ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 200 ಅಂಕ ಏರಿಕೆ, 15,750ರ ಗಡಿ ತಲುಪಿದ ನಿಫ್ಟಿ
ಶಾಂಘೈ ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿರುವುದಾಗಿ ವರದಿ ತಿಳಿಸಿದೆ.
Team Udayavani, Jun 18, 2021, 9:39 AM IST
ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿ ಭರ್ಜರಿ ವಹಿವಾಟಿನ ಪರಿಣಾಮ ಶುಕ್ರವಾರ(ಜೂನ್ 18) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 200 ಅಂಕಗಳಷ್ಟು ಏರಿಕೆಯಾಗಿದೆ. ಇದರಿಂದ ಇನ್ಫೋಸಿಸ್, ಎಚ್ ಡಿಎಫ್ ಸಿ ಷೇರುಗಳು ಲಾಭಗಳಿಸಿದೆ.
ಇದನ್ನೂ ಓದಿ:ಕೆಜಿಎಫ್-2 ಡಬ್ಬಿಂಗ್ ಫೋಟೋ ವೈರಲ್
ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 220.53 ಅಂಕಗಳಷ್ಟು ಏರಿಕೆಯಾಗಿದ್ದು, 52,543.86 ಅಂಕಗಳೊಂದಿಗೆ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 53.70 ಅಂಕ ಏರಿಕೆಯಾಗಿದ್ದು, 15,745.10ರ ಗಡಿ ದಾಟಿದೆ.
ಸೆನ್ಸೆಕ್ಸ್ 200 ಅಂಕ ಏರಿಕೆಯಾಗಿದ್ದರೂ ಒಎನ್ ಜಿಸಿ, ಪವರ್ ಗ್ರಿಡ್, ಮಹೀಂದ್ರ ಆ್ಯಂಡ್ ಮಹೀಂದ್ರ, ಮಾರುತಿ, ಎಲ್ ಆ್ಯಂಡ್ ಟಿ, ಎನ್ ಟಿಪಿಸಿ ಮತ್ತು ಟೈಟಾನ್ ಷೇರುಗಳು ನಷ್ಟ ಅನುಭವಿಸಿದೆ. ಮತ್ತೊಂದೆಡೆ ಬಜಾಜ್ ಫಿನ್ ಸರ್ವ್, ಸನ್ ಫಾರ್ಮಾ, ಎಚ್ ಸಿಎಲ್ ಟೆಕ್, ಇನ್ಫೋಸಿಸ್, ಡಾ.ರೆಡ್ಡೀಸ್ ಷೇರು ಲಾಭ ಗಳಿಸಿದೆ.
ಜಗತ್ತಿನ ಹಾಂಗ್ ಕಾಂಗ್, ಸಿಯೋಲ್ ಮತ್ತು ಟೋಕಿಯೋ ಷೇರುಮಾರುಕಟ್ಟೆ ಧನಾತ್ಮಕ ವಹಿವಾಟು ನಡೆಸಿದ್ದು, ಶಾಂಘೈ ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್