ಭಟ್ಕಳದಲ್ಲಿ ಚಂಡಮಾರುತದ ರುದ್ರ ನರ್ತನ

Team Udayavani, May 16, 2021, 7:35 PM IST

chandamaruta (11)

ಭಟ್ಕಳ: ತೌಕ್ತೆ ಚಂಡಮಾರುತದ ಪರಿಣಾಮ ಶನಿವಾರ ಮಧ್ಯಾಹ್ನ ತಾಲೂಕಿನ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಕಡಲ್ಕೊರೆತ ಉಂಟಾಗಿ ಅಪಾರ ಹಾನಿಯಾಗಿದೆ. ಮಾವಿನಕುರ್ವೆ ಬಂದರು, ಮುಡೇìಶ್ವರದಲ್ಲಿ ಲಂಗರು ಹಾಕಿದ್ದ ಬೋಟು, ದೋಣಿಳು ಒಂದೊಕ್ಕೊಂದು ಬಡಿದುಕೊಂಡು ಹಾನಿ ಸಂಭವಿಸಿದೆ.

ಶನಿವಾರ ಬೆಳಗ್ಗೆಯಿಂದಲೇ ಗಾಳಿ ಮಳೆಯ ಆರ್ಭಟ ಹೆಚ್ಚಿದ್ದರಿಂದ ಜಾಲಿಕೋಡಿಯಲ್ಲಿ ತಡೆಗೋಡೆ ದಾಟಿ ನೀರು ರಸ್ತೆಗೆ, ತೋಟಕ್ಕೆ ಹಾಗೂ ತೀರದ ಮನೆಗಳಿಗೆ ನುಗ್ಗಿದ್ದು, ತೀವ್ರ ಕಡಲ್ಕೊರೆತ ಉಂಟಾಗಿದೆ. ಮಾವಿನಕುರ್ವೆ ಬಂದರಿನಲ್ಲೂ ಸಮುದ್ರದ ಅಲೆಗಳು ಒಮ್ಮೆಲೆ ನುಗ್ಗಿದ್ದರಿಂದ ಲಂಗರು ಹಾಕಿದ್ದ ಬೋಟ್‌ಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿದ್ದು ಹಾನಿಯಾಗಿವೆ.

ಬಂದರಿನ ದಕ್ಕೆಯವರೆಗೂ ನೀರು ಏರಿದ್ದು, ಮೀನುಗಾರರು ಒಮ್ಮೆ ಭಯಗೊಂಡಿದ್ದರು. ತಲಗೋಡಿನಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಆಳೆತ್ತರದ ಅಲೆಗಳು ತಡೆಗೋಡೆ ದಾಟಿ ರಸ್ತೆಗೆ ಬಂದು ಅಪ್ಪಳಿಸಿವೆ. ಅಲೆಗಳ ಹೊಡೆತಕ್ಕೆ ತಡೆಗೋಡೆಯ ಕಲ್ಲುಗಳು ಸಮುದ್ರ ಪಾಲಾಗಿವೆ. ಹೆಬಳೆಯ ಹೊನ್ನೆಗದ್ದೆಯಲ್ಲೂ ಇದೇ ಪರಿಸ್ಥಿತಿ ಉಂಟಾಗಿದೆ.

ಮುರ್ಡೇಶ್ವರದಲ್ಲಿ ಭಾರೀ ಗಾತ್ರದ ಅಲೆಗಳು ದಡದಲ್ಲಿದ್ದ ದೋಣಿ, ಗೂಡಂಗಡಿಗಳಿಗೆ ಹಾನಿಯುಂಟು ಮಾಡಿದೆ. ದಡದಲ್ಲಿ ದೋಣಿ ಕಟ್ಟಿದ ಹಗ್ಗ ಅಲೆಗಳ ಹೊಡೆತಕ್ಕೆ ತುಂಡಾಗಿದ್ದರಿಂದ ಮೀನುಗಾರರು ದೋಣಿ ರಕ್ಷಣೆಗೆ ಹರಸಾಹಸಪಟ್ಟರು. ಜಾಲಿಯಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡ ಕುರಿತು ತಿಳಿದ ಪಪಂ ಮುಖ್ಯಾಧಿಕಾರಿ ಅಜಯ ಭಂಡಾರಕರ್‌ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ತೀರವಾಸಿಗಳಿಗೆ ಜಾಗೃತರಾಗಿರುವಂತೆ ಸೂಚಿಸಿದರು.

