ಲಂಕಾ ವಿರುದ್ದದ ಅಂತಿಮ ಪಂದ್ಯಕ್ಕೆ ಇಂಗ್ಲೆಂಡ್ ತಂಡಕ್ಕೆ ಟಾಮ್ ಬ್ಯಾಂಟನ್ ಸೇರ್ಪಡೆ
Team Udayavani, Jul 1, 2021, 5:20 PM IST
ಬ್ರಿಸ್ಟಲ್: ಪ್ರವಾಸಿ ಶ್ರೀಲಂಕಾ ವಿರುದ್ದದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯಕ್ಕೆ ಇಂಗ್ಲೆಂಡ್ ತಂಡಕ್ಕೆ ಟಾಮ್ ಬ್ಯಾಂಟನ್ ಸೇರ್ಪಡೆಯಾಗಿದ್ದಾರೆ. ಡೇವಿಡ್ ಮಲಾನ್ ಬದಲಿಗೆ ಮೂರನೇ ಏಕದಿನ ಪಂದ್ಯದಲ್ಲಿ ಬ್ಯಾಂಟನ್ ಆಡಲಿದ್ದಾರೆ.
ಇಂಗ್ಲೆಂಡ್ ಪರ ಆರು ಏಕದಿನ ಮತ್ತು ಒಂಬತ್ತು ಟಿ20 ಪಂದ್ಯಗಳನ್ನಾಡಿರುವ ಟಾಮ್ ಬ್ಯಾಂಟನ್ ಸದ್ಯ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಸಾಮರ್ ಸೆಟ್ ಪರ ಟಿ20 ಕೂಟದಲ್ಲಿ ಆಡುತ್ತಿರುವ ಬ್ಯಾಂಟನ್ ಕೆಲ ದಿನಗಳ ಹಿಂದಷ್ಟೇ 47 ಎಸೆತದಲ್ಲಿ ಶತಕ ಬಾರಿಸಿದ್ದರು. 2020ರ ಆಗಸ್ಟ್ ನಲ್ಲಿ ಐರ್ಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ ಕೊನೆಯದಾಗಿ ಇಂಗ್ಲೆಂಡ್ ಏಕದಿನ ತಂಡದಲ್ಲಿ ಟಾಮ್ ಬ್ಯಾಂಟನ್ ಆಡಿದ್ದರು.
ಇದನ್ನೂ ಓದಿ:ಟೆಸ್ಟ್ ರಾಂಕಿಂಗ್ ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ವಿಲಿಯಮ್ಸನ್; ಪಂತ್, ಜಡೇಜಾಗೆ ಹಿನ್ನಡೆ
ಲಂಕಾ ವಿರುದ್ದದ ಸರಣಿಯ ಮೊದಲ ಏಕದಿನ ಪಂದ್ಯವನ್ನು ಇಂಗ್ಲೆಂಡ್ ಜಯಿಸಿದೆ. ಎರಡನೇ ಪಂದ್ಯ ಇಂದು (ಗುರುವಾರ) ಲಂಡನ್ ನ ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆಯಲಿದೆ. ಮೂರನೇ ಪಂದ್ಯ ಬ್ರಿಸ್ಟಲ್ ನಲ್ಲಿ ಜು.4ರಂದು ನಡೆಯಲಿದೆ.
ಮೂರನೇ ಪಂದ್ಯಕ್ಕೆ ಇಂಗ್ಲೆಂಡ್ ತಂಡ: ಇಯಾನ್ ಮೋರ್ಗನ್ (ನಾ), ಮೊಯೀನ್ ಅಲಿ, ಜಾನಿ ಬೈರ್ಸ್ಟೋ (ವಿ.ಕೀ), ಸ್ಯಾಮ್ ಬಿಲ್ಲಿಂಗ್ಸ್ (ವಿ.ಕೀ), ಟಾಮ್ ಕರ್ರನ್, ಸ್ಯಾಮ್ ಕರ್ರನ್, ಲಿಯಾಮ್ ಡಾಸನ್, ಜಾರ್ಜ್ ಗಾರ್ಟನ್, ಲಿಯಾಮ್ ಲಿವಿಂಗ್ಸ್ಟೋನ್, ಟಾಮ್ ಬ್ಯಾಂಟನ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ವಾಂಖೇಡೆಯಲ್ಲಿ ಬೌಲರ್ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ
Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್
ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ
Thomas Cup: ಬ್ಯಾಡ್ಮಿಂಟನ್; ಭಾರತದ ಆಟಕ್ಕೆ ತೆರೆ
Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