ನೋಡ ಬನ್ನಿ ‘ಉಂಚಳ್ಳಿ ಜಲಪಾತ’ದ ಸೊಬಗು  


Team Udayavani, Jun 27, 2021, 10:56 AM IST

0321

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪಿರ ತಾಲ್ಲೂಕಿನ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಉಂಚಳ್ಳಿ ಜಲಪಾತ ಪ್ರಮುಖವಾಗಿದೆ. ಮಳೆಗಾಲದಲ್ಲಿ ಈ ಜಲಪಾತ ಮೈನವಿರೇಳಿಸುವಂತೆ ಧುಮ್ಮುಕ್ಕುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಲ್ಲೊಂದಾದ ಅಘನಾಶಿನಿ ನದಿ ಇಲ್ಲಿ 116 ಮೀಟರ್ ಆಳಕ್ಕೆ ಧುಮುಕಿ ಭವ್ಯವಾದ ಜಲಪಾತವನ್ನು ಸೃಷ್ಟಿಸುತಾಳೆ. ಈ ಜಲಪಾತವನ್ನು ಮೊದಲು 1875 ರಲ್ಲಿ ಬ್ರಿಟಿಷ್ ಅಧಿಕಾರಿ ಜೆ. ಡಿ. ಲುಶಿಂಗ್ಟನ್ ಕಂಡುಹಿಡಿದನು.

ಪ್ರವಾಸಿಗರ ಮನವನ್ನು ಸೂರೆಗೈಯ್ಯುತ್ತ ಕಣ್ಣಿಗೆ ಅದ್ವಿತೀಯ ಆನಂದ ಒದಗಿಸುತ್ತಿದೆ. ಈ ಜಲಪಾತ ನೋಡುವುದೇ ಒಂದು ಹಬ್ಬ. ಕಿವಿ ಕಿವುಡಾಗಿಸುವಂತಿರುವ ಜಲಪಾತದ ಆರ್ಭಟದ ಧ್ವನಿ, ಸುತ್ತಲಿನ ಪರಿಸರ ಮರೆಯಲು ಸಾಧ್ಯವೇ ಇಲ್ಲ! ಈ ಜಲಪಾತ ಸೃಷ್ಠಿಸುವ ಶಬ್ದದಿಂದ ಕಿವಿಗಳು ಕೆಪ್ಪಾಗುತ್ತವೆ. ಅದಕ್ಕಾಗಿಯೇ ಈ ಜಲಪಾತಕ್ಕೆ ಕೆಪ್ಪೆ ಜೋಗ ದೂ ಕೂಡ ಕರೆಯಲಾಗುತ್ತದೆ.

ಉಂಚಳ್ಳಿ ಜಲಪಾತ ನೀರ ರೇಖೆಯಾಗಿಯೋ, ಜಲಧಾರೆಯಾಗಿಯೋ ಇರದೆ ಮೋಡವೇ ಶಿಲೆಗಳ ಮೂಲಕ ಹಸಿರ ಕಣಿವೆ ಸೇರುವ ಭಾವನೆ ಮೂಡಿಸುತ್ತದೆ. ಅಘನಾಶಿನಿ ನದಿಯ ಆಣೆಕಟ್ಟೆಯ ಯೋಜನೆಗಳ ಭೂತ ಈ ಸೌಂದರ್ಯವನ್ನು ಜೋಗದ ಸಿರಿಯಂತೆ ನುಂಗಲು ನಿಂತಿದ್ದರೂ, ನಿಶ್ಚಿಂತ ಯೋಧನಂತೆ ಪ್ರವಾಸಿಗರ ಮನವನ್ನು ಸೂರೆಗೈಯ್ಯುತ್ತ ಕಣ್ಣಿಗೆ ಅದ್ವಿತೀಯ ಆನಂದ ಒದಗಿಸುತ್ತಿದೆ. ಉಂಚಳ್ಳಿ ಜಲಪಾತ ನೋಡುವುದೇ ಒಂದು ಹಬ್ಬ.

