ಈ ವರ್ಷ CBSEಗೆ ಎರಡು ಬಾರಿ ಪರೀಕ್ಷೆ
Team Udayavani, Jul 6, 2021, 7:25 AM IST
ಹೊಸದಿಲ್ಲಿ : ಪ್ರಸ್ತುತ ಕೊರೊನಾ ಪರಿಸ್ಥಿತಿ, ವಿದ್ಯಾರ್ಥಿಗಳಿಗೆ ಗ್ಯಾಜೆಟ್ ಲಭ್ಯತೆ ಮತ್ತು ಸಂಪರ್ಕ ಸಮಸ್ಯೆ ಮತ್ತಿತರ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಸಿಬಿಎಸ್ಇ ಸೋಮವಾರ 2021-22ರ ಶೈಕ್ಷಣಿಕ ವರ್ಷಕ್ಕೆ 10, 12ನೇ ತರಗತಿಗಳಿಗೆ ವಿಶೇಷ ಮೌಲ್ಯ ಮಾಪನ ಯೋಜನೆಯನ್ನು ಪರಿಚಯಿಸಿದೆ.
ಇಡೀ ಶೈಕ್ಷಣಿಕ ವರ್ಷವನ್ನು ಎರಡು ಅವಧಿಗಳಾಗಿ ವಿಭಜಿಸಲಾಗುತ್ತದೆ. ಪಠ್ಯ ಕ್ರಮವನ್ನು ಪ್ರತೀ ಅವಧಿಗೆ ಶೇ. 50ರಂತೆ ನಿಗದಿಪಡಿಸಲಾಗುತ್ತದೆ. ವರ್ಗೀಕರಿಸಿದ ಪಠ್ಯಕ್ರಮದ ಆಧಾರದಲ್ಲಿ ಪ್ರತೀ ಅವಧಿಯ ಕೊನೆಗೆ ಮಂಡಳಿ ಪರೀಕ್ಷೆ ನಡೆಸಲಿದೆ. ಅಂದರೆ ವರ್ಷದ ಕೊನೆಗೆ ಪರೀಕ್ಷೆ ನಡೆಸುವ ಬದಲು ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡಲಾಗುತ್ತದೆ.
ಅಂದಾಜು ನವೆಂಬರ್-ಡಿಸೆಂಬರ್ 2021ರಲ್ಲಿ 1ನೇ ಅವಧಿಯ ಪರೀಕ್ಷೆ ನಡೆಯುತ್ತದೆ. ಪ್ರಶ್ನೆ ಪತ್ರಿಕೆಯು ಬಹು ಆಯ್ಕೆಯ ಪ್ರಶ್ನೆ (ಶೇ.50ರಷ್ಟು ಸಿಲೆಬಸ್ಗೆ ಸಂಬಂಧಿಸಿದ್ದು ಮಾತ್ರ)ಗಳನ್ನು ಒಳಗೊಂಡಿದ್ದು, 90 ನಿಮಿಷಗಳ ಪರೀಕ್ಷೆ ನಡೆಸಲಾಗುತ್ತದೆ.
ಮಾರ್ಚ್- ಎಪ್ರಿಲ್ 2022ರ ವೇಳೆಗೆ 2ನೇ ಅವಧಿಯ ಪರೀಕ್ಷೆ ನಡೆಯುತ್ತದೆ. ಎರಡೂ ಪರೀಕ್ಷೆಗಳ ಅಂಕಗಳನ್ನು ಕೂಡಿಸಿ ಒಟ್ಟು ಅಂಕಗಳನ್ನು ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?