ಆಂಜನೇಯ ಆರಾಧನೆ ಗುಲಾಮಗಿರಿ ಸಂಕೇತವಲ್ಲ

ಏಕಶಿಲಾ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀ ಸುಬುಧೇಂದ್ರ ತೀರ್ಥರು ಅನಿಸಿಕೆ

Team Udayavani, Mar 15, 2021, 7:25 PM IST

abhaya Anjaneya swami

ರಾಯಚೂರು: ಕೆಲ ವಿಚಾರವಾದಿಗಳು ಶ್ರೀ ಆಂಜನೇಯ ಸ್ವಾಮಿ ಆರಾಧನೆಯನ್ನು ಗುಲಾಮಗಿರಿ ಸಂಕೇತ ಎಂದು ಜರಿಯುತ್ತಾರೆ. ಆದರೆ, ನಾವು ಗುಲಾಮಗಿರಿಯಿಂದ ಮುಕ್ತಿ ಹೊಂದಬೇಕಾದರೆ ಆಂಜನೇಯ ಸ್ವಾಮಿಯನ್ನು ಆರಾಧಿಸಬೇಕು ಎಂದು ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರು ಅಭಿಪ್ರಾಯ ಪಟ್ಟರು.

ಮಂತ್ರಾಲಯ ಹೊರವಲಯದಲ್ಲಿ ಸ್ಥಾಪಿಸಿದ ಅಭಯಾಂಜನೇಯ ಸ್ವಾಮಿ ಏಕಶಿಲಾ ಮೂರ್ತಿ ಲೋಕಾರ್ಪಣೆ ಸಮಾರಂಭದ ಬಳಿಕ ಆಶೀರ್ವಚನ ನೀಡಿದರು. ಬುದ್ಧಿ, ಮತಿಹೀನ, ಧೈರ್ಯ ಇಲ್ಲದ ವ್ಯಕ್ತಿ ಮಾತ್ರ ಗುಲಾಮನಾಗುತ್ತಾನೆ. ಆದರೆ, ಆಂಜನೇಯ ಸ್ವಾಮಿ ಉಪಾಸನೆಯಿಂದ ಬುದ್ಧಿ, ಧೈರ್ಯ, ಶಕ್ತಿ ಲಭಿಸುತ್ತದೆ. ಅಂಥ ದೇವರ ಆರಾಧನೆ ಎಂದಿಗೂ ಗುಲಾಮಗಿರಿಯ ಸಂಕೇತವಾಗಲು ಸಾಧ್ಯವಿಲ್ಲ ಎಂದರು.

ಆಂಜನೇಯ ಸ್ವಾಮಿ ಇದ್ದಲ್ಲಿ ಹರಿ ನೆಲೆಸುತ್ತಾನೆ. ಹರಿ ಇದ್ದಲ್ಲಿ ಆಂಜನೇಯ ಸ್ವಾಮಿ ಇರುತ್ತಾರೆ. ಭಗವಂತನ ಪೂಜೆಗೆ ಆಂಜನೇಯ ಸ್ವಾಮಿಯೇ ಮಾಧ್ಯಮವಾದರೆ, ಆಂಜನೇಯನ ಆರಾಧನೆಗೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳೇ ಮಾಧ್ಯಮವಾಗಿದ್ದಾರೆ. ಅಂಥ ಮುಖ್ಯ ಪ್ರಾಣ ದೇವರನ್ನು ಅಭಯಾಂಜನೇಯ ಹೆಸರಿನಲ್ಲಿ ಇಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದರು.

ಭಗವಂತ ಎಲ್ಲೆಡೆ ವ್ಯಾಪಿಸಿದ್ದಾನೆ. ಆತನನ್ನು ಒಂದು ಮಾಧ್ಯಮದಲ್ಲಿ ಆರಾಧನೆ ಮಾಡಬೇಕು. ಜನಸಾಮಾನ್ಯರು ಪ್ರತಿಮಾ ಮಾಧ್ಯಮದಲ್ಲಿಯೇ ಭಗವಂತನನ್ನು ಆರಾಧಿ ಸಬೇಕು. ಅದು ಉತ್ತಮ ಮಾಧ್ಯಮವಾಗಿರಬೇಕು. ತರಂಗಗಳು ಗಾಳಿಯಲ್ಲಿ ಬೆರೆತರೂ ಕಣ್ಣಿಗೆ ಕಾಣುವುದಿಲ್ಲ. ಆದರೆ, ಟಿವಿ, ರೇಡಿಯೋ ಮೂಲಕ ಆ ತರಂಗಗಳು ತಮ್ಮ ಅಸ್ತಿತ್ವ ಸಾಕ್ಷಿಕರಿಸಲಿದೆ. ಆ ರೀತಿ ಎಲ್ಲೆಡೆ ಆವರಿಸಿರುವ ಭಗವಂತನನ್ನು ಕಾಣಬೇಕಾದರೆ ಮುಖ್ಯ ಪ್ರಾಣದೇವರೆಂಬ ಮಾಧ್ಯಮದ ಮೂಲಕ ಭಗವಂತನನ್ನು ಪ್ರತಿಷ್ಠಾಪಿಸಿ ಆರಾ ಧಿಸಬೇಕು ಎಂದರು.

ಹರಿವಾಯು ಗುರುಗಳ ಪ್ರೇರಣೆಯಿಂದಲೇ ಇಂಥ ಮಹತ್ಕಾರ್ಯಗಳು ನಡೆಯಲಿದೆ ವಿನಃ ನನ್ನನ್ನು ಸೇರಿದಂತೆ ಜನಸಾಮಾನ್ಯರಿಂದ ಸಾಧ್ಯವಿಲ್ಲ. ಆಂಜನೇಯ ಸ್ವಾಮಿಯೇ ದಾನಿಗಳ ಸ್ವಪ್ನದಲ್ಲಿ ಬಂದು ತಮಗೆ ಬೇಕಾದ ಸೇವೆ ಮಾಡಿಸಿಕೊಂಡಿದ್ದಾನೆ. ದಾನಿಗಳ ಸೇವೆಯಿಂದಲೇ ಇಂಥ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದರು.

ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ, ಶ್ರೀನಿವಾಸ ಹರೀಶ ಕುಮಾರ, ವಿ.ಶ್ರೀಶಾನಂದ, ಏಕಶಿಲಾ ಶ್ರೀ ಅಭಯ ಆಂಜನೇಯ ದೇವಸ್ಥಾನದ ದಾನಿಗಳು ಹಾಗೂ ದೇವಸ್ಥಾನ ನಿರ್ಮಿಸಿದ ಬೆಂಗಳೂರಿನ ಬಿ.ಕೃಷ್ಣಮೂರ್ತಿ, ಶ್ರೀಮಠದ ವಿದ್ವಾಂಸ ಡಾ| ರಾಜಾ ಎಸ್‌.ಗಿರಿರಾಜಾಚಾರ್‌, ಶ್ರೀಗಳ ಆಪ್ತ ಕಾರ್ಯದರ್ಶಿ ಸುಶಮೀಂದ್ರಾಚಾರ್‌, ಶ್ರೀಮಠದ ಸಂಸ್ಕೃತ ವಿದ್ಯಾಪೀಠದ ಪ್ರಾಚಾರ್ಯ ಎನ್‌. ವಾದಿರಾಜಾಚಾರ್‌ ಸೇರಿದಂತೆ ಮಠದ ಸಿಬ್ಬಂದಿ ಇದ್ದರು.

ಟಾಪ್ ನ್ಯೂಸ್

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.