ಕೋವಿಡ್ ತಡೆಗೆ ಸಮನ್ವಯದಿಂದ ಕೆಲಸ ಮಾಡಿ


Team Udayavani, May 18, 2021, 5:27 PM IST

ಕೋವಿಡ್ ತಡೆಗೆ ಸಮನ್ವಯದಿಂದ ಕೆಲಸ ಮಾಡಿ

ತುಮಕೂರು: ಜಿಲ್ಲೆ ಸೇರಿದಂತೆ ಗ್ರಾಮಾಂತರ ಕ್ಷೇತ್ರ ದಲ್ಲಿಯೂಸೋಂಕಿನ ತೀವ್ರತೆಹೆಚ್ಚಿದ್ದು ನಿಯಂತ್ರಿಸಲು ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ಸೂಚಿಸಿದರು.

ನಗರದ ತಾಪಂ ಆವರಣದಲ್ಲಿ ಸೋಮವಾರ ಪಿಡಿಒ, ಕಂದಾಯ ಅಧಿಕಾರಿಗಳು, ಪೊಲೀಸ್‌ ಇಲಾಖೆ ಅಧಿಕಾರಿಗಳೊಂದಿಗೆ ಕೊರೊನಾ ಸೋಂಕುನಿಯಂತ್ರಣ ಸಂಬಂಧ ಸಭೆ ನಡೆಸಿ ಮಾತನಾಡಿದರು. ಬೆಂಗಳೂರು, ಮೈಸೂರು ಹೊರತುಪಡಿಸಿದರೆ ತುಮಕೂರು ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು, ಕೊರೊನಾ ನಿರ್ವಹಣೆ ಸಮಿತಿಯಾಗಲಿ, ರಾಜ್ಯ ಸರ್ಕಾರವಾಗಲಿ ಜಿಲ್ಲೆಗೆ ಆದ್ಯತೆ ನೀಡುವ ಮೂಲಕ ಸೋಂಕು ನಿಯಂತ್ರಣಕ್ಕೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಕೆಲಖಾಸಗಿ ಆಸ್ಪತ್ರೆಗಳಲ್ಲಿಕೋವಿಡ್‌ ಸೋಂಕಿತರಿಗೆ ಹೊರಗಡೆಯಿಂದ ಔಷಧ ತರಲು ಹೇಳುತ್ತಿದ್ದಾರೆ. ಎಬಿಆರ್‌ಕೆ ಯೋಜನೆಯಡಿ ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸ್ಸು ಹೊಂದಿದ ರೋಗಿಗಳಿಗೆ ಹಣ ಕಟ್ಟಲು ಹೇಳುತ್ತಿದ್ದಾರೆ. ತಾಲೂಕು ಆರೋಗ್ಯ ಅಧಿಕಾರಿಗಳು, ತಹಶೀಲ್ದಾರ್‌ ಈ ಬಗ್ಗೆ ಗಮನಹರಿಸಬೇಕೆಂದರು.

ಕೋವಿಡ್ ಮುಕ್ತ ಕ್ಷೇತ್ರ: ಸ್ಯಾಚುರೇಷನ್‌ 94 ಕ್ಕೂ ಹೆಚ್ಚಿದ್ದರೆ ಅವರಿಗೆ ಯಾವುದೇ ತೊಂದರೆ ಇಲ್ಲ. ಅವರಲ್ಲಿ ಧೈರ್ಯತುಂಬಿ ಕೇರ್‌ ಸೆಂಟರ್‌ಗೆ ಹೋಗಲು ಮನವೊಲಿಸಬೇಕು. ಈಗಾಗಲೇ ರೆಡ್‌ಕ್ರಾಸ್‌ನಿಂದ ಬೆಳಗುಂಬದಲ್ಲಿ, ವೈಯಕ್ತಿಕವಾಗಿ ಕೋಡಿಮುದ್ದನಹಳ್ಳಿಯಲ್ಲಿ ಕೋವಿಡ್‌ಕೇರ್‌ ಸೆಂಟರ್‌ ಪ್ರಾರಂಭಿಸಲಾಗಿದೆ. 3ನೇ ಅಲೆ ಎಚ್ಚರಿಕೆ ಹಿನ್ನೆಲೆಯಲ್ಲಿ ನೇರಳಾಪುರ, ಕಣ ಕುಪ್ಪೆ ವಸತಿ ಶಾಲೆಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಪ್ರಾರಂಭಿಸಲು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ ಮೋಹನ್‌ಕುಮಾರ್‌, ಆರೋಗ್ಯಾಧಿಕಾರಿ ಲೋಕೇಶ್‌ರಿಗೆ ಸೂಚನೆ ನೀಡಿದರು. ಸೋಂಕಿತರನ್ನು ಕೋವಿಡ್‌ ಸೆಂಟರ್‌ಗೆ ಕಳುಹಿಸಿದರೆ ಗ್ರಾಮಾಂತರ ಕ್ಷೇತ್ರ ಅರ್ಧಗೆದ್ದಂತೆ. ಗ್ರಾಮಗಳಲ್ಲಿವಾರಕ್ಕೆ 2 ಬಾರಿ ಸ್ಯಾನಿಟೈಸ್‌ ಮಾಡಿಸಲು ಪಿಡಿಒಗಳು ಕ್ರಮವಹಿಸಬೇಕು. ಸಾಮಗ್ರಿಕೊರತೆ ಇದ್ದರೆ ವೈಯಕ್ತಿಕವಾಗಿ ಕೊಡಿಸುವುದಾಗಿ ತಿಳಿಸಿದರು.

