ಧಾರಾವಿಯಲ್ಲಿ  ಕೋವಿಡ್‌ ವ್ಯಾಕ್ಸಿನೇಶನ್‌ಗೆ ನಿರೀಕ್ಷಿತ ಪ್ರತಿಕ್ರಿಯೆ ಇಲ್ಲ


Team Udayavani, Jun 29, 2021, 11:32 AM IST

ಧಾರಾವಿಯಲ್ಲಿ  ಕೋವಿಡ್‌ ವ್ಯಾಕ್ಸಿನೇಶನ್‌ಗೆ ನಿರೀಕ್ಷಿತ ಪ್ರತಿಕ್ರಿಯೆ ಇಲ್ಲ

ಮುಂಬಯಿ: ಕೊಳೆಗೇರಿ ಧಾರಾವಿ ಎರಡು ಕೋವಿಡ್‌ ಅಲೆಗಳನ್ನು  ಪರಿಣಾಮಕಾರಿಯಾಗಿ ನಿಯಂತ್ರಿಸಿದರೂ ಈ ಪ್ರದೇಶದಲ್ಲಿ  ಮಾ. 1 ರಂದು ಪ್ರಾರಂಭ ಗೊಂಡ ವ್ಯಾಕ್ಸಿನೇಶನ್‌ ಬಗ್ಗೆ ಪ್ರತಿಕ್ರಿಯೆ ನಿರಸವಾಗಿದೆ. ಅಂದಿನಿಂದ 20,504 ಡೋಸ್‌ಗಳನ್ನು ಮಾತ್ರ ನೀಡಲಾಗಿರುವುದರಿಂದ ವ್ಯಾಕ್ಸಿನೇಶನ್‌ ಅನ್ನು ಹೆಚ್ಚಿಸುವ ಸಲುವಾಗಿ ಮುಂಬಯಿ ಮಹಾನಗರ ಪಾಲಿಕೆಯು ಮನೆ ಮನೆಗೆ ತೆರಳಿ ಅಭಿಯಾನವನ್ನು ಪ್ರಾರಂಭಿಸಿದೆ.

ಪ್ರದೇಶದ ಜನಸಂಖ್ಯೆ ಮತ್ತು ಸಾಂಕ್ರಾಮಿಕದ ಭಯವನ್ನು ಗಮನಿಸಿದರೆ ವ್ಯಾಕ್ಸಿ ನೇಶನ್‌ ಕೇಂದ್ರಗಳಲ್ಲಿ ಭಾರೀ ಜನಸಂದಣಿ ಇರುತ್ತದೆ ಎಂದು ಮುಂಬಯಿ ಮಹಾನಗರ ಪಾಲಿಕೆಯು ಪ್ರಾರಂಭದಲ್ಲಿ ಭಾವಿಸಿತ್ತು. ಆದರೆ ವಾಸ್ತವವಾಗಿ ಆರಂಭ ದಲ್ಲಿ ಸ್ವಲ್ಪ ಜನಸಂದಣಿ ಇತ್ತು. ಬಳಿಕ ಅದು ಕೆಲವೇ ದಿನ ಗಳವರೆಗೆ ಮಾತ್ರ ಗೋಚರಿಸಿದೆ. ಧಾರಾವಿ ಮೂರು ವ್ಯಾಕ್ಸಿ ನೇಶನ್‌ ಕೇಂದ್ರಗಳನ್ನು ಹೊಂದಿದ್ದು, ಪ್ರತಿಯೊಂದು ಕೇಂದ್ರಗಳೂ 100 ಪ್ರಮಾಣವನ್ನು ಪಡೆದರೂ ನಾಗರಿಕರು ಸಹಕಾರ ಉತ್ತೇಜನಕಾರಿಯಾಗಿಲ್ಲ ಎಂದು ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿವಿಧ ಉಪಕ್ರಮ:

