ಎಸೆಸೆಲ್ಸಿ ಪರೀಕ್ಷೆ: ಮಕ್ಕಳ ಮಾನಸಿಕ ಒತ್ತಡ ದೂರವಾಗಲಿ


Team Udayavani, May 15, 2021, 6:45 AM IST

ಎಸೆಸೆಲ್ಸಿ ಪರೀಕ್ಷೆ: ಮಕ್ಕಳ ಮಾನಸಿಕ ಒತ್ತಡ ದೂರವಾಗಲಿ

ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್‌ಇ) ಹಾಗೂ ಐಸಿಎಸ್‌ಇ ಮಂಡಳಿಗಳು ಪ್ರಸಕ್ತ ಸಾಲಿನ 10ನೇ ತರಗತಿಯ ವಾರ್ಷಿಕ ಪರೀಕ್ಷೆಗಳನ್ನು ರದ್ದು ಮಾಡಿ, ಆಂತರಿಕ ಮೌಲ್ಯಮಾಪನದ ಆಧಾರದಲ್ಲಿ ಫಲಿತಾಂಶ ಪ್ರಕಟಿಸುವುದಾಗಿ ಘೋಷಿಸಿವೆ. ಇದರ ಜತಗೆ ಸಿಬಿಎಸ್‌ಇಯು ವಿದ್ಯಾರ್ಥಿಗಳಿಗೆ ಇನ್ನೊಂದು ಆಯ್ಕೆಯನ್ನು ನೀಡಿದೆ. ಆಂತರಿಕ ಮೌಲ್ಯಮಾಪನದ ಫಲಿತಾಂಶದಲ್ಲಿ ತೃಪ್ತಿಕಾಣದ ವಿದ್ಯಾರ್ಥಿಗಳು ಕೊರೊನಾ ಪರಿಸ್ಥಿತಿ ತಹಬದಿಗೆ ಬಂದ ನಂತರ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಹೀಗಾಗಿ 10ನೇ ತರಗತಿ ಮಕ್ಕಳಿಗೆ ಇರುವ ಗೊಂದಲವನ್ನು ಬಹುತೇಕ ಬಗೆಹರಿಸಿದೆ.

ರಾಜ್ಯ ಸರಕಾರ ಕೂಡ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸೆಸೆಲ್ಸಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಜೂನ್‌ 21ರಿಂದ ಎಸೆಸೆಲ್ಸಿ ಪರೀಕ್ಷೆ ಆರಂಭವಾಗಬೇಕಿತ್ತು. ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಿರುವುದರಿಂದ ಸದ್ಯ ಪರೀಕ್ಷೆಯನ್ನು ಮುಂದೂಡಲಾಗಿದೆ. ಆದರೆ, ತಜ್ಞರು ಈಗಾಗಲೇ ಮೂರನೇ ಅಲೆಯ ಆತಂಕವನ್ನು ಹೊರಹಾಕಿದ್ದಾರೆ. ಸದ್ಯ ಪರಿಸ್ಥಿತಿಯಲ್ಲಿ ಜುಲೈ ಅಂತ್ಯದ ವರೆಗೂ ಪರೀಕ್ಷೆ ನಡೆಸುವುದು ಅತ್ಯಂತ ಕಷ್ಟ. ಹೀಗಾಗಿ ಪರೀಕ್ಷೆಯ ಒತ್ತಡ ಮಕ್ಕಳಲ್ಲಿ ಇದ್ದೇ ಇರುತ್ತದೆ. ವಿದ್ಯಾರ್ಥಿಗಳು ಸಹಿತವಾಗಿ ಪಾಲಕ, ಪೋಷಕರಲ್ಲೂ ಮಾನಸಿಕ ಒತ್ತಡ ಹೆಚ್ಚಾಗಲಿದೆ.

