ಮಿಥಾಲಿ ತಂಡಕ್ಕೆ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ಸವಾಲು


Team Udayavani, Jun 27, 2021, 7:00 AM IST

ಮಿಥಾಲಿ ತಂಡಕ್ಕೆ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ಸವಾಲು

ಬ್ರಿಸ್ಟಲ್‌: ಏಳು ವರ್ಷಗಳ ಬಳಿಕ ಟೆಸ್ಟ್‌ ಪಂದ್ಯವೊಂದನ್ನು ಆಡಿ, ಫಾಲೋಆನ್‌ ಸಂಕಟಕ್ಕೆ ಸಿಲುಕಿಯೂ ಇದನ್ನು ದಿಟ್ಟ ರೀತಿಯಲ್ಲಿ ನಿಭಾಯಿಸುವಲ್ಲಿ ಯಶಸ್ವಿಯಾದ ಭಾರತದ ವನಿತೆಯರಿಗೆ ರವಿವಾರದಿಂದ ಏಕದಿನ ಸವಾಲು ಎದುರಾಗಲಿದೆ.

ಆತಿಥೇಯ ಹಾಗೂ ವಿಶ್ವ ಚಾಂಪಿ ಯನ್‌ ಖ್ಯಾತಿಯ ಇಂಗ್ಲೆಂಡ್‌ ವಿರುದ್ಧ 3 ಪಂದ್ಯಗಳ ಸರಣಿ ಆರಂಭವಾಗಲಿದ್ದು, ಅನೇಕ ನಿರೀಕ್ಷೆ ಹಾಗೂ ಕುತೂಹಲವನ್ನು ಹುಟ್ಟುಹಾಕಿದೆ. ಭಾರತ ವಿಶ್ವಕಪ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧವೇ ಸೋತ ಕಾರಣ ಸೇಡಿನ ಅವಕಾಶವೂ ಇದೆ.

ತವರಿನ ಕೊನೆಯ ಸರಣಿಯಲ್ಲಿ ಭಾರತ 1-4 ಅಂತರದಿಂದ ದಕ್ಷಿಣ ಆಫ್ರಿಕಾಕ್ಕೆ ಶರಣಾಗಿತ್ತು. ಅಲ್ಲಿ ಡ್ಯಾಶಿಂಗ್‌ ಓಪನರ್‌ ಶಫಾಲಿ ವರ್ಮ ಅವರನ್ನು ಕೈಬಿಟ್ಟದ್ದು ಟೀಕೆಗೆ ಕಾರಣವಾಗಿತ್ತು.

ಶಫಾಲಿ ರೆಡಿ…
17 ವರ್ಷದ ಶಫಾಲಿ 96 ಹಾಗೂ 63 ರನ್‌ ಬಾರಿಸಿ ಇಂಗ್ಲೆಂಡ್‌ ಎದುರಿನ ಪದಾರ್ಪಣ ಟೆಸ್ಟ್‌ ಪಂದ್ಯದಲ್ಲೇ ತನ್ನ ಬ್ಯಾಟಿಂಗ್‌ ತಾಕತ್ತು ಏನು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ತಾನು ಎಲ್ಲ ಮಾದರಿಯ ಪಂದ್ಯಗಳಿಗೂ ಸೈ ಎಂದು ಸಾರಿದ್ದಾರೆ. ರವಿವಾರ ಶಫಾಲಿಗೆ ಏಕದಿನ ಪದಾರ್ಪಣೆಯ ಗಳಿಗೆ ಖಂಡಿತವಾಗಿಯೂ ಕೂಡಿಬರಲಿದೆ.

“ಹರ್ಯಾಣ ಹರಿಕೇನ್‌’ ಶಫಾಲಿ ಇದೇ ಬ್ಯಾಟಿಂಗ್‌ ಫಾರ್ಮ್ ಮುಂದುವರಿಸಿದರೆ ಭಾರ ತದ ಸರಾಸರಿ ಸ್ಕೋರ್‌ ಇನ್ನೂರರ ಗಡಿ ದಾಟಿ 235-240ರ ಸಮೀಪ ಬಂದು ನಿಲ್ಲುವ ಎಲ್ಲ ಸಾಧ್ಯತೆ ಇದೆ. ಶಫಾಲಿ ಬಿರುಸಿನ ಆಟಕ್ಕಿಳಿದರೆ ಶ್ರಬೊÕàಲ್‌, ಬ್ರಂಟ್‌, ಕ್ರಾಸ್‌, ಶಿವರ್‌, ಎಕ್‌Éಸ್ಟೋನ್‌ ಮೊದಲಾದವರ ದಾಳಿಯನ್ನು ನಿಭಾಯಿಸುವುದು ಉಳಿದವರಿಗೂ ಸುಲಭವಾದೀತು.

ಉಳಿದಂತೆ ಪೂನಂ ರಾವುತ್‌, ಮಿಥಾಲಿ, ಕೌರ್‌, ಆಲ್‌ರೌಂಡರ್‌ ದೀಪ್ತಿ ಶರ್ಮ 6ನೇ ಕ್ರಮಾಂಕದ ವರೆಗಿನ ಸ್ಥಾನವನ್ನು ತುಂಬುವುದು ಖಚಿತ. ದೇಶಿ ಏಕದಿನ ಕ್ರಿಕೆಟ್‌ನಲ್ಲಿ ಬಿಗ್‌ ಹಿಟ್ಟಿಂಗ್‌ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿರುವ ಕೀಪರ್‌ ಇಂದ್ರಾಣಿ ರಾಯ್‌ ಕೂಡ ರೇಸ್‌ನಲ್ಲಿದ್ದಾರೆ. ಅವರು ತನಿಯಾ ಭಾಟಿಯ ಜತೆ ಪೈಪೋಟಿ ನಡೆಸಬೇಕಿದೆ. ಜೂಲನ್‌, ಶಿಖಾ, ಪೂಜಾ, ಅರುಂಧತಿ ರೆಡ್ಡಿ ಸ್ಪೆಷಲಿಸ್ಟ್‌ ಬೌಲರ್‌ಗಳಾಗಿ ದಾಳಿಗಿಳಿಯುವ ಸಿದ್ಧತೆಯಲ್ಲಿದ್ದಾರೆ.

