Airforce Test Pilot ಪದವೀಧರೆಯಾದ ಮೊದಲ ಭಾರತೀಯ ಮಹಿಳೆ: ಚಾ.ನಗರ ಜಿಲ್ಲೆಯ ಆಶ್ರಿತಾ ಒಲೇಟಿ

Team Udayavani, May 23, 2021, 8:08 PM IST

Airforce Test Pilot ಪದವೀಧರೆಯಾದ ಮೊದಲ ಭಾರತೀಯ ಮಹಿಳೆ: ಚಾ.ನಗರ ಜಿಲ್ಲೆಯ ಆಶ್ರಿತಾ ಒಲೇಟಿ

ಚಾಮರಾಜನಗರ: ಬೆಂಗಳೂರಿನ ಎಚ್‌ಎಎಲ್ ನಲ್ಲಿರುವ ಏರ್‌ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್‌ನಲ್ಲಿ ಫ್ಲೈಟ್ ಟೆಸ್ಟ್ ಇಂಜಿನಿಯರ್ ಪದವಿ ಪೂರೈಸುವ ಮೂಲಕ ಜಿಲ್ಲೆಯ ಕೊಳ್ಳೇಗಾಲ ಮೂಲದ ಆಶ್ರಿತಾ ವಿ ಒಲೇಟಿ ಭಾರತೀಯ ವಾಯುಪಡೆಯ ಮೊತ್ತಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸ್ವ್ಕಾಡ್ರನ್ ಲೀಡರ್ ಆಶ್ರಿತಾ ವಿ ಒಲೇಟಿ ಪ್ರತಿಷ್ಠಿತ ಏರ್‌ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲಿನಲ್ಲಿ ಪದವೀಧರೆ. ಇಡೀ ವಿಶ್ವದಲ್ಲಿ ಏಳು ವಿವಿಗಳು ಮಾತ್ರ ಇಂಥ ಶಾಲೆ ಹೊಂದಿವೆ. ಈ ಶಾಲೆಯ 275 ಮಂದಿ ಮಾತ್ರ ಈ ಕೋರ್ಸ್ ಸಂಪೂರ್ಣಗೊಳಿಸಿ ಪದವಿ ಪಡೆದಿದ್ದಾರೆ. ಇವರಲ್ಲಿ ಆಶ್ರಿತಾ ಒಲೆಟಿ, ಈ ಕೋರ್ಸ್ ನಲ್ಲಿ ಉತ್ತೀರ್ಣರಾದ ಮೊದಲ ಭಾರತೀಯ ವಾಯುಪಡೆ ಅಧಿಕಾರಿಯಾಗಿದ್ದಾರೆ.

ಈ ಹುದ್ದೆಗೆ ಉತ್ತರ ಭಾರತದ ಯುವ ಪುರುಷ ವಾಯುಸೇನೆ ಪೈಲಟ್‌ಗಳೇ ಆಯ್ಕೆಯಾಗುತ್ತಾರೆ. ದಕ್ಷಿಣ ಭಾರತದ ಮಂದಿ ತೀರಾ ಕಡಿಮೆ. ಮಹಿಳೆಯರಂತೂ ಇರಲೇ ಇಲ್ಲ.

ಇದನ್ನೂ ಓದಿ :ರಾಜ್ಯದಲ್ಲಿಂದು  25979 ಕೋವಿಡ್ ಪ್ರಕರಣ ಪತ್ತೆ : 626 ಜನರ ಸಾವು

ಏರೋಸ್ಪೇಸ್ ಇಂಜಿನಿಯರ್ ಆಗಿರುವ ಆಶ್ರಿತಾ, 2014ರಲ್ಲಿ ವಾಯುಪಡೆಯ ತಾಂತ್ರಿಕ ವಿಭಾಗಕ್ಕೆ ಆಯ್ಕೆಯಾಗಿದ್ದರು.