ಕಳೆದ ವರ್ಷವೂ ಎಸೆಸೆಲ್ಸಿ ಪರೀಕ್ಷೆ ವಿಳಂಬವಾಗಿ ನಡೆದಿತ್ತು. ಈ ವರ್ಷದ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿರುವುದರಿಂದ ಸರಕಾರ ಎಸೆಸೆಲ್ಸಿ ಪರೀಕ್ಷೆ ವಿಚಾರವಾಗಿ ಸ್ಪಷ್ಟ ನಿಲುವು ಹೊಂದುವುದು ಅನಿವಾರ್ಯ ವಾಗಿದೆ. ಆಂತರಿಕ ಮೌಲ್ಯಮಾಪನದ ಆಧಾರದಲ್ಲಿ (ಸಿಬಿಎಸ್‌ಇ ತೆಗೆದುಕೊಂಡಿರುವ ನಿರ್ದಾರದಂತೆ) ರಾಜ್ಯ ಪಠ್ಯಕ್ರಮದ ಎಸೆಸೆಲ್ಸಿ ವಿದ್ಯಾರ್ಥಿಗಳ ತೇರ್ಗಡೆ ಕಷ್ಟಸಾಧ್ಯ. ಸಿಬಿಎಸ್‌ಇ ತನ್ನ ಮಕ್ಕಳಿಗೆ ಆನ್ಲ„ನ್‌ ಮೂಲಕ ಸಮರ್ಪಕವಾಗಿ ಪಾಠ ಮಾಡಿದೆ. ಆದರೆ, ರಾಜ್ಯ ಪಠ್ಯಕ್ರಮದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಅಥವಾ ಆನ್ಲ„ನ್‌ ತರಗತಿ ಸರಿಯಾಗಿ ನಡೆದಿಲ್ಲ. ಅದರಲ್ಲೂ ಸರಕಾರಿ ಶಾಲಾ ಮಕ್ಕಳಿಗೆ ತರಗತಿಗಳು ಸಮರ್ಪಕವಾಗಿ ನಡೆದೇ ಇಲ್ಲ. ಹೀಗಾಗಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೂಕ್ತ ನಿರ್ಧಾರ ಪ್ರಕಟಿಸಬೇಕು. ಪರೀಕ್ಷೆ ಮುಂದೂಡುವುದರಿಂದ ಮಕ್ಕಳಲ್ಲಿ ಪರೀಕ್ಷಾ ಒತ್ತಡ, ಮಾನಸಿಕ ಯಾತನೆ ಕಡಿಮೆ ಮಾಡಲು ಸಾಧ್ಯವಿಲ್ಲ. ತೇರ್ಗಡೆಗೆ ಬೇಕಾದ ಉತ್ಕೃಷ್ಟ ಮಾರ್ಗದ ಶೋಧನೆ ಅತ್ಯವಶ್ಯಕ.

ಹಾಗೆಯೇ ಸದ್ಯ 9ನೇ ತರಗತಿ ತೇರ್ಗಡೆಯಾಗಿ 10ನೇ ತರಗತಿ (ಎಸೆಸೆಲ್ಸಿ) ಪ್ರವೇಶಿಸಲಿರುವ ವಿದ್ಯಾರ್ಥಿಗಳಿಗೂ ಆದಷ್ಟು ಬೇಗ ಪಠ್ಯ ಚಟುಚಟಿಕೆ ಆರಂಭಿಸಬೇಕು. ಕಾರಣ, ಈ ವಿದ್ಯಾರ್ಥಿಗಳು 8 ಮತ್ತು 9ನೇ ತರಗತಿಯಲ್ಲಿ ಮೌಲ್ಯಾಂಕನ ಪರೀಕ್ಷೆ ಇಲ್ಲದೆ ತೇರ್ಗಡೆಯಾಗಿದ್ದಾರೆ. ಎಸೆಸೆಲ್ಸಿ ತುಸು ಕಠಿನ ಎನಿಸಬಹುದು. ಹೀಗಾಗಿ ಈಗಿಂದಲೇ ಸಜ್ಜುಗೊಳಿಸುವ ಅಗತ್ಯವಿದೆ ಮತ್ತು ಈ ನಿಟ್ಟಿನಲ್ಲಿ ಸರಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಇನ್ನು ಅತ್ತ ಸಿಬಿಎಸ್‌ಇ ದ್ವಿತೀಯ ಪರೀಕ್ಷಾ ರದ್ದು ವಿಚಾರದ ಬಗ್ಗೆಯೂ ಶುಕ್ರವಾರ ಕೆಲವೊಂದು ಗೊಂದಲಗಳೆದಿದ್ದವು. ಪರೀಕ್ಷಾ ಮಂಡಳಿ ಪರೀಕ್ಷೆಯನ್ನು ರದ್ದು ಮಾಡಿದೆ ಎಂಬ ಸುದ್ದಿಯಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕಡೆಗೆ ಸಿಬಿಎಸ್‌ಇ ಇಂಥ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿತು.

ಟಾಪ್ ನ್ಯೂಸ್

Kohli IPL 2024

RCB ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ಮಾಡಬೇಕು: ಹರ್ಭಜನ್ ಹೇಳಿದ್ದೇನು?

