ಕೆಎಸ್ ಆರ್ ಟಿಸಿ ಲೋಗೋ ವಿಚಾರ ಪರಿಶೀಲಿಸಿ ಕ್ರಮ: ಡಿಸಿಎಂ ಸವದಿ

Team Udayavani, Jun 3, 2021, 12:18 PM IST

ಕೆಎಸ್ ಆರ್ ಟಿಸಿ ಲೋಗೋ ವಿಚಾರ ಪರಿಶೀಲಿಸಿ ಕ್ರಮ: ಡಿಸಿಎಂ ಸವದಿ

ರಾಯಚೂರು: ಕೆಎಸ್ಆರ್ಟಿಸಿ ಲೋಗೋ ಹಾಗೂ ಹೆಸರು ಬದಲಾವಣೆ ವಿಷಯದ ಕುರಿತು ಪರಿಶೀಲಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಸಾರಿಗೆ ಸಚಿವ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇರಳ ಹಾಗೂ ಕರ್ನಾಟಕ ಎರಡೂ ‘ಕ’ ಅಕ್ಷರದಿಂದಲೇ ಆರಂಭವಾಗುತ್ತದೆ. ಹೀಗಾಗಿ ಕೇರಳದವರು ವ್ಯಾಜ್ಯ ಹೂಡಿದ್ದರು. ಸೆಂಟ್ರಲ್ ಟ್ರೇಡ್ ಮಾರ್ಕ್ ಟ್ರಿಬುನಲ್ ನಲ್ಲಿ ಅವರ ಪರವಾಗಿದೆ ಎಂದು ತಿಳಿದು ಬಂದಿದೆ. ಒಂದು ಹೆಸರಿನ ಸಂಸ್ಥೆ ಎರಡು ಇರಬಾರದು. ವ್ಯಾವಹಾರಿಕವಾಗಿ ಹಾಗೂ ಔದ್ಯೋಗಿಕವಾಗಿ ಇರುವ ಸಂಸ್ಥೆಗಳು ಒಂದೇ ಹೆಸರಿನಲ್ಲಿ ಇದ್ದರೆ ಸಮಸ್ಯೆಯಾಗಲಿದೆ. ಎರಡೂ ಸಾರ್ವಜನಿಕರಿಗೆ ಸೇವೆ ಕೊಡುವ ಸಂಸ್ಥೆಗಳು. ಇಲ್ಲಿ ಯಾರ ಹೆಸರಿನ ಮೇಲೆ ಯಾರೂ ಲಾಭ ಪಡೆಯಲಾಗದು. ಇದು ಅನಾವಶ್ಯಕ ಗೊಂದಲ ಸೃಷ್ಟಿಸುವ ಕೆಲಸ ಆಗಿದೆ. ಅಧಿಕಾರಿಗಳಿಗೆ ಸೂಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಇಂದು ಅಥವಾ ನಾಳೆ ತಜ್ಞರ ಅಭಿಪ್ರಾಯ ಪಡೆದು ಸಿಎಂ ನೇತೃತ್ವದಲ್ಲಿ ಸಭೆ ಆದ ಮೇಲೆ ಲಾಕ್ ಡೌನ್ ಬಗ್ಗೆ ತೀರ್ಮಾನ ಮಾಡಲಾಗುವುದು. ಎಲ್ಲರ ಅಭಿಪ್ರಾಯ ಇನ್ನಷ್ಟು ದಿನ ಮುಂದುವರಿಸುವುದಾಗಿದೆ.  ಪಾಸಿಟಿವ್ ಪ್ರಮಾಣ 7 ಸಾವಿರದವರೆಗೆ ಬರುವವರೆಗೂ ತಜ್ಞರು ಲಾಕ್ ಡೌನ್ ಮುಂದಿವರೆಸಲು ಸಲಹೆ ನೀಡಿದ್ದಾರೆ.  ಮೂರನೇ ಅಲೆಗೆ ಸರ್ಕಾರ ಎಲ್ಲಾ ಸಿದ್ದತೆ ಮಾಡಿಕೊಂಡಿದೆ ಎಂದರು.

ಇದನ್ನೂ ಓದಿ:ಮತ್ತೊಂದು ದೇಶಿ ಲಸಿಕೆ: 30 ಕೋಟಿ ಡೋಸ್ ಬಯಾಲಾಜಿಕಲ್ ಇ ಕೋವಿಡ್ ಲಸಿಕೆಗಾಗಿ ಕೇಂದ್ರ ಒಪ್ಪಂದ

ರೀಮ್ಸ್ ನಲ್ಲಿ 20 kl ಆಕ್ಸಿಜನ್ ಘಟಕ ಇಂದಿನಿಂದ ಪ್ರಾರಂಭಿಸಲಾಗಿದೆ. 30 ಆಕ್ಸಿಜನ್ ಕಾನ್ಸಟ್ರೇಟರ್ ಬಂದಿವೆ. ಗುಜರಿಗೆ ಹಾಕುವ ಬಸ್ಸುಗಳನ್ನೇ ಆಕ್ಸಿಜನ್ ಹಾಗೂ ಐಸಿಯು ಬಸ್ ಗಳನ್ನಾಗಿ ಮಾಡಿದ್ದೇವೆ. ಸಂಸದರು ಹಾಗೂ ಶಾಸಕರು ತಮ್ಮ ನಿಧಿಯನ್ನು ಕೊಟ್ಟು ಸಹಕರಿಸುತ್ತಿದ್ದಾರೆ. ಐಸಿಯು ಬಸ್ ಮಾಡಲು 8 ರಿಂದ 10 ಲಕ್ಷ ಖರ್ಚಾಗಿದೆ ಎಂದರು.

ರಾಯಚೂರು ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಆಗಿದೆ. ಜಿಲ್ಲಾಡಳಿತ ಹಳ್ಳಿಗಳಿಗೆ ಹೋಗಿ, ಸೋಂಕಿತರನ್ನು ಪತ್ತೆ ಹಚ್ಚಿ ಸ್ಥಳಾಂತರ ಮಾಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗಿದೆ.  ಹೀಗಾಗಿ ಕೋವಿಡ್ ಜಿಲ್ಲೆಯಲ್ಲಿ ಹತೋಟಿಗೆ ಬಂದಿದೆ. ರೀಮ್ಸ್ ಹಾಗೂ ಓಪೆಕ್ ನಲ್ಲಿ ಸುಧಾರಣೆ ಕಂಡಿದೆ. ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆ. ಈಗ ಬ್ಲಾಕ್ ಫಂಗಸ್ ನಮಗೆ ಸವಾಲಾಗಿದೆ. ಜಿಲ್ಲೆಯಲ್ಲಿ 41 ಜನರಿಗೆ ಬ್ಲಾಕ್ ಫಂಗಸ್ ಬಂದಿದೆ.  ಅವರಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸವದಿ ಹೇಳಿದರು.

ಟಾಪ್ ನ್ಯೂಸ್

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.