ಮಕ್ಕಳನ್ನು ಸೆಳೆಯುತ್ತಿರುವ ಗಡಿನಾಡಿನ ಟ್ರೈನ್‌ ಶಾಲೆ

Team Udayavani, Jun 8, 2021, 1:54 PM IST

ಮಕ್ಕಳನ್ನು ಸೆಳೆಯುತ್ತಿರುವ ಗಡಿನಾಡಿನ ಟ್ರೈನ್‌ ಶಾಲೆ

ಪಾವಗಡ: ಹೊರಗಿನಿಂದ ನೋಡಿದರೆ ರೈಲು ಕಾಣಿಸುತ್ತದೆ. ಕಿಟಕಿ ಬಾಗಿಲುಗಳೂ ಇವೆ. ಆದರೆ, ಹತ್ತಲು ಆಗಲ್ಲ. ಇಳಿಯಲೂ ಆಗಲ್ಲ! ಹೌದು, ಗಡಿನಾಡು ಪಾವಗಡ ತಾಲೂಕಿನ ಮುಗದಾಳಬೆಟ್ಟ ಗ್ರಾಮದ ಸರ್ಕಾರಿ ಶಾಲೆ ಗೋಡೆ ಮೇಲೆ ಬರೆದಿರುವ ರೈಲಿನ ಚಿತ್ತಾರ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುತ್ತಿದೆ.

ಅಧಿಕಾರಿಗಳ ಮೆಚ್ಚುಗೆ: ಗಡಿನಾಡು ಗ್ರಾಮೀಣ ಯುವ ಪ್ರತಿಭೆ ವಿಜಯ್‌ ಪಾಳೇಗಾರ ಕೈಚಳಕದಿಂದ ಶಾಲೆಯ ಗೋಡೆಗಳಿಗೆ ರೈಲನ್ನು ಹೋಲುವಂತಹ ಪೇಯಿಂಟ್‌ ಮಾಡಲಾಗಿದೆ. ಕನ್ನಡಚಲನಚಿತ್ರ ನಿರ್ದೇಶನ ಮಾಡಿರುವ ತಾಲೂಕಿನ ಕೆಂಚಮ್ಮನಹಳ್ಳಿ ಗ್ರಾಮದವರು.

ದಾನಿಗಳ ಸಹಾಯದಿಂದ ತಾಲೂಕಿನ ದೇವಲಕೆರೆ ,ಲಿಂಗದಹಳ್ಳಿ,ಕಾರನಾಯಕನಹಟ್ಟಿ, ಗೊಲ್ಲರಹಟ್ಟಿ ಶಾಲೆಗಳ ನಲಿ ಕಲಿ ಕೊಠಡಿಗಳಿಗೆ ಹೊಸರೂಪ ನೀಡಿ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸಿದ್ದಾರೆ.

ಸಹಕಾರವಿದೆ: ಮುಗದಾಳಬೆಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಸ್ಥಳೀಯ ಗ್ರಾಪಂ ಸದಸ್ಯ ಮಹೇಶ್‌ ಅವರ ಸಹಾಯದೊಂದಿಗೆ ತಾಲೂಕಿನಲ್ಲಿ ಪ್ರಥಮ ಟ್ರೈನ್‌ ಶಾಲೆ ಮಾಡಿದ್ದಾರೆ. ದೂರದಿಂದ ನೋಡಿದರೆ ರೈಲು ಎಂಜಿನ್‌, ಬೋಗಿಗಳು ರೈಲು ನಿಲ್ದಾಣದಲ್ಲಿವೆ ಎಂಬ ಭಾವನೆ ಬರುತ್ತದೆ. ಶಾಲೆಗೆ ಹೊಸ ರೂಪ: ಶಾಲೆ ಕೊಠಡಿಗಳ ಬಾಗಿಲುಗಳು ರೈಲುಬೋಗಿಯ ಬಾಗಿಲಾಗಿವೆ. ಕಡಿಮೆ ಖರ್ಚಿನಲ್ಲಿ ಸರ್ಕಾರಿ ಶಾಲೆಗಳಿಗೆ ವಿಜಯ್‌ ಪಾಳೇಗಾರ ತಂಡ ಹೊಸ ರೂಪ ನೀಡುತ್ತಿದೆ.ಅಲ್ಲದೇ, ತಾಲೂಕಿನಲ್ಲಿ ಎಲ್ಲಾ ಸರ್ಕಾರಿ ಶಾಲೆಗಳು ಇದೇ ರೀತಿ ಆಕರ್ಷಣೀಯವಾಗಿ ಮಾಡಿದರೆ ಮಕ್ಕಳು ಕಾನ್ವೆಂಟ್‌ಗೆ ಹೋಗುವ ಬದಲು ಸರ್ಕಾರಿ ಶಾಲೆಗೆ ಸೇರಲು ಇಷ್ಟು ಪಡುತ್ತಾರೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಕೋವಿಡ್‌ ಸಮಯದಲ್ಲಿ ಬೆಂಗಳೂರಿನಲ್ಲಿ ಇರುವ ಬದಲು ನಮ್ಮ ಸ್ನೇಹಿತರ ಜತೆಗೂಡಿತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ದಾನಿಗಳ ಸಹಾಯದಿಂದ ಕಡಿಮೆ ಖರ್ಚಿನಲ್ಲಿ ಚಿತ್ರಗಳನ್ನು ಬಿಡಿಸಿ ಶಾಲೆ ಗಳಿಗೆ ಹೊಸರೂಪ ನೀಡಲಾಗುತ್ತಿದೆ. ಸರ್ಕಾರಿ ಶಾಲೆ ಗಳತ್ತ ಮಕ್ಕಳು ಆಕರ್ಷಕರಾಗಲಿ ಎಂಬುದು ನಮ್ಮ ಆಸೆ. -ವಿಜಯ್‌ ಪಾಳೇಗಾರ್‌, ಕುಂಚಕಲಾವಿದ

ತಾಲೂಕಿನ ಯುವ ಪ್ರತಿಭೆ ವಿಜಯ್‌ ಪಾಳೇಗಾರ ಅವರು ಕೋವಿಡ್‌ ಸಮಯದಲ್ಲಿ ಸರ್ಕಾರಿ ಶಾಲೆಗಳಿಗೆ ಅತಿ ಕಡಿಮೆ ಖರ್ಚಿನಲ್ಲಿ ಹೊಸರೂಪ ನೀಡುತ್ತಿದ್ದಾರೆ. ಎಲ್ಲಾ ಗ್ರಾಮಗಳಲ್ಲಿಯೂ ದಾನಿಗಳು ಮುಂದರೆ ಸರ್ಕಾರಿ ಶಾಲೆಗಳಿಗೆ ಹೊಸ ನೀಡುತ್ತಾರೆ. -ಲೋಕೇಶ್‌ ಪಾಳೇಗಾರ, ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷರು, ಪಾವಗಡ

-ಸಂತೋಷ್‌ ಕುಮಾರ್‌

ಟಾಪ್ ನ್ಯೂಸ್

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.