ಶೇ.35 ಜನಕ್ಕಿಲ್ಲ ಉದ್ಯೋಗ ಚೀಟಿ

ಉದ್ಯೋಗಖಾತ್ರಿ ದಿನಗೂಲಿ ಲಭ್ಯವಾಗುವ ಬಗ್ಗೆಯೇ ಗೊತ್ತಿಲ್ಲವೆಂದು ತಿಳಿಸಿದ್ದರು

Team Udayavani, Mar 3, 2021, 6:26 PM IST

ಶೇ.35 ಜನಕ್ಕಿಲ್ಲ ಉದ್ಯೋಗ ಚೀಟಿ

ಸಿಂಧನೂರು: ಪ್ರತಿಯೊಂದು ಕುಟುಂಬಕ್ಕೆ ವಾರ್ಷಿಕ 100 ದಿನಗಳ ಉದ್ಯೋಗ ಖಾತ್ರಿಪಡಿಸುವ ಯೋಜನೆ ಇದ್ದರೂ ಸೌಲಭ್ಯದಿಂದ ಹೊರಗುಳಿದ ಜನರನ್ನು ಪತ್ತೆ ಹಚ್ಚಿ, ಅವರಿಗೆ ಕೂಲಿ ಕಲ್ಪಿಸುವುದಕ್ಕಾಗಿ ರಾಜ್ಯದಲ್ಲಿ ರೋಜಗಾರ್‌ ಮಿತ್ರರ ಮೊರೆ ಇಡಲಾಗಿದೆ.

ರಾಜ್ಯದಲ್ಲಿರುವ ತಾಂಡಾಗಳಲ್ಲಿನ ಜನರಿಗೆ ನರೇಗಾದಡಿ ಕೆಲಸ, ವೈಯಕ್ತಿಕ ಸೌಲಭ್ಯ ಒದಗಿಸುವ ಉದ್ದೇಶದಿಂದ ರೋಜಗಾರ್‌ ಮಿತ್ರರನ್ನು ನೇಮಿಸಲಾಗುತ್ತಿದೆ. 250ರಿಂದ 300 ಕುಟುಂಬಗಳಿಗೆ ಒಬ್ಬರಂತೆ ಸಿಬ್ಬಂದಿ ನಿಯೋಜಿಸಲಿದ್ದು, ಅವರು ಖುದ್ದು ಮನೆ-ಮನೆಗೆ ತೆರಳಿ ಅವರಿಗೆ ಕೆಲಸ ಖಾತ್ರಿಪಡಿಸಬೇಕಿದೆ. ಉದ್ಯೋಗಖಾತ್ರಿ ಅಧಿನಿಯಮ ಬಂದ ಬಳಿಕವೂ ಸೌಲಭ್ಯದಿಂದಲೇ ದೂರ ಉಳಿದಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಈ ಕ್ರಮ ಅನುಸರಿಸಲಾಗಿದೆ.

ಸಮೀಕ್ಷೆಯಲ್ಲಿ ಬಯಲು: ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯ ರಾಜ್ಯದ 14 ಜಿಲ್ಲೆಗಳ 111 ತಾಂಡಾಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಹಲವು ಸಂಗತಿ ಬೆಳಕಿಗೆ ಬಂದಿದ್ದವು. 7,514 ಕುಟುಂಬಗಳನ್ನು ಗಮನಿಸಿದಾಗ 2,604 (ಶೇ.35) ಕುಟುಂಬ ಈವರೆಗೂ ಉದ್ಯೋಗ ಚೀಟಿಯನ್ನೇ ಹೊಂದಿಲ್ಲವೆಂಬುದು ಗೊತ್ತಾಗಿದೆ.

ಉದ್ಯೋಗ ಚೀಟಿ ಹೊಂದಿದ್ದರೂ ಅವುಗಳು ತಮ್ಮಲ್ಲಿ ಇಲ್ಲವೆಂದು ಶೇ.50 ಜನ ಹೇಳಿಕೊಂಡಿದ್ದರು. ಸಮೀಕ್ಷೆಯಲ್ಲಿ 14,868 ಜನರ ಪೈಕಿ 7,617 ಜನ ಉದ್ಯೋಗಖಾತ್ರಿ ದಿನಗೂಲಿ ಲಭ್ಯವಾಗುವ ಬಗ್ಗೆಯೇ ಗೊತ್ತಿಲ್ಲವೆಂದು ತಿಳಿಸಿದ್ದರು. ನರೇಗಾ ಕುರಿತು ಮಾಹಿತಿ ನೀಡಿದಾಗ ಶೇ.75 ಜನ ಕೆಲಸ ಮಾಡಲು ಸಿದ್ಧವೆಂದು ಹೇಳಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಕಲ್ಪಿಸಲು ರೋಜಗಾರ್‌ ಮಿತ್ರರನ್ನು ನೇಮಿಸಲಾಗುತ್ತಿದೆ.

ಆರು ತಿಂಗಳ ಅಭಿಯಾನ: ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಕೊಟ್ಟಿರುವ ಮಾಹಿತಿ ಪ್ರಕಾರ, ಸದ್ಯ ರಾಜ್ಯದ 300 ತಾಂಡಾಗಳಿಗೆ ಸಿಬ್ಬಂದಿ ನೇಮಿಸಲಾಗುತ್ತಿದೆ. ನೇಮಕವಾದ ರೋಜಗಾರ್‌ ಮಿತ್ರರು ಆರು ತಿಂಗಳ ಕಾಲ ನರೇಗಾದ ಅಭಿಯಾನ ನಡೆಸಬೇಕು. ಉದ್ಯೋಗ ಖಾತ್ರಿ ಅರಿವು
ಮೂಡಿಸುವುದು, ಉದ್ಯೋಗ ಚೀಟಿಗಳ ವಿತರಣೆ, ಅಕುಶಲ ಕೆಲಸ ಕಲ್ಪಿಸುವುದು, ವೈಯಕ್ತಿಕ ಸೌಲಭ್ಯ ಕಲ್ಪಿಸುವುದು ಈ ಸಿಬ್ಬಂದಿ ಮೇಲಿನ ಜವಾಬ್ದಾರಿ. ತಾಪಂ ಕಾರ್ಯನಿರ್ವಾಹಕ ಅ ಧಿಕಾರಿ ನೇತೃತ್ವದ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಸಿ, ಗುರುತಿಸಿದ ಕ್ಯಾಂಪ್‌ಗ್ಳಿಗೆ ರೋಜಗಾರ್‌ ಮಿತ್ರರನ್ನು ಕಳಿಸಲಿದೆ. ಮಾ.15ರೊಳಗಾಗಿ ಈ ಅಭಿಯಾನ ರಾಜ್ಯದಲ್ಲಿ ಚುರುಕು ಪಡೆಯಲಿದೆ.

*ಯಮನಪ್ಪ ಪವಾರ

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.