ಅಘನಾಶಿನಿ ನದಿಯ ಈ ಏಕೈಕ ಜಲಧಾರೆ ತನ್ನ ಸೌಂದರ್ಯದಿಂದಾಗಿ ಪ್ರಚಾರದಿಂದ ದೂರವಿದ್ದರೂ ಒಮ್ಮೆ ನೋಡಿದವರ ನೆನಪಿನಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿ, ಮತ್ತೆ ಮತ್ತೆ ನೋಡುವ ಅಭಿಲಾಷೆ ಮೂಡಿಸುತ್ತದೆ.

ಲುಸ್ಸಿಂಗ್‌ ಟನ್‌ ಜಲಪಾತ :

ಸ್ಥಳೀಯರಿಗೆ ಮಾತ್ರ ಪರಿಚಿತವಾಗಿದ್ದ ಈ ಜಲಪಾತವನ್ನು 1859ರಲ್ಲಿ ಪ್ರಥಮ ಬಾರಿಗೆ ಲುಸ್ಸಿಂಗ್‌ ಟನ್‌ ಎಂಬ ಬ್ರಿಟೀಷ್‌ ಅಧಿಕಾರಿ ಹೊರ ಜಗತ್ತಿಗೆ ಪರಿಚಯಿಸಿದ ಎನ್ನಲಾಗುತ್ತದೆ. ಇದರಿಂದಾಗಿ ಜಲಪಾತಕ್ಕೆ ಲುಸ್ಸಿಂಗ್‌ ಟನ್‌ ಜಲಪಾತ ಎಂಬ ಹೆಸರೂ ಇದೆ. ಜಲಪಾತದ ಎರಡು ನೋಟವು ಪ್ರವಾಸಿಗರಿಗೆ ಸಿಗುತ್ತಿದ್ದು, ಒಂದು ನೋಟವನ್ನು ಎರಡು ಕಿ.ಮೀ. ಕಚ್ಚಾ ಮಣ್ಣಿನ ರಸ್ತೆಯಲ್ಲಿ ನಡೆಯುತ್ತ ಸಾಗಿದರೆ ವೀಕ್ಷಣಾ ಗೋಪುರದ ಮೇಲೆ ನಿಂತು ನೋಡಬಹುದು. ಇಲ್ಲಿಂದ ಮಲೆನಾಡ ಹಸಿರು ವೃಕ್ಷಗಳ ನಡುವೆ ಹಾಲ್ನೊರೆಯು ಇಳಿದು ಭೋರ್ಗರೆಯುತ್ತ ಅಗಾಧ ಅನಂತ ಹಿಮಾಚ್ಛಾದಿತ ದಟ್ಟ ಹಸಿರ ಕಣಿವೆಯಲ್ಲಿ ಹರಿಯುವುದನ್ನು ಕಾಣಬಹುದು.

ಆದರೆ ಇನ್ನೊಂದು ದೃಶ್ಯ ಕಣಿವೆಯ ಕೆಳ ನಿಂತು ನೋಡಬೇಕಾಗಿರುವುದರಿಂದ ಅದರ ವೀಕ್ಷಣೆಗೆ ಮಳೆಗಾಲ ಕಳೆದು ಚಳಿಗಾಲದ ದಿನಗಳೇ ಸೂಕ್ತ. ಮಳೆಗಾಲದಲ್ಲಿ ಈ ಪ್ರಪಾತಕ್ಕೆ ಇರುವ ಸೂಪಾನಗಳು ದುರಸ್ತಿಯ ಸ್ಥಿತಿಯಲ್ಲಿರುವುದರಿಂದ ಅಪಾಯಕಾರಿ. ದಟ್ಟ ಕಾನನದ ಕಣಿವೆಯು ಮಳೆಯ ಜಾರುವಿಕೆ ಅಥವಾ ಪಾಚಿಗಟ್ಟಿದ ಮೆಟ್ಟಿಲುಗಳಲ್ಲಿ ಇಳಿಯುವಾಗ ಸಮತೋಲನ ತಪ್ಪಿದರೆ ಮಲೆನಾಡ ಕಣಿವೆಯಲ್ಲಿ ಸಜೀವ ಸಮಾಧಿ ಖಂಡಿತ. ಆದರೆ ಸಾಹಸಮಯವಾದ ಈ ಕೃತ್ಯವನ್ನು ಎಚ್ಚರಿಕೆಯಿಂದ ಇಳಿದು ಸಾಗಿದರೆ ನಿಮಗೆ ಕಾದಿದೆ ಅಚ್ಚರಿಯ ಅದ್ಭುತ. ನೋಡಿಯೇ ತಣಿಯಬೇಕು ಇದರ ಸೊಬಗನ್ನು.

