ಆಸ್ಪತ್ರೆ ಬಾಗಿಲೇ ಮುಚ್ಚಿರುವಾಗ ಚಿಕಿತ್ಸೆ ಇನ್ನೆಲ್ಲಿ?

ವರ್ಷ ಪೂರ್ತಿ ಬೀಗ ಜಡಿದಿರುವ ಆಸ್ಪತ್ರೆ ಯಾರಿಗೆ ಬೇಕು?

Team Udayavani, Apr 5, 2021, 1:30 PM IST

ಆಸ್ಪತ್ರೆ ಬಾಗಿಲೇ ಮುಚ್ಚಿರುವಾಗ ಚಿಕಿತ್ಸೆ ಇನ್ನೆಲ್ಲಿ?

ಪಿರಿಯಾಪಟ್ಟಣ: ತಾಲೂಕಿನ ಎಂ.ಶೆಟ್ಟಹಳ್ಳಿ ಆರೋಗ್ಯ ಉಪ ಕೇಂದ್ರವನ್ನು ನೆಪ ಮಾತ್ರಕ್ಕೆ ತೆರೆಯಲಾಗಿದ್ದು, ವರ್ಷಪೂರ್ತಿ ಯಾವಾಗಲೂ ಆಸ್ಪತ್ರೆ ಬಾಗಿಲುಮುಚ್ಚಿರುತ್ತದೆ. ಇಲ್ಲಿಗೆ ವೈದ್ಯರು ಹಾಗೂ ನರ್ಸ್‌ಗಳನ್ನೇನೇಮಿಸಿಲ್ಲ. ಚಿಕಿತ್ಸೆಯೇ ಸಿಗದಿರುವಾಗ ಯಾವ ಪುರುಷಾರ್ಥ ಕ್ಕಾಗಿ ಆರೋಗ್ಯ ಕೇಂದ್ರವನ್ನು ತೆರೆಯಬೇಕಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಪ್ರಮುಖ ಹೋಬಳಿ ಕೇಂದ್ರರಾವಂದೂರಿನ ಸಮೀಪವಿರುವ ಗ್ರಾಮಗಳಲ್ಲಿಮಾಕೋಡು ಶೆಟ್ಟಹಳ್ಳಿ ಒಂದು. ಇದು ರಾವಂದೂರಿ  ನಿಂದ 8 ಕಿ.ಮೀ. ದೂರದಲ್ಲಿದ್ದು, ಎಂ.ಶೆಟ್ಟಹಳ್ಳಿ ಸುತ್ತಮುತ್ತಲಿನ ಅನೇಕ ಗ್ರಾಮಗಳಿಗೆ ಅನುಕೂಲವಾಗುವ ದೃಷ್ಟಿಯಿಂದ 1996-97ನೇ ಸಾಲಿನ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕ ಉಪ ಕೇಂದ್ರ ತೆರೆಯಲಾಗಿದೆ.

ಈ ಆರೋಗ್ಯ ಕೇಂದ್ರಕ್ಕೆ ವೈದ್ಯರಾಗಲಿ ಅಥವಾ ಆರೋಗ್ಯ ಸಹಾಯಕಿಯರನ್ನು ನಿಯೋಜಿಸಿಲ್ಲ.ಜೊತೆಗೆ ಈ ಕಟ್ಟಡದ ಆವರಣದ ತುಂಬಾ ಪಾರ್ಥೇನಿಯಮ್‌ ಸೇರಿದಂತೆ ಗಿಡಗಂಟಿಗಳು ಬೆಳೆದು ಅವ್ಯವಸ್ಥೆಯ ಆಗರವಾಗಿದೆ. ಪ್ರತಿದಿನ ಆಸ್ಪತ್ರೆಯ ಬಾಗಿಲುಗಳು ಮುಚ್ಚಿರುತ್ತಿದ್ದು, ಯಾವುದೇ ರೀತಿಯ ಆರೋಗ್ಯ ತಪಾಸಣೆ ಯಾಗಲಿಅಥವಾ ಚಿಕಿತ್ಸೆ ಆಗಲಿ ನೀಡಲು ವೈದ್ಯರು ಬರುತ್ತಿಲ್ಲಎಂದು ಸುತ್ತಮುತ್ತಲಿನ ಗ್ರಾಮದ ಜನರು ಅಳಲು ತೋಡಿಕೊಂಡಿದ್ದಾರೆ.