ಅತಿವೇಗವಾಗಿ ಸ್ಕ್ವಾಡ್ರನ್ ಲೀಡರ್ ಹುದ್ದೆ ಸಹ ಗಳಿಸಿ, ಕಠಿಣ ಪರೀಕ್ಷೆಗಳನ್ನು ಪಾಸು ಮಾಡಿ ಟೆಸ್ಟ್ ಪೈಲಟ್ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಏರ್‌ಕ್ರಾಫ್‌ಟ್ ಆಂಡ್ ಸಿಸ್ಟಮ್‌ಸ್ ಎಸ್ಟಾಬ್ಲಿಷ್‌ಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಆಶ್ರಿತಾ ತಂದೆ ಓ.ವಿ. ವೆಂಕಟೇಶಬಾಬು ಜಿಲ್ಲೆಯ ಕೊಳ್ಳೇಗಾಲದಲ್ಲಿ ಆಭರಣ ವ್ಯಾಪಾರಿಯಾಗಿದ್ದಾರೆ. ತಾಯಿ ಓ.ವಿ. ವಾಣಿ ಗೃಹಿಣಿಯಾಗಿದ್ದಾರೆ.

ಟೆಸ್ಟ್ ಪೈಲಟ್ ಎಂದರೇನು?
ಟೆಸ್ಟ್ ಪೈಲಟ್ ಎಂದರೆ, ಹೊಸ ವಿಮಾನ, ಹೆಲಿಕಾಪ್ಟರ್‌ಗಳು ಹಾರಾಟಕ್ಕೆ ಯೋಗ್ಯವೇ ಎಂದು ನಿರ್ಧರಿಸುವುದು. ಯಾವುದಾದರೂ ಹಳೆಯ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ರಿಪೇರಿ ಅಥವಾ ಕಾಲಕಾಲಕ್ಕೆ ನಿರ್ವಹಣೆಗೊಳಪಟ್ಟಾಗ, ಆ ಕಾರ್ಯ ಮುಗಿದ ನಂತರ, ಅಂತಹ ಯುದ್ಧ ಅಥವಾ ಸರಕು ವಿಮಾನ ಹಾರಾಡಲು ಯೋಗ್ಯವೇ ಎಂಬುದನ್ನು ಈ ಟೆಸ್ಟ್ ಪೈಲಟ್‌ಗಳು ವಿಮಾನವನ್ನು ಹಾರಿಸಿ, ದೃಢೀಕರಣ ನೀಡಬೇಕು. ಇಲ್ಲವಾದಲ್ಲಿ ಆ ವಿಮಾನ ಪ್ರಮಾಣಪತ್ರ ಪಡೆಯಲು ವಿಫಲವಾದಲ್ಲಿ ಮತ್ತೆ ಅಂತಹ ಟೆಸ್ಟ್ ಪೈಲಟ್ ನೀಡುವ ವರದಿಯನುಸಾರ ಮತ್ತೆ ಪರಿಶೀಲಿಸಿ ದುರಸ್ತಿಗೊಳಿಸಿ ಮತ್ತೆ ಟೆಸ್ಟ್ ಪೈಲಟ್ ನಿಂದ ಪರೀಕ್ಷೆಗೊಳಪಡಬೇಕು.

ಯಾವುದೇ ಹೊಸ ವಿಮಾನ ಖರೀದಿಯಾದಾಗಲೂ ಅವುಗಳು ಟೆಸ್ಟ್ ಪೈಲಟ್ ಗಳಿಂದ ಪರೀಕ್ಷಾ ಚಾಲನೆ ಆಗಲೇಬೇಕು ಹಾಗೂ ದೃಢೀಕರಣ ಆಗಲೇಬೇಕು.

ಇಂತಹ ಹುದ್ದೆಗೆ ನೂರಾರು ಪೈಲಟ್ ಗಳಲ್ಲಿ ಅವರ ವಿಮಾನ ಹಾರಾಟ ನಡೆಸಿ, ನಾಲ್ಕಾರು ವರ್ಷವಾದ ನಂತರ ಅದಕ್ಕೇ ಆದ ವಿಶೇಷ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನವಾದ ನಂತರ ಆಗುತ್ತದೆ. ಅಲ್ಲಿ ಶಿಫಾರಸ್ಸು ಜಾತಿ, ಹಣ ಇತ್ಯಾದಿಗಳಿಗೆ ಅವಕಾಶವೇ ಇಲ್ಲ.
-ಜಯವಿಭವ ಸ್ವಾಮಿ, ಸೆಸ್‌ಕ್ ಎಂಡಿ. ಭಾರತೀಯ ವಾಯು ಸೇನೆಯ ನಿವೃತ್ತ ಅಧಿಕಾರಿ.

ಟಾಪ್ ನ್ಯೂಸ್

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.