ಕೆಳಗಿದೆ ಹರಿದೋಡುವ ನೀರು, ಮೇಲಿನಿಂದ ಇಳಿಯುತ್ತದೆ ಬಿಳಿ ನೊರೆಯ ಹೊನಲು. ಹರ್ಷದ ಹೊನಲೇ ಪಾಪನಾಶಿನಿಯಾದ ಅಘನಾಶಿನಿ ಧಾರೆಯಾಗಿ ಉಂಚಳ್ಳಿಯಲ್ಲಿ ಇಳಿದು ಬರುತ್ತಿದೆಯೆಂದೆನಿಸಿದರೆ ಆಶ್ಚರ್ಯವಲ್ಲ. ಈ ನೆಲದಲ್ಲಿ ಎಂಥವನೂ ಕವಿಯಾದರೆ ಅದು ಇಲ್ಲಿನ ನಿಸರ್ಗದ ಕೈಚಳಕ. ಇಲ್ಲಿಳಿದು ನಿಂತರೆ ಕೆಳಗೆ ಮತ್ತೆರಡು ಮಳೆಗಾಲದ ಜಲಧಾರೆಗಳು ಕಾಣಸಿಗುತ್ತವೆ. ಆದರೆ ದುರ್ಗಮ ಕಣಿವೆಯ ಹಾದಿಯಲ್ಲಿ ಮಳೆಗಾಲದಲ್ಲಿ ಉಂಬಳಗಳು ಹೇರಳವಾಗಿವೆ.

ಈ ಸುಂದರ, ನಯನ ಮನೋಹರ ಸೊಬಗು ವರ್ಷದ ಎಲ್ಲಾ ದಿನಗಳಲ್ಲೂ ತುಂಬು ಬೆಡಗಿನಿಂದ ಕಂಗೊಳಿಸುತ್ತದೆ. ಮಲೆನಾಡಿನ ಆರ್ಭಟದ ಮಳೆಗೆ ಕೆಂಪು ನೀರಿನಿಂದಾವೃತವಾದ ಅಘನಾಶಿನಿಯ ಪ್ರವಾಹದಿಂದಾಗಿ ಮಳೆಗಾಲದಲ್ಲಿ ಕೆಂಪು ಮಿಶ್ರಿತ ಜಲಧಾರೆ ಗೋಚರಿಸಿದರೆ, ಉಳಿದ ದಿನಗಳಲ್ಲಿ ಹಾಲ್ನೊರೆಯ ಬೆಡಗು ಮನಸೆಳೆಯುತ್ತದೆ.

ಹೋಗುವುದು ಹೇಗೆ? :

ಸಿದ್ದಾಪುರದಿಂದ 35 ಕಿ.ಮೀ. ದೂರದ ಹೆಗ್ಗರಣೆಗೆ ತಲುಪಿದರೆ, ಅಲ್ಲಿಂದ 4 ಕಿ.ಮೀ. ದೂರದಲ್ಲಿದೆ ಈ ಅದ್ಭುತ ಹಸಿರ ಸಿರಿ ಮಧ್ಯೆ ಜಲಧಾರೆಯ ಅವಿಸ್ಮರಣೀಯ ಸೌಂದರ್ಯ. ಇನ್ನೊಂದು ದಾರಿ ಶಿರಸಿಯಿಂದ 39 ಕಿ.ಮೀ. ದೂರವಿದೆ.

ಶಿರಸಿ -ಕುಮಟಾ ರಾಜ್ಯ ಹೆದ್ದಾರಿಯಲ್ಲಿನ ಅಮ್ಮಿನಳ್ಳಿ ಸಮೀಪ ಎಡಕ್ಕೆ ತಿರುಗಿ ಹೆಗ್ಗರಣೆ ರಸ್ತೆಯಲ್ಲಿ ಸಾಗಿದರೆ ಉಂಚಳ್ಳಿ ಜಲಪಾತ ಆರ್ಭಟದ ಭೋರ್ಗರೆತದೊಂದಿಗೆ ಇರುವ ಸಾರುತ್ತದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.