ಇಂಗ್ಲೆಂಡ್‌ ಹೆಚ್ಚು ಬಲಿಷ್ಠ
ಭಾರತಕ್ಕೆ ಹೋಲಿಸಿದರೆ ಇಂಗ್ಲೆಂಡ್‌ ಹೆಚ್ಚು ಬಲಿಷ್ಠ ತಂಡ. ತವರಲ್ಲಿ ಆಡುವ ಲಾಭವೂ ಇದೆ. ಟೆಸ್ಟ್‌ನಲ್ಲಿ ಮಿಂಚಿದ ಸೋಫಿಯಾ ಡಂಕ್ಲಿ ಒನ್‌ಡೇ ಕ್ಯಾಪ್‌ ಧರಿಸುವ ಕ್ಷಣಗಣನೆಯಲ್ಲಿದ್ದಾರೆ. ಬ್ಯೂಮಂಟ್‌, ನೈಟ್‌ ಮತ್ತು ಶಿವರ್‌ ಹೆಚ್ಚು ಅಪಾಯಕಾರಿಗಳು.

ಮಿಥಾಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22 ವರ್ಷ
ಭಾರತದ ವನಿತಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನದಲ್ಲಿ ಭರ್ತಿ 22 ವರ್ಷ ಪೂರೈಸಿದರು. 1999ರ ಜೂನ್‌ 26ರಂದು ಐರ್ಲೆಂಡ್‌ ವಿರುದ್ಧ ಏಕದಿನ ಪಂದ್ಯ ಆಡುವ ಮೂಲಕ ಅವರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಚಾಲನೆ ಲಭಿಸಿತ್ತು. ರವಿವಾರ ಅವರು ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ.
ಮಿಲ್ಟನ್‌ ಕೇಯ್ನನಲ್ಲಿ ಆಡಲಾದ ತನ್ನ ಚೊಚ್ಚಲ ಪಂದ್ಯದಲ್ಲೇ ಮಿಥಾಲಿ ಅಜೇಯ 114 ರನ್‌ ಬಾರಿಸಿ ಭವ್ಯ ಭವಿಷ್ಯದ ಮುನ್ಸೂಚನೆ ನೀಡಿದ್ದರು. ಇದೀಗ ನಿಜವಾಗಿದೆ.

ಸಚಿನ್‌ ತೆಂಡುಲ್ಕರ್‌ ಬಳಿಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸುದೀರ್ಘ‌ ಅವಧಿಯನ್ನು ಕಳೆದ ಹಿರಿಮೆ ಮಿಥಾಲಿ ರಾಜ್‌ ಅವರದು. ಸಚಿನ್‌ 22 ವರ್ಷ, 91 ದಿನಗಳ ಕಾಲ ಏಕದಿನ ಕ್ರಿಕೆಟ್‌ನಲ್ಲಿದ್ದರು. ಈ ದಾಖಲೆಯನ್ನು ಮುರಿಯುವ ಅವಕಾಶವೂ ಮಿಥಾಲಿ ಮುಂದಿದೆ.

ರನ್‌ ದಾಖಲೆಯತ್ತ…
ಮಿಥಾಲಿ ರಾಜ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 10,131 ರನ್‌ ಪೇರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಇಲ್ಲಿಯೂ ಅಗ್ರಸ್ಥಾನ ಅಲಂಕರಿಸುವ ಅವಕಾಶ ಮಿಥಾಲಿ ಮುಂದಿದೆ. ಇದಕ್ಕೆ ಬೇಕಿರುವುದು 143 ರನ್‌ ಮಾತ್ರ. ಸದ್ಯ 10,273 ರನ್‌ ಗಳಿಸಿರುವ ಚಾರ್ಲೋಟ್‌ ಎಡ್ವರ್ಡ್ಸ್‌ ಮೊದಲ ಸ್ಥಾನದಲ್ಲಿದ್ದಾರೆ.

ಟಾಪ್ ನ್ಯೂಸ್

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

ಸಿ.ಟಿ.ರವಿ

Belagavi; ಪ್ರಜ್ವಲ್ ಪ್ರಕರಣವು ಚುನಾವಣೆಗೆ ಪ್ರಭಾವ ಬೀರುತ್ತದೆ: ಸಿ.ಟಿ.ರವಿ

1-wqqweqwe

BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್

1-aaa

Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ

CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ

SUNIPL ಸನ್‌ರೈಸರ್ ಹೈದರಾಬಾದ್‌ ಎದುರಾಳಿ ರಾಜಸ್ಥಾನ್‌ ಪ್ಲೇ ಆಫ್ ಗೆ ಒಂದೇ ಮೆಟ್ಟಿಲು

IPL ಸನ್‌ರೈಸರ್ ಹೈದರಾಬಾದ್‌ ಎದುರಾಳಿ ರಾಜಸ್ಥಾನ್‌ ಪ್ಲೇ ಆಫ್ ಗೆ ಒಂದೇ ಮೆಟ್ಟಿಲು

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

Uppinangady: ತೀವ್ರ ಜ್ವರ; ಅರ್ಚಕ ಸಾವು

Uppinangady: ತೀವ್ರ ಜ್ವರ; ಅರ್ಚಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

1-wqqwqw

Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.