1-weeqweqw

Mumbai: ಬಿರುಗಾಳಿ ಮಳೆ ಅಬ್ಬರಕ್ಕೆ ಬಿಲ್ ಬೋರ್ಡ್ ಕುಸಿದು 54 ಮಂದಿಗೆ ಗಾಯ

Opposition cowards fearing Pakistan’s nuclear power: PM Modi

Election; ಪಾಕಿಸ್ತಾನದ ಪರಮಾಣು ಶಕ್ತಿಗೆ ಹೆದರುವ ವಿಪಕ್ಷದ ಹೇಡಿಗಳು…: ಪ್ರಧಾನಿ ಮೋದಿ

Revanna 2

Bail; ಎಚ್.ಡಿ.ರೇವಣ್ಣ ಅವರಿಗೆ ಷರತ್ತು ಬದ್ದ ಜಾಮೀನು ಮಂಜೂರು

1-wewqeqe

Rahul Gandhi ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲಿಲ್ಲ: ಶಾ ವಾಗ್ದಾಳಿ

Gangavathi ಖಾಸಗಿ ಶಾಲೆಗಳಿಂದ ಪ್ರವೇಶ ನೆಪದಲ್ಲಿ ಲಕ್ಷಾಂತರ ರೂ.ವಸೂಲಿ ಖಂಡಿಸಿ ಪ್ರತಿಭಟನೆ

Gangavathi ಖಾಸಗಿ ಶಾಲೆಗಳಿಂದ ಪ್ರವೇಶ ನೆಪದಲ್ಲಿ ಲಕ್ಷಾಂತರ ರೂ.ವಸೂಲಿ ಖಂಡಿಸಿ ಪ್ರತಿಭಟನೆ

siddanna

Eknath Shinde ಭ್ರಮೆಯಲ್ಲಿದ್ದಾರೆ, ನಮ್ಮ ಶಾಸಕರು ಮಾರಾಟವಾಗಲು ಸಿದ್ದರಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Revanna 2

Bail; ಎಚ್.ಡಿ.ರೇವಣ್ಣ ಅವರಿಗೆ ಷರತ್ತು ಬದ್ದ ಜಾಮೀನು ಮಂಜೂರು

siddanna

Eknath Shinde ಭ್ರಮೆಯಲ್ಲಿದ್ದಾರೆ, ನಮ್ಮ ಶಾಸಕರು ಮಾರಾಟವಾಗಲು ಸಿದ್ದರಿಲ್ಲ: ಸಿದ್ದರಾಮಯ್ಯ

police

Vijayapura: ಕಾಣೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ

MLC Election; ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಪಕ್ಷೇತರ ಸ್ಪರ್ಧೆಗೆ ರಘುಪತಿ ಭಟ್ ನಿರ್ಧಾರ

MLC Election; ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಪಕ್ಷೇತರ ಸ್ಪರ್ಧೆಗೆ ರಘುಪತಿ ಭಟ್ ನಿರ್ಧಾರ

Sirsi: ಸಣ್ಣಕೇರಿಯ ದೊಡ್ಡ‌ಕೆರೆಗೆ‌ ಕಾಯಕಲ್ಪ… ಕೆರೆ ಅಭಿವೃದ್ಧಿಗೆ ಚಾಲನೆ

Sirsi: ಕೆರೆ ಅಭಿವೃದ್ದಿ ಮಾಡಿದರೆ ಮಾತ್ರ ಜಲ ಸಂರಕ್ಷಣೆ ಸಾಧ್ಯ… :ಶ್ರೀನಿವಾಸ ಹೆಬ್ಬಾರ್

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Kohli IPL 2024

RCB ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ಮಾಡಬೇಕು: ಹರ್ಭಜನ್ ಹೇಳಿದ್ದೇನು?

1-weeqweqw

Mumbai: ಬಿರುಗಾಳಿ ಮಳೆ ಅಬ್ಬರಕ್ಕೆ ಬಿಲ್ ಬೋರ್ಡ್ ಕುಸಿದು 54 ಮಂದಿಗೆ ಗಾಯ

Opposition cowards fearing Pakistan’s nuclear power: PM Modi

Election; ಪಾಕಿಸ್ತಾನದ ಪರಮಾಣು ಶಕ್ತಿಗೆ ಹೆದರುವ ವಿಪಕ್ಷದ ಹೇಡಿಗಳು…: ಪ್ರಧಾನಿ ಮೋದಿ

Revanna 2

Bail; ಎಚ್.ಡಿ.ರೇವಣ್ಣ ಅವರಿಗೆ ಷರತ್ತು ಬದ್ದ ಜಾಮೀನು ಮಂಜೂರು

qpl

Queen Premier League; ಸಿನಿಮಾ ಸೀರಿಯಲ್ ನಟಿಯರ ಕ್ರಿಕೆಟ್ ಪಂದ್ಯಾವಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.