ಕಠಿಣವಾಗಿ ನಿಯಮ ಪಾಲಿಸಿ: ಪೊಲೀಸ್‌ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಕಠಿಣವಾಗಿ ಪಾಲಿ ಸಬೇಕು, ಯಾವುದೇ ಶಿಫಾರಸ್ಸು ಪರಿಗಣಿಸದೇನಿಯಮ ಪಾಲಿಸಬೇಕು. ಹಾಲು ಉತ್ಪಾದಕರ ಸಂಘಗಳಲ್ಲಿ ಹಾಲು ಹಾಕಲು ಅಂತರ ಕಾಪಾಡದೇ ಇದ್ದರೇಡೇರಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಗ್ರಾಮಾಂತರ ಕ್ಷೇತ್ರದ ಕಾರ್ಖಾನೆಗಳು ಸರ್ಕಾರಿ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದರೆ ಪ್ರಕರಣ ದಾಖಲಿಸಿ ಮುಚ್ಚಿಸಬೇಕು. ಪ್ರತಿದಿನ ನಿಯ ಮಾನುಸಾರ ಪಡಿತರ ವಿತರಣೆಗೆ ಕ್ರಮವಹಿಸಬೇಕು. ಕೋವಿಡ್ ಹಾಟ್‌ ಸ್ಪಾಟ್‌ನಲ್ಲಿ ಸೋಂಕು ತಗ್ಗಿಸಲು ಯೋಜನೆ ರೂಪಿಸಬೇಕೆಂದರು.

ಸಹಾಯವಾಣಿ ಸಂಪರ್ಕಿಸಿ: ಗ್ರಾಮಾಂತರ ಕ್ಷೇತ್ರಕ್ಕಾಗಿಯೇ 4 ಆ್ಯಂಬುಲೆನ್ಸ್‌ ಮತ್ತು ಸೋಂಕಿತರ ಅಂತ್ಯಸಂಸ್ಕಾರಕ್ಕೆ ಜೆಸಿಬಿ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಜೆಸಿಬಿ ಬಾರದೇ ಹೋದರೆ ಅಥವಾ ಆಸ್ಪತ್ರೆಗೆ ಹೋಗಲು ಆ್ಯಂಬುಲೆನ್ಸ್‌ ಅವಶ್ಯಕವಾದರೆ ಶಾಸಕರ ಸಹಾಯ ವಾಣಿಯನ್ನು ಸಂಪರ್ಕಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಡಿವೈಎಸ್ಪಿ ಎಚ್‌.ಶ್ರೀನಿವಾಸ್‌, ತಹಶೀಲ್ದಾರ್‌ಮೋಹನ್‌ಕುಮಾರ್‌, ಇಒ ಜೈಪಾಲ್‌, ಆರೋಗ್ಯಾಧಿಕಾರಿ ಲೋಕೇಶ್‌, ಗ್ರಾಮಾಂತರಕ್ಷೇತ್ರ ವ್ಯಾಪ್ತಿಯ ಸಬ್‌ ಇನ್ಸ್‌ಪೆಕ್ಟರ್‌ಗಳು, ಪಿಡಿಒಗಳಿದ್ದರು.

ವೈಯಕ್ತಿಕ ಹಣದಿಂದ ಮಾತ್ರೆಖರೀದಿಸಿ ನೀಡುವೆ :

ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು2-3 ಸಾವಿರ ರೂ.ನ ಔಷಧಿ ಬರೆದುಕೊಟ್ಟರೆ, ರೈತರು ಎಲ್ಲಿಂದ ತಂದು ಕೊಡುತ್ತಾರೆ. ಎಬಿಆರ್‌ಕೆ ಯೋಜನೆಯಡಿ ದಾಖಲಾದವರಿಗೂ ಔಷಧ ನೀಡುತ್ತಿಲ್ಲ ಎಂಬ ಆರೋಪಕೇಳಿ ಬರುತ್ತಿವೆ. ಗ್ರಾಮಾಂತರ ಕ್ಷೇತ್ರದ ಸೋಂಕಿತರಿಗೆ ಔಷಧಕೊರತೆ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳು ಗಮನಕ್ಕೆ ತಂದಿದ್ದಾರೆ. 2 ದಿನಕ್ಕೊಮ್ಮೆ6ಸಾವಿರ ಮಾತ್ರೆಗಳನ್ನು ವೈಯಕ್ತಿಕವಾಗಿ ಖರೀದಿಸಿ ನೀಡುವುದಾಗಿ ಶಾಸಕ ಡಿ.ಸಿ.ಗೌರಿಶಂಕರ್‌ ತಿಳಿಸಿದರು.

ಗ್ರಾಮಾಂತರಕ್ಷೇತ್ರದಲ್ಲಿ ಸೋಂಕಿತರು ಹೆಚ್ಚಾಗದಂತೆ ಅಧಿಕಾರಿಗಳು ಗಮನಹರಿಸಬೇಕು. ಈಗ 2ನೇ ಅಲೆತೀವ್ರವಾಗಿದೆ. ಮುಂದೆ 3ನೇ ಅಲೆ ಬರುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಜಾಗೃತರಾಗಲಿ.-ಡಿ.ಸಿ.ಗೌರಿಶಂಕರ್‌, ಶಾಸಕರು

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.