ನಾಳೆ ಕೃಷಿ ವಿವಿ 33ನೇ ಘಟಿಕೋತ್ಸವ; 38 ಚಿನ್ನದ ಪದಕ ಪ್ರದಾನ

­890 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ! ­ಕೃಷಿ ಸಚಿವ ಬಿ.ಸಿ. ಪಾಟೀಲ ಅಧ್ಯಕ್ಷತೆ ­ಕೇಂದ್ರದ ವಿಜ್ಞಾನ-ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ| ಅಶುತೋಷ ಶರ್ಮಾ ಘಟಿಕೋತ್ಸವ ಭಾಷಣ

Team Udayavani, Feb 26, 2021, 3:41 PM IST

DWD Agri univercity

ಧಾರವಾಡ: ದೇಶದ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಇಲ್ಲಿನ ಕೃಷಿ ವಿವಿಯ 33ನೇ ಘಟಿಕೋತ್ಸವ ಫೆ. 27ರಂದು ನಡೆಯಲಿದೆ ಎಂದು ಕುಲಪತಿ ಡಾ|ಎಂ.ಬಿ. ಚೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಘಂಟೆಗೆ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಘಟಿಕೋತ್ಸವ ಜರುಗಲಿದೆ. ಕೃಷಿ ಸಚಿವ ಬಿ.ಸಿ. ಪಾಟೀಲ ಅಧ್ಯಕ್ಷತೆ ವಹಿಸಿ ಪದವಿ ಮತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡುವರು. ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ| ಅಶುತೋಷ ಶರ್ಮಾ ಘಟಿಕೋತ್ಸವ ಭಾಷಣ ಮಾಡುವರು. ವಿವಿಯ ಗೌರವಾನ್ವಿತ ವ್ಯವಸ್ಥಾಪನಾ ಮಂಡಳಿ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಉಪಸ್ಥಿತರಿರುವರು ಎಂದರು.

890 ವಿದ್ಯಾರ್ಥಿಗಳಿಗೆ ಪದವಿ: ಒಟ್ಟು 890 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡುತ್ತಿದ್ದು, ಇದರಲ್ಲಿ 786 ಅಭ್ಯರ್ಥಿಗಳ ಹಾಜರಾತಿಯಿದ್ದರೆ, 104 ಅಭ್ಯರ್ಥಿಗಳು ಗೈರು ಹಾಜರಾತಿಯಲ್ಲಿ ತಮ್ಮ ಪದವಿಗಳನ್ನು ಸ್ವೀಕರಿಸುವರು. ಪ್ರಸಕ್ತ ಘಟಿಕೋತ್ಸವದಲ್ಲಿ ವಿವಿಧ ಸ್ನಾತಕ ವಿಷಯಗಳಲ್ಲಿ ಅಂದರೆ ಕೃಷಿ-434, ಅರಣ್ಯ-54, ಕೃಷಿ ಮಾರುಕಟ್ಟೆ ಮತ್ತು ಸಹಕಾರ-67, ಗೃಹ ವಿಜ್ಞಾನ-40, ಬಿ.ಟೆಕ್‌ (ಆಹಾರ ತಾಂತ್ರಿಕತೆ)-21, ಬಿಎಸ್‌ಸಿ (ತೋಟಗಾರಿಕೆ)-2 ಸೇರಿ ಒಟ್ಟು 618 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು.

ಸ್ನಾತಕೋತ್ತರ ಪದವಿಗಳನ್ನು ಕೃಷಿಯಲ್ಲಿ-202, ಅರಣ್ಯ  3, ಗೃಹ ವಿಜ್ಞಾನ-15, ಎಂಬಿಎ (ಕೃಷಿ ವ್ಯವಹಾರ ಹಾಗೂ ನಿರ್ವಹಣೆ) 9 ಮತ್ತು ಆಹಾರ ತಾಂತ್ರಿಕತೆ-3 ಸೇರಿ ಒಟ್ಟು 232 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡುತ್ತಿದ್ದು, ಇದರಲ್ಲಿ 197 ಅಭ್ಯರ್ಥಿಗಳು ಹಾಜರಾತಿಯಲ್ಲಿ ಪದವಿಗಳನ್ನು ಸ್ವೀಕರಿಸುವರು.

