ರಾಜಕಾರಣಿಗಳ ಪುತ್ರರ ತಾಲೀಮು ಈಗಲೇ ಶುರು..

Team Udayavani, Jul 3, 2021, 7:31 PM IST

9876

ವರದಿ: ಕೆ.ನಿಂಗಜ್ಜ

ಗಂಗಾವತಿ: ಮಿನಿ ಅಸೆಂಬ್ಲಿ ಚುನಾವಣೆ ಎಂದೇ ಕರೆಯಲ್ಪಡುವ ಜಿಪಂ-ತಾಪಂ ಕ್ಷೇತ್ರಗಳ ಮೀಸಲಾತಿ ಪ್ರಕಟವಾಗಿದ್ದು, ಚುನಾವಣೆಯ ದಿನಾಂಕ ಘೋಷಣೆ ಬಾಕಿ ಇರುವಾಗಲೇ ಈಗಲೇ ತಾಲೀಮು ಶುರುವಾಗಿದೆ.

ಬಿಜೆಪಿ-ಕಾಂಗ್ರೆಸ್‌ ಪಕ್ಷಗಳಲ್ಲಿ ಡಜನ್‌ ಗಟ್ಟಲೆ ಆಕಾಂಕ್ಷಿಗಳಿದ್ದು, ಎರಡೂ ಪಕ್ಷಗಳಲ್ಲಿ ಶಾಸಕರು-ಮಾಜಿ ಸಚಿವರ ಮಕ್ಕಳು ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಜಿಪಂ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಗಂಗಾವತಿ ತಾಲೂಕು ವಿಂಗಡಣೆಯಾದ ನಂತರ ಗಂಗಾವತಿ ತಾಲೂಕಿನಲ್ಲಿ ನಾಲ್ಕು ಜಿಪಂ ಕ್ಷೇತ್ರಗಳು ಉಳಿದಿವೆ.

ಚುನಾವಣಾ ಆಯೋಗ ಮೊದಲಿದ್ದ ಕ್ಷೇತ್ರಗಳ ಹೆಸರನ್ನು ನೂತನ ನಿಯಮಗಳ ಪ್ರಕಾರ ಬದಲಿಸಿದೆ. ಚಿಕ್ಕಜಂತಗಲ್‌(ಆನೆಗೊಂದಿ), ವಡ್ಡರಹಟ್ಟಿ(ಹೇರೂರು), ಶ್ರೀರಾಮನಗರ(ಮರಳಿ), ಬಸಾಪಟ್ಟಣ(ವೆಂಕಟಗಿರಿ) ಜಿಪಂ ಕ್ಷೇತ್ರಗಳಿವೆ. ಇವುಗಳಲ್ಲಿ ಆನೆಗೊಂದಿ-ಮರಳಿ ಜಿಪಂ ಕ್ಷೇತ್ರಗಳು ಸಾಮಾನ್ಯ ವರ್ಗ, ವಡ್ಡರಹಟ್ಟಿ ಎಸ್ಟಿ ಮಹಿಳೆ, ಬಸಾಪಟ್ಟಣ ಎಸ್ಸಿ ಮಹಿಳೆಗೆ ಮೀಸಲು ನಿಗದಿಯಾಗಿದ್ದು ಬಿಸಿಎ-ಬಿಸಿಬಿ ವರ್ಗಕ್ಕೆ ಈ ಬಾರಿ ತಾಲೂಕಿನಲ್ಲಿ ಮೀಸಲು ಕಲ್ಪಿಸಿಲ್ಲ.

ಸಾಮಾನ್ಯ ಮೀಸಲು ಕ್ಷೇತ್ರಗಳಾಗಿರುವ ಚಿಕ್ಕಜಂತಗಲ್‌(ಆನೆಗೊಂದಿ)ಶ್ರೀರಾಮನಗರ (ಮರಳಿ) ಜಿಪಂ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಿಜೆಪಿ ಕಾಂಗ್ರೆಸ್‌ ಪಕ್ಷಗಳಲ್ಲಿ ತೀವ್ರ ಸ್ಪಧೆ ಇದ್ದು,ಹಾಲಿ ಮಾಜಿ ಶಾಸಕರು ಜಿಪಂ ಮಾಜಿ ಸದಸ್ಯರ ಪುತ್ರರ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ಚಿಕ್ಕಜಂತಗಲ್‌ (ಆನೆಗೊಂದಿ) ಕ್ಷೇತ್ರದಲ್ಲಿ ಬಿಜೆಪಿಯಿಂದ ಶಾಸಕ ಪರಣ್ಣ ಮುನವಳ್ಳಿ ಪುತ್ರ ಸಾಗರ ಮುನವಳ್ಳಿ, ನ್ಯಾಯವಾದಿ ಎಚ್‌.ಸಿ.ಯಾದವ್‌, ಗುತ್ತಿಗೆದಾರ ರಘುರಾಂ ರೆಡ್ಡಿ, ರಾಜವಂಶಸ್ಥರಾದ ರತ್ನಶ್ರೀರಾಯ, ಗೌರೀಶ ಬಾಗೋಡಿ, ಹರಿಹರ ದೇವರಾಯ ಮತ್ತು ಜಿಪಂ ಮಾಜಿ ಸದಸ್ಯ ಸಿದ್ದರಾಮಯ್ಯಸ್ವಾಮಿ ಪುತ್ರ ವಿರೂಪಾಕ್ಷಯ್ಯ ಸ್ವಾಮಿ ಪ್ರಮುಖ ಸ ರ್ಧಾಳುಗಳಾಗಿದ್ದಾರೆ.