ಈ ಆರೋಗ್ಯ ಕೇಂದ್ರವು ತಾಲೂಕಿಗೆ ಸುಮಾರು 18 ಕಿ.ಮೀ. ದೂರವಿದ್ದು, ಈ ಗ್ರಾಮದಿಂದಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ವೃದ್ಧರು, ಮಹಿಳೆಯರು, ಮಕ್ಕಳು ಆಸ್ಪತ್ರೆಗೆ ಹೋಗಲಾರದೆಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಪಿರಿಯಾಪಟ್ಟಣ ಹಾಗೂ ಹುಣಸೂರಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಸಂಬಂಧಪಟ್ಟಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಈಗಾಗಲೇ ಆಸ್ಪತ್ರೆಗೆ ವೈದ್ಯರನ್ನು ನೇಮಿಸಲಾಗಿದೆ ಎಂಬ ಸಿದ್ಧ ಉತ್ತರ ಸಿಗುತ್ತದೆ. ಆದರೆ, ಇಲ್ಲಿ ಯಾವುದೇ ನರ್ಸ್ ಗಳು ಕೂಡ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈಗಾಗಲೇ ಅನೇಕ ಬಾರಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಸೂಚಿಸಿದರೂ ನಿರ್ಲಕ್ಷ್ಯವಹಿಸಿದ್ದಾರೆ.

ಕೂಡಲೇ ಸಂಬಂಧ ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಂಡು ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವುದರ ಜೊತೆಗೆ ಸಕಾಲದಲ್ಲಿ ರೋಗಿಗಳಿಗೆ ಚಿಕಿತ್ಸೆ ಸಿಗುವಂತೆ ಮಾಡಬೇಕಿದೆ. ಈ ಕಟ್ಟಡವನ್ನು 1996-97ರಲ್ಲಿ ಪ್ರಾರಂಭಿಸಿ ಆರಂಭದಲ್ಲಿ ಐದಾರೂ ತಿಂಗಳು ಮಾತ್ರ ಕಿರಿಯ ಸಹಾಯಕಿಯನ್ನು ನೇಮಕ ಮಾಡಿ ಕೆಲಸ ನಿರ್ವಹಿಸುತ್ತಿದ್ದರು ನಂತರ ಇಲ್ಲಿಯ ವರೆಗೂ ಯಾರನ್ನೂ ನೇಮಿಸಿಲ್ಲ. ಯಾವಾಗಲೂ ಆಸ್ಪತ್ರೆ ಬಾಗಿಲು ಮುಚ್ಚಿರುತ್ತದೆ. ಅನೇಕ ವರ್ಷಗಳಿಂದಲೂ ಆಸ್ಪತ್ರೆಯ ಕಟ್ಟಡ ಖಾಲಿ ಬಿದ್ದಿದ್ದು, ಆಸ್ಪತ್ರೆಯಗಿಡಗಂಟಿಗಳು ಬೆಳೆದಿವೆ. ಇಲ್ಲಿ ಕೆಲವು ಪುಂಡರು ಮದ್ಯಪಾನ ಮತ್ತು ದೂಮಪಾನ ಮಾಡಿ ಪರಿಸರವನ್ನು ಮಲಿನಗೊಳಿಸಿದ್ದಾರೆ ಎಂದು ಸ್ಥಳೀಯರಾದ ಎಸ್‌. ಎಂ.ಮಹದೇವ್‌ ಮತ್ತಿತರರು ದೂರಿದ್ದಾರೆ.