ಪಿಎಚ್‌ಡಿ ಪದವಿಯನ್ನು 40 ಅಭ್ಯರ್ಥಿಗಳಿಗೆ ಪ್ರದಾನ ಮಾಡುತ್ತಿದ್ದು, ಇದರಲ್ಲಿ 38 ಅಭ್ಯರ್ಥಿಗಳು ಹಾಜರಾತಿಯಲ್ಲಿ ಪದವಿ ಸ್ವೀಕರಿಸುವರು. 38 ವಿದ್ಯಾರ್ಥಿಗಳಿಗೆ ಚಿನ್ನ: 2019-20ನೇ ಶೈಕ್ಷಣಿಕ ವರ್ಷದ ವಿವಿಧ ವಿಷಯಗಳಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ 38 ಚಿನ್ನದ ಪದಕಗಳು ಹಾಗೂ ಹತ್ತು ನಗದು ಬಹುಮಾನಗಳನ್ನು ನೀಡಲಾಗುತ್ತಿದೆ.

ಸ್ನಾತಕ ಪದವಿ ಚಿನ್ನದ ಪದಕ: ಹನುಮನಮಟ್ಟಿಯ ಕೃಷಿ ಮಹಾವಿದ್ಯಾಲಯ ಬಿಎಸ್‌ಸಿ ಕೃಷಿ ವಿದ್ಯಾರ್ಥಿ ಜಯಂತ ಕಲ್ಲುಗುಡಿ 2 ಚಿನ್ನದ ಪದಕ (ಕೃಷಿ ವಿವಿ ಚಿನ್ನದ ಪದಕ ಮತ್ತು ಸೀತಾರಾಂ ಜಿಂದಾಲ ಫೌಂಡೇಶನ್‌ ಚಿನ್ನದ ಪದಕ) ಜೊತೆಗೆ ನಗದು ಬಹುಮಾನ (ದಿ| ಪ್ರೊ| ಆರ್‌.ಎಫ್‌. ಪಾಟೀಲ ಸ್ಮಾರಕ ನಗದು ಪುರಸ್ಕಾರ) ಸ್ವೀಕರಿಸುವರು. ಇವರು 4 ವರ್ಷದ (ಕೃಷಿ) ಸ್ನಾತಕ ಪದವಿಯಲ್ಲಿ ಇವರು 9.26 ಒಜಿಪಿಎ (ಒಟ್ಟು ಸರಾಸರಿ ಫಲಿತಾಂಶ)ಅಂಕ ಗಳಿಸಿದ್ದಾರೆ. ಸಂತೋಷ ಜಿ. ಹೆಗಡೆ ಚಿನ್ನದ ಪದಕ ಪಡೆದಿದ್ದು, 4 ವರ್ಷದ (ಕೃಷಿ) ಪದವಿಯಲ್ಲಿ 9.24 ಒಜಿಪಿಎ ಗಳಿಸಿದ್ದಾರೆ. ಧಾರವಾಡ ಕೃಷಿ ಮಹಾವಿದ್ಯಾಲಯದ ವೇದವ್ಯಾಸ ಪಾಂಡುರಂಗಿ ಚಿನ್ನದ ಪದಕ ಪಡೆದಿದ್ದು, 4 ವರ್ಷದ (ಕೃಷಿ ವ್ಯವಹಾರ ಮತ್ತು ನಿರ್ವಹಣೆ) ಪದವಿಯಲ್ಲಿ 8.97 ಒಜಿಪಿಎ ಪಡೆದಿದ್ದಾರೆ.