ಜಾಲಿ ವ್ಯಾಪ್ತಿಯಲ್ಲಿ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಪಪಂ ವತಿಯಿಂದ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ರಾತ್ರಿ ವೇಳೆ ಅಲೆಗಳ ಅಬ್ಬರ ಹೆಚ್ಚಾಗಬಹುದೆಂಬ ಭಯ ಕೆಲವರಲ್ಲಿ ಆವರಿಸಿದೆ. ಜಾಲಿಕೋಡಿ ಕಡಲತೀರದಲ್ಲಿ ಅಪಾಯದಲ್ಲಿರುವ ಐದು ಮನೆಗಳ ಜನರನ್ನು ಬೇರೆಕಡೆಗೆ ಸ್ಥಳಾಂತರಿಸಲಾಗಿದೆ.

ಎರಡು ಕಡೆ ಗಂಜಿ ಕೇಂದ್ರ ಸ್ಥಾಪನೆ: ಜಾಲಿಯಲ್ಲಿ ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿದ್ದರಿಂದ ಈಗಾಗಲೇ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಕಡಲತೀರಕ್ಕೆ ಯಾರೂ ಹೋಗಬಾರದು ಮತ್ತು ಜಾಗೃತೆಯಿಂದ ಇರುವಂತೆ ಮೈಕ್‌ ಮೂಲಕ ಜಾಗೃತಿ ಮೂಡಿಸಲಾಗಿದೆ. ಸಂಕಷ್ಟದಲ್ಲಿರುವ ತೀರದ ಕುಟುಂಬಗಳಿಗೆ ಅನುಕೂಲವಾಗಲು ಜಾಲಿಕೋಡಿ ಸರಕಾರಿ ಪ್ರೌಢಶಾಲೆಯಲ್ಲಿ ಮತ್ತು ನಾಮಧಾರಿ ಸಭಾಭವನದಲ್ಲಿ ಗಂಜಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಅಜಯ ಭಂಡಾರಕರ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-wqeqewqe

BJP vs Congress ; ಧಾರವಾಡದಲ್ಲಿ ಯಾರೇ ಗೆದ್ದರೂ ದಾಖಲೆ!

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ

Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ

canada

Nijjar ಕೇಸ್ ತನಿಖೆ ಮೂವರ ಬಂಧನಕ್ಕೆ ಮುಕ್ತಾಯವಾಗಿಲ್ಲ: ಕೆನಡಾ ಪ್ರಧಾನಿ

ಸಿ.ಟಿ. ರವಿ

Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ

jairam ramesh

PM ಮೋದಿ ಒಬಿಸಿ ಮೀಸಲಾತಿಗೆ ಕೋಮು ಬಣ್ಣ ನೀಡಲು ಪ್ರಯತ್ನಿಸುತ್ತಿದ್ದಾರೆ: ಕಾಂಗ್ರೆಸ್

1BP

NADA; ಕುಸ್ತಿಪಟು ಬಜರಂಗ್ ಅನಿರ್ದಿಷ್ಟಾವಧಿಗೆ ಅಮಾನತು: ಒಲಿಂಪಿಕ್ಸ್‌ ಭಾಗಿ ಅನುಮಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿ.ಟಿ. ರವಿ

Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ

8-

ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

7-haveri

Haveri: ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ; ವಿಡಿಯೋ ವೈರಲ್

dvs

Bellary; ಸಿದ್ದರಾಮಯ್ಯ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಸದಾನಂದ ಗೌಡ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

BJP vs Congress ; ಧಾರವಾಡದಲ್ಲಿ ಯಾರೇ ಗೆದ್ದರೂ ದಾಖಲೆ!

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ

Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ

canada

Nijjar ಕೇಸ್ ತನಿಖೆ ಮೂವರ ಬಂಧನಕ್ಕೆ ಮುಕ್ತಾಯವಾಗಿಲ್ಲ: ಕೆನಡಾ ಪ್ರಧಾನಿ

ಸಿ.ಟಿ. ರವಿ

Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.