ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಮ್ ಟೆನಿಸ್ 2021: ಬರ್ತ್ಡೇ ಗರ್ಲ್ ಸ್ವಿಯಾಟೆಕ್ ಗೆಲುವು
Team Udayavani, Jun 1, 2021, 12:13 AM IST
ಪ್ಯಾರಿಸ್: ಹಾಲಿ ಚಾಂಪಿಯನ್ ಖ್ಯಾತಿಯ ಪೋಲೆಂಡ್ನ ಐಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಪ್ರಶಸ್ತಿ ಉಳಿಸಿಕೊಳ್ಳುವ ಹಾದಿಯಲ್ಲಿ ಮೊದಲ ಸುತ್ತು ದಾಟಿದ್ದಾರೆ. ಅವರು ಸ್ಲೊವೇನಿಯಾದ ಗೆಳತಿ ಕಾಜಾ ಜುವಾನ್ ವಿರುದ್ಧ 6-0, 7-5 ಅಂತರದ ಜಯ ಸಾಧಿಸಿದರು. ಇದರೊಂದಿಗೆ ತನ್ನ 20ನೇ ಬರ್ತ್ಡೇ ಸಂಭ್ರಮವನ್ನು ಆಚರಿಸಿದರು.
ತವರಿನ ಕ್ಯಾರೋಲಿನ್ ಗಾರ್ಸಿಯ, ಬೆಲ್ಜಿಯಂನ ಎಲಿಸ್ ಮಾರ್ಟೆನ್ಸ್ ಕೂಡ ಮುನ್ನಡೆಗೈದಿದ್ದಾರೆ. ಇದೇ ವೇಳೆ 16ನೇ ಶ್ರೇಯಾಂಕದ ಡಚ್ ಆಟಗಾರ್ತಿ ಕಿಕಿ ಬರ್ಟೆನ್ಸ್ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದರು. ಅವರನ್ನು ಸ್ಲೊವೇನಿಯಾದ ಶ್ರೇಯಾಂಕ ರಹಿತ ಆಟಗಾರ್ತಿ ಪೊಲೋನಾ ಹರ್ಕೋಗ್ 6-1, 3-6, 6-4ರಿಂದ ಮಣಿಸಿದರು.
ಇದನ್ನೂ ಓದಿ :ಅಯೋಧ್ಯೆ ರಾಮ ಮಂದಿರದ ನಿರ್ಮಾಣ ಕಾರ್ಯ ಬಿರುಸು
ಮೆಡ್ವೆಡೇವ್ ಜಯ
ಪುರುಷರ ಸಿಂಗಲ್ಸ್ನಲ್ಲಿ ದ್ವಿತೀಯ ಶ್ರೇಯಾಂಕದ ಡ್ಯಾನಿಲ್ ಮೆಡ್ವೆಡೇವ್, ಇಟಲಿಯ ಜಾನಿಕ್ ಸಿನ್ನರ್, ಅಮೆರಿಕದ ಜಾನ್ ಇಸ್ನರ್ ದ್ವಿತೀಯ ಸುತ್ತು ಪ್ರವೇಶಿಸಿದರು. ರಶ್ಯದ ಮೆಡ್ವೆಡೇವ್ 6-3, 6-3, 7-5 ಅಂತರದಿಂದ ತಮ್ಮದೇ ದೇಶದ ಅಲೆಕ್ಸಾಂಡರ್ ಬಬ್ಲಿಕ್ ಅವರನ್ನು ಮಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