ವಿಜಯಪುರದ ಸಂಗೀತಾ ಬಿ. ಕಟ್ಟಿಮನಿ ಹಾಗೂ ಸೌಮ್ಯಕುಮಾರಿ ತಲಾ ಒಂದೊಂದು ಚಿನ್ನದ ಪದಕ ಪಡೆದಿದ್ದಾರೆ. 4 ವರ್ಷದ (ಕೃಷಿ) ಪದವಿಯಲ್ಲಿ ಇಬ್ಬರೂ 9.09 ಒಜಿಪಿಎ ಗಳಿಸಿದ್ದಾರೆ. ಆದಿತ್ಯಾ ಕೆ.ಎಸ್‌. ಅವರು ಪ್ರೊ| ಎಸ್‌.ಡಿ. ಕೋಲ್ಲೋಳಗಿ ಸ್ಮಾರಕ  ಚಿನ್ನದ ಪದಕ ಸ್ವೀಕರಿಸುವರು. 4 ವರ್ಷದ (ಕೃಷಿ) ಪದವಿಯಲ್ಲಿ 8.86 ಒಜಿಪಿಎ ಗಳಿಸಿದ್ದಾರೆ. ಶಿರಸಿಯ ಅರಣ್ಯ ಮಹಾವಿದ್ಯಾಲಯದ ಸೀಮಾ ರಾಜೇಶ ರಾಯ್ಕರ ಚಿನ್ನದ ಪದಕ ಪಡೆದಿದ್ದು, ಬಿಎಸ್‌ಸಿ (ಅರಣ್ಯ)ಯಲ್ಲಿ 8.97 ಒಜಿಪಿಎ ಗಳಿಸಿದ್ದಾರೆ. ಧಾರವಾಡದ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಪೂಜಾ  ಕರವೀರಯ್ಯ ರುದ್ರಾಪುರ ಚಿನ್ನದ ಪದಕ ಗಳಿಸಿದ್ದು, 4 ವರ್ಷದ (ಬಿಎಚ್‌ಎಸ್‌ಸಿ) ಪದವಿಯಲ್ಲಿ 8.78 ಒಜಿಪಿಎ ಗಳಿಸಿದ್ದಾರೆ. ಧಾರವಾಡ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಮೈತ್ರಿ ವಿ. ಹೆಗಡೆ ಚಿನ್ನದ ಪದಕ ಮತ್ತು ಒಂದು ನಗದು ಬಹುಮಾನವನ್ನು (ದಿ| ಸಾವಿತ್ರಿ ಅಲ್ಲಪ್ಪ ಹಾದಿಮನಿ) ಆಹಾರ ತಾಂತ್ರಿಕತೆಯಲ್ಲಿ ಹೆಚ್ಚಿನ ಒಜಿಪಿಎ (9.00) ತೆಗೆದುಕೊಂಡಿದ್ದಕ್ಕಾಗಿ ಸ್ವೀಕರಿಸುವರು. ಧಾರವಾಡ ಕೃಷಿ ಮಹಾವಿದ್ಯಾಲಯದ ಬಿಎಸ್‌ಸಿ (ಕೃಷಿ) ವಿದ್ಯಾರ್ಥಿ ವಿನಾಯಕ ಬಸವರಾಜ ಧೂಳಶೆಟ್ಟಿ 1980-84 ಸಾಲಿನ ಕೃಷಿ ಮಾರಾಟ ಸಹಕಾರ ಪದವೀಧರ ತಂಡದ ನಗದು ಪುರಸ್ಕಾರ ಪಡೆದಿದ್ದು, ವಿದ್ಯಾಲಯದ ಅತ್ಯುತ್ತಮ ಕ್ರೀಡಾ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ.