ಉತ್ಸಾಹವಿಲ್ಲದ ಪ್ರತಿಕ್ರಿಯೆಯನ್ನು ಪರಿ ಗಣಿಸಿ ಬಿಎಂಸಿ ಅಧಿಕಾರಿಗಳು ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಈ ಪ್ರದೇಶದಲ್ಲಿ ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದರು. ವ್ಯಾಕ್ಸಿ ನೇಶನ್‌ಗೆ ಸಂಬಂಧಿಸಿದ ಪ್ರಕಟನೆಗಳನ್ನು ಮಾಡ ಲಾಯಿತು. ಕೇಂದ್ರಗಳಿಗೆ ಉಚಿತ ಬಸ್‌ ವ್ಯವಸ್ಥೆಯನ್ನು  ಕಲ್ಪಿಸಲಾಯಿತು. ವ್ಯಾಕ್ಸಿ ನೇಶನ್‌ಗೆ ಬರುವ ನಾಗರಿಕರಿಗೆ ವಿಶೇಷ ಉಡುಗೊರೆಗಳನ್ನು ವಿತರಿಸಲಾಯಿತು. ಆದರೆ ಇವುಗಳು ನಾಗರಿಕರ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡಲಿಲ್ಲ ಎಂದು ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯೆ ನೀರಸ:

ಪ್ರತಿ ಕೇಂದ್ರವು ಪ್ರತೀದಿನ 100 ಡೋಸ್‌ಗಳನ್ನು ಪಡೆಯುತ್ತಿದ್ದರೂ ಜೂನ್‌ ಮೊದಲ ಏಳು ದಿನಗಳಲ್ಲಿ ಮೂರು ಕೇಂದ್ರಗಳಲ್ಲಿ 866 ಡೋಸ್‌ಗಳನ್ನು ಮಾತ್ರ ನೀಡಲಾಗಿದೆ. ಸಯಾನ್‌ ಯುಎಚ್‌ಸಿ 406 ಡೋಸ್‌ಗಳನ್ನು ನೀಡಿದರೆ, ಟ್ರಾನ್ಸಿಟ್‌ ಕ್ಯಾಂಪ್‌ ಸೆಂಟರ್‌ 248 ಮತ್ತು ಎಸ್‌ಡಬುÉ éಸಿ ಸೆಂಟರ್‌ನಲ್ಲಿ 212 ಡೋಸ್‌ ನೀಡಲಾಗಿದೆ.

ಲಸಿಕೆ ಪಡೆಯುವವರ ಸಂಖ್ಯೆ ಕಡಿಮೆ ಯಿದ್ದು, ಪ್ರಸ್ತುತ ಲಸಿಕೆಗಳ ಕಡಿಮೆ ಪೂರೈಕೆ ಯೊಂದಿಗೆ ಒಂದು ನಿರ್ದಿಷ್ಟ ದಿನಕ್ಕೆ ನಿಗದಿ ಪಡಿಸಿದ ಎಲ್ಲ ಪ್ರಮಾಣಗಳನ್ನು ನಾವು ಬಳಸಿಕೊಳ್ಳುವುದಿಲ್ಲ ಎಂದು ಜಿ-ನಾರ್ತ್‌ ವಾರ್ಡ್‌ನ ಸಹಾಯಕ ಆಯುಕ್ತ ಕಿರಣ್‌ ದಿಘವ್ಕರ್‌ ತಿಳಿಸಿದ್ದಾರೆ.

ದೊಡ್ಡ ಅಭಿಯಾನದ ಅಗತ್ಯ:

ಪ್ರದೇಶದ ಜನರಲ್ಲಿ ಲಸಿಕೆಯ ಬಗ್ಗೆ ಹಿಂಜರಿಕೆ ಇದೆ. ಸ್ಥಳೀಯ ಸರಕಾರೇತರ ಸಂಸ್ಥೆಗಳ ಮೂಲಕ ಜನರನ್ನು ತಲುಪಿ, ಲಸಿಕೆ ಹಾಕುವಂತೆ  ಒತ್ತಾಯಿಸುತ್ತೇವೆ. ಲಸಿಕೆಗಳನ್ನು ತೆಗೆದುಕೊಂಡರೂ ಸಾವಿನ ಸಾಧ್ಯತೆಯಿದೆ ಎಂಬ ಸಾಮಾನ್ಯ ತಪ್ಪು ಕಲ್ಪನೆ ಇದೆ. ಲಸಿಕೆಗಳು ಸಾವಿಗೆ ಕಾರಣವಾಗಬಹುದು ಎಂದೂ ಹಲವರು ನಂಬುತ್ತಾರೆ. ಲಸಿಕೆ ಹಾಕಲು ಜನರನ್ನು ಪ್ರೋತ್ಸಾಹಿಸಲು ನಮಗೆ ದೊಡ್ಡ ಅಭಿಯಾನದ ಅಗತ್ಯವಿದೆ ಎಂದು ಧಾರಾವಿ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಸಿದ್ಧಾರ್ಥ್ ಮೇಧೆ ತಿಳಿಸಿದ್ದಾರೆ.

