ಏಶ್ಯನ್ ಬಾಕ್ಸಿಂಗ್ : ಅಮಿತ್, ಥಾಪ ಬೆಳ್ಳಿ ಸಾಧನೆ
Team Udayavani, Jun 1, 2021, 12:37 AM IST
ದುಬಾೖ : ಏಶ್ಯನ್ ಬಾಕ್ಸಿಂಗ್ ಕೂಟದ ಪುರುಷರ ಫೈನಲ್ ಸ್ಪರ್ಧೆಗಳಲ್ಲಿ ಅಮಿತ್ ಪಂಘಲ್ ಮತ್ತು ಶಿವ ಥಾಪ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟಿದ್ದಾರೆ. 52 ಕೆ.ಜಿ. ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್ ಅಮಿತ್ ಪಂಘಲ್ ಅವರನ್ನು ಉಜ್ಬೆಕಿಸ್ಥಾನದ ಶಖೋಬಿದಿನ್ ಜೊçರೋವ್ 3-2 ಅಂತರದಿಂದ ಸೋಲಿಸಿದರು.
ಇದು 2019ರ ವಿಶ್ವ ಚಾಂಪಿಯನ್ಶಿಪ್ ಫೈನಲ್ ಫಲಿತಾಂಶದ ಪುನರಾವರ್ತನೆ ಎನಿಸಿತು. ಅಲ್ಲಿಯೂ ಜೊçರೋವ್ ವಿರುದ್ಧ ಅಮಿತ್ ಸೋಲನುಭವಿಸಿದ್ದರು. ಇದರೊಂದಿಗೆ ಜೊçರೋವ್ ವಿರುದ್ಧ ಆಡಿದ ಮೂರೂ ಪಂದ್ಯಗಳಲ್ಲಿ ಎಡವಿದರು. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಇವರಿಬ್ಬರು ಮುಖಾಮುಖೀಯಾಗುವ ಸಾಧ್ಯತೆ ಇರುವುದರಿಂದ ಈ ಫೈನಲ್ ತೀವ್ರ ಕುತೂಹಲ ಮೂಡಿಸಿತ್ತು.
64 ಕೆ.ಜಿ. ವಿಭಾಗದಲ್ಲಿ ಶಿವ ಥಾಪ ಅವರನ್ನು ಮಂಗೋಲಿಯದ ಬಾತರ್ಸುಖ್ ಚಿಂಜೋರಿಂಗ್ 3-2ರಿಂದ ಮಣಿಸಿದರು.