ಸ್ನಾತಕೋತ್ತರ ಪದವಿ ಚಿನ್ನದ ಪದಕ: ಮೇಘಶ್ರೀ ಎಸ್‌. ಪಾಟೀಲ ಎಂಎಸ್‌ಸಿ (ಅನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ ಶಾಸ್ತ್ರ) ವಿಭಾಗದಲ್ಲಿ ಎರಡು ಚಿನ್ನದ ಪದಕ (ಕೃವಿವಿ ಚಿನ್ನದ ಪದಕ ಮತ್ತು ದಿ| ರಾವ್‌ ಸಾಹೇಬ ಎಸ್‌.ಎಚ್‌ ಪ್ರಯಾಗ ಚಿನ್ನದ ಪದಕ) ಮತ್ತು ಡಾ| ಎಸ್‌. ಡಬ್ಲೂ. ಮೆಣಸಿನಕಾಯಿ ನಗದು ಪುರಸ್ಕಾರಗಳನ್ನು ಹೆಚ್ಚಿನ ಒಜಿಪಿಎ (9.55) ತೆಗೆದುಕೊಂಡಿದ್ದಕ್ಕಾಗಿ ಗಳಿಸಿದ್ದಾರೆ. ಬಿಂದು ಎಚ್‌. ಎ. ಅವರು ಎಂಎಸ್‌ಸಿ (ಕೃಷಿ ಅರ್ಥಶಾಸ್ತ್ರ) ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆದರೆ, ಸುಪ್ರಿಯಾ ಎಂ.ಎಲ್‌. ಎಂಎಸ್‌ಸಿ (ಕೃಷಿ ಸಸ್ಯ ರೋಗಶಾಸ್ತ್ರ) ವಿಭಾಗದಲ್ಲಿ ಚಿನ್ನದ ಪದಕ ಮತ್ತು ಎರಡು ನಗದು ಪುರಸ್ಕಾರ, ವಿನಯ ಎಂ.ಆರ್‌. ಎಂಎಸ್‌ಸಿ (ಕೃಷಿ ಸಸ್ಯ ರೋಗಶಾಸ್ತ್ರ) ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ರಾಜೇಶ್ವರಿ ಎಂ. ಚನ್ನಪ್ಪಗೌಡರ ಎಂಎಸ್‌ಸಿ (ಬೀಜ ವಿಜ್ಞಾನ ಮತ್ತು ತಾಂತ್ರಿಕತೆ), ಮೌನಿಕಾ ಪಾಟಿಬಲ್ಲಾ ಎಂಎಸ್‌ಸಿ (ಆಹಾರ ವಿಜ್ಞಾನ ಮತ್ತು ಪೋಷಣೆ), ಶಿಲ್ಪಾ ಪಾಟೀಲ ಎಂಎಸ್‌ಸಿ (ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ), ಚೈತ್ರಾ ಪಿ. ಉತಪ್ಪ ಎಂ.ಟೆಕ್‌ (ಆಹಾರ ತಂತ್ರಜ್ಞಾನ), ಲಕ್ಷ್ಮೀ ಪಾಟೀಲ ಎಂಎಸ್‌ಸಿ (ತೋಟಗಾರಿಕೆ), ಸ್ಮಿತಾ ಎಸ್‌. ಎಮ್‌ ಎಸ್‌ಸಿ (ಅಣುಜೀವಿ ಶಾಸ್ತ್ರ ಹಾಗೂ ಜೈವಿಕ ತಂತ್ರಜ್ಞಾನ), ವಿಜಯಲಕ್ಷ್ಮೀ ಬಡಿಗೇರ ಎಂಎಸ್‌ಸಿ (ಕೃಷಿ ಸಂಖ್ಯಾ ಶಾಸ್ತ್ರ), ನಕುಲ ಕಾಳೆ ಎಂಎಸ್‌ಸಿ (ಕೃಷಿ ಸೂಕ್ಷ್ಮಾಣುಜೀವಿ ಶಾಸ್ತ್ರ), ಶ್ವೇತಾ ಅಮ್ಮಣಗಿ ಎಂಎಸ್‌ಸಿ (ಕೃಷಿ ಕೀಟಶಾಸ್ತ್ರ) ವಿಭಾಗದಲ್ಲಿ ತಲಾ ಒಂದೊಂದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ ಎಂದರು.

