೇಳೆ ನಾವು ಹೇಳಿದಾಗೆ ನೀನು ನಟಿಸಿದರೆ ನಿನಗೆ ದಿನಕ್ಕೆ ಎರಡು ಹೊತ್ತು ಊಟವನ್ನು ನೀಡುತ್ತೇವೆ ಎಂದೇಳಿ 20 ರೂಪಾಯಿ ಕೊಟ್ಟು, ಚೀಟಿವೊಂದರಲ್ಲಿ ಫೋನ್‌ ನಂಬರ್‌ ನೀಡಿ ತೆರಳುತ್ತಾರೆ. ಆ ನಂಬರ್ ಗೆ ಕರೆ ಮಾಡಿದಾಗ ನೆಹರೂ ಸ್ಟೇಡಿಯಂಗೆ ಬರುವಂತೆ ಚಿತ್ರತಂಡ ಹೇಳುತ್ತದೆ.

ಚೀಟಿಯಲ್ಲಿ ಹೇಳಿದ ವಿಳಾಸಕ್ಕೆ ತೆರಳಿದಾಗ, ಅಲ್ಲಿ ಮನೋಜ್‌ ರಂತೆ ಏಳು ಮಂದಿ ಭಿಕ್ಷುಕರು ಇದ್ದರು. ಅವರೊಂದಿಗೆ ಅಡಿಷನ್‌ ನೀಡಬೇಕಾಗಿತ್ತು. ಅಲ್ಲಿ ಎಲ್ಲರೂ ಕುರುಡರಂತೆ ಇದ್ದರು, ಮತ್ತೆ ಅವರಿಗೆ ಸಿನಿಮಾದ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ.

ಅಡಿಷನ್‌ ಗಾಗಿ ಮನೋಜ್‌ ಮತ್ತು ಇತರ ಭಿಕ್ಷುಕರು ಫೈವ್‌ ಸ್ಟಾರ್‌ ಹೊಟೇಲ್‌ ನಲ್ಲಿ ಇರಬೇಕಾಗುತ್ತದೆ. ಈ ಅನುಭವ ಮನೋಜ್‌ ಅವರಿಗೆ ಸ್ವರ್ಗದಂತೆ ಇತ್ತು.  ಪಾತ್ರಕ್ಕಾಗಿ ಆಯ್ಕೆಯಾದ ಬಳಿಕ ತನ್ನ ಗ್ರಾಮಕ್ಕೆ ಮನೋಜ್‌ ಮರಳುತ್ತಾರೆ. ಈ ವೇಳೆ ಅವರಿಗೆ ಊರವರಿಂದ ಅದ್ಧೂರಿ ರಾಜಾ ಮಾರ್ಯಾದೆ ಸಿಗುತ್ತದೆ. ಐದೇ ಐದು ಸೆಕೆಂಡ್‌ ಗಳ ಪಾತ್ತವನ್ನು ಮನೋಜ್‌ ಸಿನಿಮಾದಲ್ಲಿ ಮಾಡುತ್ತಾರೆ.

ಈ ಸಿನಿಮಾದಲ್ಲಿನ ಅವರ ನಟನೆಯ ಬಳಿಕ ಮನೋಜ್‌ ಅವರ ಜೀವನವೇ ಬದಲಾಗುತ್ತದೆ. ಅವರು ಭಿಕ್ಷಾಟನೆ ಬಿಟ್ಟು, ಉದ್ಯೋಗವನ್ನು ಪಡೆಯುತ್ತಾರೆ. ಈಗ ಮನೋಜ್ ಫೇಸ್ ಬುಕ್ ಖಾತೆ ಹೊಂದಿದ್ದು, ಹಳ್ಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ತನಗೂ ಒಬ್ಬಳು ಗೆಳತಿ ಇದ್ದಾಳೆ ಎಂದು‌ ಅವರು ಹೇಳಿಕೊಂಡಿದ್ದಾರೆ. ಈಗ ಅವರು ಅಸ್ಸಾಂನ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.

ಆಮಿರ್ ಖಾನ್ ಪಾತ್ರದ ಪಿಕೆ ಸೇತುವೆಯ ಮೂಲಕ ನಡೆದುಕೊಂಡು ಹೋಗುವಾಗ, ಅವನು ಕೈಯಲ್ಲಿ ಹಣದ ಬಟ್ಟಲಿನೊಂದಿಗೆ ನಿಂತಿದ್ದ ಭಿಕ್ಷುಕನನ್ನು ನೋಡುತ್ತಾನೆ ಮತ್ತು ಅದರಿಂದ ಕೆಲವು ನೋಟುಗಳನ್ನು ತೆಗೆದುಕೊಳ್ಳುತ್ತಾನೆ. ಈ ಭಿಕ್ಷುಕ ಕುರುಡನಾಗಿರುತ್ತಾನೆ. ಈ ಪಾತ್ರವನ್ನೇ ಮನೋಜ್‌ ಮಾಡಿದ್ದರು.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.