ಕಾಂಗ್ರೆಸ್‌ನಿಂದ ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು, ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಪುತ್ರ ಇಮ್ತಿಯಾಜ್‌ ಅನ್ಸಾರಿ, ಮಂಜುನಾಥ ಕಲಾಲ್‌, ಟಿ.ಜಿ. ಬಾಬು, ಅಂಬಿಗೇರ್‌ ಅಂಜಿನಪ್ಪ ಪ್ರಮುಖರಾಗಿದ್ದಾರೆ.

ಶ್ರೀರಾಮನಗರ(ಮರಳಿ) ಕ್ಷೇತ್ರದಲ್ಲಿ ಬಿಜೆಪಿಯಿಂದ ಸತ್ಯನಾರಾಯಣ(ಬಾಬಿ), ಚಿತ್ತೂರಿ ದುರ್ಗಾರಾವ್‌,ಬರಗೂರು ನಾಗರಾಜ ಕಾಂಗ್ರೆಸ್‌ನಿಂದ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಪುತ್ರ ಸರ್ವೇಶ್‌, ರೆಡ್ಡಿ ಶ್ರೀನಿವಾಸ, ವೆಂಕಟ ಸತ್ಯನಾರಾಯಣ(ನಾನಿ) ಹೆಸರುಗಳು ಚಾಲ್ತಿಯಲ್ಲಿವೆ. ಈಗಾಗಲೇ ಸಾಗರ ಮುನವಳ್ಳಿ ಉಡುಮಕಲ್‌ ನಲ್ಲಿ, ಸರ್ವೇಶ್‌ ಮಲ್ಲಿಕಾರ್ಜುನ ನಾಗಪ್ಪ ಜಂಗಮರ ಕಲ್ಗುಡಿಯಲ್ಲಿ, ವಿರೂಪಾಕ್ಷಯ್ಯಸ್ವಾಮಿ ಸಂಗಾಫುರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿದ್ದಾರೆ.

ಟಾಪ್ ನ್ಯೂಸ್

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-sirsi

Sirsi: ಯಾರನ್ನೂ ಯಾವತ್ತೂ ಪ್ಲೀಸ್ ಮಾಡಬೇಡಿ, ಪ್ರೀತಿ ಮಾಡಿ ಸಾಕು: ಹುಕ್ಕೇರಿ ಶ್ರೀ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Arrested: ಭೂ ಅವ್ಯವಹಾರ; ಬೆಂ.ವಿ.ವಿ. ಪ್ರೊ.ಮೈಲಾರಪ್ಪ ಬಂಧನ

Arrested: ಭೂ ಅವ್ಯವಹಾರ; ಬೆಂ.ವಿ.ವಿ. ಪ್ರೊ.ಮೈಲಾರಪ್ಪ ಬಂಧನ

Arrested: ಯೂಟ್ಯೂಬ್‌ ನೋಡಿ ದ್ವಿಚಕ್ರ ವಾಹನ ಕದ್ದಿದ್ದ ಯುವಕ ಬಂಧನ  

Arrested: ಯೂಟ್ಯೂಬ್‌ ನೋಡಿ ದ್ವಿಚಕ್ರ ವಾಹನ ಕದ್ದಿದ್ದ ಯುವಕ ಬಂಧನ  

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-sirsi

Sirsi: ಯಾರನ್ನೂ ಯಾವತ್ತೂ ಪ್ಲೀಸ್ ಮಾಡಬೇಡಿ, ಪ್ರೀತಿ ಮಾಡಿ ಸಾಕು: ಹುಕ್ಕೇರಿ ಶ್ರೀ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Arrested: ಭೂ ಅವ್ಯವಹಾರ; ಬೆಂ.ವಿ.ವಿ. ಪ್ರೊ.ಮೈಲಾರಪ್ಪ ಬಂಧನ

Arrested: ಭೂ ಅವ್ಯವಹಾರ; ಬೆಂ.ವಿ.ವಿ. ಪ್ರೊ.ಮೈಲಾರಪ್ಪ ಬಂಧನ

Arrested: ಯೂಟ್ಯೂಬ್‌ ನೋಡಿ ದ್ವಿಚಕ್ರ ವಾಹನ ಕದ್ದಿದ್ದ ಯುವಕ ಬಂಧನ  

Arrested: ಯೂಟ್ಯೂಬ್‌ ನೋಡಿ ದ್ವಿಚಕ್ರ ವಾಹನ ಕದ್ದಿದ್ದ ಯುವಕ ಬಂಧನ  

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.