ಪ್ರೇಮ್‌ಕಿಶೋರ್‌ ಎಸ್‌. ಎನ್‌. ಎಂಎಸ್‌ಸಿ (ಕೃಷಿ ವಿಸ್ತರಣಾ ಶಿಕ್ಷಣ) ವಿಭಾಗದಲ್ಲಿ ಕೃಷಿ ಪದಕ ಮತ್ತು ದಿ|ಡಾ| ಶಿವಲಿಂಗಪ್ಪ ಸೋಮಪ್ಪ ಪಲ್ಲೇದ ಸ್ಮಾರಕ ಚಿನ್ನದ ಪದಕ ಹಾಗೂ ವಿದ್ಯಾಶ್ರೀ ಆರ್‌. ಎಂಎಸ್‌ಸಿ (ಬೇಸಾಯ ಶಾಸ್ತ್ರ) ವಿಭಾಗದಲ್ಲಿ ಚಿನ್ನದ ಪದಕ ಮತ್ತು ಡಾ| ಎಸ್‌.ವಿ. ಪಾಟೀಲು ನಗದು ಪುರಸ್ಕಾರ ಗಳಿಸಿದ್ದಾರೆ. ಪೂಜಾ ಎಂಎಸ್‌ಸಿ (ಬೆಳೆ ಶರೀರ ಕ್ರಿಯಾಶಾಸ್ತ್ರ) ವಿಭಾಗದಲ್ಲಿ ದಿ| ವೈ.ಸಿ. ಪಾಂಚಾಳ ಸ್ಮರಣಾರ್ಥ ಸ್ಥಾಪಿತ ಚಿನ್ನದ ಪದಕ ಪಡೆದಿದ್ದಾರೆ. ಮಾಲತೇಶ ಪಿ. ಕಂಬಳಿ ಎಂಎಸ್‌ಸಿ (ಮಣ್ಣು ವಿಜ್ಞಾನ) ವಿಭಾಗದಲ್ಲಿ ಚಿನ್ನದ ಪದಕ ಮತ್ತು 76ನೇ ಐಎಸ್‌ಎಸ್‌ಎಸ್‌ ಸಮಾವೇಶ ಸ್ಮಾರಕ ನಗದು ಬಹುಮಾನ ನೀಡಲಾಗುವುದು.

ಪಿಎಚ್‌ಡಿ ಪದವಿ: ಸರಣ್ಯಾ ಆರ್‌. ಪಿಎಚ್‌ಡಿ (ಸಸ್ಯರೋಗ ಶಾಸ್ತ್ರ) ಪದವಿಯೊಂದಿಗೆ ಚಿನ್ನದ ಪದಕ ಮತ್ತು  ದಿ|  ಇಂದಿರಾ ಎಸ್‌. ಪುರಾಣಿಕ ಸ್ಮಾರಕ ನಗದು ಬಹುಮಾನ ಸ್ವೀಕರಿಸುವರು. ಸುನೀಲಕುಮಾರ ನೂಲಿ (ಪಿಎಚ್‌ ಡಿ-ಬೇಸಾಯ ಶಾಸ್ತ್ರ), ರಾಜೇಶ ಮಠದ (ಪಿಎಚ್‌ ಡಿ-ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ), ಮಹಾಲಕ್ಷ್ಮೀ ಕೆ. ಪಾಟೀಲ (ಪಿಎಚ್‌ಡಿ-ಅನುವಂಶಿಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ ಶಾಸ್ತ್ರ), ಶಿವಲೀಲಾ ಪಿ. ಪಾಟೀಲ (ಪಿಎಚ್‌ಡಿ-ಗೃಹ ವಿಜ್ಞಾನ ವಿಸ್ತರಣೆ ಮತ್ತು ಸಂವಹನ ನಿರ್ವಹಣೆ), ರಮಿತಾ ಬಿ.ಇ. (ಪಿಎಚ್‌ಡಿ-ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ ಶಾಸ್ತ್ರ), ಬಲಿರಾಮ ಗೇಮು ನಾಯಕ (ಪಿಎಚ್‌ಡಿ-ವೃಕ್ಷ ಪಾಲನೆ ಮತ್ತು ಕೃಷಿ ಅರಣ್ಯ) ತಲಾ ಒಂದೊಂದು ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಟಾಪ್ ನ್ಯೂಸ್

1-qqewewqe

Gujarat ಕರಾವಳಿಯಲ್ಲಿ ಪಾಕ್ ದೋಣಿಯಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqewewqe

Gujarat ಕರಾವಳಿಯಲ್ಲಿ ಪಾಕ್ ದೋಣಿಯಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.