ಜಿ-ನಾರ್ತ್‌ನಲ್ಲಿ  ಧಾರಾವಿಗೆ ಎರಡನೇ ಸ್ಥಾನ:

ಜಿ-ನಾರ್ತ್‌ ವಾರ್ಡ್‌ ವ್ಯಾಪ್ತಿಯಲ್ಲಿ ಧಾರಾವಿ, ದಾದರ್‌ ಮತ್ತು ಮಹೀಮ್‌ ಅನ್ನು ಹೊಂದಿದೆ. ವಾರ್ಡ್‌ನಲ್ಲಿ ವ್ಯಾಕ್ಸಿನೇಶನ್‌ ಅಂಕಿಅಂಶಗಳ ವಿಷಯದಲ್ಲಿ ಧಾರಾವಿ ಎರಡನೇ ಸ್ಥಾನದಲ್ಲಿದೆ. ಮಾ. 1ರಿಂದ ಮಹೀಮ್‌ ಅನ್ನು ಮೂರು ವ್ಯಾಕ್ಸಿನೇಶನ್‌ ಕೇಂದ್ರಗಳು 40,681 ಡೋಸ್‌ಗಳನ್ನು ನೀಡಿದರೆ, ಧಾರಾವಿಯಲ್ಲಿ 20,504 ಡೋಸ್‌ಗಳನ್ನು ನೀಡಲಾಗಿದೆ. ದಾದರ್‌ 13,355 ಡೋಸ್‌ಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಧಾರಾವಿ 20 ಸಕ್ರಿಯ ಪ್ರಕರಣಗಳನ್ನು ಹೊಂದಿದ್ದು, ಚೇತರಿಕೆ ಪ್ರಮಾಣವು ಶೇ. 94.46ರಷ್ಟಿದೆ. ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಈ ಪ್ರದೇಶದಲ್ಲಿ ಒಟ್ಟು 6,844 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 6,464 ಮಂದಿ ಚೇತರಿಸಿಕೊಂಡಿದ್ದು, 359 ಮಂದಿ ಸಾವನ್ನಪ್ಪಿದ್ದಾರೆ.

ಧಾರಾವಿಯಲ್ಲಿ ಲಸಿಕೆ ಅಭಿಯಾನದ ನಿಧಾನಗತಿ ಆತಂಕಕ್ಕೆ ಕಾರಣವಾಗಿದೆ. ಎಪ್ರಿಲ್‌ನಲ್ಲಿ ನಾವು ಜನರನ್ನು ಪ್ರೋತ್ಸಾಹಿಸಲು ವಿಭಿನ್ನ ರೀತಿಯಲ್ಲಿ ಪ್ರಯತ್ನಿಸಿದ್ದೇವೆ. ಅದು ನಮಗೆ ಉತ್ತಮ ಫಲಿತಾಂಶಗಳನ್ನು ನೀಡಿತು. ಆದರೆ ಈಗ ಮತ್ತೆ ಪ್ರತಿಕ್ರಿಯೆ ಕಳಪೆಯಾಗಿದೆ. ಮನೆ ಮನೆ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಇದು ಲಸಿಕೆ ಪಡೆಯಲು ನಾಗರಿಕರನ್ನು ಪ್ರೇರೇಪಿಸಲಿದೆ.ಕಿರಣ್‌ ದಿಘವ್ಕರ್‌ ಸಹಾಯಕ ಆಯುಕ್ತರು, ಜಿ-ನಾರ್ತ್‌ ವಾರ್ಡ್‌

ಧಾರಾವಿಯಲ್ಲಿ ವ್ಯಾಕ್ಸಿನೇಶನ್‌ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ಲಸಿಕೆ ಪ್ರಮಾಣಗಳಿಲ್ಲ ಎಂದು ಹಲವರ ಊಹನೆ. ಆದರೆ ವಾಸ್ತವದಲ್ಲಿ ಒದಗಿಸಲಾಗುತ್ತಿರುವ ಪ್ರಮಾಣಗಳೇ ಬಳಕೆಯಾಗುತ್ತಿಲ್ಲ.ಬಬ್ಬು  ಖಾನ್‌ ನಗರ ಸೇವಕರು, ವಾರ್ಡ್‌ ನಂಬರ್‌ 184

ಟಾಪ್ ನ್ಯೂಸ್

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.