ಶಾಸಕರೇ, ಇಂತಹ ಆಸ್ಪತ್ರೆ ಬೇಕಿತ್ತಾ? :

ಪಿರಿಯಾಪಟ್ಟಣ ತಾಲೂಕಿನ ಎಂ.ಶಟ್ಟಹಳ್ಳಿಯಲ್ಲಿ 1996-97ರಲ್ಲಿ ಆರೋಗ್ಯ ಉಪಕೇಂದ್ರ ಕಟ್ಟಡವನ್ನು ನಿರ್ಮಿಸಲಾಗಿದೆ. ಸುಸಜ್ಜಿತ ಕಟ್ಟಡವಿದ್ದರೂಆರಂಭದಲ್ಲಿ ಐದಾರೂ ತಿಂಗಳು ಮಾತ್ರ ಕಿರಿಯಸಹಾಯಕಿಯನ್ನು ನೇಮಿಸಲಾಗಿತ್ತು. ಬಳಿಕ ಇಲ್ಲಿಗೆ ಯಾವುದೇ ವೈದ್ಯರು, ನರ್ಸ್‌ಗಳನ್ನು ನೇಮಿಸಿಲ್ಲ. ಸುಮಾರು 10-15 ವರ್ಷಗಳಿಂದ ಈ ಆಸ್ಪತ್ರೆ ಸದಾ ಬಾಗಿಲು ಮುಚ್ಚಿರುತ್ತದೆ. ಬಾಗಿಲೇ ಮುಚ್ಚಿರುವಾಗ ಚಿಕಿತ್ಸೆ ಹೇಗೆ ಸಿಗುತ್ತದೆ? ಈ ರೀತಿ ಬೇಕಾಬಿಟ್ಟಿ ಕಾರ್ಯನಿರ್ವಹಿಸುವುದಾದರೆ ಆಸ್ಪತ್ರೆಯನ್ನಾದರೂ ಏಕೆ ತೆರೆಯಬೇಕಿತ್ತು. ಕ್ಷೇತ್ರದ ಶಾಸಕ ಕೆ.ಮಹದೇವ್‌ ಅವರು ಆಸ್ಪತ್ರೆ ದುಸ್ಥಿತಿಯನ್ನು ಪರಿಶೀಲಿಸಿ, ಇಲ್ಲಿಗೆ ನರ್ಸ್‌ಗಳನ್ನು ನೇಮಿಸಿ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುವಂತೆ ಮಾಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಎಂ.ಶಟ್ಟಹಳ್ಳಿಯಲ್ಲಿ ಆರೋಗ್ಯ ಉಪಕೇಂದ್ರ ತೆರೆದಿದ್ದು, ಇಲ್ಲಿಗೆ ಕಿರಿಯಆರೋಗ್ಯ ಸಹಾಯಕಿಯನ್ನು ನೇಮಿಸಿ, ಅವರು ಸ್ಥಳೀಯವಾಗಿವಾಸವಿದ್ದುಸಾರ್ವಜನಿಕರ ಸೇವೆ ಮಾಡಬೇಕೆಂದು ಆದೇಶಿಸಲಾಗಿದೆ. ಆದರೆ, ಇಲ್ಲಿಗೆ ಆರೋಗ್ಯ ಸಹಾಯಕಿ ನಿಗದಿತ ಸಮಯಕ್ಕೆ ಭೇಟಿ ನೀಡುತ್ತಿಲ್ಲ ಎಂಬುದರ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಈ ಬಗ್ಗೆ ಶೀಘ್ರ ಕ್ರಮ ವಹಿಸಲಾಗುವುದು.-ಡಾ| ಶರತ್‌ಬಾಬು, ತಾಲೂಕು ಆರೋಗ್ಯಾಧಿಕಾರಿ

 

– ಪಿ.ಎನ್‌.ದೇವೇಗೌಡ

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.